ಅಮೆಜಾನ್ ಸೇಲ್‌: ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಕಡಿತ..!

|

ಒಂದು ವೇಳೆ ನೀವು ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಖರೀದಿಸಲು ಪ್ಲಾನ್ ಮಾಡುತ್ತಿದ್ದರೆ, ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಖಂಡಿತವಾಗಲೂ ಅದಕ್ಕೆ ಉತ್ತಮ ಸಮಯ. ಈ ಸೇಲ್ ನ ಒಂದು ಭಾಗವಾಗಿ ಅಮೇಜಾನ್ ಒನ್ ಪ್ಲಸ್ 6 ಸ್ಮಾರ್ಟ್ ಫೋನಿನ ಮೇಲೆ 5,000 ರೂಪಾಯಿಯ ಫ್ಲಾಟ್ ಡಿಸ್ಕೌಂಟ್ ನ್ನು ನೀಡುತ್ತಿದೆ.

5000 ರೂಪಾಯಿ ಜೊತೆಗೆ ಇನ್ನಷ್ಟು ರಿಯಾಯಿತಿ:

5000 ರೂಪಾಯಿ ಜೊತೆಗೆ ಇನ್ನಷ್ಟು ರಿಯಾಯಿತಿ:

34,999 ರುಪಾಯಿಯ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಇದೀಗ ಕೇವಲ 29,999 ರುಪಾಯಿಯ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದಾದ ಅವಕಾಶ ಈ ಸೇಲ್ ನಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ರಿಯಾಯಿತಿಯ ಜೊತೆಗೆ ಕಂಪೆನಿಯು ನೋ ಕಾಸ್ಟ್ ಇಎಂಐ, ಎಕ್ಸ್ ಚೇಂಜ್ ಆಫರ್ ಮತ್ತು ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ನ್ನು ಕೂಡ ನೀಡಲಿದೆ.

ಕ್ಯಾಷ್ ಬ್ಯಾಕ್ ಗಳೂ ಲಭ್ಯ:

ಕ್ಯಾಷ್ ಬ್ಯಾಕ್ ಗಳೂ ಲಭ್ಯ:

ಒಂದು ವೇಳೆ ನಿಮ್ಮ ಬಳಿ ಎಸ್ ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇದ್ದಲ್ಲಿ ನೀವು 10 ಶೇಕಡಾ ಇನ್ಸೆಂಟ್ ರಿಯಾಯಿತಿಯನ್ನೂ ಕೂಡ ಪಡೆಯಬಹುದು. ಇದನ್ನು ಹೊರತುಪಡಿಸಿ, ಒನ್ ಪ್ಲಸ್ 6 ಖರೀದಿದಾರರಿಗೆ 500 ರೂಪಾಯಿ ಬೆಲೆಬಾಳುವ ಇಬುಕ್ ಖರೀದಿಸುವ ಅವಕಾಶ, ಪ್ರೈಮ್ ವೀಡಿಯೋಗಳನ್ನು ಸ್ಟ್ರೀಮ್ ಮಾಡಿದರೆ ರೂ.250 ಕ್ಯಾಷ್ ಬ್ಯಾಕ್ , ಕೋಟಕ್ ನಿಂದ 12 ತಿಂಗಳ ಡ್ಯಾಮೇಜ್ ಇನ್ಸುರೆನ್ಸ್ ನ್ನು ಉಚಿತವಾಗಿ ಮತ್ತು ಐಡಿಯಾ ಸೆಲ್ಯುಲರ್ ನಿಂದ 2000 ರುಪಾಯಿಯ ರಿಯಾಯಿತಿಯೂ ಕೂಡ ಲಭ್ಯವಾಗುತ್ತದೆ.

