ಬರಲಿದೆ ಆನ್ಡ್ರೋಯ್ಡ್ ಓ.ಎಸ್ ನ ಸಾಮ್ ಸಂಗ್ ಗ್ಯಾಲಕ್ಸಿ ನೆಕ್ಸಸ್

Posted By: Varun
ಬರಲಿದೆ ಆನ್ಡ್ರೋಯ್ಡ್ ಓ.ಎಸ್ ನ ಸಾಮ್ ಸಂಗ್ ಗ್ಯಾಲಕ್ಸಿ ನೆಕ್ಸಸ್

ಹೌದು. ಆನ್ಡ್ರೋಯ್ಡ್ ಓ.ಎಸ್ 4.0 ಇರುವ ಸಾಮ್ ಸಂಗ್ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ಮಾರ್ಚ್ ವೇಳೆಗೆ ಬರುವ ಸುದ್ದಿ ಬಂದಿದೆ.

ನಿಮಗೆ ಗೊತ್ತಿರುವಂತೆ ಭಾರತದಲ್ಲಿ ಬಿಡುಗಡೆಯಾಗಲಿರುವ ಗೂಗಲ್ ನ ಮೊದಲ ಆನ್ಡ್ರೋಯ್ಡ್ ಓ.ಎಸ್ 4.0ಸ್ಮಾರ್ಟ್ ಫೋನ್ ಇದಾಗಲಿದ್ದು,ಬೇರೆ ಸಾಮ್ ಸಂಗ್ ಮೊಬೈಲ್ ಗಳ ಥರಹ ನೆಕ್ಸಸ್ ಯಾವುದೇ ಬದಲಾವಣೆಗಳಿಲ್ಲದೆ ಬರಲಿದೆ.ಹೊಸ ತಂತ್ರಗಾನವನ್ನ ಹಾಗು ಆವಿಷ್ಕಾರಗಳನ್ನ ಒಳಗೊಂಡಿರುವ ಇದರ ಲಕ್ಷಣಗಳು ಬಳಕೆದಾರರಿಗೆ ಬಹಳಷ್ಟು ಹಿಡಿಸುವುದು ಗ್ಯಾರಂಟಿ. 16 ಮಿಲಿಯನ್ ಬಣ್ಣಗಳ ಡಿಸ್ಪ್ಲೇ AMOLED ಟಚ್ ಸ್ಕ್ರೀನ್, ಫೋನ್ ಅನ್ನು ಮತ್ತಷ್ಟು ರಂಗೇರಿಸಲಿದೆ.

ಇದರ ಇತರಫೀಚರ್ ಗಳು ಈ ರೀತಿ ಇವೆ.

  • ಆನ್ಡ್ರೋಯ್ಡ್ 4.0 ಇರುವ ಓ.ಎಸ್.

  • 4.65 ಇಂಚ್ ಇರುವ ಸ್ಕ್ರೀನ್ ಸೈಜ್.

  • 32 ಜಿ. ಬಿ ಆಂತರಿಕ ಮೆಮೊರಿ.

  • 5 ಮತ್ತು 1.3 ಮೆಗಾ ಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ.
ಇದಲ್ಲದೆ ವೀಡಿಯೊ ರೆಕಾರ್ಡಿಂಗ್ ಸೌಲಭ್ಯವೂ ಇದ್ದು 270 ಗಂಟೆಯಷ್ಟು ಟಾಕ್ ಟೈಮ್ ಕೊಡುವಬ್ಯಾಟರಿ ಹೊಂದಿದೆ.

ಸ್ಮಾರ್ಟ್ ಫೋನ್ ಖರೀದಿ ಮಾಡುವ ಯೋಚನೆ ಇದ್ದರೆ ಮಾರ್ಚ್ ವರೆಗೂ ಕಾದರೆ ನಿಮ್ಮ ಕೈಯಲ್ಲಿಮಿಂಚಲಿದೆ ಸಾಮ್ ಸಂಗ್ ಗ್ಯಾಲಕ್ಸಿ ನೆಕ್ಸಸ್.

Please Wait while comments are loading...
Opinion Poll

Social Counting