ವಾವ್! 8,000 ಡಿಸ್ಕೌಂಟ್.. 3,000 ಕ್ಯಾಶ್‌ಬ್ಯಾಕ್.. ಇಂದು Honor ಫೋನಿನ ಫಸ್ಟ್ ಸೇಲ್
ಹಾನರ್ ಇತ್ತೀಚೆಗೆ ಹೊಸದಾಗಿ ಹಾನರ್ 200 ಪ್ರೊ 5G (Honor 200 Pro 5G ) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು Honor 200 5G ಸರಣಿಯ ನೂತನ ಫೋನ್ ಆಗಿದೆ. ಮೊಬೈಲ್ ಪ್ರಿಯರು ಈ ಫೋನಿನ ಸ್ಟನ್ನಿಂಗ್ ಡಿಸೈನ್, ಅತ್ಯಾಕರ್ಷಕ ಕ್ಯಾಮೆರಾ, ಅದ್ಭುತ ಫೀಚರ್ಸ್‌ಗಳಿಗೆ ಫಿದಾ ಆಗಿದ್ಧಾರೆ. ಅಂದಹಾಗೆ, ಈ ಮೊಬೈಲ್ ಇಂದಿನಿಂದ (ಜುಲೈ 20) ಅಮೇಜಾನ್‌ನಲ್ಲಿ (Amazon Prime Day Sale-2024) ಮಾರಾಟವಾಗಲಿದೆ. ಮೊದಲ ದಿನವೇ ಕಂಪನಿ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ. ಈ ಫೋನಿನ ಬೆಲೆ, ಆಫರ್‌ಗಳು ಮತ್ತು ಫೀಚರ್ಸ್‌ಗಳನ್ನು ತಿಳಿಯೋಣ ಬನ್ನಿ.
ಹಾನರ್ 200 ಪ್ರೊ 5G ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 50MP ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 50MP ಸೆಲ್ಫಿ ಕ್ಯಾಮೆರಾ ಹೊಂದಿದೆ. 100W ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,200mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಕೇವಲ ಒಂದು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಾಂಚ್ ಆಗಿದೆ. ಈ ಫೋನಿನ ಮತ್ತಷ್ಟು ಫೀಚರ್ಸ್ ತಿಳಿಯಲು ಮುಂದೆ ಓದಿ.

ಹಾನರ್ 200 ಪ್ರೊ 5G ಬೆಲೆ ಮತ್ತು ಲಭ್ಯತೆ
ಹಾನರ್ 200 ಪ್ರೊ 5G ಫೋನನ್ನು ಓಷನ್ ಸಿಯಾನ್ ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದು. ಕಂಪನಿಯು ಕೇವಲ ಒಂದು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಫೋನಿನ 12GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ಮಾದರಿಯ ಬೆಲೆ 57,999 ರೂ. ಇದೆ. ಅಮೇಜಾನ್ ('ಪ್ರೈಮ್ ಡೇ ಸೇಲ್') ಅಥವಾ ಎಕ್ಸ್‌ಪ್ಲೋರ್ ಹಾನರ್ ವೆಬ್‌ಸೈಟ್ ಮೂಲಕ ನೀವು ಈ ಫೋನನ್ನು ಖರೀದಿಸಬಹುದು.
8,000 ರೂ.ಗಳ ಡಿಸ್ಕೌಂಟ್ ಪಡೆದುಕೊಳ್ಳಿ
ಹಾನರ್ 200 ಪ್ರೊ 5G ಫೋನ್ ಖರೀದಿ ಮೇಲೆ ಜುಲೈ 21 ರವರೆಗೆ 8,000 ರೂ.ಗಳ ಡಿಸ್ಕೌಂಟ್ ನೀಡಲಾಗುತ್ತದೆ. 2,000 ರೂ. ಕೂಪನ್ ರಿಯಾಯಿತಿ ಅಥವಾ ಉಚಿತ ಗಿಫ್ಟ್‌ಗಳಂತಹ ವಿಶೇಷ ಕೊಡುಗೆಗಳನ್ನು ಪಡೆಯಬಹುದು. ಜೊತೆಗೆ ICICI ಬ್ಯಾಂಕ್ ಅಥವಾ SBI ಬ್ಯಾಂಕ್ ಕಾರ್ಡ್ ಬಳಸಿ ಈ ಫೋನ್ ಖರೀದಿಸಿದರೆ, 3,000 ರೂ. ಬ್ಯಾಂಕ್ ಆಫರ್ ಲಭ್ಯವಿದೆ.
ಹಾನರ್ 200 ಪ್ರೊ 5G ವಿಶೇಷತೆಗಳು
ಡಿಸ್ಪ್ಲೇ: ಇದು 6.78 ಇಂಚಿನ AMOLED ಕ್ವಾಡ್-ಕರ್ವ್ ಫ್ಲೋಟಿಂಗ್ ಡಿಸ್ಪ್ಲೇಯನ್ನು ಹೊಂದಿದೆ. 4000 nits ಗರಿಷ್ಠ ಬ್ರೈಟ್‌ನೆಸ್, 10 ಬಿಟ್ ಬಣ್ಣಗಳು, 1.5K ರೆಸಲ್ಯೂಶನ್ (1224 x 2700 ಪಿಕ್ಸೆಲ್‌ಗಳು) ಪಡೆದಿದೆ. 120Hz ರಿಫ್ರೆಶ್ ದರವನ್ನು ಹೊಂದಿದೆ.
ಪ್ರೊಸೆಸರ್: ಇದು 4nm ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 8s Gen 3 ಪ್ರೊಸೆಸರ್ ಹೊಂದಿದೆ. 12GB RAM ಮತ್ತು 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಪಡೆದಿದೆ. Android 14 ಆಧಾರಿತ MagicOSನಲ್ಲಿ ಕೆಲಸ ನಿರ್ವಹಿಸುತ್ತದೆ.

ಕ್ಯಾಮೆರಾ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಪ್ರಾಥಮಿಕ ಕ್ಯಾಮೆರಾ, 12MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 50MP ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ. ಡ್ಯುಯಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದು, ಇದು 50MP ಪೋರ್ಟ್ರೇಟ್ ಒಳಗೊಂಡಿದೆ.
ಬ್ಯಾಟರಿ: ಇದು 163.3×75.2 × 8.2mm ಅಳತೆ ಮತ್ತು 199 ಗ್ರಾಂ ತೂಕವಿದೆ. 5,200mAh ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ. 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 66W ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಕನೆಕ್ಟಿವಿಟಿ ಸೌಲಭ್ಯ: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್, 5G, ಡ್ಯುಯಲ್ 4G VoLTE, Wi-Fi 6, NFC, Bluetooth v5.3, GPS, USB ಟೈಪ್-C ಪೋರ್ಟ್ ಸೌಲಭ್ಯ ಹೊಂದಿದೆ. ಸ್ಟಿರಿಯೊ ಸ್ಪೀಕರ್‌ಗಳನ್ನು ಪಡೆಯುತ್ತದೆ.


Click it and Unblock the Notifications








