Home
ಮೊಬೈಲ್

ಮೋಟೊರೊಲಾ ಫೋನ್ ಬಳಕೆದಾರರಿಗೆ ಇದು ಭರ್ಜರಿ ಖುಷಿಯ ಸುದ್ದಿ!

ಮೋಟೊರೊಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇದು ಭರ್ಜರಿ ಖುಷಿಯ ಸುದ್ದಿ. ಏಕೆಂದರೆ, ವೇಗವಾಗಿ ಆಂಡ್ರಾಯ್ಡ್ ಅಪ್‌ಡೇಟ್ ನೀಡುವುದರಲ್ಲಿ ಹಿಂದೆ ಸ್ವಲ್ಪ ಹಿಂದೆ ಉಳಿದಿದ್ದ ಮೋಟೊರೊಲಾ ಕಂಪೆನಿಯು, ಈಗ ಆಂಡ್ರಾಯ್ಡ್ 16 ಅಪ್‌ಡೇಟ್ ಮೂಲಕ ತನ್ನ ಸಾಫ್ಟ್‌ವೇರ್ ತಂತ್ರದಲ್ಲಿ ದೊಡ್ಡ ಬದಲಾವಣೆ ತಂದಿದೆ. 2026ರಲ್ಲಿ ಕಂಪನಿ ಹೊಸ ಆಂಡ್ರಾಯ್ಡ್ ಆವೃತ್ತಿಯನ್ನು ಬೇಗನೇ ಬಿಡುಗಡೆ ಮಾಡಿದ ಪ್ರಮುಖ ಬ್ರ್ಯಾಂಡ್‌ಗಳ ಪಟ್ಟಿಗೆ ಈಗ ಮೋಟೊರೊಲಾ ಸೇರಿದೆ.!

ಹೌದು, ಈಗಾಗಲೇ ಹಲವು ಮೋಟೊರೊಲಾ ಫೋನ್‌ಗಳಲ್ಲಿ ಸ್ಥಿರ (Stable) Android 16 ಅಪ್‌ಡೇಟ್ ಲಭ್ಯವಾಗಿದ್ದು, ಇನ್ನೂ ಕೆಲವು ಮಾದರಿಗಳು ಅಧಿಕೃತ ಬೀಟಾ ಪರೀಕ್ಷೆಯಲ್ಲಿ ಭಾಗವಹಿಸುತ್ತಿವೆ. ಈ ಹೊಸ ಆಂಡ್ರಾಯ್ಡ್ ಆವೃತ್ತಿಯು ಬಳಕೆದಾರರಿಗೆ ಉತ್ತಮ ಕಾರ್ಯಕ್ಷಮತೆ, ಬಲವಾದ ಭದ್ರತೆ ಮತ್ತು ಸುಧಾರಿತ ಬಳಕೆದಾರ ಅನುಭವವನ್ನು ಒದಗಿಸುತ್ತಿದೆ. ಹಾಗಾದರೆ, ನಿಮ್ಮ ಫೋನ್‌ಗೆ ಆಂಡ್ರಾಯ್ಡ್ 16 ಅಪ್‌ಡೇಟ್ ದೊರೆತಿದೆಯೇ ಎಂಬುದನ್ನು ನೋಡೋಣ ಬನ್ನಿ.

ಆಂಡ್ರಾಯ್ಡ್ 16 ಸ್ಥಿರ ಅಪ್‌ಡೇಟ್ ಪಡೆದ ಮೋಟೊರೊಲಾ ಫೋನ್‌ಗಳು
Motorola Edge ಸರಣಿ
Motorola Edge 60 Pro
Motorola Edge 60 Fusion
Motorola Edge 60 Stylus
Motorola Edge 50 Pro
Motorola Edge 50 Ultra
Motorola Edge Fusion
Motorola Edge (2025)

Motorola Razr ಸರಣಿ
Motorola Razr 60
Motorola Razr 60 Ultra
Motorola Razr 50
Motorola Razr 50 Ultra

ಮೋಟೊರೊಲಾ ಫೋನ್ ಬಳಕೆದಾರರಿಗೆ ಇದು ಭರ್ಜರಿ ಖುಷಿಯ ಸುದ್ದಿ!

