Home
ಮೊಬೈಲ್

ಶೀಘ್ರದಲ್ಲೇ ಆಂಡ್ರಾಯ್ಡ್ ಬಳಕೆದಾರರಿಗೆ ಬಂಪರ್‌ ಕೊಡುಗೆ

By Suneel

ಆಪಲ್‌ ಬಂದರೂ ಸಹ ಆಂಡ್ರಾಯ್ಡ್‌ ಪ್ರೇಮಿಗಳಿಗೆ ಬರವಿಲ್ಲ. ಈಗ ಆಂಡ್ರಾಯ್ಡ್ ಪ್ರೇಮಿಗಳಿಗೆ ಸಿಹಿ ಸುದ್ದಿ ಎಂದರೆ ಆಂಡ್ರಾಯ್ಡ್‌ನ ಲೇಟೆಸ್ಟ್‌ ಆಪರೇಟಿಂಗ್ ಸಿಸ್ಟಮ್‌ "ಆಂಡ್ರಾಯ್ಡ್ ಎನ್‌" ಅಭಿವೃದ್ದಿಗೊಂಡಿದ್ದು ಇನ್ನು ಕೆಲವೇ ತಿಂಗಳಲ್ಲಿ ಆಂಡ್ರಾಯ್ಡ್ ಫೋನ್‌ ಬಳಕೆದಾರರು ಇದನ್ನು ಅಪ್‌ಡೇಟ್‌ ಮಾಡಿಕೊಳ್ಳಬಹುದಾಗಿದೆ. ಹಾಗಾದ್ರೆ ಆಂಡ್ರಾಯ್ಡ್ ಮಾರ್ಶ್‌ಮಲ್ಲೊ'ಗಿಂತ ವಿಶೇಷತೆ ಏನಿದೆ ಎಂಬುದು ಎಲ್ಲರ ಕುತೂಹಲ.

"ಆಂಡ್ರಾಯ್ಡ್‌ ಮಾರ್ಶ್‌ಮಲ್ಲೊ" ಓಎಸ್‌ ಅಪ್‌ಡೇಟ್‌ ಆದ ಕೆಲವೇ ತಿಂಗಳ ನಂತರ ಗೂಗಲ್‌ ಈಗ "ಆಂಡ್ರಾಯ್ಡ್‌ ಎನ್‌" ಓಎಸ್‌ ಅನ್ನು ಆಂಡ್ರಾಯ್ಡ್‌ ಫೋನ್‌ಗಳಿಗೆ ಅಪ್‌ಡೇಟ್‌ ನೀಡಲು ರೆಡಿಯಾಗಿದೆ. ಈ ಲೇಖನದಲ್ಲಿ "ಆಂಡ್ರಾಯ್ಡ್ ಎನ್‌" ಓಎಸ್‌ ಆಂಡ್ರಾಯ್ಡ್‌ ಮಾರ್ಶ್‌ಮಲ್ಲೊ'ಗಿಂತ ಹೇಗೆ ವಿಭಿನ್ನ ಎಂಬುದನ್ನು ತಿಳಿಯಿರಿ.

#1

#1

"ಆಂಡ್ರಾಯ್ಡ್ ಎನ್‌" ಓಎಸ್‌ ಆಂಡ್ರಾಯ್ಡ್‌ ಡಿವೈಸ್‌ಗಳು, ನೆಕ್ಸಸ್, ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಅಪ್‌ಡೇಟ್‌ ಆದ ನಂತರ ಬಳಕೆದಾರರು ಒಂದೇ ವಿಂಡೋದಲ್ಲಿ ಎರಡು ಆಪ್‌ಗಳನ್ನು ಒಮ್ಮೆಯೇ ಸ್ಪ್ಲಿಟ್‌ ಆಗಿ ಓಪನ್‌ ಮಾಡಿಕೊಂಡು ಕಾರ್ಯ ನಿರ್ವಹಿಸಬಹುದಾಗಿದೆ. ಅಲ್ಲದೇ ಹಲವು ಆಪ್‌ಗಳ ಸ್ಕ್ರೀನ್‌ ಡಿಸ್‌ಪ್ಲೇ ಬದಲಾಗಲಿದೆ.

