ಅಲ್ಕಾಟೆಲ್ ಮೊಬೈಲ್ ಬಗ್ಗೆ ಕೇಳಿದ್ದೀರಾ?

|

ಅಲ್ಕಾಟೆಲ್ ಮೊಬೈಲ್ ಬಗ್ಗೆ ಕೇಳಿದ್ದೀರಾ?
ಅಲ್ಕಾಟೆಲ್ ಮೊಬೈಲ್ ಪ್ರಪಂಚದಲ್ಲಿ ತುಂಬಾ ಜನಪ್ರಿಯಗಳಿಸಿರುವ ಮೊಬೈಲ್ ಆಗಿದ್ದರೂ ಭಾರತದಲ್ಲಿ ಅಷ್ಟು ಪ್ರಸಿದ್ಧಿಯನ್ನು ಪಡೆದಿಲ್ಲ. ಈ ಮೊಬೈಲ್ ಅತ್ಯುತ್ತಮವಾದ ಗುಣಲಕ್ಷಣವನ್ನು ಹೊಂದಿರುವಂತೆ ತಯಾರಿಸಲಾಗಿದ್ದುಅಲ್ಕಾಟೆಲ್ ಹೊಸ ಮಾಡಲ್ ಮೊಬೈಲ್ ಸಧ್ಯದಲ್ಲಿಯೆ ಭಾರತಕ್ಕೆ ಬರಲಿದೆ.

ಆಲ್ ಕೇಟಲ್ ಹೊಸ ಮಾಡಲ್ ಫೋನ್ ಅನ್ನು ಒನ್ ಟಚ್ OT-918D ಮಾಡಲ್ ಎಂದು ಕರೆಯಲಾಗಿದ್ದು ಇದು ಈ ಕೆಳಗಿನ ಮುಖ್ಯ ಲಕ್ಷಣಗಳನ್ನು ಹೊಂದಿದೆ.

* 3.2 ಇಂಚಿನ ಡಿಸ್ ಪ್ಲೇ ಜೊತೆ ಸ್ಕ್ರೀನ್ ರೆಸ್ಯೂಲೇಶನ್ 320 x 480 ಪಿಕ್ಸಲ್

* 112 mm x 58.6 mm x 12.1 mm ಆಪರೇಟಿಂಗ್ ಸಿಸ್ಟಮ್

* 650MHz ಪ್ರೊಸೆಸರ್

* ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್

* 3.1 ಮೆಗಾ ಪಿಕ್ಸಲ್ ಕ್ಯಾಮೆರಾ

* ವಿಸ್ತರಿಸಬಹುದಾದ ಮೆಮೊರಿ

* USB

* ಬ್ಲೂಟೂಥ್

123 ಗ್ರಾಂ ತೂಕದ ಈ ಮೊಬೈಲ್ ಮೀಡಿಯಾ ಟೆಕ್ MT 6573 ಪ್ರೊಸೆಸರ್ ಬಳಸಿಕೊಂಡು 650 MHz ಕ್ಲೋಕ್ ಸ್ಪಡ್ ನಲ್ಲಿ ಕಾರ್ಯವನ್ನು ನಿರ್ವಹಿಸುತ್ತದೆ. ಇದರ ಸಿಸ್ಟಮ್ ಮೆಮೊರಿ 256 MB ಆಗಿದ್ದು 512 MB ಇಂಟರ್ನಲ್ ಮೆಮೊರಿ ಹೊಂದಿದೆ. ಈ ಮೆಮೊರಿ ಸಾಮರ್ಥ್ಯವನ್ನು ಮೈಕ್ರೊ SD, ಮೈಕ್ರೊSDHC ಮತ್ತು ಟ್ರಾನ್ಸ್ ಫ್ಲಾಷ್ ಬಳಸಿ ವಿಸ್ತರಿಸಬಹುದು.

ಈ ಫೋನ್ ನಲ್ಲಿ 2.0 ಆಯಾಮದ USBಯನ್ನು ಬಳಸಲಾಗಿದೆ. ಇದರಿಂದಾಗಿ ಅತ್ಯಧಿಕ ಅಂದರೆ 480 MB/s ವೇಗದಲ್ಲಿ ಮಾಹಿತಿಗಳನ್ನು ರವಾನಿಸಬಹುದು. ಇದರಲ್ಲಿ 3.0 ಆಯಾಮದ ಬ್ಲೂಟೂಥ್ ಬಳಸಲಾಗಿದ್ದು ಬ್ಲೂಟೂಥ್ ಇರುವ ಸಾಧನಗಳಿಗೆ ಮಾಹಿತಿಯನ್ನು ವೇಗವಾಗಿ ತಲುಪುವಂತೆ ಮಾಡುವಲ್ಲಿ ಸಹಕಾರಿಯಾಗಿದೆ. ಅಲ್ಲದೆ ಈ ಮೊಬೈಲ್ ನಲ್ಲಿ ವೈಫೈ ಹಾಟ್ ಸ್ಪಾಟ್ ಮತ್ತು A-GPS ಸೌಲಭ್ಯ ಕೂಡ ಲಭ್ಯವಿದೆ.

ಈ ಮೊಬೈಲ್ ನ ಬೆಲೆಯ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಈ ಮೊಬೈಲ್ ಇತರ ಸ್ಮಾರ್ಟ್ ಫೋನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ದೊರೆಯುವುದು ಎಂದು ಊಹಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X