Home
ಮೊಬೈಲ್

ಅಮೆಜಾನ್‌ ಸೇಲ್‌: ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌..! ಖರೀದಿಸಲು ಇದಕ್ಕಿಂತ ಬೆಸ್ಟ್‌ ಟೈಮ್‌ ಇಲ್ಲ..!

ಭಾರತದಲ್ಲಿ ಹಬ್ಬದ ಸೀಸನ್‌ ಆರಂಭವಾಗಿದ್ದು, ಇಂದಿನಿಂದ ಮೈಸೂರು ದಸರಾ ಕೂಡ ಆರಂಭವಾಗಿದೆ. ಅದರಂತೆ ಆನ್‌ಲೈನ್‌ ಮಹಾ ಸೇಲ್‌ಗಳು ನಡೆಯುತ್ತಿವೆ. ಫ್ಲಿಪ್‌ಕಾರ್ಟ್‌, ಅಮೆಜಾನ್‌, ಪೇಟಿಎಂ ಮಾಲ್‌ಗಳು ಅತಿ ಕಡಿಮೆ ದರಗಳಲ್ಲಿ ಆಫರ್‌ಗಳನ್ನು ಘೋಷಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಅಮೆಜಾನ್‌ನಲ್ಲಿ ಇಂದಿನಿಂದ ಗ್ರೇಟ್‌ ಇಂಡಿಯನ್‌ ಸೇಲ್‌ ಆರಂಭವಾಗಿದ್ದು, ಫ್ಲಿಪ್‌ಕಾರ್ಟ್‌ನಲ್ಲೂ ಕೂಡ ಇಂದಿನಿಂದ ಬಿಗ್‌ ಬಿಲಿಯನ್‌ ಡೇ ಸೇಲ್‌ ಪ್ರಾರಂಭವಾಗಿದ್ದು, ಪೇಟಿಎಂ ಮಾಲ್‌ ಕೂಡ ಕ್ಯಾಶ್‌ಬ್ಯಾಕ್‌ ಮಹಾಸೇಲ್‌ ಎಂದು ನಿನ್ನೆಯಿಂದಲೇ ವ್ಯಾಪಾರ ಆರಂಭಿಸಿದ್ದು, ಗ್ರಾಹಕರಿಗೆ ಹಬ್ಬದ ಸೀಸನ್‌ನಲ್ಲಿ ದೊಡ್ಡ ದೊಡ್ಡ ಸಂಭ್ರಮವನ್ನು ಹೊತ್ತು ತರುತ್ತಿವೆ.

ಅಮೆಜಾನ್‌ ಸೇಲ್‌: ಸ್ಮಾರ್ಟ್‌ಫೋನ್‌ ಖರೀದಿಸಲು ಇದಕ್ಕಿಂತ ಬೆಸ್ಟ್‌ ಟೈಮ್‌ ಇಲ್ಲ..!

ಈ ಎಲ್ಲಾ ಸೇಲ್‌ಗಳಲ್ಲೂ ಸ್ಮಾರ್ಟ್‌ಫೋನ್‌ಗಳ ಮೇಲೆ ಕಂಪನಿಗಳು ಭಾರೀ ರಿಯಾಯಿತಿಯನ್ನು ಘೋಷಿಸಿವೆ. ಫ್ಲಿಪ್‌ಕಾರ್ಟ್‌ನ ಸ್ಮಾರ್ಟ್‌ಫೋನ್‌ ಸೇಲ್‌ ನಾಳೆಯಿಂದ ಆರಂಭವಾಗುತ್ತಿದೆ. ಅಮೆಜಾನ್‌ನಲ್ಲಿ ಹೀಗಾಗಲೇ ಒನ್‌ಪ್ಲಸ್‌, ಹಾನರ್‌, ವಿವೋ, ಶಿಯೋಮಿ, ಒಪ್ಪೋ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿಯನ್ನು ಘೋಷಿಸಿದ್ದು, ಗ್ರಾಹಕರನ್ನು ಸೆಳೆಯುತ್ತಿವೆ. ಈ ಎಲ್ಲಾ ಸೇಲ್‌ಗಳು ಕೇವಲ ನಾಲ್ಕು ದಿನ ಎನ್ನುವುದು ನೆನಪಿರಲಿ. ಇಷ್ಟು ಕಡಿಮೆ ಬೆಲೆಗೆ ಮತ್ಯಾವತ್ತೂ ನೀವು ಬಯಸುವ ಸ್ಮಾರ್ಟ್‌ಫೋನ್‌ ಸಿಗುವುದಿಲ್ಲ. ಹಾಗಾದ್ರೆ ಮತ್ಯಾಕೆ ತಡ ಈ ಹಬ್ಬವನ್ನು ಹೊಸ ಸ್ಮಾರ್ಟ್‌ಫೋನ್‌ನೊಂದಿಗೆ ಆಚರಿಸಿ.

ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ ಆಫರ್‌ಗಳು

ಮುಂದೆಂದು ಸಿಗದ ಒನ್‌ಪ್ಲಸ್‌ 6 ಆಫರ್‌

ಮುಂದೆಂದು ಸಿಗದ ಒನ್‌ಪ್ಲಸ್‌ 6 ಆಫರ್‌

ಈ ಸಲದ ಅಮೆಜಾನ್‌ ಗ್ರೇಟ್‌ ಇಂಡಿಯನ್ ಸೇಲ್‌ನಲ್ಲಿ ಒನ್‌ಪ್ಪಸ್‌ ಹಿಂದೆ ಯಾವತ್ತೂ ಇಲ್ಲದ ಆಫರ್‌ನ್ನು ಗ್ರಾಹಕರಿಗೆ ನೀಡಿದೆ. ಫ್ಲಾಗ್‌ಶಿಪ್‌ ಕಿಲ್ಲರ್ ಆಗಿರುವ ಒನ್‌ಪ್ಲಸ್‌ 6 ₹ 5,000 ಖಡಿತವಾಗಿ ಕೇವಲ ₹ 29,999ಕ್ಕೆ ದೊರೆಯುತ್ತಿದ್ದು, ಮುಂದೆಂದು ಇಂತಹ ಆಫರ್‌ ಸಿಗುವುದಿಲ್ಲ. ಇದರ ಜತೆ ಉಚಿತ ಸ್ಕ್ರೀನ್‌ ಬದಲಾವಣೆ, No-Cost EMI, ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದ್ದು, ₹ 34,999ನ ಅತ್ಯಾಧುನಿಕ ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ನ್ನು ಕಡಿಮೆ ದರದಲ್ಲಿ ಖರೀದಿಸಬಹುದಾಗಿದೆ.

ಹಾನರ್‌ ಪ್ಲೇ ಮೇಲೆ ಮತ್ಯಾವತ್ತೂ ಸಿಗದ ಡಿಸ್ಕೌಂಟ್‌

ಹಾನರ್‌ ಪ್ಲೇ ಮೇಲೆ ಮತ್ಯಾವತ್ತೂ ಸಿಗದ ಡಿಸ್ಕೌಂಟ್‌

ಮಧ್ಯಮ ವರ್ಗದ ಬೆಲೆ ಶ್ರೇಣಿಯಲ್ಲಿ ಅತ್ಯಾಧುನಿಕ ಫ್ಲಾಗ್‌ಶಿಪ್‌ ಫೀಚರ್‌ಗಳನ್ನು ನೀಡುತ್ತಿರುವ ಹಾನರ್‌ ಪ್ಲೇ ಮೇಲೆ ಇತಿಹಾಸದ ಆಫರ್‌ ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಘೋಷಿತವಾಗಿದೆ. ₹ 21,999ಕ್ಕೆ ಲಭ್ಯವಿದ್ದ ಹಾನರ್‌ ಪ್ಲೇ ಅಮೆಜಾನ್‌ ಸೇಲ್‌ನಲ್ಲಿ ₹ 18,999ಕ್ಕೆ ದೊರೆಯುತ್ತಿದೆ. ಅದಲ್ಲದೇ ಹೆಚ್ಚುವರಿಯಾಗಿ ₹ 1,000 ಕ್ಯಾಶ್‌ಬ್ಯಾಕ್‌ ದೊರೆಯುತ್ತದೆ. ಇದರ ಜತೆ ಉಚಿತ ಸ್ಕ್ರೀನ್‌ ಬದಲಾವಣೆ, ಖಚಿತವಾದ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

ವಿವೋ V9 ಪ್ರೋ ಮೇಲೆಯೂ ರಿಯಾಯಿತಿ

ವಿವೋ V9 ಪ್ರೋ ಮೇಲೆಯೂ ರಿಯಾಯಿತಿ

ಪ್ರಮುಖ ಸ್ಮಾರ್ಟ್‌ಫೋನ್‌ ಉತ್ಪಾದಕನಾಗಿ ಆಗಿ ಗ್ರಾಹಕರ ಮನ್ನಣೆ ಪಡೆದಿರುವ ವಿವೋ ಕಂಪನಿಯ ವಿವೋ V9 ಪ್ರೋ ಸ್ಮಾರ್ಟ್‌ಫೋನ್‌ ಮೇಲೆ ಅಮೆಜಾನ್‌ ಸೇಲ್‌ನಲ್ಲಿ ಭಾರೀ ರಿಯಾಯಿತಿ ದೊರೆಯುತ್ತಿದೆ. ಸ್ನಾಪ್‌ಡ್ರಾಗನ್‌ 660 AIE ಮತ್ತು 6GB RAM ಹೊಂದಿರುವ ವಿವೋ V9 ಪ್ರೋ ಆಫರ್‌ನಲ್ಲಿ ₹ 17,990ಕ್ಕೆ ದೊರೆಯುತ್ತಿದೆ. ಇದು ₹19,990 ಮೂಲ ಬೆಲೆ ಹೊಂದಿತ್ತು. ಇದರ ಜತೆ ಉಚಿತ ಸ್ಕ್ರೀನ್‌ ಬದಲಾವಣೆ, No-Cost EMI, ಖಚಿತ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮೇಲೆ ₹ 20 ಸಾವಿರ ರಿಯಾಯಿತಿ

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಮೇಲೆ ₹ 20 ಸಾವಿರ ರಿಯಾಯಿತಿ

ಫ್ಲಾಗ್‌ಶಿಪ್‌ ಸ್ಮಾರ್ಟ್‌ಫೋನ್‌ ಆಗಿರುವ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಬೆಲೆಯಲ್ಲಿ ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಭಾರೀ ರಿಯಾಯಿತಿ ದೊರೆಯುತ್ತಿದ್ದು, ಬರೋಬ್ಬರಿ ₹19,510 ರಿಯಾಯಿತಿ ಲಭ್ಯವಿದೆ. ₹ 62,500 ಬೆಲೆ ಹೊಂದಿದ್ದ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ S9 ಈಗ ₹ 42,990ಕ್ಕೆ ದೊರೆಯುತ್ತದೆ. ಇದರೊಂದಿಗೆ No-Cost EMI, ಖಚಿತ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

ಹುವಾವೆ ನೋವಾ 3i

ಹುವಾವೆ ನೋವಾ 3i

ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಹುವಾವೆ ಸ್ಮಾರ್ಟ್‌ಫೋನ್‌ಗಳು ಸಹ ಭಾರೀ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿವೆ. ನೋವಾ 3i ಸ್ಮಾರ್ಟ್‌ಫೋನ್‌ ಕೇವಲ ₹17,990ಕ್ಕೆ ಲಭ್ಯವಿದ್ದು, ಬರೋಬ್ಬರಿ ₹ 6,000 ಬೆಲೆ ಕಡಿತಗೊಂಡಿದೆ. ಅದಲ್ಲದೇ ₹1,000 ಹೆಚ್ಚುವರಿ ಕ್ಯಾಶ್‌ಬ್ಯಾಕ್‌ ಆಫರ್‌ ಲಭ್ಯವಿದೆ. ಇದರ ಜತೆಯಲ್ಲಿ No-Cost EMI, ಉಚಿತ ಸ್ಕ್ರೀನ್‌ ಬದಲಾವಣೆ, ಖಚಿತ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

Mi A2 ಬೆಲೆಯಲ್ಲಿ ಮೊದಲ ಸಲ ಕಡಿತ

Mi A2 ಬೆಲೆಯಲ್ಲಿ ಮೊದಲ ಸಲ ಕಡಿತ

ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಬಲ ಹಿಡಿತ ಹೊಂದಿರುವ ಶಿಯೋಮಿಯ Mi A2 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಮೊದಲ ಬಾರಿ ಇಳಿಕೆಯಾಗಿದೆ. 12+20 MP ಡ್ಯುಯಲ್ ಕ್ಯಾಮೆರಾ ಹೊಂದಿರುವ Mi A2 ₹ 14,999ಕ್ಕೆ ಲಭ್ಯವಿದ್ದು, ₹ 2,500 ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ. ಇದರ ಜತೆ ಎಲ್ಲಾ ಮೊಬೈಲ್‌ಗಳಿಗೆ ಇದ್ದಂಗೆ No-Cost EMI, ಉಚಿತ ಸ್ಕ್ರೀನ್‌ ಬದಲಾವಣೆ, ಖಚಿತ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

ರಿಯಲ್‌ಮಿ 1 ಮೇಲೂ ರಿಯಾಯಿತಿ

ರಿಯಲ್‌ಮಿ 1 ಮೇಲೂ ರಿಯಾಯಿತಿ

4G RAM ಹೊಂದಿರುವ ರಿಯಲ್‌ಮಿ ₹12,990ರ ಬದಲಾಗಿ ₹ 10,490ಕ್ಕೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಲಭ್ಯವಾಗಲಿದೆ. ರಿಯಲ್‌ಮಿ 1 ಸ್ಮಾರ್ಟ್‌ಫೋನ್‌ ಖರೀದಿ ಜತೆಗೆ ಗ್ರಾಹಕರಿಗೆ No-Cost EMI, ಉಚಿತ ಸ್ಕ್ರೀನ್‌ ಬದಲಾವಣೆ ಆಫರ್ ಲಭ್ಯವಿದೆ.

