ಆಂಡ್ರಾಯ್ಡ್ ಗುಂಪಿಗೆ ಮತ್ತೊಂದು ಸೇರ್ಪಡೆ - ಅಲ್ಕಾಟೆಲ್

|

ಆಂಡ್ರಾಯ್ಡ್ ಗುಂಪಿಗೆ ಮತ್ತೊಂದು ಸೇರ್ಪಡೆ - ಅಲ್ಕಾಟೆಲ್
ಮೊಬೈಲ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಮಾಡಲ್ ಗಳದ್ದೆ ಕಾರುಬಾರು. ಮೊಬೈಲ್ ಕಂಪನಿಗಳು ಕೂಡ ಆಂಡ್ರಾಯ್ಡ್ ಆಧಾರಿತ ಮೊಬೈಲ್ ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಅಲ್ಕಾಟೆಲ್ ಕಂಪನಿ ಕೂಡ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದು ಇದನ್ನು ಅಲ್ಕಾಟೆಲ್ ಒನ್ ಟಚ್ OT-909s ಎಂದು ಕರೆಯಲಾಗಿದೆ.

ಈಗಾಗಲೆ ಅಲ್ಕಾಟೆಲ್ ನ ಅನೇಕ ಮಾಡಲ್ ಮಾರುಕಟ್ಟೆಗೆ ಬಂದಿದ್ದು ಈ ಅಲ್ಕಾಟೆಲ್ ಒನ್ ಟಚ್ OT-909s ಈ ಕೆಳಗಿನ ಗುಣಲಕ್ಷಣಗಳನ್ನು ಹೊಂದಿದೆ.

* 58 x 119 x 12.4 ಮಿಮಿ ಸುತ್ತಳೆತ

* ಗೂಗಲ್ ಆಂಡ್ರಾಯ್ಡ್ v2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್

* ಕ್ವಾಲಕಮ್ MSM 7227 ಚಿಪ್ ಸೆಟ್

* 256 MB RAM ಮತ್ತು 512 MB ROM

* 2.8 ಇಂಚಿನ TFT ಟಚ್ ಸ್ಕ್ರೀನ್ ಡಿಸ್ ಪ್ಲೇ

* 240 x 320 ಪಿಕ್ಸಲ್ ಸ್ಕ್ರೀನ್ ಗಾತ್ರ

* 3.5ಮಿಮಿ ಆಡಿಯೊ ಜಾಕ್

* GPRS ಬೆಂಬಲ

* EDGE ಇಂಟರ್ ನೆಟ್ ಸಂಪರ್ಕ

* 3G ಸಂಪರ್ಕ

* 802.11 b/g/n ವೇಗದಲ್ಲಿ ವೈಫೈ ಸಂಪರ್ಕ'

* QWERTY ಕೀಪ್ಯಾಡ್

* V2.0 ಮೈಕ್ರೊ USB

* V3.0 ಬ್ಲೂಟೂಥ್ ಸಂಪರ್ಕ

* ಮೈಕ್ರೊ ಎಸ್ ಡಿ, ಮೈಕ್ರೊ ಎಸ್ ಡಿ ಎಚ್ ಸಿ, ಟ್ರಾನ್ಸ್ ಫ್ಲಾಷ್ ಮೆಮೊರಿ ಕಾರ್ಡ್ ಕೂಡ ಹೊಂದಿಕೆಯಾಗುತ್ತದೆ.

* RDS ಇಂಟಿಗ್ರೇಟಡ್ FM ರೇಡಿಯೊ

* A-GPS ನೊಂದಿಗೆ GPS

* 2 ಮೆಗಾ ಪಿಕ್ಸಲ್ LED ಪ್ಲಾಷ್ ಕ್ಯಾಮೆರಾ

* ಆಕ್ಸಿಲೆರೊಮೀಟರ್ ಸೆನ್ಸಾರ್

* 1300 mAh ಲಿ ಐಯಾನ್ ಬ್ಯಾಟರಿ

ಈ ಮೊಬೈಲ್ ಅತ್ಯುತ್ತಮವಾದ ಗುಣಮಟ್ಟ ಮತ್ತು ಬ್ಲೂಟೂಥ್ ಸಂಪರ್ಕ ಹೊಂದಿದ್ದರೂ ಇದರ ಟಚ್ ಸ್ಕ್ರೀನ್ ಅಷ್ಟೇನು ಚೆನ್ನಾಗಿಲ್ಲ, ಅಲ್ಲದೆ ಕೀಬೋರ್ಡ್ ಸ್ವಲ್ಪ ಕಾಲ ಬಳಸಿದ ಬಳಕವಷ್ಟೆ ಬಳಕೆಗೆ ಸುಲಭವಾಗುತ್ತದೆ. ಹೊಸದರಲ್ಲಿ ಕೀ ಬೋರ್ಡ್ ನಲ್ಲಿ ಸುಲಭವಾಗಿ ಟೈಪ್ ಮಾಡಲು ಸಾಧ್ಯವಿಲ್ಲ. ಇದರ ಕ್ಯಾಮೆರಾ ಗುಣಮಟ್ಟ ಕೂಡ ಅಷ್ಟೇನು ಇಲ್ಲ. ಇವುಗಳನ್ನು ಕೊರತು ಪಡಿಸಿ ಅಲ್ಕಾಟೆಲ್ ಮೊಬೈಲ್ ಬಳಕೆದಾರರಿಗೆ ಇಷ್ಟವಾಗುತ್ತದೆ.

ಈ ಮೊಬೈಲ್ ಇನ್ನಷ್ಟೆ ಮಾರುಕಟ್ಟೆಗೆ ಬರಬೇಕಾಗಿದ್ದು ಇದರ ಬೆಲೆ ಬಗ್ಗೆ ಇನ್ನಷ್ಟೆ ತಿಳಿದು ಬರಬೇಕಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X