Home
ಮೊಬೈಲ್

ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ಬೆಲೆ

ಇ-ಕಾಮರ್ಸ್ ಸೈಟ್ ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನ್ನು ಈ ತಿಂಗಳು ಆಯೋಜಿಸುತ್ತಿದ್ದು ಜನವರಿ 20ರಿಂದ 23ರ ವರೆಗೆ ಈ ಸೇಲ್ ನಡೆಯಲಿದೆ.ಫ್ಯಾಷನ್ ವಸ್ತುಗಳು,ದಿನಬಳಕೆ ವಸ್ತುಗಳು,ಟಿವಿ ಮತ್ತು ಅಪ್ಲಯನ್ಸಸ್ ಗಳು, ಅಡುಗೆಮನೆ ವಸ್ತುಗಳು, ಎಲೆಕ್ಟ್ರಾನಿಕ್ ವಸ್ತುಗಳು, ಬುಕ್ಸ್ ಗಳು ಮತ್ತು ಮೊಬೈಲ್ ಗಳು ಈ ಸೇಲ್ ನಲ್ಲಿ ಭರ್ಜರಿ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.

ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ ರಿಯಾಯಿತಿ ಬೆಲೆ

ಹಲವಾರು ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದ್ದು ಯಾವೆಲ್ಲ ಫೋನ್ ಗಲು ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎಂಬ ಪಟ್ಟಿಯನ್ನು ನೀಡಲಾಗಿದೆ ಆದರೆ ಎಷ್ಟು ರಿಯಾಯಿತಿ ಇರಲಿದೆ ಎಂಬ ಬಗ್ಗೆ ಅಮೇಜಾನ್ ಇದುವರೆಗೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಒನ್ ಪ್ಲಸ್ 6ಟಿ

ಒನ್ ಪ್ಲಸ್ 6ಟಿ

ಅಮೇಜಾನ್ ಈ ಬಾರಿಯ ಸೇಲ್ ನಲ್ಲಿ ಒನ್ ಪ್ಲಸ್ 6ಟಿ ಗೆ ರಿಯಾಯಿತಿಯನ್ನು ನೀಡುತ್ತಿದೆ. ಈ ಡಿವೈಸ್ ನಲ್ಲಿ ಮೂರು ವೇರಿಯಂಟ್ ಗಳು ಲಭ್ಯವಿದೆ-- 6GB RAM+128GB ಇಂಟರ್ನಲ್ ಸ್ಟೋರೇಜ್ (Rs 37,999), 8GB RAM+128GB ಇಂಟರ್ನಲ್ ಸ್ಟೋರೇಜ್ (Rs 41,999) ಮತ್ತು 8GB RAM+256GB ಇಂಟರ್ನಲ್ ಸ್ಟೋರೇಜ್ (Rs 45,999).ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ಈ ಫೋನ್ 6.41-ಇಂಚಿನ ಆಪ್ಟಿಕ್ AMOLED ಸ್ಕ್ರೀನ್, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್, 3700mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಹೊಂದಿದೆ. 16+20 MP ಡುಯಲ್ ಹಿಂಭಾಗದ ಕ್ಯಾಮರಾ ಮತ್ತು 16 MP ಮುಂಭಾಗದ ಕ್ಯಾಮರಾವನ್ನು ಇದು ಹೊಂದಿದೆ.

