Home
ಮೊಬೈಲ್

ಆಂಡ್ರಾಯ್ಡ್‌ ಪೈ ಒಎಸ್‌ನಲ್ಲಿ ಏನೀವೆ ಹೊಸ ಫೀಚರ್ಸ್‌..!

By Gizbot Bureau

ಈಗ ಅಧಿಕೃತವಾಗಿ ತಿಳಿದಿರುವ ವಿಚಾರವೇನೆಂದರೆ ಮುಂದಿನ ಆಂಡ್ರಾಯ್ಡ್ ಓಎಸ್ ನ ದೊಡ್ಡ ವರ್ಷನ್ ಯಾವುದೆಂದರೆ ಅದು ಆಂಡ್ರಾಯ್ಡ್ ಪೈ. ಗೂಗಲ್ ಸಂಸ್ಥೆ ಈಗಾಗಲೇ ಜಗತ್ತಿನ ಮುಂದಿನ ದೊಡ್ಡ ಮತ್ತು ಪ್ರಸಿದ್ಧವಾಗಲಿರುವ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ನ ಪರಿಚಯವನ್ನು ಮಾಡಿದ್ದು ಅದುವೇ ಆಂಡ್ರಾಯ್ಡ್ ಪಿ ಅಥವಾ ಆಂಡ್ರಾಯಡ್ ಪೈ.

ಆಂಡ್ರಾಯ್ಡ್‌ ಪೈ ಒಎಸ್‌ನಲ್ಲಿ ಏನೀವೆ ಹೊಸ ಫೀಚರ್ಸ್‌..!

ಇದು ಈಗಾಗಲೇ ಬಿಡುಗಡೆಯ ಹಾದಿಯಲ್ಲಿದ್ದು ಸದ್ಯ ಪಿಕ್ಸಲ್ ಫೋನ್ ಗಳಲ್ಲಿ ಲಭ್ಯವಿದೆ. ಇತರೆ ಡಿವೈಸ್ ನ ಬಳಕೆದಾರರು ಈ ವರ್ಷಾಂತ್ಯಕ್ಕೆ ಈ ಅಪ್ ಡೇಟ್ ನ್ನು ನಿರೀಕ್ಷೆ ಮಾಡಬಹುದು. ಹಾಗಾದ್ರೆ ಈ ಹೊಸ ಆಪರೇಟಿಂಗ್ ಸಿಸ್ಟಮ್ ನಲ್ಲಿ ಅಂತದ್ದೇನಿದೆ. ಇಲ್ಲಿದೆ ನೋಡಿ ವಿವರಣೆ.

ಆಪಲ್ ಐಫೋನ್ ಎಕ್ಸ್ ನಂತ ನಾಚ್ ಡಿಸ್ಪ್ಲೇ ಗೆ ಬೆಂಬಲ. 

ಆಪಲ್ ಐಫೋನ್ ಎಕ್ಸ್ ನಂತ ನಾಚ್ ಡಿಸ್ಪ್ಲೇ ಗೆ ಬೆಂಬಲ. 

ಹೌದು, ಗೂಗಲ್ ಆಪಲ್ ನ್ನು ಫಾಲೋ ಮಾಡುತ್ತದೆ. ಆಂಡ್ರಾಯ್ಡ್ ಪಿ ಡೆವಲಪರ್ ಪ್ರೀವ್ಯೂ 1 ಡಿಸ್ಪ್ಲೇ ಕಟ್ ಔಟ್ ಬೆಂಬಲದೊಂದಿಗೆ ಬರುತ್ತದೆ. ಡೆಡಿಕೇಟೆಡ್ ಸ್ಪೀಕರ್ ಸ್ಪೇಸ್ ಮತ್ತು ಕ್ಯಾಮರಾಗಳನ್ನು ಒಳಗೊಡಂತೆ ಬರುವ ಫುಲ್ ಸ್ಕ್ರೀನ್ ಸ್ಮಾರ್ಟ್ ಫೋನ್ ಗಳಿಗೆ ಇದು ಬೆಂಬಲ ನೀಡುತ್ತದೆ. ಅದನ್ನು ನಾವು ಹೆಚ್ಚು ಕಡಿಮೆ ಐಫೋನ್ ಎಕ್ಸ್ ನಲ್ಲಿ ಗಮನಿಸಬಹುದಾಗಿದೆ.

