OnePlus 12R Sale: ಸಾಲು ಸಾಲು ಆಫರ್ ಸಿಗುತ್ತೆ, ಯಾವುದೂ ಬಿಡಬೇಡಿ!
OnePlus 12R Sale Start in India: ಒನ್‌ಪ್ಲಸ್ ಪ್ರಿಯರಿಗೆ ಸಿಹಿ ಸುದ್ದಿ ಇದೆ. OnePlus 12R ಫೋನನ್ನು 3,000 ರೂ. ಕಡಿಮೆ ಬೆಲೆಯಲ್ಲಿ ಖರೀದಿಸುವ ಸುವರ್ಣಾವಕಾಶವಿದೆ. ಹೌದು, ಟೆಕ್ ದೈತ್ಯ ಒನ್‌ಪ್ಲಸ್ ಇತ್ತೀಚೆಗೆ ಭಾರತದಲ್ಲಿ OnePlus 12R ಅನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಸನ್‌ಸೆಟ್ ಡ್ಯೂನ್ (Sunset Dune colourway) ಬಣ್ಣದಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಫೋನ್ ಇಂದಿನಿಂದ (ಜುಲೈ 20 ಮತ್ತು ಜುಲೈ 21) ಅಮೆಜಾನ್ 'ಪ್ರೈಮ್ ಡೇ ಸೇಲ್' (Amazon Prime Day Sale 2024) ಮೂಲಕ ಮಾರಾಟ ಪ್ರಾರಂಭಿಸಿದೆ. ಕಂಪನಿಯು ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದೆ.
ಒನ್‌ಪ್ಲಸ್ 12R ಫೋನ್ ಇನ್ಮುಂದೆ ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಕೂಲ್ ಬ್ಲೂ, ಐರನ್ ಗ್ರೇ ಮತ್ತು ಸನ್‌ಸೆಟ್ ಡ್ಯೂನ್ ಕಲರ್‌ಗಳಲ್ಲಿ ನೀವು ಖರೀದಿಸಬಹುದು. ಒನ್‌ಪ್ಲಸ್ 12R ಸನ್‌ಸೆಟ್ ಡ್ಯೂನ್ ಬಣ್ಣದ (OnePlus 12R Sunset Dune Edition) ಹೊಸ ಫೋನ್ ಕೇವಲ ಒಂದು ಸ್ಟೋರೇಜ್‌ನಲ್ಲಿ ಲಭ್ಯವಿದೆ. ನೋ ಕಾಸ್ಟ್ EMI ಮತ್ತು ಖರೀದಿಯ ಮೇಲೆ OnePlus ಬಡ್ಸ್ 3 ಉಚಿತವಾಗಿ ಕೊಡಲಾಗುತ್ತಿದೆ. ಈ ಫೋನಿನ ಬೆಲೆ ಎಷ್ಟು? ಡಿಸ್ಕೌಂಟ್ ಏನಿದೆ? ವಿಶೇಷತೆಗಳೇನು? ಇಂಬಿತ್ಯಾದಿ ವಿವರಗಳನ್ನು ತಿಳಿಯೋಣ ಬನ್ನಿ.

ಬೆಲೆ ಎಷ್ಟು? ಎಲ್ಲಿ ಖರೀದಿಸಬೇಕು?
ಒನ್‌ಪ್ಲಸ್ 12R ಸನ್‌ಸೆಟ್ ಡ್ಯೂನ್ ಕಲರ್‌ವೇ ಅನ್ನು ಕೇವಲ 8GB RAM + 256GB ಸ್ಟೋರೇಜ್ ಆಯ್ಕೆಯಲ್ಲಿ ನೀವು ಖರೀದಿಸಬಹುದು. ಈ ಫೋನ್ ಭಾರತದಲ್ಲಿ 42,999 ರೂಪಾಯಿ ಬೆಲೆಯನ್ನು ಹೊಂದಿದೆ. ಅಮೇಜಾನ್ ('ಪ್ರೈಮ್ ಡೇ ಸೇಲ್') ಅಥವಾ ಒನ್‌ಪ್ಲಸ್ ವೆಬ್‌ಸೈಟ್ ಮೂಲಕ ನೀವು ಈ ಫೋನನ್ನು ಖರೀದಿಸಬಹುದು.