#2

#2

ಫೋನ್‌ನಲ್ಲಿ ಟಾಪ್‌ನಿಂದ ಪೇನ್‌ ಸ್ವೈಪ್‌ ಮಾಡಿದಲ್ಲಿ ಒಂದೇ ಭಾರಿ 9 ಟಾಗಲ್‌ ಸೆಟ್ಟಿಂಗ್‌ ಆಯ್ಕೆಗಳನ್ನು ಪಡೆಯಬಹುದಾಗಿದೆ. ಅಲ್ಲದೇ ಡಿಸ್‌ಪ್ಲೇ ಬಲಕ್ಕೆ ಸ್ವೈಪ್‌ ಮಾಡುವುದರಿಂದ ಅತಿ ಶೀಘ್ರದ ಸೆಟ್ಟಿಂಗ್‌ ಆಯ್ಕೆಗಳನ್ನು ಪಡೆಯಬಹುದಾಗಿದೆ.

#3

#3

ನಿಮಗೆ ಬಂದಿರುವ ಹಲವು ನೋಟಿಫಿಕೇಶನ್‌ಗಳ ಅವ್ಯವಸ್ಥೆಗಳನ್ನು ಸರಿಪಡಿಸಲು "ಆಂಡ್ರಾಯ್ಡ್ ಎನ್‌"ನಲ್ಲಿ "Bundled notification" ಫೀಚರ್‌ ಅನ್ನು ಬಳಸಿಕೊಳ್ಳಬಹುದಾಗಿದೆ.

#4

#4

ಅಂದಹಾಗೆ ಗೂಗಲ್‌ನ ಮಾರ್ಶ್‌ಮಲ್ಲೊ ಓಎಸ್‌ ಆಂಡ್ರಾಯ್ಡ್ ಬಳಕೆದಾರರ ಬ್ಯಾಟರಿ ಲೈಪ್‌ಅನ್ನು ಕ್ಷೀಣಿಸುತ್ತಿತ್ತು. ಮುಂದೆ ಅಪ್‌ಡೇಟ್ ಆಗಲಿರುವ "ಆಂಡ್ರಾಯ್ಡ್ ಎನ್‌" ಬ್ಯಾಟರಿ ಲೈಪ್‌ಗಾಗಿಯೇ ವಿಶೇಷ ಫೀಚರ್‌ ಅನ್ನು ಹೊಂದಿದೆಯಂತೆ. ಆದರೆ ಆ ಫೀಚರ್ ಯಾವುದು ಎಂದು ಇನ್ನು ಸಹ ಬಹಿರಂಗಪಡಿಸಿಲ್ಲ.

#5

#5

"ಆಂಡ್ರಾಯ್ಡ್‌ ಎನ್‌" ಓಎಸ್‌ ಅಪ್‌ಡೇಟ್‌ ಆದ ನಂತರ ಆಂಡ್ರಾಯ್ಡ್‌ ಡಿವೈಸ್‌ಗಳ ಸ್ಕ್ರೀನ್‌ನಲ್ಲಿ ಕೆಳಗೆ "Recent Apps" ಬಟನ್‌ ದೊರೆಯಲಿದ್ದು, ಅದನ್ನು ಡಬಲ್‌ ಟ್ಯಾಪ್‌ ಮಾಡಿದರೆ ನೀವು ಉಪಯೋಗಿಸಿದ ಎಲ್ಲಾ ಇತ್ತೀಚಿನ ಆಪ್‌ಗಳು ಕ್ಷಣ ಮಾತ್ರದಲ್ಲಿ ಓಪನ್‌ ಆಗಲಿವೆ.

#6

#6

ಮಾರ್ಶ್‌ಮಲ್ಲೊ ಓಎಸ್‌ಗಿಂತ ಉತ್ತಮವಾಗಿ ಫೈಲ್‌ ಮ್ಯಾನೇಜರ್‌ ಆಪ್‌ನಲ್ಲಿ ಕೇವಲ ಫೋಲ್ಡರ್‌ಗಳನ್ನು ಎಕ್ಸ್‌ಪ್ಲೋರ್‌ ಮಾಡಬಹುದಾಗಿದೆ. ಮಲ್ಟಿ ಸ್ಪ್ಲಿಟ್‌ನಿಂದ ಬ್ರಾಸರ್‌ಗಳಿಗೆ ಫೋಲ್ಡರ್‌ಗಳನ್ನು ಎಕ್ಸ್‌ಪ್ಲೋರ್‌ ಮಾಡಲು ಸಹಾಯಕವಾಗಿದೆ.