ಜೀಮೇಲ್ ನಲ್ಲಿ ಬರುವಂತೆ ಸ್ಮಾರ್ಟ್ ರಿಪ್ಲೈಗಳು ಮೆಸೇಜ್ ನಲ್ಲಿ ಬರುತ್ತದೆ. 

ಜೀಮೇಲ್ ನಲ್ಲಿ ಬರುವಂತೆ ಸ್ಮಾರ್ಟ್ ರಿಪ್ಲೈಗಳು ಮೆಸೇಜ್ ನಲ್ಲಿ ಬರುತ್ತದೆ. 

ಈಗಾಗಲೇ ಗೂಗಲ್ ಜಿಮೇಲ್ ನಲ್ಲಿ ಸ್ಮಾರ್ಟ್ ರಿಪ್ಲೈ ಆಯ್ಕೆಗಳಿವೆ. ಇದು ಆಟೋಮೇಟೆಡ್ ಪ್ರತ್ಯುತ್ತರವಾಗಿದ್ದು ಮೇಲ್ ಮತ್ತು ಚಾಟ್ ಗೆ ಉತ್ತರ ನೀಡಲು ಅನುಕೂಲವಾಗಿರುತ್ತದೆ. ಅದೇ ರೀತಿ ಮೆಸೇಜ್ ಗಳಿಗೆ ರಿಪ್ಲೈ ಮಾಡಲು ಹೊಸ ಓಎಸ್ ನಲ್ಲಿ ಅವಕಾಶವಿರುತ್ತದೆ.

ಮೆಸೇಜ್ ನೋಟಿಫಿಕೇಷನ್ ಗಳಲ್ಲೇ ಇಮೇಜ್ ಗಳನ್ನು ನೋಡಬಹುದು 

ಮೆಸೇಜ್ ನೋಟಿಫಿಕೇಷನ್ ಗಳಲ್ಲೇ ಇಮೇಜ್ ಗಳನ್ನು ನೋಡಬಹುದು 

ಮೆಸೇಜ್ ನೋಟಿಫಿಕೇಷನ್ ಗಳಲ್ಲೇ ಬಳಕೆದಾರರು ಇಮೇಜ್ ಗಳನ್ನು ನೋಡಲು ಅವಕಾಶವಿರುತ್ತದೆ. ನೋಟಿಫಿಕೇಷನ್ ಗಳನ್ನು ಟಾಪ್ ಸ್ಕ್ರೀನ್ ನಿಂದ ಜಸ್ಟ್ ಸ್ಪೈಪ್ ಮಾಡಿದರೆ ಸಾಕಾಗುತ್ತದೆ.

ಏಕವ್ಯಕ್ತಿ ಮತ್ತು ಗುಂಪಿನ ಸಂಭಾಷಣೆಯ ವ್ಯತ್ಯಾಸವನ್ನು ಗುರುತಿಸುವುದಕ್ಕೆ ಬಳಕೆದಾರರಿಗೆ ಸಹಾಯ 

ಏಕವ್ಯಕ್ತಿ ಮತ್ತು ಗುಂಪಿನ ಸಂಭಾಷಣೆಯ ವ್ಯತ್ಯಾಸವನ್ನು ಗುರುತಿಸುವುದಕ್ಕೆ ಬಳಕೆದಾರರಿಗೆ ಸಹಾಯ 

ನೋಟಿಫಿಕೇಷನ್ ನಲ್ಲೇ ಯಾವುದು ಗ್ರೂಪ್ ಮೆಸೇಜ್, ಯಾವುದು ಏಕವ್ಯಕ್ತಿ ಮೆಸೇಜ್ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತದೆ.ಇದು ನೋಟಿಫಿಕೇಷನ್ ನಲ್ಲೇ ಬಳಕೆದಾರರಿಗೆ ಹೆಚ್ಚು ಕ್ಲಾರಿಟಿ ನೀಡಲು ಅನುವು ಮಾಡಿಕೊಡುತ್ತದೆ. ಹೆಚ್ಚುವರಿ ಟ್ಯಾಪ್ ಗಳನ್ನು ಕಡಿತಗೊಳಿಸಲು ಇದು ನೆರವಾಗುತ್ತದೆ.

ಆಪಲ್ ಐಫೋನ್ ನಲ್ಲಿರುವಂತೆ ಟೆಕ್ಸ್ಟ್ ಝೂಮಿಂಗ್ ಟೂಲ್ ಇರುತ್ತದೆ. 

ಆಪಲ್ ಐಫೋನ್ ನಲ್ಲಿರುವಂತೆ ಟೆಕ್ಸ್ಟ್ ಝೂಮಿಂಗ್ ಟೂಲ್ ಇರುತ್ತದೆ. 

ಇದು ಒಂದು ಹಿಡನ್ ವೈಶಿಷ್ಟ್ಯವಾಗಿರುತ್ತದೆ. ಇದನ್ನು ಅಧಿಕೃತ ಬ್ಲಾಗ್ ನಲ್ಲಿ ಬರೆಯಲಾಗಿಲ್ಲ. ನೀವು ಏನನ್ನು ಟೈಪ್ ಮಾಡುತ್ತಿರುತ್ತೀರೋ ಅದರ ಕ್ಲಿಯರ್ ಪಿಕ್ಚರ್ ನ್ನು ನೀಡುವುದಕ್ಕೆ ಇದು ಸಹಾಯ ಮಾಡುತ್ತದೆ.ಈಗಾಗಲೇ ಐಫೋನ್ ಗಳಲ್ಲಿರುವಂತ ತಂತ್ರರಜ್ಞಾನ ಇದಾಗಿದೆ.

ಹೊಸ ವೈ-ಫೈ ಪ್ರೋಟೋಕಾಲ್ ಗೆ ಬೆಂಬಲ 

ಹೊಸ ವೈ-ಫೈ ಪ್ರೋಟೋಕಾಲ್ ಗೆ ಬೆಂಬಲ 

ಆಂಡ್ರಾಯ್ಡ್ IEEE 802.11mc Wi-Fi ಪ್ರೋಟೋಕಾಲ್ ಗೆ ಬೆಂಬಲ ನೀಡುತ್ತದೆ. ಇದನ್ನು Wi-Fi___33 Round-Trip-Time (RTT) ಎಂದು ಕೂಡ ಹೇಳಲಾಗುತ್ತದೆ. ಆಪ್ ನಲ್ಲಿ ಇಂಡೋರ್ ಪೊಸಿಷನಿಂಗ್ ಗಳ ವಿಚಾರದಲ್ಲಿ ಡೆವಲಪರ್ ಗಳಿಗೆ ಇದು ಸಹಾಯಕವಾಗಿದೆ.

ಆಪಲ್ ಐಓಎಸ್ 11 ನಲ್ಲಿರುವಂತೆ ಹೊಸ ಇಮೇಜ್ ಕಂಪ್ರೆಷನ್ ತಂತ್ರಜ್ಞಾನ 

ಆಪಲ್ ಐಓಎಸ್ 11 ನಲ್ಲಿರುವಂತೆ ಹೊಸ ಇಮೇಜ್ ಕಂಪ್ರೆಷನ್ ತಂತ್ರಜ್ಞಾನ 

ಆಂಡ್ರಾಯ್ಡ್ ಪಿ ನಲ್ಲಿ ಹೆಚ್ಚು ಇಮೇಜ್ ಗಳನ್ನು ಸೇವ್ ಮಾಡಿಕೊಳ್ಳಲು ಅವಕಾಶವಿರುತ್ತದೆ. ಅದಕ್ಕೆ ಕಾರಣ ಆಂಡ್ರಾಯ್ಡ್ ಪಿ HEIF (heic) ಇಮೇಜ್ ಎನ್ಕೋಡಿಂಗ್ ಗೆ ಬೆಂಬಲ ನೀಡುತ್ತದೆ. ಆದರೆ ಇದನ್ನು ಆಪಲ್ ಈಗಾಗಲೇ ಅಳವಡಿಸಿಕೊಂಡಿದೆ.

