'ಒನ್‌ಪ್ಲಸ್ 7' ಮತ್ತು 'ಒನ್‌ಪ್ಲಸ್ 7 ಪ್ರೊ' ಫೋನ್‌ಗಳ ಬೆಲೆ ಇಳಿಕೆ!

|

ದೇಶದ ಮಾರುಕಟ್ಟೆಗೆ ಒನ್‌ಪ್ಲಸ್‌ನ ನೂತನ ಸ್ಮಾರ್ಟ್‌ಫೋನ್ 'ಒನ್‌ಪ್ಲಸ್ 7ಟಿ' ಬಿಡುಗಡೆಯಾದ ತಕ್ಷಣವೇ ಒನ್‌ಪ್ಲಸ್ 7 ಮತ್ತು 7 ಪ್ರೊ ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತಗೊಂಡಿವೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಕಾರಣದಿಂದಾಗಿ ಎರಡೂ ಸ್ಮಾರ್ಟ್‌ಫೋನ್‌ಗಳು ಬೆಲೆ ಕಡಿತವನ್ನು ಪಡೆದುಕೊಂಡಿದ್ದು, ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಫೋನ್‌ಗಳ ಮೇಲೆ ಕ್ರಮವಾಗಿ 3,000 ರೂ. ಹಾಗೂ 4,000 ರೂಪಾಯಿಗಳ ಬೆಲೆ ಕಡಿತಗೊಂಡಿರುವುದನ್ನು ನಾವು ನೋಡಬಹುದು.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಡಿಸ್‌ಪ್ಲೇ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನ್ 6.67 ಇಂಚಿನ ಕ್ವಾಡ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ನೀಡಲಾಗಿದ್ದು, ಡಿಸ್‌ಪ್ಲೇ ರೆಸಲ್ಯೂಶನ್ ಸಾಮರ್ಥ್ಯವು 3120x1440 ಆಗಿದೆ. ಹಾಗೇಯೇ ಫೋನಿನ ಸ್ಕ್ರೀನ್‌ನಿಂದ ಬಾಡಿಯ ನಡುವಿನ ಅನುಪಾತವು ಶೇ. 93ರಷ್ಟು ಆಗಿದ್ದು, ಡಿಸ್‌ಪ್ಲೇ ಪಿಕ್ಸಲ್ ಡೆನ್ಸಿಟಿಯು 516 ಆಗಿದೆ. ಡಿಸ್‌ಪ್ಲೇಯು ಸಂಪೂರ್ಣ ನಾಚ್ ರಹಿತವಾಗಿದ್ದು, ಸ್ಕ್ರೀನ್ ವಿಶಾಲವಾಗಿ ಕಾಣಿಸಲಿದೆ.ಇದು ಇತ್ತೀಚಿನ ಹೈ ಎಂಡ್ ಫ್ಲಾಗ್‌ಶಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಫೀಚರ್ಸ್ ಎಂದು ನಾವು ತಿಳಿಯಬಹುದು.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್‌ಗಳ ರೆಸೊಲ್ಯೂಷನ್ ಹೊಂದಿರುವ 6.41 ಇಂಚಿನ ಆಪ್ಟಿಕ್ AMOLED ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. 402 ಪಿಕ್ಸೆಲ್‌ಗಳ ಪಿಪಿಐ ಮತ್ತು 19.5: 9ರ ಆಕಾರ ಅನುಪಾತದಲ್ಲಿ ಸ್ಕ್ರೀನ್ ಅನ್ನು ನೀಡಲಾಗಿದ್ದು, ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಸ್ಕ್ರೀನ್ ಇದಾಗಿದೆ. DCI-P3 ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿರುವ ಸ್ಮಾರ್ಟ್‌ಫೋನ್ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಪ್ರೊಸೆಸರ್

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 855 ಸಾಮರ್ಥ್ಯದ ಬಲವಾದ ಪ್ರೊಸೆಸರ್ ಅನ್ನು ಒದಗಿಸಲಾಗಿದೆ. ಇದರೊಂದಿಗೆ 12GB RAM ಪ್ರೊಸೆಸರ್‌ಗೆ ಬೆಂಬಲ ನೀಡಲಿದೆ. ಆಂತರಿಕ ಸಂಗ್ರಹಕ್ಕಾಗಿ 256GB ಸ್ಥಳಾವಕಾಶವನ್ನು ಇದಗಿಸಲಾಗಿದ್ದು, ಹೆಚ್ಚಿನ ಡೇಟಾ ಬೇಡುವ ಗೇಮ್‌ಗಳನ್ನು ಆಡಲು ಮತ್ತು ಹೈ ಎಂಡ್‌ ಆಪ್‌ಗಳನ್ನು ಬಳಸಬಹುದಾಗಿದೆ. ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಜೊತೆಗೆ ಹೈ ಎಂಡ್ ಪ್ರೊಸೆಸರ್ ಫೀಚರ್ಸ್ ಮಲ್ಟಿಟಾಸ್ಕ್ ಕೆಲಸಗಳನ್ನು ಸರಾಗಗೊಳಿಸಿದೆ.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್‌ನಲ್ಲೂ ಕೂಡ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. ಪ್ರಸ್ತುತ ಅತ್ಯಂತ ಉತ್ತಮ ಪ್ರೊಸೆಸರ್ ಅನ್ನು ಕೇವಲ 30 ಸಾವಿರ ರೂ. ಆಸುಪಾಸಿನ ಮೊಬೈಲ್‌ನಲ್ಲಿ ತಂದಿರುವುದು ಮಾರುಕಟ್ಟೆಗೆ ಆಶ್ಚರ್ಯ ಮೂಡಿಸಿದೆ. ಇದರೊಂದಿಗೆ 6GB ಸಾಮರ್ಥ್ಯದ RAM ಇರಲಿದ್ದು, ಹಾಗೂ 128GB ಸಂಗ್ರಹ ಸ್ಥಳಾವಕಾಶ ಒದಗಿಸಲಾಗಿದ್ದು, ಜೊತೆಗೆ UFS 3.0 ಸ್ಟೊರೇಜ್ ಮೋಡೆಲ್ ಬೆಂಬಲ ಪಡೆದಿದೆ. ಇದರಲ್ಲೂ ಸ್ನ್ಯಾಪ್‌ಡ್ರಾಗನ್ 855 ಪ್ರೊಸೆಸರ್ ಮಲ್ಟಿಟಾಸ್ಕ್ ಕೆಲಸಗಳನ್ನು ಸರಾಗಗೊಳಿಸಿದೆ.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ರಿಯರ್ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದ್ದು, ಪ್ರಾಥಮಿಕ ಕ್ಯಾಮೆರಾವು 48 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದೆ. ಸೆಕೆಂಡರಿ ಕ್ಯಾಮೆರಾವು 16 ಮೆಗಾಪಿಕ್ಸ್‌ನಲ್ಲಿದ್ದು, ಅಲ್ಟ್ರಾವೈಲ್ಡ್ ಆಂಗಲ್ ಲೆಸ್‌ ಹೊಂದಿದೆ. ಹಾಗೇ ಮೂರನೇ ಕ್ಯಾಮೆರಾವು 8 ಮೆಗಾಪಿಕ್ಸಲ್ನಲ್ಲಿದ್ದು, ಟೆಲಿಪೋಟೊ ಸೆನ್ಸಾರ್‌ ಲೆನ್ಸ್ ಸಾಮರ್ಥ್ಯದಲ್ಲಿದೆ. ಇದು ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಸಾಮರ್ಥ್ಯದಲ್ಲಿ ಪೋಟೋಗಳನ್ನು ಚಿತ್ರಿಸಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು, 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮರಾವು f / 1.7 ದ್ಯುತಿರಂಧ್ರ ಮತ್ತು 1.6-ಮೈಕ್ರಾನ್ ಪಿಕ್ಸೆಲ್ ಗಾತ್ರ ಹಾಗೂ ಒಂದು f / 2.4 ದ್ಯುತಿರಂಧ್ರದೊಂದಿಗೆ ಬಂದಿದೆ. 1.12-ಮೈಕ್ರಾನ್ ಸಾಮರ್ಥ್ಯದಲ್ಲಿ 5-ಮೆಗಾಪಿಕ್ಸೆಲ್ ಕ್ಯಾಮೆರಾವಿದೆ. ಆಟೋಫೋಕಸ್ ಪತ್ತೆಹಚ್ಚುವಿಕೆ ಸೆಟಪ್ ಹೊಂದಿರುವ ರಿಯರ್ ಕ್ಯಾಮೆರಾ ಸೆಟಪ್ ಡ್ಯುಯಲ್-ಎಲ್ಇಡಿ ಫ್ಲಾಶ್, ಹೆಚ್‌ಡಿಆರ್, ಪನೋರಮಾ ಆಯ್ಕೆಗಳನ್ನು ಹೊಂದಿರುವುದನ್ನು ನೋಡಬಹುದು.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಸೆಲ್ಫಿ ಕ್ಯಾಮೆರಾ

