ಎಂಥಾ ಆಫರ್! 3,000 ಅಗ್ಗ.. ಇಂದು Samsung Galaxy M35 5G ಫೋನ್ ಸೇಲ್
Samsung Galaxy M35 5G Sale Start in India: ಟೆಕ್ ದೈತ್ಯ ಸ್ಯಾಮ್‌ಸಂಗ್ ಇತ್ತೀಚೆಗೆ ಬಜೆಟ್ ವಿಭಾಗದಲ್ಲಿ ಹೊಸ ಸ್ಮಾರ್ಟ್‌ಫೋನ್ Samsung Galaxy M35 5G ಅನ್ನು ಬಿಡುಗಡೆ ಮಾಡಿದೆ. ಇದು Galaxy 'M' ಸರಣಿಯ ನೂತನ ಫೋನ್ ಆಗಿದೆ. 16,000 ರೂ. ಬಜೆಟ್‌ನಲ್ಲಿ ಹೊಸ ಫೋನ್ ಖರೀದಿಸಲು ಬಯಸುವ ಮೊಬೈಲ್ ಪ್ರಿಯರಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್ ಇಂದಿನಿಂದ (ಜುಲೈ 20) ಅಮೇಜಾನ್‌ನಲ್ಲಿ (Amazon Prime Day Sale 2024) ಮೊದಲ ಮಾರಾಟ ಪ್ರಾರಂಭಿಸಿದೆ. ಈ ಫೋನಿನ ಬೆಲೆ, ಡಿಸ್ಕೌಂಟ್ ಮತ್ತು ಯಾವೆಲ್ಲಾ ಆಫರ್‌ಗಳಿವೆ? ಎನ್ನುವುದನ್ನು ತಿಳಿಯೋಣ ಬನ್ನಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಫೋನ್ iQOO Z9 5G, Poco X6 5G, OnePlus Nord CE 4 5G, Realme Narzo 70 Pro 5G ಸೇರಿದಂತೆ ಇತರ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀ ಡಲು ಸಜ್ಜಾಗಿದೆ. ಇದು ಕಳೆದ ವರ್ಷ ಬಿಡುಗಡೆಯಾದ Samsung Galaxy M34 5G ಫೋನಿನ ಉತ್ತರಾಧಿಕಾರಿಯಾಗಿದೆ. ಆದರೆ, ಕಂಪನಿಯು ಈ ಫೋನನ್ನು ಕೆಲವು ಅಪ್ಡೇಟ್‌ಗಳು ಮತ್ತು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದೆ.

Samsung Galaxy M35 5G ವಿಶೇಷತೆಗಳೇನು?
ನೂತನ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 120Hz ಸೂಪರ್ AMOLED ಡಿಸ್ಪ್ಲೇ ಮತ್ತು Exynos 1380 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಇತ್ತೀಚಿನ Android 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಮುಖ್ಯವಾಗಿ 6,000mAh ದೊಡ್ಡ ಬ್ಯಾಟರಿಯೊಂದಿಗೆ ಈ ಫೋನನ್ನು ಬಿಡುಗಡೆ ಮಾಡಲಾಗಿದೆ. ಈ ಫೋನ್‌ನ ಮತ್ತಷ್ಟು ಫೀಚರ್ಸ್, ಬೆಲೆ ಮತ್ತು ಲಭ್ಯತೆ ತಿಳಿಯಲು ಮುಂದೆ ಓದಿ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಬೆಲೆ ಎಷ್ಟು?
- 6GB+128GB - ರೂ. 19,999
- 8GB+128GB - ರೂ. 21,999
- 8GB+256GB - ರೂ. 24,999
ಈ ಫೋನನ್ನು ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಮೂರು ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಾಗಿದೆ. ಮೂನ್‌ಲೈಟ್ ಬ್ಲೂ, ಡೇಬ್ರೇಕ್ ಬ್ಲೂ ಮತ್ತು ಥಂಡರ್ ಗ್ರೇ ಬಣ್ಣಗಳಲ್ಲಿ ನೀವು ಈ ಫೋನ್ ಅನ್ನು ಖರೀದಿಸಬಹುದು. ಭಾರತದಲ್ಲಿ 19,999 ರೂ. ಬೆಲೆಯಲ್ಲಿ ಪ್ರಾರಂಭಿಸಲಾಗಿದೆ.
ಎಲ್ಲಿ ಖರೀದಿಸಬೇಕು? ಆಫರ್‌ಗಳೇನು?
