'ಐಫೋನ್ X' ಖರೀದಿಗೆ ಇದಕ್ಕಿಂತ ಬೆಸ್ಟ್ ಟೈಮ್ ಮತ್ತೆ ಸಿಗಲ್ಲ!!

|

ವಿಶ್ವದಾದ್ಯಂತ ಐಫೋನ್ X ಮಾರಾಟಕ್ಕೆ ಬಂದಾಗ ಎರಡು ಆವೃತ್ತಿಯಲ್ಲಿ ದೊರೆಯುತ್ತಿದ್ದ ಅದರ ಬೆಲೆಗಳು ಕ್ರಮವಾಗಿ 64GB ವೆರಿಯಂಟ್ ಫೋನ್ ಬೆಲೆ 89,000 ರೂ.ಗಳಿದ್ದರೆ, 256GB ವೆರಿಯಂಟ್ ಫೋನ್ ಬೆಲೆ 1,02,000 ರೂ.ಗಳಾಗಿದ್ದವು. ಆದರೆ, ನೀವೀಗ ಕೇವಲ 62,999 ರೂ.ಗಳಿಗೆ ಐಫೋನ್ X ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಬಹುದು ಎಂದರೆ ಖುಷಿಯ ವಿಚಾರ ಎನ್ನಬಹುದು. ಏಕೆಂದರೆ, ಆಪಲ್‌ನ ಜನಪ್ರಿಯ ಐಫೋನ್ X ಮೇಲೆ ಅಮೆಜಾನ್ ಭರ್ಜರಿ ಡಿಸ್ಕೌಂಟ್ಸ್ ನೀಡಿ ಗಮನಸೆಳೆದಿದೆ.

ಹೌದು, ಭಾರತದಲ್ಲಿ ಪ್ರೀ ಬುಕ್ಕಿಂಗ್ ಪ್ರಾರಂಭವಾದ ಕೆಲವೇ ಸಮಯದಲ್ಲಿ ಸೋಲ್ಡ್ ಔಟ್ ಆಗಿದ್ದ ಐಫೋನ್ X ಅನ್ನು ಅಮೆಜಾನ್ ಇದೇ ಮೊದಲ ಬಾರಿಗೆ ಭಾರೀ ಡಿಸ್ಕೌಂಟ್ಸ್‌ನಲ್ಲಿ ಮಾರಾಟಕ್ಕಿಟ್ಟಿದೆ. ಇದೇ ಮೇ 4 ನೇ ತಾರೀಖಿನಿಂದ ಆರಂಭವಾಗಲಿರುವ ಅಮೆಜಾನ್ ಸಮ್ಮರ್ ಸೇಲ್‌ನಲ್ಲಿ 69,999 ರೂ.ಗಳಿಗೆ ಲಭ್ಯವಿದ್ದು, ಎಸ್‌ಬಿಐ ಬ್ಯಾಂಕ್ ಗ್ರಾಹಕರಿಗೆ ಶೇ.10 ರಷ್ಟು ಇನ್‌ಸ್ಟಂಟ್ ಡಿಸ್ಕೌಂಟ್ಸ್ ನೀಡಲಾಗಿದೆ. ಇದರಿಂದ ಫೋನ್ ಇನ್ನೂ ಅತ್ಯಂತ ಕಡಿಮೆ ಬೆಲೆಗೆ ದೊರೆಯುತ್ತಿದೆ.

'ಐಫೋನ್ X' ಖರೀದಿಗೆ ಇದಕ್ಕಿಂತ ಬೆಸ್ಟ್ ಟೈಮ್ ಮತ್ತೆ ಸಿಗಲ್ಲ!!