ಒನ್ ಪ್ಲಸ್ 6 ಫೋನಿನ ವೈಶಿಷ್ಟ್ಯತೆಗಳು:

ಒನ್ ಪ್ಲಸ್ 6 ಫೋನಿನ ವೈಶಿಷ್ಟ್ಯತೆಗಳು:

ಈ ವರ್ಷದ ಮೇ ತಿಂಗಳಲ್ಲಿ 34,999 ರುಪಾಯಿಗೆ ಭಾರತದಲ್ಲಿ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ನ್ನು ಕಂಪೆನಿಯು ಬಿಡುಗಡೆಗೊಳಿಸಿತು. ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 8.0 ಓರಿಯೋ ಆಪರೇಟಿಂಗ್ ಸಿಸ್ಟಮ್ ನಲ್ಲಿ ರನ್ ಆಗುತ್ತದೆ. ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್ ನ್ನು ಇದು ಹೊಂದಿದೆ.ಈ ಸ್ಮಾರ್ಟ್ ಫೋನ್ ನ ಪ್ರಮುಖ ವೈಶಿಷ್ಟ್ಯತೆಯೆಂದರೆ 6.28-ಇಂಚಿನ FHD+ ಆಪ್ಟಿಕ್ AMOLED ಸ್ಕ್ರೀನ್ ಜೊತೆಗೆ 19:9 ಅನುಪಾತವನ್ನು ಹೊಂದಿದೆ.ಮೇಲ್ಬಾಗದಲ್ಲಿ ನಾಚ್ ಇದೆ ಇದು ಪ್ರಾಕ್ಸಿಮಿಟಿ, ಆಂಬಿಯಂಟ್ ಲೈಟ್ ಸೆನ್ಸರ್ ಮತ್ತು ಸ್ಪೀಕರ್ ನ್ನು ಒಳಗೊಂಡಿದೆ.

ಎರಡು ವೇರಿಯಂಟ್ ನಲ್ಲಿ ಲಭ್ಯ:

ಎರಡು ವೇರಿಯಂಟ್ ನಲ್ಲಿ ಲಭ್ಯ:

ಎರಡು ವೇರಿಯಂಟ್ ನಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಾಗುತ್ತದೆ. 6GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಮತ್ತು 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಇದನ್ನು ಇನ್ನೂ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಕ್ಯಾಮರಾ ವೈಶಿಷ್ಟ್ಯತೆಗಳು ಹೀಗಿವೆ:

ಕ್ಯಾಮರಾ ವೈಶಿಷ್ಟ್ಯತೆಗಳು ಹೀಗಿವೆ:

ಕ್ಯಾಮರಾ ಕೆಪಾಬಲಿಟೀಸ್ ಬಗ್ಗೆ ಹೇಳುವುದಾದರೆ ಒನ್ ಪ್ಲಸ್ 6 ಡುಯಲ್ ಹಿಂಭಾಗದ ಕ್ಯಾಮರಾವು 16ಎಂಪಿ ಪ್ರೈಮರಿ ಕ್ಯಾಮರಾವನ್ನು f/1.7 ಅಪರ್ಚರ್ ನ್ನು ಹೊಂದಿದೆ ಮತ್ತು ಸೋನಿ IMX519 ಸೆನ್ಸರ್ ನ್ನು ಒಳಗೊಂಡಿದೆ. ಸೆಕೆಂಡರಿ ಕ್ಯಾಮರಾವು 20MP ಸಾಮರ್ಥ್ಯದ್ದಾಗಿದ್ದು ಸೋನಿ IM376K ಸೆನ್ಸರ್ ನ್ನು ಹೊಂದಿದೆ.ಅಷ್ಟೇ ಅಲ್ಲದೆ ಸೆಲ್ಫೀ ತೆಗೆದುಕೊಳ್ಳಲು 16MP ಕ್ಯಾಮರಾವಿದೆ. ಈ ಸ್ಮಾರ್ಟ್ ಫೋನ್ 3,300 mAh ಬ್ಯಾಟರಿ ಸಾಮರ್ಥ್ಯದ್ದಾಗಿದ್ದು ಡ್ಯಾಶ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

Best Mobiles in India

English summary
Amazon Great Indian Festival sale to offer best-ever discount on OnePlus 6 smartphone, details here. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X