'ಪ್ರೈಮ್ ಡೇ ಸೇಲ್'‌ನಲ್ಲಿ ಮಧ್ಯಮ ಬೆಲೆಯ ಪ್ರೀಮಿಯಂ ಫೋನ್ ಖರೀದಿಸಿ!

|

ಭಾರತದಲ್ಲಿ ಇ-ಕಾಮರ್ಸ್ ದೈತ್ಯ ಕಂಪನಿ ಅಮೆಜಾನ್ ಆಯೋಜಿಸಿರುವ 'ಪ್ರೈಮ್ ಡೇ ಸೇಲ್' ಆರಂಭವಾಗುವುದಕ್ಕೆ ಇನ್ನು ಕೇವಲ ಎರಡು ದಿನಗಳಷ್ಟೇ ಬಾಕಿ ಇವೆ. ಇದೇ ಜುಲೈ 15 ರಿಂದ ದೇಶದಲ್ಲಿ ಜನಪ್ರಿಯ ಅಮೆಜಾನ್ ಪ್ರೈಮ್ ಡೇ ಸೇಲ್ ಆರಂಭವಾಗುತ್ತಿದ್ದು, ಎರಡು ದಿನಗಳ ಕಾಲ ನಡೆಯುವ ಈ ಸೇಲ್ ಜುಲೈ 15ನೇ ತಾರೀಖು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.

'ಪ್ರೈಮ್ ಡೇ ಸೇಲ್'‌ನಲ್ಲಿ ಮಧ್ಯಮ ಬೆಲೆಯ ಪ್ರೀಮಿಯಂ ಫೋನ್ ಖರೀದಿಸಿ!

ನೀವು ಶಾಪಿಂಗ್ ಪ್ರಿಯರಾಗಿದ್ದರೆ ಈ ಸೇಲ್ ಖರೀದಿಗೆ ಉತ್ತಮ. ಅದರಲ್ಲೂ ನೀವೀಗ ಮಧ್ಯಮ ಬೆಲೆಯಲ್ಲಿ ಒಂದು ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಇಚ್ಚಿಸಿದ್ದರೆ ಈ ಅದ್ದೂರಿ ಸೇಲ್ ಅತ್ಯುತ್ತಮ. ಏಕೆಂದರೆ, ಈ ಪ್ರೈಮ್ ದಿನಗಳಲ್ಲಿ ಮಧ್ಯಮ ಬೆಲೆಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರೀ ರಿಯಾಯಿತಿ ದೊರೆಯುವುದನ್ನು ಅಮೆಜಾನ್ ಈಗಾಗಲೇ ಖಚಿತಪಡಿಸಿದೆ.

ಇನ್ನು ಈ ಮಧ್ಯಮ ಬೆಲೆಯ ಪ್ರೀಮಿಯಂ ಪೋನ್‌ಗಳ ಮೇಲೆ ಎಷ್ಟು ರಿಯಾಯಿತಿ ನೀಡುತ್ತೇನೆ ಎಂಬುದನ್ನು ಅಮೆಜಾನ್ ಈವರೆಗೂ ತಿಳಿಸಿಲ್ಲ. ಆದರೆ, ಆ ಕೆಲವು ಪ್ರೀಮಿಯಂ ಫೋನ್‌ಗಳು ಯಾವುವು ಎಂಬುದು ಮಾತ್ರ ಲೀಕ್ ಆಗಿದೆ. ಹಾಗಾದರೆ, 'ಪ್ರೈಮ್ ಡೇ ಸೇಲ್'‌ನಲ್ಲಿ ಹೆಚ್ಚು ರಿಯಾಯಿತಿ ಪಡೆಯುವ ಮಧ್ಯಮ ಬೆಲೆಯ ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಐಫೋನ್ ಎಕ್ಸ್ಆರ್

ಐಫೋನ್ ಎಕ್ಸ್ಆರ್

ಈ ವರ್ಷದ ಅತ್ಯಂತ ಜನಪ್ರಿಯ ಫೋನ್‌ಗಳಲ್ಲಿ ಆಪಲ್ ಐಫೋನ್ ಎಕ್ಸ್ಆರ್ ಸ್ಮಾರ್ಟ್‌ಪೋನ್ ಖರೀದಿಗೆ ರೆಡಿಯಾಗಿರಿ. ಏಕೆಂದರೆ, 2019ರ ಪ್ರೈಮ್ ಡೇ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ. ಅಮೆಜಾನ್ ತಾಣದಲ್ಲಿ ಪ್ರಸ್ತುತ 58,900 ರೂ.ಗಳಗೆ (64GB) ಲಭ್ಯವಿರುವ ಈ ಫೋನ್ ಮೇಲೆ 10 ಸಾವಿರದ ವರೆಗೂ ರಿಯಾಯಿತಿ ನೀಡಬಹುದಾಗಿದೆ.

ಐಫೋನ್ 6ಎಸ್ ಪ್ಲಸ್

ಐಫೋನ್ 6ಎಸ್ ಪ್ಲಸ್

2019ರ ಪ್ರೈಮ್ ಡೇ ಸೆಲ್‌ನಲ್ಲಿ ಬೆಲೆ ಕಡಿತಗೊಳ್ಳಲಿರುವ ಮತ್ತೊಂದು ಸ್ಮಾರ್ಟ್‌ಪೋನ್ ಆಗಿ 'ಐಫೋನ್ 6 ಎಸ್ ಪ್ಲಸ್' ಕಾಣಿಸಿಕೊಳ್ಳಲಿದೆ. ಈ ವರ್ಷ ಆಪಲ್ ತನ್ನ 'ಐಫೋನ್ 6 ಎಸ್ ಪ್ಲಸ್' ಮೇಲೆ ಬೆಲೆ ಕಡಿತದ ನಿರ್ಧಾರಕ್ಕೆ ಬಂದಿದೆ. ಪ್ರಸ್ತುತ 32 ಜಿಬಿ ಮೆಮೊರಿಯೊಂದಿಗೆ 34,900 ರೂ.ಗಳಿಗೆ ಲಭ್ಯವಿರುವ ಈ ಫೋನ್, ಕನಿಷ್ಟ ಎಂದರೂ 5000 ರೂ.ನಷ್ಟು ಬೆಲೆ ಕಳೆದುಕೊಳ್ಳಲಿದೆ.

ಒನ್‌ಪ್ಲಸ್ 7 ಪ್ರೊ

ಒನ್‌ಪ್ಲಸ್ 7 ಪ್ರೊ

ಒನ್‌ಪ್ಲಸ್ ಈ ವರ್ಷದ ಮೇ ತಿಂಗಳಲ್ಲಿ ಒನ್‌ಪ್ಲಸ್ 7 ಜೊತೆಗೆ ಒನ್‌ಪ್ಲಸ್ 7 ಪ್ರೊ ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಸುಮಾರು ಎರಡು ತಿಂಗಳ ನಂತರ ಫೋನ್ ಅಮೆಜಾನ್ ಇಂಡಿಯಾದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರಲಿದೆ. ಮೂರು ಮೆಮೊರಿ ರೂಪಾಂತರಗಳಲ್ಲಿ ಮಾರಾಟಕ್ಕಿರುವ ಈ ಫೋನಿನ ಮೂಲ ರೂಪಾಂತರ 48,999 ರೂ.ಗಳಿಂದ ಪ್ರಾರಂಭವಾಗುತ್ತದೆ.

ಒನ್‌ಪ್ಲಸ್ 6ಟಿ

ಒನ್‌ಪ್ಲಸ್ 6ಟಿ

ಒನ್‌ಪ್ಲಸ್ ಈ ವರ್ಷದ ಮೇ ತಿಂಗಳಲ್ಲಿ ಒನ್‌ಪ್ಲಸ್ 7 ಪ್ರೊ ಅನ್ನು ಬಿಡುಗಡೆ ಮಾಡಿದ ನಂತರ ಒನ್‌ಪ್ಲಸ್ 6ಟಿ ಬೆಲೆ ಬಹುತೇಕ ಇಳಿಕೆಯಾಗಿದೆ. ಆದರೂ ನೀವು ಇನ್ನಷ್ಟು ಕಡಿಮೆ ಬೆಲೆಗೆ ಒನ್‌ಪ್ಲಸ್ 6ಟಿ ಸ್ಮಾರ್ಟ್‌ಪೋನನ್ನು ನಿಮ್ಮದಾಗಿಸಿಕೊಳ್ಳಲು ಇದು ಸಕಾಲ.ಈಗಲೂ ಹಾಟ್‌ ಕೇಕ್‌ನಂತೆ ಖರ್ಚಾಗುತ್ತಿರುವ ಒನ್‌ಪ್ಲಸ್ 6ಟಿ ಮೇಲೆ 2 ಸಾವಿರ ಬೆಲೆ ಇಳಿಕೆಯಾಗಬಹುದು.

