Subscribe to Gizbot

ಜಿಯೋನಿ ದಿಗ್ಗಜರೊಂದಿಗಿನ ಸಂದರ್ಶನ ವೀಡಿಯೊ ವಿಮರ್ಶೆ

Written By:

ಚೈನೀಸ್ ಸ್ಮಾರ್ಟ್‌ಫೋನ್ ತಯಾರಕರು ಭಾರತೀಯ ಡೊಮೆಸ್ಟಿಕ್ ಮಾರುಕಟ್ಟೆಯನ್ನು ಅತ್ಯಂತ ಪ್ರಭಾವಶಾಲಿ ಕ್ಷೇತ್ರವೆಂದು ಪರಿಗಣಿಸಿದ್ದು ಏಷ್ಯಾದಲ್ಲೇ ಹೆಚ್ಚು ಪ್ರಬಲವಾಗಿರುವ ಕಂಪೆನಿಯಾಗಿ ಮೂಡಿಬಂದಿದೆ. ಇದನ್ನೇ ತಕ್ಕ ಸಮಯವೆಂದು ಪರಿಗಣಿಸ ಜಿಯೋನಿ ನ್ಯೂ ಜಿಯೋನಿ Elife E7 Mini ಅನ್ನು ಲಾಂಚ್ ಮಾಡಿದೆ.

ಜಿಯೋನಿ Elife E7 Mini 4.7 ಇಂಚಿನ IPS IGZO ಡಿಸ್‌ಪ್ಲೇಯೊಂದಿಗೆ ಬಂದಿದ್ದು 720x1280 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.7GHz ಓಕ್ಟಾ ಕೋರ್ Mediatek MT6592 ಮೀಡಿಯಾ ಟೆಕ್ ಪ್ರೊಸೆಸರ್ ಅನ್ನು ಒಳಗೊಂಡಿದ್ದು Mali 450MP4 GPU ಮತ್ತು 1 ಜಿಬಿ RAM ಹ್ಯಾಂಡ್‌ಸೆಟ್‌ನಲ್ಲಿದೆ. ಇದು ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಆವೃತ್ತಿಯನ್ನು ಬೆಂಬಲಿಸುತ್ತಿದ್ದು ಇದು ಡ್ಯುಯಲ್ ಸಿಮ್ ಡಿವೈಸ್ ಆಗಿದೆ.

ಜಿಯೋನಿ ದಿಗ್ಗಜರೊಂದಿಗಿನ ಸಂದರ್ಶನ ವೀಡಿಯೊ ವಿಮರ್ಶೆ

ಜಿಯೋನಿ Elife E7 13 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬಂದಿದ್ದು ಇದು ಫೋಟೋಗಳನ್ನು ತೆಗೆಯಲು ಹೆಚ್ಚು ಆರಾಮದಾಯಕವಾಗಿದೆ ಇದರ ಲೆನ್ಸ್ ಅನ್ನು ಬ್ಲೂ ಗ್ಲಾಸ್ ಫಿಲ್ಟರ್‌ನೊಂದಿಗೆ ಸಕ್ರಿಯಗೊಳಿಸಲಾಗಿದ್ದು ಇದು 16 ಜಿಬಿ ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಇನ್ನು ಫೋನ್‌ನಲ್ಲಿರುವ ಸಂಪರ್ಕ ವಿಶೇಷತೆಗಳೆಂದರೆ ಬ್ಲ್ಯೂಟೂತ್, NFC, Wi-Fi, GPRS/ EDGE, GPS/A-GPS ಮತ್ತು 3 ಜಿಯಾಗಿದೆ. ಫೋನ್‌ನ ಅಳತೆ 139.8x66.2x8.6mm ಆಗಿದ್ದು 142.9 ಗ್ರಾಮ್‌ಗಳಾಗಿವೆ. ಇನ್ನು ಬ್ಯಾಟರಿ 2200mAh ಆಗಿದ್ದು ಇದು 18 ಗಂಟೆಗಳ ಟಾಕ್ ಟೈಮ್ ಅನ್ನು 200 ಗಂಟೆಗಳ ಸ್ಟ್ಯಾಂಡ್‌ ಬೈ ಸಮಯವನ್ನು ಒದಗಿಸುತ್ತಿದೆ.

ಇನ್ನು ಜಿಯೋನಿ ಅಧ್ಯಕ್ಷ ವಿಲಿಯಮ್ ಲೂ ಮತ್ತು ಭಾರತದಲ್ಲಿನ ಜಿಯೋನಿ ಮುಖ್ಯಸ್ಥ ಅರವಿಂದ್ ಆರ್ ವೋಹ್ರಾರೊಂದಿಗಿನ ಸಂದರ್ಶನ ವೀಡಿಯೊ ಈ ಲೇಖನದಲ್ಲಿ ಅಳವಡಿಸಲಾಗಿದ್ದು ನಿಮಗೆ ಜಿಯೋನಿಯ ಇನ್ನಷ್ಟು ಹೊಸ ಯೋಜನೆಗಳ ಮಾಹಿತಿಯನ್ನು ನೀಡಲಿದೆ.

<center><iframe width="100%" height="510" src="//www.youtube.com/embed/Xx39toexEig" frameborder="0" allowfullscreen></iframe></center>

Read more about:
English summary
This article tells about An Interview with William Lu President Gionee & Arvind R Vohra Head Gionee India.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot