ಹೊಸ ಅಲ್ಕಾಟೆಲ್ ಪ್ಲೇ ಮೊಬೈಲ್ ಬರುತಿದೆ ನೋಡಿ

Posted By: Staff
ಹೊಸ ಅಲ್ಕಾಟೆಲ್ ಪ್ಲೇ ಮೊಬೈಲ್ ಬರುತಿದೆ ನೋಡಿ
ಅಲ್ಕಾಟೆಲ್ ಲ್ಯೂಸೆಂಟ್ ಬಹುರಾಷ್ಟ್ರೀಯ ಕಂಪನಿ ಅಲ್ಕಾಟೆಲ್ OT799 ಪ್ಲೇ ಮೊಬೈಲನ್ನು ಪರಿಚಯಿಸಿದೆ. ನೀಲಿ ಮತ್ತು ಕೆಂಪು ಬಣ್ಣದ ಮಿಶ್ರಣದೊಂದಿಗೆ ಮೂಡಿಬಂದಿರುವ ಈ ಮೊಬೈಲ್ ಕ್ವೆರ್ಟಿ ಕೀ ಪ್ಯಾಡ್ ಪಡೆದುಕೊಂಡಿರುವುದು ವಿಶೇಷವೆನಿಸಿದೆ. 208 MHz ಪ್ರೊಸೆಸರ್ ಬೆಂಬಲಿತವಾಗಿರುವ ಈ ಮೊಬೈಲಿನಲ್ಲಿ ಇನ್ನೂ ಅನೇಕ ಆಯ್ಕೆಗಳಿವೆ. ಅದೇನೆಂದು ಇಲ್ಲಿ ನೋಡಿ.

ಅಲ್ಕಾಟೆಲ್ OT799 ಪ್ಲೇ ಮೊಬೈಲ್:

* 111 ಎಂಎಂ x 58.2 ಎಂಎಂ x 14 ಎಂಎಂ ಸುತ್ತಳತೆ

* 110.6 ಗ್ರಾಂ ತೂಕ

* 2.4 ಇಂಚಿನ ಡಿಸ್ಪ್ಲೇ, 320 x 240 ಪಿಕ್ಸಲ್ ರೆಸೊಲ್ಯೂಷನ್

* 167 ppi ಪಿಕ್ಸಲ್ ಡೆನ್ಸಿಟಿ

* 65,000 ಬಣ್ಣ ಬೆಂಬಲಿಸುವ ಸ್ಕ್ರೀನ್

* 2 ಮೆಗಾ ಪಿಕ್ಸಲ್ ಕ್ಯಾಮೆರಾ, 1600 x 1200 ಪಿಕ್ಸಲ್ ರೆಸೊಲ್ಯೂಷನ್

* 70 ಎಂಬಿ ಆಂತರಿಕ ಮೆಮೊರಿ

* 8ಜಿಬಿವರೆಗೂ ಮೆಮೊರಿ ವಿಸ್ತರಣೆಗೆ ಮೈಕ್ರೊ SD ಕಾರ್ಡ್ ಆಯ್ಕೆ

* ಬ್ಲೂಟೂಥ್ 2.0, GPRS class 12, EDGE class 12 version

* USB ಸಂಪರ್ಕ

* 3.5 ಎಂಎಂ ಆಡಿಯೋ ಪೋರ್ಟ್

ಇನ್ನೂ ಅನೇಕ ಅಪ್ಲಿಕೇಶನ್ ಗಳು ಫೋನ್ ನಲ್ಲಿದೆ. ಆಡಿಯೋ ಮತ್ತು ವಿಡಿಯೋ ಫಾರ್ಮೆಟ್ ಬೆಂಬಲಿತ ಮೀಡಿಯಾ ಪ್ಲೇಯರ್ ಜೊತೆ ಎಫ್ ಎಂ ಕೂಡ ಇದೆ. ಆದರೆ ಈ ಅಲ್ಕಾಟೆಲ್ OT799 ಪ್ಲೇ ಮೊಬೈಲ್ ಬೆಲೆಯನ್ನು ಕಂಪನಿ ಇನ್ನೂ ಅಧೀಕೃತವಾಗಿ ಘೋಷಿಸಿಲ್ಲ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot