ಆಂಡ್ರಾಯ್ಡ್‌ನಲ್ಲಿ ಅಷ್ಟೇನೂ ಮೋಡಿ ಮಾಡದ ಕಿಟ್‌ಕ್ಯಾಟ್ ಆಪ್

Written By:

ಸ್ಮಾರ್ಟ್‌ಪೋನ್‌ನಲ್ಲಿ ವಿವಿಧ ರೀತಿಯ ಅಪ್ಲಿಕೇಶನ್‌ಗಳು ತಮ್ಮ ಗ್ರಾಹಕರಿಗೆ ಹಲವಾರು ರೀತಿಯಲ್ಲಿ ಸಹಾಯ ಮಾಡುತ್ತವೆ. ಹಾಡು ಡೌನ್‌ಲೋಡ್ ಮಾಡುವುದರಿಂದ ಹಿಡಿದು ಮೂವಿಯನ್ನು ಡೌನ್‌ಲೋಡ್ ಮಾಡುವ ಅಪ್ಲಿಕೇಶನ್‌ಗಳು ಈಗ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ.

ಹೀಗೆ ಹೊಸ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್‌ನ ಹೊಸ ಹೊಸ ಅವತರಣಿಕೆಗಳಲ್ಲಿ ರೂಪುಗೊಳ್ಳುತ್ತಿವೆ. ಹೀಗೆ ಉತ್ಪಾದಕರು ಅಪ್ಲಿಕೇಶನ್‌ಗಳ ಮೂಲಕವೇ ಲಾಭವನ್ನು ಗಳಿಸುತ್ತಿದ್ದಾರೆ ಎಂದೇ ಹೇಳಬಹುದು.

ಆಂಡ್ರಾಯ್ಡ್‌ನಲ್ಲಿ ಅಷ್ಟೇನೂ ಮೋಡಿ ಮಾಡದ ಕಿಟ್‌ಕ್ಯಾಟ್ ಆಪ್

ಇಂದಿನ ಲೇಖನದಲ್ಲಿ ಕಿಟ್‌ಕ್ಯಾಟ್ ಅಪ್ಲಿಕೇಶನ್ ಬಗ್ಗೆ ಸ್ವಲ್ಪ ತಿಳಿಯೋಣ ಮತ್ತು ಆಂಡ್ರಾಯ್ಡ್ ಪೋನ್‌ಗಳಲ್ಲಿ ಅದು ಹೇಗೆ ಬಳಕೆಯಾಗುತ್ತಿದೆ ಎಂಬ ವಿಶ್ಲೇಷಣೆಯನ್ನು ಅರಿತುಕೊಳ್ಳೋಣ. ಕಳೆದ ಅಕ್ಟೋಬರ್‌ 2013 ರಲ್ಲಿ ಬಿಡುಗಡೆಯಾದ ಕಿಟ್‌ಕ್ಯಾಟ್ ಈಗ ಆಂಡ್ರಾಯ್ಡ್‌ನ 8.5% ಮೊಬೈಲ್‌ಗಳಲ್ಲಿ ಚಾಲನೆಯಾಗುತ್ತಿದೆ ಎಂದು ಗೂಗಲ್ ಇತ್ತೀಚೆಗೆ ತಿಳಿಸಿದೆ.

ಇತ್ತೀಚಿನ ಮಾಹಿತಿಯ ಪ್ರಕಾರ ಎಲ್ಲಾ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಆಂಡ್ರಾಯ್ಡ್ 2.2 ಅಥವಾ ಅದಕ್ಕಿಂತ ಹೆಚ್ಚಿನದು ರನ್ ಆಗುತ್ತಿದೆ. ಅಂದರೆ ಕಿಟ್‌ಕ್ಯಾಟ್ ಅಪ್ಲಿಕೇಶನ್‌ ತುಸು ನಿಧಾನವಾಗಿಯೇ ಆಂಡ್ರಾಯ್ಡ್‌ನಲ್ಲಿ ಚಾಲನೆಯಾಗುತ್ತಿದೆ ಎಂದಾಯಿತು.

ಜೆಲ್ಲಿಬೀನ್ ಆಂಡ್ರಾಯ್ಡ್‌ನ ಹಿಂದಿನ ಆವೃತ್ತಿ 2012 ರಲ್ಲಿ ಬಿಡುಗಡೆಯಾಗಿದ್ದು, 61% ದಷ್ಟು ಪೋನ್‌ಗಳು ಈ ಅಪ್ಲಿಕೇಶನ್‌ ಅನ್ನು ಬಳಸುತ್ತಿವೆ. ಅದೇ ರೀತಿ ಜಿಂಜರ್‌ಬ್ರೆಡ್ ಅಪ್ಲಿಕೇಶನ್‌ ಕೂಡ ಮೂರು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದು 15% ದಷ್ಟು ಆಂಡ್ರಾಯ್ಡ್ ಫೋನ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಆಪಲ್‌ನ Apple's iOS 7 ಅನ್ನು 80% ದಷ್ಟು ಮೊಬೈಲ್ ಫೋನ್‌ಗಳಲ್ಲಿ ಚಾಲನೆಯಾಗುತ್ತಿರುವುದು ವರದಿಗಳಿಂದ ದೃಢ ಪಟ್ಟಿದೆ.

ಆಪಲ್ ತನ್ನೆಲ್ಲಾ ಅಪ್ಲಿಕೇಶನ್‌ಗಳನ್ನು ಬಳಕೆದಾರರಿಗೆ ಒಮ್ಮೆಲೇ ನೀಡುತ್ತದೆ ಆದರೆ ಆಂಡ್ರಾಯ್ಡ್ ತಯಾರಕರು ಮತ್ತು ವಿತರಕರನ್ನು ಅವಲಂಬಿಸಿದೆ ಇದರಿಂದಾಗಿ ಬಳಕೆದಾರರು ಆಂಡ್ರಾಯ್ಡ್‌ನ ಹೊಸ ಅಪ್ಲಿಕೇಶನ್‌ಗಳು ಬರುವವರೆಗೆ ನಿರೀಕ್ಷಿಸಬೇಕಾಗುತ್ತದೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot