ಆಂಡ್ರಾಯ್ಡ್ ಜೆಲ್ಲಿ ಬೀನ್ Upgrade ಆದ ಫೋನುಗಳು

ವೇಗದ ಇಂಟರ್ನೆಟ್ ಸಂಪರ್ಕ, ಉತ್ತಮ ಪ್ರೊಸೆಸಿಂಗ್, ಉತ್ತಮ ಬ್ಯಾಟರಿ ನಿರ್ವಹಣೆಹಾಗು ವಾಯ್ಸ್ ರೆಕಗ್ನಿಶನ್, ಹೊಂದಿರುವ ಗೂಗಲ್ ನ ಹೊಚ್ಚ ಹೊಸ ಆಂಡ್ರಾಯ್ಡ್ (4.1 ) ಜೆಲ್ಲಿ ಬೀನ್ ತಂತ್ರಾಂಶ ಈಗ ತುಂಬಾ ಫೇಮಸ್ ಆಗುತ್ತಿದ್ದು, ಹಿಂದಿನ ಆಂಡ್ರಾಯ್ಡ್ 4.0 ತಂತ್ರಾಂಶವಾದ ಐಸ್ ಕ್ರೀಮ್ ಸ್ಯಾಂಡ್ವಿಚ್ ಇರುವ ಬಹುತೇಕ ಸ್ಮಾರ್ಟ್ ಫೋನುಗಳ ಹಾಗು ಟ್ಯಾಬ್ಲೆಟ್ ಗಳಿಗೆ ಅಪ್ಡೇಟ್ ಆಗಲಿದ್ದು, ಕಂಪನಿಗಳು ಈಗ ಒಂದೊಂದಾಗಿ ತಮ್ಮ ಗ್ರಾಹಕರಿಗೆ ಅಪ್ಗ್ರೇಡ್ ಮಾಡುತ್ತಿವೆ.
ಗೂಗಲ್ ತನ್ನದೇ ಆದ ನೆಕ್ಸಸ್ ಟ್ಯಾಬ್ಲೆಟ್ ಮೂಲಕ ಆಂಡ್ರಾಯ್ಡ್ ಜೆಲ್ಲಿ ಬೀನ್ ಪರಿಚಯಿಸಿದ್ದು, ಅದನ್ನು ಪರೀಕ್ಷಿಸಿ ಸಂತಸಗೊಂಡಿರುವ ಗ್ರಾಹಕರು ಜೆಲ್ಲಿ ಬೀನ್ ಇರುವ ಸ್ಮಾರ್ಟ್ ಫೋನ್ ಬಿಡುಗಡೆಯಾಗಲು ಕಾಯುತ್ತಿದ್ದಾರೆ.
ಮತ್ತೊಂದು ಕಡೆ ಆಂಡ್ರಾಯ್ಡ್ 4.0 ಕ್ರೀಮ್ ಸ್ಯಾಂಡ್ವಿಚ್ ಇರುವ ಕೆಲವು ಸ್ಮಾರ್ಟ್ ಫೋನುಗಳಲ್ಲಿ upgrade ಮಾಡಿಕೊಳ್ಳುವ ಅವಕಾಶವಿದ್ದು, ಈ ಕೆಳಗಿನ ಯಾವುದಾದರೂ ಸ್ಮಾರ್ಟ್ ಫೋನ್ ನಿಮ್ಮದಾಗಿದ್ದರೆ, ಹೊಸ ಆಂಡ್ರಾಯ್ಡ್ ಜೆಲ್ಲಿ ಬೀನ್ ತಂತ್ರಾಂಶಕ್ಕೆ ಅಪ್ಡೇಟ್ ಮಾಡಿಕೊಳ್ಳಬಹುದು.
- ಸ್ಯಾಮ್ಸಂಗ್ ಗ್ಯಾಲಕ್ಸಿ S3
- ಸ್ಯಾಮ್ಸಂಗ್ ಗ್ಯಾಲಕ್ಸಿ S2
- ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್
- HTC ಒನ್ X
- HTC ಒನ್ S
- ಮೋಟೋರೋಲಾ Atrix 2
- ಸೋನಿ Xperia S
- ಸೋನಿ Xperia P
- ಸೋನಿ Xperia U
- LG ಆಪ್ಟಿಮಸ್ 4x HD
ಕಾರ್ಬನ್ ಕಂಪನಿ ತನ್ನ ಸ್ಮಾರ್ಟ್ ಫೋನ್ ಗಿಂತಲೂ ಮುನ್ನವೆ ಭಾರತದ ಮೊದಲ ಆಂಡ್ರಾಯ್ಡ್ ಜೆಲ್ಲಿ ಬೀನ್ ಟ್ಯಾಬ್ಲೆಟ್ ಅನ್ನು upgrade ಮಾಡಿ ಬಿಟ್ಟಿದ್ದು, ಬರುವ ದಿನಗಳಲ್ಲಿಬೇರೆ ಕಂಪನಿಗಳೂ ತಮ್ಮ ಟ್ಯಾಬ್ಲೆಟ್ ಗಳಿಗೆ ಜೆಲ್ಲಿ ಬೀನ್ upgrade ವಿಸ್ತರಿಸಲಿದೆ.


Click it and Unblock the Notifications