10.or G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ

10.or G ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ

ಅಮೆಜಾನ್‌ನ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ 10.or G ಸ್ಮಾರ್ಟ್‌ಫೋನ್‌ ತನ್ನ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಕಂಡಿದೆ. 4GB RAM ಮತ್ತು ಡ್ಯುಯಲ್ ಕ್ಯಾಮೆರಾ ಹೊಂದಿರುವ 10.or G ಸ್ಮಾರ್ಟ್‌ಫೋನ್‌ ₹ 13,999ರ ಬದಲಾಗಿ ₹ 6,999 ಕ್ಕೆ ಲಭ್ಯವಿದ್ದು, ₹ 7,000 ಡಿಸ್ಕೌಂಟ್‌ ಲಭ್ಯವಿದೆ. ಗ್ರಾಹಕರಿಗೆ No-Cost EMI ಸೌಲಭ್ಯ ಸಿಗಲಿದೆ.

ರೆಡ್‌ಮಿ Y2 ಸ್ಮಾರ್ಟ್‌ಫೋನ್‌ ಮೇಲೂ ಡಿಸ್ಕೌಂಟ್‌

ರೆಡ್‌ಮಿ Y2 ಸ್ಮಾರ್ಟ್‌ಫೋನ್‌ ಮೇಲೂ ಡಿಸ್ಕೌಂಟ್‌

ಶಿಯೋಮಿಯ 16 MP AI ಸೆಲ್ಫೀ ಕ್ಯಾಮೆರಾ ಹೊಂದಿರುವ ರೆಡ್‌ಮಿ Y2 ಸ್ಮಾರ್ಟ್‌ಫೋನ್‌ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದೆ. 64 GB ಆವೃತ್ತಿಯು ₹ 13499ರ ಬದಲಾಗಿ ₹ 10,999ಕ್ಕೆ ಲಭ್ಯವಿದ್ದರೆ, 32GB ಆವೃತ್ತಿ ₹10,499ರ ಬದಲಾಗಿ ₹ 8,999ಕ್ಕೆ ಲಭ್ಯವಿದೆ. ಇದರ ಜತೆ ಎಲ್ಲಾ ಮೊಬೈಲ್‌ಗಳಿಗೆ ಇದ್ದಂಗೆ No-Cost EMI, ಉಚಿತ ಸ್ಕ್ರೀನ್‌ ಬದಲಾವಣೆ, ಖಚಿತ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

ಮೊಟೋ e5 ಪ್ಲಸ್‌ ಬೆಲೆಯಲ್ಲೂ ಇಳಿಕೆ

ಮೊಟೋ e5 ಪ್ಲಸ್‌ ಬೆಲೆಯಲ್ಲೂ ಇಳಿಕೆ

ಮೊಟೊರೋಲಾದ ಮೊಟೋ e5 ಪ್ಲಸ್‌ ಬೆಲೆಯಲ್ಲೂ ಭಾರೀ ಇಳಿಕೆ ಕಂಡಿದ್ದು, ₹ 12,999ರ ಬದಲಾಗಿ ₹ 9,999ಕ್ಕೆ ಮೊಟೋ e5 ಪ್ಲಸ್ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಮಾರಾಟವಾಗುತ್ತಿದೆ. No-Cost EMI, ಉಚಿತ ಸ್ಕ್ರೀನ್‌ ಬದಲಾವಣೆ, ಖಚಿತ ಎಕ್ಸ್‌ಚೆಂಜ್‌ ಆಫರ್‌ ಲಭ್ಯವಿದೆ.

ಮತ್ಯಾವ ಆಫರ್‌ಗಳಿವೆ..?

ಮತ್ಯಾವ ಆಫರ್‌ಗಳಿವೆ..?

ಬ್ಲೂಟೂಥ್‌ ಹೆಡ್‌ಸೆಟ್‌, Mi ಪವರ್‌ ಬ್ಯಾಂಕ್‌ಗಳು, ಮೊಬೈಲ್‌ ಕೇಸ್‌ ಮತ್ತು ಕವರ್‌ಗಳು, ಡ್ಯುರಾಸೆಲ್‌ ಪವರ್‌ ಬ್ಯಾಂಕ್‌ಗಳ ಮೇಲೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಭಾರೀ ಡಿಸ್ಕೌಂಟ್‌ ಲಭ್ಯವಿದ್ದು, ಅಕ್ಟೋಬರ್‌ 14ರವರೆಗೆ ಈ ಆಫರ್‌ಗಳೆಲ್ಲ ಲಭ್ಯವಿದ್ದು, ಈ ಹಬ್ಬವನ್ನು ಹೊಸ ಎಲೆಕ್ಟ್ರಾನಿಕ್ ಉತ್ಪನ್ನಗಳ ಜತೆ ಆಚರಿಸಿ.

Best Mobiles in India

English summary
amazon great indian festival sale: Big deals on smartphones. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+