ಲಕ್ಷ ಕೊಟ್ಟರೂ ಸರಿಯೇ ಐಫೋನ್ X ಸ್ಮಾರ್ಟ್‌ಫೋನ್‌ ಖರೀದಿಸಬೇಕು ಎಂದು ಕ್ಯೂ ನಿಂತಿದ್ದ ಜನರಿಗೆ ಐಫೋನ್ X ಇದು ಸಕಾಲವಾಗಿದ್ದು, ನೀವು ಕೂಡ ಐಫೋನ್ X ಖರೀದಿಸುವ ಯೋಚನೆಯಲ್ಲಿದ್ದರೆ ಇದು ನಿಮಗೆ ಬೆಸ್ಟ್ ಟೈಮ್ ಎನ್ನಬಹುದು. ಹಾಗಾದರೆ, ಮೊಬೈಲ್ ಮಾರುಕಟ್ಟೆಯಲ್ಲಿ ಈಗಲೂ ಬಹುಬೇಡಿಕೆಯಲ್ಲಿರುವ ಐಫೋನ್ X ಫೋನ್ ಫೀಚರ್ಸ್ ಏನು? ಸ್ಮಾರ್ಟ್‌ಪೋನ್ ಹೇಗಿದೆ ಎಂಬೆಲ್ಲಾ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಐಫೋನ್ X ಡಿಸ್‌ಪ್ಲೇ

ಐಫೋನ್ X ಡಿಸ್‌ಪ್ಲೇ

ಆಪಲ್ ಮೊದಲ ಬಾರಿಗೆ OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಐಫೋನ್ X ನಲ್ಲಿ ಅಳವಡಿಸಿದ್ದು, 5.8 ಇಂಚಿನ ಬೇಜೆಲ್‌ ಲೆಸ್ ಸ್ಕ್ರಿನ್ ಸೂಪರ್ ರೆಟೀನಾ 2436 x 1125 ಪಿಕ್ಸಲ್ ಗುಣಮಟ್ಟದ್ದಾಗಿದೆ. ಅಲ್ಲದೇ ಎಡ್ಜ್ ಟು ಎಡ್ಜ್ ಡಿಸ್‌ಪ್ಲೆ, ಕಲರ್ ಕ್ಲಾರಿಟಿ ಹಾಗೂ ಟ್ರೂ ಟೋನ್ ಡಿಸ್‌ಪ್ಲೇ ಟೆಕ್ನಾಲಜಿಯನ್ನು ಹೊಂದಿದೆ.

ಐಫೋನ್ X ಹಾರ್ಡ್‌ವೇರ್

ಐಫೋನ್ X ಹಾರ್ಡ್‌ವೇರ್

ಆಪಲ್ ಐಫೋನ್ X ಹೊಸ A11 ಬಯೋನಿಕ್ ಪ್ರೋಸೆಸರ್ ಹೊಂದಿದ್ದು, ಇದು ವಿಶ್ವ ಸ್ಮಾರ್ಟ್‌ಫೋನ್‌ಗಳಲ್ಲೇ ಬಳಕೆಯಾಗಿರುವ ಅತೀ ಹೆಚ್ಚಿನ ವೇಗದ ಪ್ರೋಸೆಸರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ಅಲ್ಲದೇ ಆಪಲ್ GPU ಗೇಮಿಂಗ್ ಅನುಭವನ್ನು ಅತ್ಯುತ್ತಮಗೊಳಿಸಿದೆ. ಈ ಪ್ರೋಸೆಸರ್ ಲೋ ಲೈಟ್ ನಲ್ಲಿಯೂ ಪಿಚ್ಚರ್ ಗಳನ್ನು ತೆಗೆಯಲು ಶಕ್ತವಾಗಿದೆ.

ಐಫೋನ್ X ಕ್ಯಾಮೆರಾ ಹೇಗಿದೆ?

ಐಫೋನ್ X ಕ್ಯಾಮೆರಾ ಹೇಗಿದೆ?

ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ. ಇದರಲ್ಲಿ ವೈಡ್ ಆಂಗಲ್ ಲೈನ್ಸ್ f/1.8 ಅಪರ್ಚರ್ ಹೊಂದಿದ್ದು, ಟೆಲಿ ಲೈನ್ಸ್ f/2.4 ಅಪರ್ಚರ್ ನಲ್ಲಿ ಫೋಟೊವನ್ನು ಕ್ಲಿಕ್ ಮಾಡಲಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್,ಪೋಟ್ರೇಟ್ ಮೊಡ್ ತಂತ್ರಜ್ಞಾನ ಸಹ ಇದರಲ್ಲಿದೆ ಕ್ಯಾಮೆರಾವನ್ನು ವರ್ಟಿಕರ್ ಆಗಿ ನೀಡಲಾಗಿದೆ.

