Home
ಮೊಬೈಲ್

ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು 40% ರಿಯಾಯಿತಿಯಲ್ಲಿ ಲಭ್ಯ

By Gizbot Bureau

ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಫೆಬ್ರವರಿ 26 ರಿಂದ ಆರಂಭವಾಗಿದ್ದು ಫೆಬ್ರವರಿ 29 ರ ವರೆಗೆ ನಡೆಯಲಿದೆ. ಈ ಸಮಯದಲ್ಲಿ ಗ್ರಾಹಕರು ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು 40% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶ ಲಭ್ಯವಿದೆ. ಅಂತಹ ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಎಕ್ಸ್ ಚೇಂಜ್ ಆಫರ್

ಅಮೇಜಾನಿನಲ್ಲಿ ಎಕ್ಸ್ ಚೇಂಜ್ ಆಫರ್, ಹೆಚ್ಎಸ್ ಬಿಸಿ ಡೆಬಿಟ್ ಕಾರ್ಡ್ ನಲ್ಲಿ 5% ಇನ್ಸೆಂಟ್ ರಿಯಾಯಿತಿ,ಇಎಂಐ ಆಫರ್ ಗಳು, ಒಂದು ಲಕ್ಷದವರಗೆ ಲಕ್ಕಿ ಕೂಪನ್, ಜಿಎಸ್ ಟಿ ಇನ್ ವಾಯ್ಸ್ ಮತ್ತು ಬ್ಯುಸಿನೆಸ್ ಖರೀದಿಯಲ್ಲಿ 28% ಉಳಿತಾಯ ಮಾಡುವ ಅವಕಾಶ ಸೇರಿದಂತೆ ಹತ್ತು ಹಲವು ಆಫರ್ ಗಳನ್ನು ನೀವಿಲ್ಲಿ ಪಡೆದುಕೊಳ್ಳಬಹುದು.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಈ ಸ್ಮಾರ್ಟ್ ಫೋನ್ ನಿಮಗೆ ಅಮೇಜಾನಿನ ಈ ಸೇಲ್ ನಲ್ಲಿ 19% ರಿಯಾಯಿತಿಯಲ್ಲಿ ಅಂದರೆ 42,999 ರುಪಾಯಿ ಬೆಲೆಗೆ ಖರೀದಿಸುವ ಅವಕಾಶವಿದೆ. ಇದರಲ್ಲಿ 48MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು 6.67-ಇಂಚಿನ ಡಿಸ್ಪ್ಲೇ ಮತ್ತು 4000mAh ನ ಲೀಥಿಯಂ ಬ್ಯಾಟರಿ ಬ್ಯಾಕ್ ಅಪ್ ಲಭ್ಯವಿದೆ. ಡಿವೈಸ್ ನ್ನು ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದ್ದು 2,024 ರುಪಾಯಿ ಬೆಲೆಗೆ ಕೊಂಡುಕೊಳ್ಳಬಹುದು.

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

ಈ ಡಿವೈಸಿನ 8GB RAM ಮತ್ತು 128GB ROM ವೇರಿಯಂಟ್ ನ್ನು 34,999 ರುಪಾಯಿ ಬೆಲೆಗೆ ಖರೀದಿಸಬಹುದು. ಮತ್ತು ಹೆಚ್ಚುವರಿ ರಿಯಾಯಿತಿಗಳು ಕೂಡ ಲಭ್ಯವಿದೆ. ಇದರಲ್ಲಿ 90Hz ಪ್ಲೂಯಿಡ್ AMOLED ಡಿಸ್ಪ್ಲೇ, 16MP ಮುಂಭಾಗದ ಕ್ಯಾಮರಾ ಜೊತೆಗೆ 4K ವೀಡಿಯೋ ಕೆಪೇಬಲ್ ಆಗಿದೆ. ಮತ್ತು 3800mAh ಬ್ಯಾಟರಿ ಕೆಪಾಸಿಟಿ ಇದೆ.

ಆಪಲ್ ಐಫೋನ್ ಎಕ್ಸ್ ಆರ್

ಆಪಲ್ ಐಫೋನ್ ಎಕ್ಸ್ ಆರ್

ಈ ಫೋನ್ ನ್ನು 47,900 ರುಪಾಯಿ ಬೆಲೆಗೆ ಖರೀದಿಸಬಹುದಾಗಿದ್ದು ಈ ಬೆಲೆಗೆ 64GB ROM ವೇರಿಯಂಟ್ ಸಿಗುತ್ತದೆ. ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು 11,000 ರುಪಾಯಿ ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು. ಎ12 ಬಯೋನಿಕ್ ಜೊತೆಗೆ ಮುಂದಿನ ಜನರೇಷನ್ನಿನ ನ್ಯೂಟ್ರಲ್ ಎಂಜಿನ್ ಪ್ರೊಸೆಸರ್ ಲಭ್ಯವಿದೆ.ಇದು iOS 12 ನಲ್ಲಿ ರನ್ ಆಗುತ್ತದೆ ಮತ್ತು ವಯರ್ ಲಸ್ ಚಾರ್ಜಿಂಗ್ ಸಪೋರ್ಟ್ ಇದೆ.

ಒಪ್ಪೋ ರೆನೋ 10x ಝೂಮ್

ಒಪ್ಪೋ ರೆನೋ 10x ಝೂಮ್

ಈ ಹ್ಯಾಂಡ್ ಸೆಟ್ಟಿನ ಪ್ರಮುಖ ಫೀಚರ್ ಎಂದರೆ 48MP ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ,4065mAh ಬ್ಯಾಟರಿ, ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್ ಇದೆ. ಇದರ 8GB RAM ಮತ್ತು 256GB ROM ವೇರಿಯಂಟ್ ನ್ನು ನೀವು 39,990 ರುಪಾಯಿ ಬೆಲೆಗೆ ಖರೀದಿಸಬಹುದು. ಇಎಂಐ ಆಯ್ಕೆ ಕೂಡ ಲಭ್ಯವಿದ್ದು 1,882 ರುಪಾಯಿಯನ್ನು ಪ್ರತಿ ತಿಂಗಳು ಪಾವತಿ ಮಾಡುವ ಮೂಲಕ ಖರೀದಿಸಬಹುದು.

ಆಪಲ್ ಐಫೋನ್ 11 ಪ್ರೋ

ಆಪಲ್ ಐಫೋನ್ 11 ಪ್ರೋ

ಟ್ರಿಪಲ್ ಹಿಂಭಾಗದ ಕ್ಯಾಮರಾಗಳು ಮತ್ತು 12ಎಂಪಿ ಟ್ರೂಡೆಪ್ತ್ ಮುಂಭಾಗದ ಕ್ಯಾಮರಾ ಜೊತೆಗೆ ಪೊಟ್ರೈಟ್ ಮೋಡ್ ಇದರಲ್ಲಿದೆ. ಈ ಹ್ಯಾಂಡ್ ಸೆಟ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ನೀವು ಇಎಂಐ ಆಯ್ಕೆಯಲ್ಲಿ ಖರೀದಿಸಬಹುದಾಗಿದ್ದು ಪ್ರತಿ ತಿಂಗಳು 4,561 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20

ಇದರಲ್ಲಿ 4000mAh ಬ್ಯಾಟರಿ ಬ್ಯಾಕ್ ಅಪ್ ಮತ್ತು 64MP ಟ್ರಿಪಲ್ ಹಿಂಭಾಗದ ಕ್ಯಾಮರಾಗಳು ಲಭ್ಯವಿದೆ. ಈ ಹ್ಯಾಂಡ್ ಸೆಟ್ ನ್ನು ನೀವು 66,999 ರುಪಾಯಿಗೆ ಅಂದರೆ 9% ರಿಯಾಯಿತಿಯಲ್ಲಿ ಕೊಂಡುಕೊಳ್ಳಬಹುದು.ಈ ಫೋನಿನ ಆರಂಭಿಕ ಇಎಂಐ 3,154 ರುಪಾಯಿಗಳಾಗಿರುತ್ತದೆ.

ಒಪ್ಪೋ ರೆನೋ2 ಎಫ್

ಒಪ್ಪೋ ರೆನೋ2 ಎಫ್

ಈ ಹ್ಯಾಂಡ್ ಸೆಟ್ಟಿನ 8GB RAM ಮತ್ತು 128GB ROM ವೇರಿಯಂಟ್ ನ್ನು ನೀವು 21,990 ರುಪಾಯಿ ಬೆಲೆಗೆ ಕೊಂಡುಕೊಳ್ಳಬಹುದು. ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದಾಗಿದ್ದು ಪ್ರತಿ ತಿಂಗಳು 1,035 ರುಪಾಯಿ ಪಾವತಿ ಮಾಡಿ ಕೊಂಡುಕೊಳ್ಳಬಹುದು, ಇದರಲ್ಲಿ ಕ್ವಾಡ್ ಹಿಂಭಾಗದ ಕ್ಯಾಮರಾಗಳು,16MP ಮುಂಭಾಗದ ಕ್ಯಾಮರಾಗಳು ಮತ್ತು 6.5-ಇಂಚಿನ AMOLED ಡಿಸ್ಪ್ಲೇ ವ್ಯವಸ್ಥೆ ಇದೆ.

Best Mobiles in India

English summary
The list that we have shared comes with some of the best Samsung smartphones which run Android 10. These handsets also come with other features which will equally leave you stunned.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+