ಥರ್ಟ್ ಪಾರ್ಟಿ ಅಪ್ಲಿಕೇಷನ್ ಗಳಿಗಾಗಿ ಮಲ್ಟಿಮೀಡಿಯಾ ಕ್ಯಾಮರಾ ಬೆಂಬಲ 

ಥರ್ಟ್ ಪಾರ್ಟಿ ಅಪ್ಲಿಕೇಷನ್ ಗಳಿಗಾಗಿ ಮಲ್ಟಿಮೀಡಿಯಾ ಕ್ಯಾಮರಾ ಬೆಂಬಲ 

ಆಂಡ್ರಾಯ್ಡ್ ಪಿ ನಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಗೆ ಹೆಚ್ಚು ಬೆಂಬಲ ಸಿಗುತ್ತದೆ. ಯಾಕೆಂದರೆ ಇತ್ತೀಚಿನ ಎಲ್ಲಾ ಕ್ಯಾಮರಾ ಗಳನ್ನು ಕೂಡ ಡುಯಲ್ ಕ್ಯಾಮರಾ ಸೆಟ್ ಅಪ್ ಇದ್ದೇ ಇರುತ್ತದೆ. ಡೆವಲಪರ್ ಗಳು ತಮ್ಮ ಆಪ್ ಗಳಲ್ಲಿ ಮಲ್ಟಿ ಕ್ಯಾಮರಾ ಬಳಕೆಯನ್ನು ಇನ್ನು ಮುಂದೆ ಉತ್ತೇಜಿಸಿಕೊಳ್ಳಬಹುದು.

ಪಾಸ್ ವರ್ಡ್ ಆಟೋಫಿಲ್ ಗಳಲ್ಲಿ ಅಭಿವೃದ್ಧಿ 

ಪಾಸ್ ವರ್ಡ್ ಆಟೋಫಿಲ್ ಗಳಲ್ಲಿ ಅಭಿವೃದ್ಧಿ 

ಪಾಸ್ ವರ್ಡ್ ಆಟೋಫಿಲ್ ಈಗಾಗಲೇ ಆಂಡ್ರಾಯ್ಡ್ ನಲ್ಲಿ ಇದೆ. ಆದರೆ ಅದು ಆಂಡ್ರಾಯ್ಡ್ ಪಿ ನಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಿರುತ್ತದೆ. ಆನ್ ಲೈನ್ ಫಾರ್ಮ್ ಗಳಲ್ಲಿ ಪಾಸ್ ವರ್ಡ್ ಗಳನ್ನು, ಓಟಿಪಿಗಳನ್ನು ಪ್ರತಿ ಬಾರಿಯೂ ತುಂಬಿಸಬೇಕಾಗಿರುವ ಅಗತ್ಯತೆ ಆಂಡ್ರಾಯ್ಡ್ ಪಿ ನಲ್ಲಿ ಇರುವುದಿಲ್ಲ.

ವರ್ಟಿಕಲ್ ವಾಲ್ಯೂಮ್ ಸ್ಲೈಡರ್ ನೊಂದಿಗೆ ಸೆಟ್ಟಿಂಗ್ಸ್ ಗಳ ರೀಡಿಸೈನ್ 

ವರ್ಟಿಕಲ್ ವಾಲ್ಯೂಮ್ ಸ್ಲೈಡರ್ ನೊಂದಿಗೆ ಸೆಟ್ಟಿಂಗ್ಸ್ ಗಳ ರೀಡಿಸೈನ್ 

ಆಂಡ್ರಾಯ್ಡ್ ಪಿ ನಲ್ಲಿ ಸೆಟ್ಟಿಂಗ್ಸ್ ಪೇಜ್ ನಲ್ಲಿ ಬದಲಾವಣೆಗಳಾಗುತ್ತದೆ.ಬಿಳಿ/ನೀಲಿ ಬಣ್ಣದ ಪ್ಯಾಲೆಟ್ಗಳು ಇನ್ನು ಮುಂದೆ ಮಲ್ಟಿಕಲರ್ ಆಗಿರುತ್ತದೆ. ವಾಲ್ಯೂಮ್ ಸ್ಲೈಡರ್ ಇನ್ನು ಮುಂದೆ ಸ್ಕ್ರೀನ್ ಮೇಲ್ಬಾಗದಲ್ಲಿ ಸಮನಾಂತರವಾಗಿ ಬರುತ್ತಿತ್ತು. ಆದರೆ ಇನ್ನು ಮುಂದೆ ಸ್ಕ್ರೀನಿನ ಬದಿಯಲ್ಲಿ ಲಂಬವಾಗಿ ಬರುತ್ತದೆ.

Best Mobiles in India

English summary
Android Pie: 10 biggest features of Google's next version of Android OS. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+