Motorola Moto G ಸರಣಿ
Moto G86 5G
Moto G86 Power 5G
Moto G75 5G
Moto G67 Power 5G
Moto G Stylus (2025)
Moto G Power (2025)
Moto G (2025)

ಅಪ್‌ಡೇಟ್ ಇನ್ನೂ ಬಂದಿಲ್ಲವೇ? ಆತಂಕ ಬೇಡ
ಈ ಅಪ್‌ಡೇಟ್‌ಗಳು ಹಂತ ಹಂತವಾಗಿ (Batch-wise) ಬರುತ್ತಿರುವುದರಿಂದ, ದೇಶ, ರಾಜ್ಯ ಅಥವಾ ಮೊಬೈಲ್ ನೆಟ್‌ವರ್ಕ್ ಆಧಾರದ ಮೇಲೆ ಲಭ್ಯತೆ ಬದಲಾಗಬಹುದು. ನಿಮ್ಮ ಫೋನ್ ಈ ಪಟ್ಟಿಯಲ್ಲಿ ಇದ್ದರೂ ಇನ್ನೂ ಆಂಡ್ರಾಯ್ಡ್ 16 ಅಪ್‌ಡೇಟ್ ಕಾಣಿಸದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. OTA ಅಪ್‌ಡೇಟ್‌ಗಳು ಸಾಮಾನ್ಯವಾಗಿ ನೆಟ್‌ವರ್ಕ್ ಮತ್ತು ಪ್ರದೇಶದ ಆಧಾರದ ಮೇಲೆ ನಿಧಾನವಾಗಿ ರೋಲ್‌ಔಟ್ ಆಗುತ್ತವೆ. ಮುಂದಿನ ಕೆಲವು ವಾರಗಳಲ್ಲಿ ಎಲ್ಲ ಅರ್ಹ ಸಾಧನಗಳಿಗೆ ಅಪ್‌ಡೇಟ್ ತಲುಪುವ ನಿರೀಕ್ಷೆಯಿದೆ.

ಮೋಟೊರೊಲಾ ಬಳಕೆದಾರರಿಗೆ ಇದು ಏಕೆ ಮಹತ್ವದ್ದು?
ಈ ಬಾರಿ ಮೋಟೊರೊಲಾ ತೋರಿಸಿರುವ ವೇಗವು, ಕಂಪನಿ ತನ್ನ ಬಳಕೆದಾರ ಅನುಭವ ಮತ್ತು ಸಾಫ್ಟ್‌ವೇರ್ ಬೆಂಬಲದ ಮೇಲೆ ಹೆಚ್ಚು ಗಮನ ನೀಡುತ್ತಿದೆ ಎಂಬುದಕ್ಕೆ ಸ್ಪಷ್ಟ ಸೂಚನೆ. ಆಂಡ್ರಾಯ್ಡ್ 16 ಮೂಲಕ ಹೆಚ್ಚು ಸ್ಮೂತ್ ಕಾರ್ಯಕ್ಷಮತೆ, ಹೊಸ ವೈಶಿಷ್ಟ್ಯಗಳು ಮತ್ತು ದೀರ್ಘಕಾಲದ ಭದ್ರತಾ ಅಪ್‌ಡೇಟ್‌ಗಳನ್ನು ಬಳಕೆದಾರರು ನಿರೀಕ್ಷಿಸಬಹುದು. ಒಟ್ಟಾರೆಯಾಗಿ, ಆಂಡ್ರಾಯ್ಡ್ 16 ಅಪ್‌ಡೇಟ್ ಮೋಟೊರೊಲಾ ಫೋನ್ ಬಳಕೆದಾರರಿಗೆ ಉತ್ತಮ ಅನುಭವ ನೀಡುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.

Best Mobiles in India

English summary
Motorola has begun rolling out the stable Android 16 update to select smartphones, marking a major shift in its software update strategy. With faster rollout, improved performance, enhanced security, and beta testing already underway for more devices, Motorola has joined the list of brands delivering Android updates early in 2026.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+