#7

#7

"ಆಂಡ್ರಾಯ್ಡ್ ಎನ್‌" ಓಎಸ್‌ನಲ್ಲಿ ಸಿಸ್ಟಮ್‌ ಮಟ್ಟದಲ್ಲಿ ನಂಬರ್ ಬ್ಲಾಕ್‌ ಮಾಡಬಹುದಾಗಿದೆ. ಅಂದರೆ ನೀವು "ಡಯಲರ್" ಆಪ್‌ ಮೂಲಕ ನಂಬರ್ ಬ್ಲಾಕ್‌ ಮಾಡಿದರೆ ಆ ನಂಬರ್‌ನಿಂದ ಇನ್ನಾವುದೇ ಆಪ್‌ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಉದಾಹರಣೆಗೆ ವಾಟ್ಸಾಪ್, ಫೇಸ್‌ಬುಕ್‌, ಮೆಸೇಂಜರ್‌ನಲ್ಲೂ ಸಹ ಬ್ಲಾಕ್‌ ಆಗುತ್ತದೆ.

#8

#8

ಆಂಡ್ರಾಯ್ಡ್‌ ಎನ್‌'ನ ಮತ್ತೊಂದು ಉಪಯೋಗವೆಂದರೆ ಲಾಕ್‌ಸ್ಕ್ರೀನ್‌ನಲ್ಲಿ ತುರ್ತು ಮಾಹಿತಿಗಳನ್ನು, ಸಂಪರ್ಕಗಳನ್ನು ಸೇರಿಸ ಬಹುದಾಗಿದೆ. Setting>>User>>Emergency Information option ಇಲ್ಲಿ ನೀವು ಮಾಹಿತಿಯನ್ನು ಟೈಪ್‌ ಮಾಡಿ ಆಡ್‌ ಮಾಡಿ. ಇದು ಲಾಕ್‌ಸ್ಕ್ರೀನ್‌ನಲ್ಲಿ ಕಾಣುತ್ತದೆ. ಆದರೆ ಆಪ್‌ಡೇಟ್ ಆದಮೇಲೆ ಎಂಬುದನ್ನು ಮರೆಯದಿರಿ.

#9

#9

ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌, ಲಾಲಿಪಪ್‌, ಮಾರ್ಶ್‌ಮಲ್ಲೊ, ಯಾವುದೇ ಓಎಸ್‌ನಲ್ಲಿ ಡಿವೈಸ್‌ ಚಾಲನೆಯಲ್ಲಿರಲಿ ನೀವು "ಆಂಡ್ರಾಯ್ಡ್‌ ಎನ್‌" ಓಎಸ್‌ ಅಪ್‌ಗ್ರೇಡ್‌ ಮಾಡಬಹುದಾಗಿದೆ. ಇದರಿಂದ ಡವೈಸ್‌ ಬಹುಬೇಗ ರೀಸ್ಟಾರ್ಟ್‌ ಆಗುವ, ಯಾವುದೇ ಆಪ್‌ ಬಹುಬೇಗ ಇನ್‌ಸ್ಟಾಲ್‌ಆಗುವ ಉತ್ತಮ ಗುಣವನ್ನು ಹೊಂದಿದೆ.

#10

#10

ವಿವಿಧ ಮೆನುಗಳು, ನೈಟ್‌ ಥೀಮ್ಸ್‌, ಡೇಟಾ ಸೇವರ್, ಬ್ಲಾಕ್‌ ಬ್ಯಾಗ್ರೌಂಡ್‌ ಡೇಟಾದಂತಹ ಹೊಸ ಬದಲಾವಣೆಗಳನ್ನು ಆಂಡ್ರಾಯ್ಡ್‌ ಎನ್‌ ಹೊಂದಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

Best Mobiles in India

English summary
Android N vs Android Marshmallow: 10 new features. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+