ಈ ಫೋನಿ ಖರೀದಿಸಿದರೆ OnePlus ಬಡ್ಸ್ 3 ಫ್ರೀ..!
OnePlus 12Rನ ಸನ್‌ಸೆಟ್ ಡ್ಯೂನ್ ಸ್ಮಾರ್ಟ್‌ಫೋನ್‌ನೊಂದಿಗೆ OnePlus ಬಡ್ಸ್ 3 ಅನ್ನು ಉಚಿತವಾಗಿ ನೀಡಲಾಗುತ್ತದೆ. ನೀವು ICICI ಬ್ಯಾಂಕ್ ಮತ್ತು OneCard ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ಪಾವತಿಯೊಂದಿಗೆ 3,000 ರೂ.ಗಳ ಬ್ಯಾಂಕ್ ಡಿಸ್ಕೌಂಟ್ ಪಡೆಯಬಹುದು. ಏಕಕಾಲದಲ್ಲಿ ಸಂಪೂರ್ಣ ಹಣವನ್ನು ಪಾವತಿಸಲು ಸಾಧ್ಯವಾಗದವರು 9 ತಿಂಗಳ ನೋ ಕಾಸ್ಟ್ EMI ಸೌಲಭ್ಯ ಪಡೆಯಬಹುದು.
OnePlus 12Rನಲ್ಲಿ ಏನೆಲ್ಲಾ ಹೊಸ ವಿಶೇಷತೆಗಳಿವೆ?
ಡಿಸ್ಪ್ಲೇ: ಇದು 6.78 ಇಂಚಿನ LTPO 4.0 AMOLED ProXDR ಡಿಸ್ಪ್ಲೇಯನ್ನು ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್, 120 Hz ವರೆಗೆ ರಿಫ್ರೆಶ್ ರೇಟ್‌ನೊಂದಿಗೆ ಬರುತ್ತದೆ. 4,500nits ಗರಿಷ್ಠ ಬ್ರೈಟ್‌ನೆಸ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆ ಹೊಂದಿದೆ.
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ Qualcomm Snapdragon 8 Gen 2 ಪ್ರೊಸೆಸರ್ ಹೊಂದಿದೆ. ಹುಡ್ ಅಡಿಯಲ್ಲಿ ಇದು 12GBLPDDR5x RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ Qualcomm Snapdragon 8 Gen 2 ಚಿಪ್‌ಸೆಟ್ ಸಹ ಹೊಂದಿದೆ. ಇದು Android 14 ಆಧಾರಿತ OxygenOS 14.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಕ್ಯಾಮೆರಾ: ಈ ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಇದೆ. 50MP ಪ್ರಾಥಮಿಕ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾ ಮತ್ತು ಹಿಂಭಾಗದಲ್ಲಿ 2MP ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಾಗಿ 16MP ಕ್ಯಾಮೆರಾ ಇದೆ.
ಸಾಫ್ಟ್‌ವೇರ್ ಮತ್ತು ಸ್ಟೋರೇಜ್: ಇದು Android 14 ಆಧಾರಿತ OxygenOS 14.0 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. 8GB RAM + 256GB ಸ್ಟೋರೇಜ್‌ನೊಂದಿಗೆ ಬರಲಿದೆ. ಬೇರೆ ಬಣ್ಣದ ಮಾದರಿಯು 8GB+128GB ಮತ್ತು 16GB+256GB ಸ್ಟೋರೇಜ್ ಹೊಂದೊ ರೂಪಾಂತರಗಳಲ್ಲಿ ಲಭ್ಯವಿರಲಿದೆ.
ಬ್ಯಾಟರಿ: ಈ ಮೊಬೈಲ್ 100W SuperVOOC ವೈರ್ಡ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ IP64 ರೇಟಿಂಗ್, NFC ಮತ್ತು ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಡಾಲ್ಬಿ ಅಟ್ಮಾಸ್‌ನೊಂದಿಗೆ ಬರುತ್ತದೆ.


Click it and Unblock the Notifications








