ಜಿಯೋಗೆ ಹುಚ್ಚು ಹಿಡಿಸಿದ ಏರ್‌ಟೆಲ್: ರೂ.3799ಕ್ಕೆ ನೋಕಿಯಾ 6.1 ಸ್ಮಾರ್ಟ್‌ಫೋನ್ ಮಾರಾಟ...!
ಮಾರುಕಟ್ಟೆಯಲ್ಲಿ ಹೊಸದಾಗಿ ಲಾಂಚ್ ಆಗಿರುವ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ಏರ್‌ಟೆಲ್ ಆಫರ್ ಅನ್ನು ನೀಡಲು ಮುಂದಾಗಿದ್ದು, ಬಳಕೆದಾರರಿಗೆ ಅತೀ ಕಡಿಮೆ ಬೆಲೆಗೆ ನೋಕಿಯಾ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ನೋಕಿಯಾ 8 ಸಿರಾಕೋ, ನೋಕಿಯಾ 7 ಪ್ಲಸ್ ಮತ್ತು ನೋಕಿಯಾ 6.1 ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಅನ್ನು ನೀಡುತ್ತಿದೆ.
ರೂ.3799ಕ್ಕೆ ನೋಕಿಯಾ ಫೋನ್‌ಗಳನ್ನು ಮಾರಾಟ ಮಾಡಲು ಮುಂದಾಗಿರುವ ಏರ್‌ಟೆಲ್, ತನ್ನದೇ ಆಫರ್ ಅನ್ನು ಲಾಂಚ್ ಮಾಡಿದೆ. ಇದರೊಂದಿಗೆ ಸ್ಮಾರ್ಟ್‌ಫೋನ್ ಖರೀದಿಸಿದವರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಇದಲ್ಲದೇ ಹೆಚ್ಚುವರಿ ಹಣವನ್ನು EMI ರೂಪದಲ್ಲಿ ಪಡೆದುಕೊಳ್ಳಲಿದೆ.

ನೋಕಿಯಾ 6.1 (3 GB RAM):
ನೋಕಿಯಾ 6.1 (3 GB RAM) ಸ್ಮಾರ್ಟ್‌ಫೋನ್ ಅನ್ನು ರೂ.3799ಕ್ಕೆ ಮಾರಾಟ ಮಾಡುತ್ತಿದ್ದು, ಇದಾದ ನಂತರದಲ್ಲಿ 12 ತಿಂಗಳುಗಳ ಕಾಲ ರೂ.1499 ಪಾವತಿ ಮಾಡಬೇಕಾಗಿದೆ. ಇದಲ್ಲದೇ ಏರ್‌ಟೆಲ್ ಬಳಕೆದಾರರಿಗೆ 30GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ರೂಮಿಂಗ್ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಏರ್‌ಟೆಲ್ ಟಿವಿ ಯನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ನೋಕಿಯಾ 6.1 (4 GB RAM):
ನೋಕಿಯಾ 6.1 (4 GB RAM) ಸ್ಮಾರ್ಟ್‌ಫೋನ್ ಅನ್ನು ರೂ.5799ಕ್ಕೆ ಮಾರಾಟ ಮಾಡುತ್ತಿದ್ದು, ಇದಾದ ನಂತರದಲ್ಲಿ 12 ತಿಂಗಳುಗಳ ಕಾಲ ರೂ.1499 ಪಾವತಿ ಮಾಡಬೇಕಾಗಿದೆ. ಇದಲ್ಲದೇ ಏರ್‌ಟೆಲ್ ಬಳಕೆದಾರರಿಗೆ 30GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ರೂಮಿಂಗ್ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಏರ್‌ಟೆಲ್ ಟಿವಿ ಯನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ನೋಕಿಯಾ 7 ಪ್ಲಸ್:
ನೋಕಿಯಾ 7 ಪ್ಲಸ್ ಸ್ಮಾರ್ಟ್‌ಫೋನ್ ಅನ್ನು ರೂ.5599ಕ್ಕೆ ಮಾರಾಟ ಮಾಡುತ್ತಿದ್ದು, ಇದಾದ ನಂತರದಲ್ಲಿ 12 ತಿಂಗಳುಗಳ ಕಾಲ ರೂ.2099 ಪಾವತಿ ಮಾಡಬೇಕಾಗಿದೆ. ಇದಲ್ಲದೇ ಏರ್‌ಟೆಲ್ ಬಳಕೆದಾರರಿಗೆ 30GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ರೂಮಿಂಗ್ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಏರ್‌ಟೆಲ್ ಟಿವಿ ಯನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ನೋಕಿಯಾ 8 ಸಿರಾಕೋ:
ನೋಕಿಯಾ 8 ಸಿರಾಕೋ ಸ್ಮಾರ್ಟ್‌ಫೋನ್ ಅನ್ನು ರೂ.8599ಕ್ಕೆ ಮಾರಾಟ ಮಾಡುತ್ತಿದ್ದು, ಇದಾದ ನಂತರದಲ್ಲಿ 18 ತಿಂಗಳುಗಳ ಕಾಲ ರೂ.2799 ಪಾವತಿ ಮಾಡಬೇಕಾಗಿದೆ. ಇದಲ್ಲದೇ ಏರ್‌ಟೆಲ್ ಬಳಕೆದಾರರಿಗೆ 50 GB ಡೇಟಾವನ್ನು ಬಳಕೆಗೆ ನೀಡಲಿದೆ. ಇದಲ್ಲದೇ ಅನ್‌ಲಿಮಿಟೆಡ್ ಕಾಲಿಂಗ್ ಮತ್ತು ರೂಮಿಂಗ್ ಆಯ್ಕೆಯನ್ನು ನೀಡುತ್ತಿದೆ. ಜೊತೆಗೆ ಅಮೆಜಾನ್ ಪ್ರೈಮ್ ಮತ್ತು ಏರ್‌ಟೆಲ್ ಟಿವಿ ಯನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








