'ಒನ್‌ಪ್ಲಸ್ 6T' ಭಾರೀ ಬೆಲೆ ಕಡಿತ!..ಪ್ರೀಮಿಯಂ ಫೋನ್ ಖರೀದಿಗೆ ಇದು ಬೆಸ್ಟ್ ಟೈಮ್!

    |

    ಭಾರತದಲ್ಲೇ ಅತಿಹೆಚ್ಚು ಮಾರಾಟವಾದ ಪ್ರೀಮಿಯಂ ಫೋನ್‌ಗಳಲ್ಲಿ ಒಂದಾದ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಬೆಲೆ ಕಳೆದುಕೊಂಡಿದೆ. ಕಳೆದ ವರ್ಷ ಬಿಡುಗಡೆಯಾಗಿ ಮೊಬೈಲ್ ಪ್ರಿಯರ ಮನಸೂರೆಗೊಂಡಿದ್ದ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಬೆಲೆಯನ್ನು ಕಡಿತಗೊಳಿಸಿ ಒನ್‌ಪ್ಲಸ್ ಅಚ್ಚರಿ ಮೂಡಿಸಿದರೆ, ಒನ್‌ಪ್ಲಸ್‌ 7 ಬಿಡುಗಡೆಗೆ ಇದು ಪೂರ್ವತಯಾರಿ ಇದು ಎನ್ನಲಾಗಿದೆ.

    ಹೌದು, ಈ ವರ್ಷ ಒನ್‌ಪ್ಲಸ್‌ 7 ಬಿಡುಗಡೆಗೆ ಒನ್‌ಪ್ಲಸ್ ಕಂಪೆನಿ ಸಿದ್ದವಾಗಿದ್ದು, ಜೊತೆಗೆ 2019ರ ಆರಂಭದಲ್ಲಿ ಸ್ಯಾಮ್‌ಸಂಗ್, ಹುವೈ ಮತ್ತು ಒಪ್ಪೊ ನೂತನ ಮಾದರಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಹೊಸ ಮಾದರಿಯ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ಧವಾಗುತ್ತಿರುವಂತೆಯೇ, ಹಳೆಯ ಮಾದರಿಗಳ ಬೆಲೆಯಲ್ಲೂ ಪೈಪೋಟಿ ನೀಡುತ್ತಿವೆ.

    'ಒನ್‌ಪ್ಲಸ್ 6T' ಭಾರೀ ಬೆಲೆ ಕಡಿತ!..ಪ್ರೀಮಿಯಂ ಫೋನ್ ಖರೀದಿಗೆ ಇದು ಬೆಸ್ಟ್ ಟೈಮ್!

    ಹಾಗಾಗಿ, ಈ ಎಲ್ಲಾ ಕಾರಣಗಳಿಂದ ಒನ್‌ಪ್ಲಸ್ ಕಂಪೆನಿ ತನ್ನ ಬಹು ಬೇಡಿಕೆಯ 'ಒನ್‌ಪ್ಲಸ್ 6ಟಿ' ಸ್ಮಾರ್ಟ್‌ಫೋನ್ ಬೆಲೆಯನ್ನು ಇಳಿಕೆ ಮಾಡಿರುವುದನ್ನು ನೋಡಬಹುದು. ಹಾಗಾದರೆ, ಈಗಲೂ ಬಹುಬೇಡಿಕೆಯಲ್ಲಿರುವ ಅತ್ಯುತ್ತಮ ಪ್ರೀಮಿಯಂ ಪೋನ್ 'ಒನ್‌ಪ್ಲಸ್ 6ಟಿ' ಫೀಚರ್ಸ್ ಯಾವುವು ಮತ್ತು ಪ್ರಸ್ತುತ ಬೆಲೆ ಎಷ್ಟು ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    ಡ್ಯಾಶ್‌ ಚಾರ್ಜಿಂಗ್

    ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಹಿಂದಿನ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳಿಗಿಂತ ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಕಂಪನಿಯ ಟ್ರಾಕ್‌ ರೆಕಾರ್ಡ್‌ನ್ನು ಗಮನಿಸಿದರೆ, ಒನ್‌ಪ್ಲಸ್‌ ಡಿವೈಸ್‌ಗಳು ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, ಈ ಬಾರಿಯ ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸಮಯ ಬಳಸಲು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

    ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌

    ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ಇತ್ತೀಚಿನ ಆಂಡ್ರಾಯ್ಡ್ ಪೈ ಒಎಸ್‌ನೊಂದಿಗೆ ಬಂದಿದೆ. ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ ಹೊರತುಪಡಿಸಿ ಆಂಡ್ರಾಯ್ಡ್ ಪೈ ಔಟ್‌ ಆಫ್‌ ಬಾಕ್ಸ್‌ ಒಎಸ್‌ನೊಂದಿಗೆ ಮಾರುಕಟ್ಟೆಗೆ ಬಂದಿರುವ ಮೊದಲ ಸ್ಮಾರ್ಟ್‌ಫೋನ್‌ ಆಗಿದೆ. Google I/O ದಲ್ಲಿ ಪರಿಚಯಿಸಲ್ಪಟ್ಟ ಗೂಗಲ್‌ನ ಗೆಸ್ಚರ್‌ ನ್ಯಾವಿಗೇಷನ್‌ ಫೀಚರ್‌ನ್ನುಆಂಡ್ರಾಯ್ಡ್‌ಪೈ ಬೆಂಬಲಿತ Oxyzen OS ಒನ್‌ಪ್ಲಸ್‌ನಲ್ಲಿ ಇದೆ. ಇದು ಹೊಸ ಬ್ಯಾಟರಿ ಫೀಚರ್ ಹೊಂದಿದ್ದು, ಈ ಆಪ್‌ ಮೊಬೈಲ್ ಬಳಕೆಯನ್ನು ವಿಶ್ಲೇಷಿಸಿ, ಬಳಕೆದಾರನ ಬಳಕೆಗೆ ತಕ್ಕಂತೆ ಬ್ಯಾಟರಿ ಸಾಮರ್ಥ್ಯವನ್ನು ವಿನಿಯೋಗಿಸುತ್ತದೆ. ಆಂಡ್ರಾಯ್ಡ್ ಪೈ ಆಧಾರಿತ OxygenOS 9.0 ಒಎಸ್‌ನ್ನು ಹಿಂದಿನ ಆವೃತ್ತಿ ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ಗೂ ರೋಲ್‌ ಔಟ್‌ ಮಾಡುತ್ತಿದೆ.

    ಬುಲೆಟ್‌ ವೈರ್‌ಲೆಸ್‌ ಹೆಡ್‌ಫೋನ್‌ಗಳು

    ಒನ್‌ಪ್ಲಸ್‌ 6T ಬಿಡುಗಡೆ ಮಾಡುವುದರ ಜತೆ ಕಂಪನಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಏನನ್ನಾದರೂ ನೀಡಬೇಕೆಂಬ ಉದ್ದೇಶದಿಂದ ಸ್ಮಾರ್ಟ್‌ಫೋನಿನಲ್ಲಿ ಟೈಪ್-ಸಿ ಜ್ಯಾಕ್ ಜತೆ ಬರುವ ಹೊಸ ಬುಲೆಟ್‌ ಇಯರ್‌ಫೋನ್‌ಗಳನ್ನು ನೀಡಿದೆ. ಲಾಂಚ್‌ ಆದಾಗಿನಿಂದ ಸ್ಮಾರ್ಟ್‌ಫೋನ್‌ ಆಸಕ್ತರ ಬಾಯಲ್ಲಿ ಹೆಚ್ಚು ಹರಿದಾಡುತ್ತಿರದ್ದ ಮಾತು ಈಗ ನಿಜವಾಗಿದೆ. ಯಾವುದೇ ಅಡೆತಡೆಯಿಲ್ಲದ, ಎಫೆಕ್ಟ್‌ಗಳನ್ನು ಕಳೆದುಕೊಳ್ಳದೆ ಧ್ವನಿ ಮತ್ತು ಸಂಗೀತದ ಅನುಭವವನ್ನು ಪಡೆಯಬೇಕೆನ್ನುವವರಿಗೆ ಈ ಹೆಡ್‌ಫೋನ್ ಹತ್ತಿರವಾಗಬಹುದು.

    3700 mAh ಬ್ಯಾಟರಿ ಸಾಮರ್ಥ್ಯ

    ಹೊಸ ಸ್ಮಾರ್ಟ್‌ಫೋನ್‌ನ ಬ್ಯಾಟರಿ 3700 mAh ಸಾಮರ್ಥ್ಯ ಹೊಂದಿದ್ದು, ಒನ್‌ಪ್ಲಸ್‌ 6 ಸ್ಮಾರ್ಟ್‌ಫೋನ್‌ನ 3300 mAh ಬ್ಯಾಟರಿಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ನಿಮ್ಮ ಸ್ಮಾರ್ಟ್‌ಫೋನ್‌ನ ಹೆಚ್ಚು ಸಮಯ ಬಳಸಲು ಇದು ಭರವಸೆ ನೀಡುತ್ತದೆ. ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಜನಪ್ರಿಯ ಡ್ಯಾಶ್ ಚಾರ್ಜ್‌ರ್‌ನ ಮುಂದುವರೆದ ಆವೃತ್ತಿಯನ್ನು ಒನ್‌ಪ್ಲಸ್‌ 6Tಯಲ್ಲಿ ತರಲಾಗಿದೆ. ಹೊಸ OnePlus 6T ಸ್ಮಾರ್ಟ್‌ಫೋನ್‌ನ್ನು ಕಂಪನಿಯ ಸುಧಾರಿತ ಡ್ಯಾಶ್ ಚಾರ್ಜಿಂಗ್ ತಂತ್ರಜ್ಞಾನದ ಮೂಲಕ ಬೆಂಬಲಿಸಲಾಗುತ್ತದೆ. ಇದರ ಅರ್ಥ ನಿಮಗೆ ಅಗತ್ಯವಿದ್ದ ಸಮಯದಲ್ಲಿ ಆದಷ್ಟು ಬೇಗ ಸ್ಮಾರ್ಟ್‌ಫೋನ್‌ನ್ನು ಚಾರ್ಜ್‌ ಮಾಡಬಹುದಾಗಿದೆ.