ವಿವೊ NEX

ವಿವೊ NEX

ಭಾರತಕ್ಕೆ 44,990 ರೂ.ಗಳ ಬೆಲೆಯೊಂದಿಗೆ ಕಾಲಿಟ್ಟಿದ್ದ ವಿವೊ ನೆಕ್ಸ್ ಸ್ಮಾರ್ಟ್‌ಫೋನ್ ಇದೀಗ 39,990 ರೂಗಳಲ್ಲಿ ಲಭ್ಯವಿದೆ. ಈ ಸೇಲ್ ಸಮಯದಲ್ಲಿ ಈ ಫೋನ್ ಸಹ ರಿಯಾಯಿತಿಯಲ್ಲಿ ಲಭ್ಯವಿರುತ್ತದೆ ಎನ್ನಲಾಗಿದೆ. ಪಾಪ್-ಅಪ್ ಕ್ಯಾಮೆರಾದೊಂದಿಗೆ ಪ್ರವೃತ್ತಿಯಲ್ಲಿ ಬಂದ ವಿವೋ ನೆಕ್ಸ್ ಅನ್ನು ಖರೀದಿಸುವ ಯೋಚನೆ ನಿಮಗಿದ್ದರೆ, ಇದು ಕೂಡ ನಿಮ್ಮ ಆಯ್ಕೆಯಾಗಬಹುದು.

ವಿವೋ ವಿ 15 ಪ್ರೊ

ವಿವೋ ವಿ 15 ಪ್ರೊ

ಅಮೆಜಾನ್ ಪ್ರೈಮ್ ಡೇ ಮಾರಾಟದ ಸಮಯದಲ್ಲಿ ಬೆಲೆ ಕಡಿತಗೊಳ್ಳುವ ಮತ್ತೊಂದು ವಿವೋ ಸ್ಮಾರ್ಟ್‌ಫೋನ್ 'ವಿವೋ ವಿ 15 ಪ್ರೊ' ಎನ್ನಬಹುದು. ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಮತ್ತು 32 ಎಂಪಿ ಪಾಪ್-ಅಪ್ ಸೆಲ್ಫಿ ಕ್ಯಾಮೆರಾದೊಂದಿಗೆ ಬಂದಿರುವ ಈ ಫೋನ್ ಭಾರತದಲ್ಲಿ 26,990 ರೂಗಳಲ್ಲಿ ಲಭ್ಯವಿದೆ. ಈ ಮಾರಾಟದ ಸಮಯದಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ಕಳೆದುಕೊಳ್ಳಲಿದೆ.

ಪಿ 30 ಲೈಟ್

ಪಿ 30 ಲೈಟ್

ನೀವು ಬಜೆಟ್ ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಹುವಾವೇ ಪಿ 30 ಲೈಟ್ ಪರಿಗಣಿಸಬೇಕಾದ ಸ್ಮಾರ್ಟ್‌ಫೋನ್ ಆಗಿದೆ. ಈ ಫೋನ್ ಅನ್ನು 19,999 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದ್ದು, ನಂತರ ಅಮೆಜಾನ್ ವಿನಿಮಯದಲ್ಲಿ 12,050 ರೂ.ಗಳವರೆಗೆ ರಿಯಾಯಿತಿ ನೀಡಿದೆ. ಈ ಫೋನ್ ಮತ್ತೊಮ್ಮೆ ಭಾರತದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

ಗ್ಯಾಲಕ್ಸಿ ಎ 50

ಗ್ಯಾಲಕ್ಸಿ ಎ 50

ಈ ಪಟ್ಟಿಯಲ್ಲಿ ಕೊನೆಯ ಸ್ಮಾರ್ಟ್‌ಫೋನ್ ಆಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ50 ನಿಮ್ ಆಯ್ಕೆಯಾಗಬಹುದು. ಇದು ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ 25 ಎಂಪಿ ಲೋ ಲೈಟ್ ಲೆನ್ಸ್, 8 ಎಂಪಿ ಅಲ್ಟ್ರಾ ವೈಡ್ ಲೆನ್ಸ್ ಮತ್ತು 5 ಎಂಪಿ ಲೈವ್ ಫೋಕಸ್ (ಬೊಕೆ) ಲೆನ್ಸ್ ಅನ್ನು ಒಳಗೊಂಡಿದೆ. ಇದು ಭಾರತದಲ್ಲಿ 19,990 ರೂ.ಗಳ ಆರಂಭಿಕ ಬೆಲೆಯಲ್ಲಿ ಇದೀಗ ಖರೀದಿಗೆ ಲಭ್ಯವಿದೆ.

Best Mobiles in India

English summary
The Amazon Prime Day Sale will go live in India on July 15. The two day annual event will begin at 12AM on July 15 and it will go on till 11:59PM on July 16. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X