ಮೋಟೋ ಜಿ (ಫಸ್ಟ್ ಜನರೇಶನ್) ಗೆ 5.0 ಲಾಲಿಪಪ್ ನವೀಕರಣ

Written By:

ಭಾರತದಲ್ಲಿ ಫಸ್ಟ್ ಜನರೇಶನ್ ಮೋಟೋ ಜಿ ಗೆ ಆಂಡ್ರಾಯ್ಡ್ 5.0 ಲಾಲಿಪಪ್ ಅನ್ನು ನವೀಕರಿಸುವ ಸಿದ್ಧತೆಯಲ್ಲಿ ಮೋಟೋರೋಲಾ ತೊಡಗಿದೆ. ಈ ನಿಟ್ಟಿನಲ್ಲಿ ಕಂಪೆನಿ ಗೂಗಲ್ ಪ್ಲೇ ನಲ್ಲಿ ತನ್ನ 'ಮೋಟೋರೋಲಾ ಅಪ್‌ಡೇಟ್ ಸರ್ವೀಸಸ್' ಅಪ್ಲಿಕೇಶನ್ ಅನ್ನು ಸೋಮಮಾರ ನವೀಕರಿಸಿದೆ. ಫಸ್ಟ್ ಜನರೇಶನ್ ಮೋಟೋ ಜಿ ಯನ್ನು ಬಳಸಿಕೊಂಡು ಮೋಟೋ ಫೀಡ್‌ಬ್ಯಾಕ್ ನೆಟ್‌ವರ್ಕ್‌ನ ಸದಸ್ಯರಿಗೆ 'ಸೋಕ್ ಟೆಸ್ಟ್' ಆಮಂತ್ರಣಗಳನ್ನು ಕಂಪೆನಿ ಇದಕ್ಕಾಗಿ ಕಳುಹಿಸುತ್ತಿದೆ.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಹೊಸ ಹೊಸ ಫೋನ್‌ಗಳು

ಮೋಟೋರೋಲಾ ಫೀಡ್‌ಬ್ಯಾಕ್ ನೆಟ್‌ವರ್ಕ್‌ ಅನ್ನು ಸೇರಿದ್ದಕ್ಕಾಗಿ ಧನ್ಯವಾದಗಳು. ನಾವು ಭಾರತದಲ್ಲಿರುವ ಮೋಟೋ ಜಿ ಮಾಲೀಕರನ್ನು ಆಮಂತ್ರಿಸುತ್ತಿದ್ದು ಹೊಸ ಸಾಫ್ಟ್‌ವೇರ್‌ನ ಬಿಡುಗಡೆಯ ಪೂರ್ವ ವೀಕ್ಷಣೆ ಮತ್ತು ಪ್ರತಿಕ್ರಿಯೆಯನ್ನು ನೀಡಬೇಕು ಎಂದು ಆಮಂತ್ರಣದಲ್ಲಿ ತಿಳಿಸಲಾಗಿದೆ.

ಲಾಲಿಪಪ್ ಬರಲಿದೆ ಇನ್ನು ಮೋಟೋ ಜಿ ಗೂ

ಮೋಟೋ ಎಕ್ಸ್ (2 ನೇ ಜನರೇಶನ್) ಗಾಗಿ ಆಂಡ್ರಾಯ್ಡ್ 5.0 ಲಾಲಿಪಪ್‌ನ ಅಧಿಕೃತ ಬಿಡುಗಡೆಯ ಬಳಕೆದಾರ ಪ್ರತಿಕ್ರಿಯೆ ಮತ್ತು ಸೋಕ್ ಟೆಸ್ಟ್ ಫಲಿತಾಂಶವನ್ನು ತನ್ನ ಸದಸ್ಯರಿಗೆ ಕಂಪೆನಿ ಕಳೆದ ತಿಂಗಳು ತಿಳಿಸಿದೆ.

ಫಸ್ಟ್ ಜನರೇಶನ್ ಮೋಟೋ ಜಿಗಾಗಿ ಆಂಡ್ರಾಯ್ಡ್ 5.0 ಲಾಲಿಪಪ್‌ನ ಬಿಡುಗಡೆಯತ್ತ ನಾವು ಮುಖ ಮಾಡುವುದಾದರೆ ಲೆನೊವೊ ಮಾಲೀಕತ್ವದ ಕಂಪೆನಿ ತನ್ನ ಓಟಿಎ ನವೀಕರಣ ಸರ್ವೀಸ್ ಅಪ್ಲಿಕೇಶನ್ ಅನ್ನು ಅಪ್‌ಡೇಟ್ ಮಾಡಿದೆ. ಓವರ್ ದ ಏರ್ ಇನ್‌ಸ್ಟಾಲರ್ ಅನ್ನು ಅಪ್ಲಿಕೇಶನ್ ಅಪ್‌ಡೇಟ್ ಮಾಡಿದ್ದು ಇದನ್ನು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

English summary
This article tells about Reports indicate Motorola is gearing up to release the Android 5.0 Lollipop update for the first-generation Moto G in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot