ಅಮೆಜಾನ್ ಸೇಲ್: ಐತಿಹಾಸಿಕ ಅತ್ಯಂತ ಕಡಿಮೆ ಬೆಲೆಗೆ iPhone 16 ಲಭ್ಯ!
ಈ ವರ್ಷ ಹಲವು ಬಾರಿ ಬೆಲೆ ಕಡಿತಕ್ಕೆ ಒಳಗಾಗಿರುವ ಜನಪ್ರಿಯ iPhone 16 ಪ್ರಸ್ತುತ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ತನ್ನ ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದೆ. Amazon Black Friday ಸೇಲಿನ ಅಂಗವಾಗಿ iPhone 16 ಮೇಲೆ ದೊಡ್ಡ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ನೇರ ರಿಯಾಯಿತಿಯ ಜೊತೆಗೆ ಬ್ಯಾಂಕ್ ಆಫರ್‌ಗಳು ಮತ್ತು ಎಕ್ಸ್ಚೇಂಜ್ ಬೋನಸ್‌ಗಳು ಪರಿಣಾಮಕಾರಿ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುತ್ತಿವೆ. ಹಾಗಾದರೆ, ಪ್ರಸ್ತುತ iPhone 16 ಖರೀದಿಸಲು ಅಮೆಜಾನ್ ಒದಗಿಸಿರುವ ಕೊಡುಗೆಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
Amazon Black Friday: iPhone 16 ಬೆಲೆಯಲ್ಲಿ ಇಳಿಕೆ
ನಾವು ಗಮನಿಸುವುದಾದರೆ, iPhone 16 ಅನ್ನು 2024ರಲ್ಲಿ 128GB ಸ್ಟೋರೇಜ್ ಮಾದರಿಯೊಂದಿಗೆ 79,900 ರೂ. ಆರಂಭಿಕ ಬೆಲೆಗೆ ಭಾರತಕ್ಕೆ ತರಲಾಗಿತ್ತು. ಈ ವರ್ಷ iPhone 17 ಬಿಡುಗಡೆ ನಂತರ ಅದರ ಅಧಿಕೃತ ದರ 69,900 ರೂ. ಕ್ಕೆ ಇಳಿಸಲಾಯಿತು. ಆದರೆ, ಈ Black Friday ಸೇಲ್‌ನಲ್ಲಿ Amazon ನೀಡಿರುವ ವಿಶೇಷ ಆಫರ್ ಮೂಲಕ ಈ ಫೋನನ್ನು ಪರಿಣಾಮಕಾರಿಗಿ 62,900 ರೂ.ಗೆ ಪಡೆಯಬಹುದಾಗಿದೆ.!
Amazon ಈ ಸೇಲ್‌ನಲ್ಲಿ iPhone 16 ಮೇಲೆ 3,000 ರೂ. ನೇರ ದರ ಕಡಿತ ಮಾಡಿದ್ದು, ಬೆಲೆಯನ್ನು 66,900 ರೂ. ಗೆ ಇಳಿಸಿದೆ. ಇದಕ್ಕೆ ಜೊತೆಯಾಗಿ ICICI ಮತ್ತು SBI ಕ್ರೆಡಿಟ್ ಕಾರ್ಡ್‌ಗಳ ಸಂಪೂರ್ಣ ಸ್ವೈಪ್ ಪಾವತಿಗೆ 4,000 ರೂ. ವರೆಗೆ ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿ ದೊರೆಯುತ್ತದೆ. ಈ ಎರಡೂ ಆಫರ್‌ಗಳನ್ನು ಒಟ್ಟುಗೂಡಿಸಿದಾಗ iPhone 16 ನ ಕೊಡುಗೆಗಳ ಬೆಲೆಯು ಕೇವಲ 62,900 ರೂ. ಆಗುತ್ತದೆ.

ಇಷ್ಟೇ ಅಲ್ಲದೆ, ಗ್ರಾಹಕರು EMI ಆಯ್ಕೆಯನ್ನೂ ಬಳಸಿಕೊಳ್ಳಬಹುದು, ಇದರಿಂದ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶವಿದೆ. ಜೊತೆಗೆ Amazon ಹಳೆಯ ಸ್ಮಾರ್ಟ್‌ಫೋನ್ ನೀಡುವವರಿಗೆ ಗರಿಷ್ಠ 47,650 ರೂ. ವರೆಗೆ ಎಕ್ಸ್ಚೇಂಜ್ ಬೋನಸ್ ನೀಡುತ್ತಿದೆ. ಹಳೆಯ ಫೋನ್‌ನ ಮಾದರಿ, ಸ್ಥಿತಿ ಆಧರಿಸಿ ಈ ಮೊತ್ತ ಬದಲಾಗಬಹುದು. ಇನ್ನು ಈ ರಿಯಾಯಿತಿಯು ಎಲ್ಲಾ ಐದು ಬಣ್ಣಗಳ 128GB ಮಾದರಿಗಳಿಗೆ ಅನ್ವಯಿಸುತ್ತದೆ.
ಇದು ಏಕೆ ಒಂದು ಉತ್ತಮ ಆಯ್ಕೆ?
ಐಫೋನ್ 16 ತನ್ನ ವೈಶಿಷ್ಟ್ಯಗಳಿಂದಾಗಿ ಇಂದಿಗೂ ಒಂದು ಅತ್ಯುತ್ತಮ ಫೋನ್ ಆಗಿದೆ. ಕ್ಯಾಮೆರಾ , ಕ್ಯಾಮೆರಾ ಕಂಟ್ರೋಲ್ ಕೀ ಮತ್ತು ಆಕ್ಷನ್ ಬಟನ್‌ಗಳು ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.
ಇದರ 6.1-ಇಂಚಿನ OLED ಡಿಸ್ಪ್ಲೇ ಅತ್ಯುತ್ತಮ ಬ್ರೈಟ್ನೆಸ್ ಮತ್ತು ಬಣ್ಣಗಳನ್ನು ನೀಡುತ್ತದೆ.ಇದು 2,000 ನಿಟ್‌ಗಳ ಗರಿಷ್ಠ ಹೊಳಪು ಮತ್ತು HDR ಮತ್ತು ಟ್ರೂ ಟೋನ್‌ಗೆ ಬೆಂಬಲವನ್ನು ಹೊಂದಿದೆ. ಪರದೆಯನ್ನು ಬಾಳಿಕೆ ಬರುವ ಸೆರಾಮಿಕ್ ಶೀಲ್ಡ್ ಗ್ಲಾಸ್ ಲೇಪನದಿಂದ ರಕ್ಷಿಸಲಾಗಿದೆ.
ಇದರ ಕಾರ್ಯಕ್ಷಮತೆಯ ಬಗ್ಗೆ ಹೇಳುವುದಾದರೆ, 3nm ತಂತ್ರಜ್ಞಾನದಲ್ಲಿ ತಯಾರಾದ A18 ಬಯೋನಿಕ್ ಚಿಪ್ ಈ ಫೋನ್ ಅನ್ನು ಅತ್ಯಂತ ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇದು ಆಪಲ್‌ನ ಹೊಸ AI ವೈಶಿಷ್ಟ್ಯಗಳಾದ ಆಪಲ್ ಇಂಟೆಲಿಜೆನ್ಸ್ ಅನ್ನು ಕೂಡ ಬೆಂಬಲಿಸುತ್ತದೆ.
ಐಫೋನ್ 16 ಬ್ಯಾಟರಿ ಬಾಳಿಕೆ ಕೂಡ ಉತ್ತಮವಾಗಿದೆ. 22 ಗಂಟೆಗಳವರೆಗೆ ವೀಡಿಯೊ ಪ್ಲೇಬ್ಯಾಕ್ ಮತ್ತು ವೈರ್‌ಲೆಸ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಧೂಳು ಮತ್ತು ನೀರಿಗೆ ಪ್ರತಿರೋಧಕ್ಕಾಗಿ IP68 ಪ್ರಮಾಣೀಕರಿಸಲ್ಪಟ್ಟಿದೆ.
ಕ್ಯಾಮೆರಾ ವಿಷಯದಲ್ಲಿ ಐಫೋನ್ 16 ಹಿಂದೆ ಉಳಿದಿಲ್ಲ. ಇದರ 48MP ಪ್ರೈಮರಿ ಕ್ಯಾಮೆರಾ ಅತ್ಯುತ್ತಮ ಗುಣಮಟ್ಟದ ಫೋಟೋಗಳನ್ನು ತೆಗೆಯುತ್ತದೆ. ಇದರ ಜೊತೆಗೆ 2x ಆಪ್ಟಿಕಲ್ ಜೂಮ್, 12MP ಮ್ಯಾಕ್ರೋ ಲೆನ್ಸ್ ಮತ್ತು 12MP ಫ್ರಂಟ್ ಕ್ಯಾಮೆರಾ ಸೆಲ್ಫಿ ಮತ್ತು ವಿಡಿಯೋ ಕಾಲ್‌ಗಳಿಗೆ ಸಹಾಯ ಮಾಡುತ್ತದೆ.
ಗಮನಿಸಿ: ಆಫರ್‌ಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಖರೀದಿಸುವ ಮೊದಲು ಪರಿಶೀಲಿಸುವುದು ಅಗತ್ಯ. ಬ್ಯಾಂಕ್ ರಿಯಾಯಿತಿ, ಎಕ್ಸ್ಚೇಂಜ್ ಮೌಲ್ಯ ಮತ್ತು ಸೇಲ್ ಅವಧಿ ಪ್ರದೇಶಾನುಸಾರ ಬದಲಾಗುವ ಸಾಧ್ಯತೆ ಇದೆ ಎಂದು Amazon ತಿಳಿಸಿದೆ.


Click it and Unblock the Notifications