AR ಮತ್ತು ಅನ್‌ಮೋಜಿ

AR ಮತ್ತು ಅನ್‌ಮೋಜಿ

ಐಫೋನ್ X ನಲ್ಲಿರುವ ಹಿಂಬದಿಯ ಕ್ಯಾಮೆರಾಗಳು AR ಸಫೋರ್ಟ್ ಮಾಡಲಿದ್ದು, ಮೊಷನ್ ಟ್ರಾಕಿಂಗ್ ಮಾಡಲಿದೆ. ಇದನ್ನು ಆಪಲ್ ಮೊದಲ ಬಾರಿಗೆ ತನ್ನ ಫೋನಿನಲ್ಲಿ ಅಳವಡಿಸಿದೆ. ಅಲ್ಲದೇ ಇದನ್ನು ಲಾಂಚ್ ವೇಳೆಯಲ್ಲಿ ಡೊಮೊ ಸಹ ನೀಡಲಾಗಿತ್ತು. ಎಮೋಜಿಗಳ ಬದಲಾಗಿ ನಿಮ್ಮದೇ ಅನ್‌ಮೋಜಿ ಕ್ರಿಯೆಟ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ಐಫೋನ್ X ಫೇಸ್‌ ಐಡಿ

ಐಫೋನ್ X ಫೇಸ್‌ ಐಡಿ

ಐಫೋನ್ X ನಲ್ಲಿ ಈ ಹಿಂದಿನ ಟೆಚ್ ಐಡಿಯನ್ನು ತೆಗೆದು ಹಾಕಿ ಹೊಸದಾಗಿ ಫೇಸ್‌ ಐಡಿ ಎಂಬ ಹೊಸ ಆಯ್ಕೆಯನ್ನು ನೀಡಲಾಗಿದೆ. ಇದು ನಿಮ್ಮ ಐಫೋನ್ ಅನ್‌ಲಾಕ್ ಮಾಡಲು ಬಳಕೆ ಮಾಡಿಕೊಳ್ಳಬಹುದಾಗಿದೆ. ಒಮ್ಮೆ ನಿಮ್ಮ ಫೇಸ್ ರಿಡ್ ಆದ ನಂತರದಲ್ಲಿ ನೀವು ಹೆರ್ ಸ್ಟೈಲ್ ಬದಲಾಯಿಸಿದರೂ, ಗಡ್ಡ ಬಿಟ್ಟರು ನಿಮ್ಮನ್ನು ಗುರುತಿಸಲಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಬ್ಯಾಟರಿ ಮತ್ತು ಇತರೆ ಫೀಚರ್ಸ್

ಐಫೋನ್ X ಸ್ಮಾರ್ಟ್‌ಫೋನ್ ವೈರ್‌ಲೈಸ್ ಚಾರ್ಜ್ ಸಪೋರ್ಟ್ ಮಾಡಲಿದ್ದು, 2716mAh ಬ್ಯಾಟರಿಯನ್ನು ಅಳವಡಿಸುವುದರೊಂದಿಗೆ ಬಾಳಿಕೆಯನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಫೋನಿನಲ್ಲಿ ಆಪಲ್ ಮುಂಭಾಗದಲ್ಲಿ ಸೆನ್ಸಾರ್ ಮತ್ತು ಕ್ಯಾಮೆರಾವನ್ನು ತಂದಿದ್ದು, ನೀವು ಸ್ಕ್ರಿನ್ ಅನ್ನು ಕೆಳಗಿನಿಂದ ಮೇಲೆ ಮಾಡಿದರೆ ಸಾಕು ತೆರೆದುಕೊಳ್ಳಲಿದೆ.

Best Mobiles in India

English summary
Amazon Summer Sale 2019: Best Offer on iPhone X!. The sale will open for Prime members at 12pm (noon) on May 3. Ahead of the sale, Amazon India has revealed some of the major offers on smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X