Samsung Galaxy M35 5G ಅನ್ನು Amazon, Samsung ಇಂಡಿಯಾ ವೆಬ್‌ಸೈಟ್ ಮತ್ತು ವಿವಿಧ ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು. ವಿಶೇಷವಾಗಿ ಇಂದಿನಿಂದ (ಜುಲೈ 20 ಮತ್ತು ಜುಲೈ 21) ಪ್ರಾರಂಭವಾಗಿರುವ ಅಮೆಜಾನ್ 'ಪ್ರೈಮ್ ಡೇ ಸೇಲ್'ನಲ್ಲಿ (Amazon Prime Day Sale) ಲಭ್ಯವಿದೆ. ಕಂಪನಿಯು ಎಲ್ಲಾ ರೂಪಾಂತರಗಳ ಮೇಲೆ 1,000 ರೂಪಾಯಿಗಳ ತ್ವರಿತ ರಿಯಾಯಿತಿಯನ್ನು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಗೆ 2,000 ರೂಪಾಯಿಗಳ ಹೆಚ್ಚುವರಿ ಡಿಸ್ಕೌಂಟ್ ಘೋಷಿಸಿದೆ. ಈ ಕೊಡುಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಫೀಚರ್ಸ್
ಡಿಸ್ಲೇ: ಇದು 6.6 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಗ್ಯಾಲಕ್ಸಿ ಎಂ34 ಫೋನಿನಲ್ಲಿನ 6.5 ಇಂಚಿನ ಪ್ಯಾನೆಲ್‌ಗಿಂತ ಸ್ವಲ್ಪ ದೊಡ್ಡದಾಗಿದೆ. ರೆಸಲ್ಯೂಶನ್ FHD+ ಮತ್ತು 120 Hz ರಿಫ್ರೆಶ್ ರೇಟ್ ಮತ್ತು 1000nits ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಈ ಫೋನ್‌ನ ಪ್ಯಾನೆಲ್‌ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್+ ರಕ್ಷಣೆಯನ್ನು ಒದಗಿಸಲಾಗಿದೆ.
ಪ್ರೊಸೆಸರ್: ಈ ಫೋನ್ ಇಂಟರ್ನಲ್ Exynos ಚಿಪ್‌ಸೆಟ್ ಅನ್ನು ಒಳಗೊಂಡಿದೆ. ಇದು Exynos 1380 ಚಿಪ್‌ಸೆಟ್ ಅನ್ನು ಹೊಂದಿದೆ. ಇದು ಹಿಂದಿನ ಮಾದರಿ Samsung Galaxy M34 5G ಫೋನಿನಲ್ಲಿರುವ Exynos 1280ನಿಂದ ಅಪ್‌ಗ್ರೇಡ್ ಆಗಿದೆ. ಆಕ್ಟಾ-ಕೋರ್ ಚಿಪ್‌ಸೆಟ್, 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ಮೈಕ್ರೊ ಎಸ್‌ಡಿ ಕಾರ್ಡ್‌ನ ಸಹಾಯದಿಂದ 1TB ವರೆಗೆ ಸ್ಟೋರೇಜ್ ವಿಸ್ತರಿಸಬಹುದು.
ಕ್ಯಾಮೆರಾ: ಇದು ಗ್ಯಾಲಕ್ಸಿ ಎಂ34ನಂತೆಯೇ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾವೈಡ್ ಲೆನ್ಸ್ ಮತ್ತು 2MP ಆಕ್ಸಿಲರಿ ಲೆನ್ಸ್ ಹೊಂದಿದೆ. ಇದು 30fpsನಲ್ಲಿ 4K ವಿಡಿಯೋವನ್ನು ಶೂಟ್ ಮಾಡಬಹುದು ಮತ್ತು 10x ವರೆಗೆ ಡಿಜಿಟಲ್ ಜೂಮ್ ಬೆಂಬಲವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13MP ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ35 5G ಪೋನ್ 162.3 x 78.6 x 9.1ಮಿಮೀ ಅಳತೆ ಮತ್ತು 222 ಗ್ರಾಂ ತೂಕವಿದೆ. ಇದು 6,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ Android 14 OSನಲ್ಲಿ ಕಾರ್ಯನಿರ್ವಹಿಸುತ್ತದೆ.
ಕನೆಕ್ಟಿವಿಟಿ ಆಯ್ಕೆಗಳು: ಈ ಫೋನ್, 5G SA /NSA, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.3, GPS, USB ಟೈಪ್-C 2.0 ನಂತಹ ಸೌಲಭ್ಯಗಳನ್ನು ಪಡೆದಿದೆ. ಯುಎಸ್‌ಬಿ ಟೈಪ್-ಸಿ ಆಡಿಯೊ, ಸ್ಟಿರಿಯೊ ಸ್ಪೀಕರ್‌ಗಳು, ಡಾಲ್ಬಿ ಅಟ್ಮಾಸ್ ಮತ್ತು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.


Click it and Unblock the Notifications