ಶಿಯೋಮಿ ರೆಡ್ಮಿ ವೈ2

ಶಿಯೋಮಿ ರೆಡ್ಮಿ ವೈ2

ಶಿಯೋಮಿ ಸೆಲ್ಫೀ ಸೆಂಟ್ರಿಕ್ ಸ್ಮಾರ್ಟ್ ಫೋನ್ ರೆಡ್ಮಿ ವೈ2 ಕೂಡ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ. ಇತ್ತೀಚೆಗಷ್ಟೇ ಈ ಫೋನಿನ ಬೆಲೆಯಲ್ಲಿ ಇಳಿಕೆಯೂ ಆಗಿದೆ. 3GB RAM+32GB ಯ ಫೋನ್ Rs 8,999 ಕ್ಕೆ ಲಭ್ಯವಿದ್ದರೆ ,4GB RAM+64GB ಫೋನು Rs 10,999 ಗೆ ಖರೀದಿಸುವ ಅವಕಾಶ ಈ ಸೇಲ್ ನಲ್ಲಿದೆ. ಮೂರು ಬಣ್ಣಗಳ ಆಯ್ಕೆಯಲ್ಲಿ ಈ ಹ್ಯಾಂಡ್ ಸೆಟ್ ಸಿಗುತ್ತದೆ- ಗ್ರೇ, ಗೋಲ್ಡ್ ಮತ್ತು ರೋಸ್ ಗೋಲ್ಡ್. ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ಇದರಲ್ಲಿ 5.99 HD+ ಫುಲ್ ಸ್ಕ್ರೀನ್ ಡಿಸ್ಪ್ಲೇ, 12MP + 5MP ಹಿಂಭಾಗದ ಡುಯಲ್ ಕ್ಯಾಮರಾ, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 625 ಪ್ರೊಸೆಸರ್, 16MP ಮುಂಭಾಗದ ಕ್ಯಾಮರಾ ಮತ್ತು 3080mAh ಬ್ಯಾಟರಿ ಸೌಲಭ್ಯವಿದೆ.

ರಿಯಲ್ ಮಿ ಯು1

ರಿಯಲ್ ಮಿ ಯು1

ರಿಯಲ್ ಮಿ ಸೆಲ್ಫೀ ಕೇಂದ್ರಿತ ಸ್ಮಾರ್ಟ್ ಫೋನ್ ಕೂಡ ಈ ಸೇಲ್ ನ ಒಂದು ಭಾಗವಾಗಿದೆ ಮತ್ತು ಗ್ರಾಹಕರು ಇದನ್ನು ಕಡಿಮೆ ಬೆಲೆಯಲ್ಲಿ ಖರೀದಿಸುವ ಅವಕಾಶವಿದೆ. ಈ ಫೋನ್ ನಲ್ಲಿ ಎರಡು ವೇರಿಯಂಟ್ ಗಳು ಲಭ್ಯವಿದೆ-3GB RAM+32GB ಇಂಟರ್ನಲ್ ಸ್ಟೋರೇಜ್ (Rs 11,999) ಮತ್ತು 4GB+64GB (Rs 14,499). ವೈಶಿಷ್ಟ್ಯತೆಗಳ ವಿಚಾರಕ್ಕೆ ಬಂದರೆ ಇದರಲ್ಲಿ 6.3- ಇಂಚಿನ FHD+ ಸ್ಕ್ರೀನ್, ಹೆಲಿಯೋ ಪಿ70 AI ಪ್ರೊಸೆಸರ್ ,25MP ಫ್ಲ್ಯಾಗ್ ಶಿಪ್ ಸೆನ್ಸರ್ IMX 576 ಕ್ಯಾಮರಾ,13MP+2MP AI ಡುಯಲ್ ಹಿಂಭಾಗದ ಕ್ಯಾಮರಾ ಮತ್ತು 3500mAh ಬ್ಯಾಟರಿ ಸೌಲಭ್ಯವು ಈ ಫೋನಿನಲ್ಲಿದೆ.

ಒಟ್ಟಾರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಫೋನ್ ಗಳನ್ನು ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಖರೀದಿಸುವ ಅವಕಾಶ ಗ್ರಾಹಕರಿಗೆ ಇರುತ್ತದೆ.

Best Mobiles in India

English summary
Amazon Great Indian Sale starts January 20: Discounts on OnePlus 6T, Xiaomi Redmi Y2, Realme U1 and other smartphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+