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಇದೇ ಮೊದಲ ಬಾರಿಗೆ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾವನ್ನು ಪರಿಚಯಿಸಿದೆ. ಸೆಲ್ಫಿ ಕ್ಯಾಮೆರಾವು 16 ಮೆಗಾಪಿಕ್ಸಲ್ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಸೆಲ್ಫಿ ಕ್ಯಾಮೆರಾ ಅತ್ಯುತ್ತಮ ಆಯ್ಕೆಗಳನ್ನು ಸಹ ನೀಡಲಾಗಿದ್ದು, ಉತ್ತಮವಾಗಿ ಫೋಟೋ ಮುಡಿಬರಲು ಸಹಕರಿಸಲಿವೆ. ಮತ್ತೊಂದು ವಿಶೇಷವೆಂದರೆ, ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನಿನ ಪಾಪ್‌ಅಪ್‌ ಸೆಲ್ಫಿ ಕ್ಯಾಮೆರಾ ಅತ್ಯಂತ ಗಟ್ಟಿಮುಟ್ಟಾಗಿದ್ದು, ಅಕಸ್ಮಾತ್ ಮೊಬೈಲ್ ಬಿದ್ದರೂ ಸೆಲ್ಫೀ ಕ್ಯಾಮೆರಾ ಸ್ವಯಂ ಒಳ ಸೇರಿಕೊಳ್ಳುತ್ತದೆ.

ಒನ್‌ಪ್ಲಸ್‌ 7 ಎಫ್ / 2.0 ಅಪರ್ಚರ್ ಮತ್ತು 1.0-ಮೈಕ್ರಾನ್ ಪಿಕ್ಸೆಲ್ ಗಾತ್ರದಲ್ಲಿ 16-ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ. ಆಟೋ ಹೆಚ್‌ಡಿಆರ್, 1080p @ 30fps ವಿಡಿಯೋ ಸಾಮರ್ಥ್ಯ ಮತ್ತು ಗೈರೊ-ಇಐಎಸ್ ಫೀಚರ್ಸ್ ಅನ್ನು ಒನ್‌ಪ್ಲಸ್ 7 ಫೋನಿನ ಸೆಲ್ಫೀ ಕ್ಯಾಮೆರಾದಲ್ಲಿ ತರಲಾಗಿದೆ. ಫೇಸ್ ಅನ್ಲಾಕ್ ಅನ್ನು ಬೆಂಬಲಿಸುವ ಸಾಮರ್ಥ್ಯವನ್ನು ಹೊಂದಿರವ ಈ ಸ್ಮಾರ್ಟ್‌ಫೋನ್ ಸೆಲ್ಪೀ ಪ್ರಿಯರ ಅತ್ಯುತ್ತಮ ಬಜೆಟ್ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಲಿದೆ ಎಂದು ಹೇಳಬಹುದು.

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್

ಒನ್‌ಪ್ಲಸ್‌ 7 ಪ್ರೊ VS ಒನ್‌ಪ್ಲಸ್ 7 ಬ್ಯಾಟರಿ ಮತ್ತು ಇತರೆ ಫೀಚರ್ಸ್

ಒನ್‌ಪ್ಲಸ್‌ 7 ಪ್ರೊ ಸ್ಮಾರ್ಟ್‌ಫೋನನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು, ಇದೇ ಮೊದಲ ಬಾರಿಗೆ ವಾರ್ಪ್ ಚಾರ್ಜಿಂಗ್ ಸೌಲಭ್ಯವನ್ನು ನೀಡಲಾಗಿದ್ದು, ಕೇವಲ 10 ನಿಮಿಷದ ಚಾರ್ಜ್‌ ಸುಮಾರು 10 ಗಂಟೆಗಳವರೆಗೆ ಚಾರ್ಜ್ ಆಗಲಿದೆ. ಫೋನಿನಲ್ಲಿ ಮ್ಯೂಸಿಕ್‌ಗೆ ಹೆಚ್ಚಿನ ಗಮನ ನೀಡಿರುವ ಕಂಪೆನಿ, ಡಾಲ್ಬಿ ಅಟೊಮ್ ಸ್ಪೀಕರ್ಸ್ ಒದಗಿಸಿದ್ದು, ಡಿಸ್‌ಪ್ಲೇ ಫೀಮಗರ್ ಪ್ರಿಂಟ್ ಆಯ್ಕೆ ಇದೆ. ಇನ್ನುಳಿದಂತೆ ಸಂವೇದಕಗಳ ವಿಷಯದಲ್ಲಿ ಒನ್‌ಪ್ಲಸ್‌ 7 ಪ್ರೊ ಹೆಚ್ಚು ಶಕ್ತವಾಗಿದೆ ಎಂದು ಹೇಳಬಹುದು.

ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸು 3,700mAh ಸಾಮರ್ಥ್ಯದ ತೆಗೆಯಲಾಗದಂತಂಹ ಬ್ಯಾಟರಿಯನ್ನು ಹೊಂದಿದೆ. ಇನ್ನುಳಿದಂತೆ Wi-Fi 802.11 a / b / g / n / ac, ಜಿಪಿಎಸ್, ಬ್ಲೂಟೂತ್ ವಿ 5.00, ಎನ್ಎಫ್ಸಿ, ಯುಎಸ್ಬಿ ಒಟಿಜಿ, ಯುಎಸ್ಬಿ ಟೈಪ್- ಸಿ, 3 ಜಿ, ಮತ್ತು 4ಜಿ ಹಾಗೂ ಅಕ್ಸೆಲೆರೊಮೀಟರ್, ಬೆಳಕಿನ ಸಂವೇದಕ, ದಿಕ್ಸೂಚಿ / ಮ್ಯಾಗ್ನೆಟೊಮೀಟರ್, ಗೈರೊಸ್ಕೋಪ್, ಸಾಮೀಪ್ಯ ಸಂವೇದಕ ಮತ್ತು ಫಿಂಗರ್ಪ್ರಿಂಟ್ ಸಂವೇದಕವನ್ನು ಒಳಗೊಂಡಿರುತ್ತದೆ.

ಒನ್‌ಪ್ಲಸ್ 7 VS ಒನ್‌ಪ್ಲಸ್ 7 ಪ್ರೊ!..ಯಾವುದು ಬೆಸ್ಟ್?

ಒನ್‌ಪ್ಲಸ್ 7 VS ಒನ್‌ಪ್ಲಸ್ 7 ಪ್ರೊ!..ಯಾವುದು ಬೆಸ್ಟ್?

ಈ ಎರಡು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಒನ್‌ಪ್ಲಸ್ 7 ಇದೀಗ ಕೇವಲ 29,999 ರೂಪಾಯಿಗಳ ಬೆಲೆಯಿಂದ ಆರಂಭವಾಗಿದ್ದರೆ, ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್‌ಫೋನ್ 44,999 ರೂ.ರೂ.ಗಳಿಂದ ಆರಂಭವಾಗಿದೆ. ಒನ್‌ಪ್ಲಸ್ ಕಂಪೆನಿ ಈ ಬಾರಿ ಎರಡು ವೆರಿಯಂಟ್‌ಗಳಲ್ಲಿ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿ ಎರಡು ಪ್ರೀಮಿಯಮ್ ಮಾದರಿಯ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಒನ್‌ಪ್ಲಸ್ 7 ಪ್ರೊ ಹೈ ಎಂಡ್ ಪ್ರೀಮಿಯಮ್ ಗ್ರಾಹಕರಿಗೆ ಬಿಡುಗಡೆಯಾಗಿದ್ದರೆ, ಒನ್‌ಪ್ಲಸ್ 7 ಸ್ಮಾರ್ಟ್‌ಫೋನ್ ಬಜೆಟ್ ಪ್ರೀಮಿಯಮ್ ಗ್ರಾಹಕರಿಗಾಗಿ ಸಿದ್ದವಾಗಿದೆ. ಬೆಲೆಯಲ್ಲಿ ಹೋಲಿಸಿದರೆ ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಗ್ರಾಹಕರಿಗೆ ಲಾಭವೇ ಎಂದು ಹೇಳಬಹುದು. ಅದರಲ್ಲೂ ಒನ್‌ಪ್ಲಸ್ 7 ಪ್ರೊ ನಿಮ್ಮ ಮೊದಲ ಆಯ್ಕೆಯಾಗಿರಲಿ.!

Best Mobiles in India

English summary
OnePlus previous-generation models - OnePlus 7 and 7 Pro have received a price cut on account of the Amazon Great Indian Festival sale. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X