    ದೊಡ್ಡ ಮತ್ತು ಉತ್ಕೃಷ್ಟ ಡಿಸ್‌ಪ್ಲೇ

    ಒನ್‌ಪ್ಲಸ್‌ 6T ಸ್ಮಾರ್ಟ್‌ಫೋನ್‌ ತನ್ನ ಬೆಲೆ ವರ್ಗದ ಇತರ ಸ್ಮಾರ್ಟ್‌ಫೋನ್‌ಗಳಿಗಿಂತ ಹೆಚ್ಚು ಆಕರ್ಷಕವಾದ ಮಲ್ಟಿಮೀಡಿಯಾ ಅನುಭವವನ್ನು ನೀಡುತ್ತದೆ. 6.4 ಇಂಚು AMOLED ಡಿಸ್‌ಪ್ಲೇ, ಫುಲ್ ಹೆಚ್‌ಡಿ ಪ್ಲಸ್ 2340p x 1080 ರೆಸೊಲ್ಯುಶನ್ ದೊಡ್ದ್ ಡಿಸ್‌ಪ್ಲೇ ಹೊಂದಿದ್ದು, ಬೆಜೆಲ್‌ ಲೆಸ್‌ AMOLED ಡಿಸ್‌ಪ್ಲೇ ವಾಟರ್‌ ಡ್ರಾಪ್‌ ನೋಚ್‌ನೊಂದಿಗೆ ಅಳವಡಿಸಲಾಗಿದೆ. ಫ್ರಾಂಟ್ ಕ್ಯಾಮೆರಾವನ್ನು ಸಣ್ಣ ನೀರಿನ ಬಿಂದುವಿನಂತ ಜಾಗದಲ್ಲಿ ಅಳವಡಿಸಿದ್ದು, ಆಕರ್ಷಕವಾಗಿದೆ. ಎಡ್ಜ್‌-ಟು-ಎಡ್ಜ್‌ ಸ್ಕ್ರೀನ್ ವೀಕ್ಷಣೆ ಅನುಭವವನ್ನು ನೀಡುವ ಒನ್‌ಪ್ಲಸ್‌ 6T ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಹೇಳಿ ಮಾಡಿಸಿದಂತಿದೆ.

    ಪ್ರಸ್ತುತ ಬೆಲೆಗಳು

    ಅಮೆಜಾನ್ ಇಂಡಿಯಾದಲ್ಲಿ ಒನ್‌ಪ್ಲಸ್‌ 6T ಮೊದಲು 37,999 ರೂ.ಗೆ ಮಾರಾಟವಾಗುತ್ತಿತ್ತು. ಇದೀಗ 6 GB RAM ಮತ್ತು 128 GB ಸ್ಟೊರೇಜ್ ಇರುವ ಮಾದರಿ 34,499 ರೂ.ಗೆ ಲಭ್ಯವಾಗುತ್ತಿದೆ. ಅಂದರೆ, 3,500 ರೂ.ಗಳ ಬೆಲೆ ಕಡಿತವಾಗಿದೆ. ಅದರ ಜತೆಗೆ ಅಮೆಜಾನ್‌ನಲ್ಲಿ ಎಚ್‌ಡಿಎಫ್‌ಸಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಬಳಸಿ ಪಾವತಿಸಿದಲ್ಲಿ ಗ್ರಾಹಕರಿಗೆ 1,500 ರೂ. ಹೆಚ್ಚುವರಿ ಡಿಸ್ಕೌಂಟ್ ಕೂಡ ದೊರೆಯಲಿದೆ. ಇದರಿಂದ 5000 ರೂ.ನಷ್ಟು ಕಡಿಮೆ ಬೆಲೆಗೆ ಇಂದು ಒನ್‌ಪ್ಲಸ್‌ 6T ಲಭ್ಯವಿದೆ. ಹಾಗಾದರೆ ತಡ ಏಕೆ?, ಇಂದೇ ಈ ಪ್ರೀಮಿಯಂ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಿ.

    ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

    English summary
    Amazon India drops OnePlus 6T price and specification'sof OnePlus 6T. to know more visit to kannada.gizbot.com

    ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more