ಎಲ್ಲರಿಗೂ ಗೊತ್ತಿರಬೇಕಾದ 5 ಆ್ಯಂಡ್ರಾಯ್ಡ್ ಶಾರ್ಟ್ ಕಟ್ಟುಗಳು.
ಐಫೋನ್ ಮತ್ತು ಇತರೆ ಸಾಧನಗಳ ಬಳಕೆದಾರರ ಸಂಖೈಗಿಂತ ಆ್ಯಂಡ್ರಾಯ್ಡ್ ಉಪಯೋಗಿಸುವವರ ಸಂಖೈ ಅಧಿಕ. ಇದಕ್ಕೆ ಪ್ರಮುಖ ಕಾರಣ ಆ್ಯಂಡ್ರಾಯ್ಡ್ ಸಾಧನಗಳಲ್ಲಿ ಆಯ್ಕೆಗಳು ಹೆಚ್ಚಿವೆ.

ಈಗಂತೂ, ಗೂಗಲ್ ತನ್ನ ಮೊಬೈಲ್ ಬಳಕೆದಾರರಿಗೆ ಅನೇಕ ಹೊಸ ಹೊಸ ಫೀಚರ್ರುಗಳನ್ನು ನೀಡುತ್ತಿದ್ದಾರೆ. ಉದಾಹರಣೆಗೆ ಇತ್ತೀಚಿನ ಆ್ಯಂಡ್ರಾಯ್ಡ್ 7.0 ಎನ್ ಆವೃತ್ತಿಯಲ್ಲಿ ಆ್ಯಂಡ್ರಾಯ್ಡ್ ಅನುಭವವನ್ನು ಮತ್ತೊಂದು ಸ್ತರಕ್ಕೆ ಕೊಂಡೊಯ್ಯುವ ವೈಶಿಷ್ಟ್ಯತೆಗಳಿವೆ.
ಓದಿರಿ: ಯಶಸ್ಸಿನ ಕದದ ಬೋಲ್ಟ್ ತೆರೆಯಲು ಜಿಯೋ ಬಳಸಿದ 'ವೋಲ್ಟ್'
ನೀವು ಆ್ಯಂಡ್ರಾಯ್ಡನ್ನು ಉಪಯೋಗಿಸುತ್ತಿರಬಹುದು ಅಥವಾ ಹೊಸ ಬಳಕೆದಾರರಿಬಹುದು, ನಿಮಗೆ ಆ್ಯಂಡ್ರಾಯ್ಡ್ ನಲ್ಲಿರುವ ಕೆಲವು ಶಾರ್ಟ್ ಕಟ್ಟುಗಳ ಪರಿಚಯ ಇರಲಾರದು. ಈ ಶಾರ್ಟ್ ಕಟ್ಟುಗಳನ್ನು ತಯಾರಕರು ಮತ್ತಷ್ಟು ಉತ್ತಮಗೊಳಿಸಿರುತ್ತಾರೆ. ಇಲ್ಲಿ ನಿಮಗೆ ತಿಳಿದಿರಬೇಕಾದ ಕೆಲವು ಆ್ಯಂಡ್ರಾಯ್ಡ್ ಶಾರ್ಟ್ ಕಟ್ಟುಗಳನ್ನು ನೀಡಿದ್ದೇವೆ. ಒಮ್ಮೆ ಗಮನಹರಿಸಿ.

ಲಾಕ್ ಸ್ಕ್ರೀನನ್ನು ಬೈಪಾಸ್ ಮಾಡಿ.
ಲಾಕ್ ಸ್ಕ್ರೀನ್ ನಿಮ್ಮ ದತ್ತಾಂಶವನ್ನು ರಕ್ಷಿಸುತ್ತದೆ. ಈ ರಕ್ಷಣೆಯನ್ನು ನೀವು ಬೈಪಾಸ್ ಮಾಡಿ ಪಿನ್, ಪ್ಯಾಟರ್ನ್ ಅಥವಾ ಪಾಸ್ ವರ್ಡನ್ನು ಉಪಯೋಗಿಸದೆ ಇರಬಹುದು.

ಕರೆಗಳನ್ನು ಸಂದೇಶಗಳೊಡನೆ ರದ್ದುಗೊಳಿಸಿ.
ನಿಮ್ಮ ಸ್ಮಾರ್ಟ್ ಫೋನ್ ನಿಮ್ಮ ಖಾಸಗಿ ಸೆಕ್ರೆಟರಿಯೂ ಹೌದು! ನೀವು ಯಾಕೆ ಕರೆ ಸ್ವೀಕರಿಸುತ್ತಿಲ್ಲ ಎಂದು ಕರೆ ಮಾಡಿದವರಿಗೆ ತಿಳಿಸಬಹುದು. ಬಹುತೇಕ ಫೋನುಗಳಲ್ಲಿ ಈ ಆಯ್ಕೆಯಿರುತ್ತದೆ. ಇದಕ್ಕೆ ಕಾಲ್ ಬ್ಲಾಕಿಂಗ್, ಕ್ವಿಕ್ ರೆಸ್ಪಾನ್ಸ್ ನಂತಹ ಹೆಸರಿರುತ್ತದೆ. ನಿಮ್ಮ ಅನುಕೂಲತೆಗಳಿಗೆ ತಕ್ಕಂತೆ ಕರೆ ರದ್ದುಗೊಳಿಸುವ ಸಂದೇಶವನ್ನು ಬದಲಿಸಬಹುದು.

ಕ್ಯಾಮೆರವನ್ನು ಥಟ್ಟಂತ ತೆರೆಯಿರಿ.
ಕ್ಯಾಮೆರ ತೆರೆಯುವುದು ತಡವಾಗಿ ಉತ್ತಮ ಚಿತ್ರ ತೆಗೆಯುವ ಸಂದರ್ಭ ಹಾಳಾಗಬಾರದು. ಈ ಕಾರಣಕ್ಕಾಗಿ, ಆ್ಯಂಡ್ರಾಯ್ಡ್ ಫೋನುಗಳಲ್ಲಿ ಥಟ್ಟಂತ ಕ್ಯಾಮೆರ ತೆರೆಯುವ ಆಯ್ಕೆಯಿರುತ್ತದೆ. ಒಂದೊಂದು ಫೋನಿನಲ್ಲಿ ಒಂದೊಂದು ರೀತಿಯಾಗಿ ಇರುತ್ತದೆ.

ಕಾಂಟ್ಯಾಕ್ಟ್ ವಿಡ್ಜೆಟ್ಟನ್ನು ಉಪಯೋಗಿಸಿ.
ನಿಮ್ಮ ನೆಚ್ಚಿನ ಸಂಪರ್ಕವನ್ನು ಕಾಣಲು ವಿಡ್ಜೆಟ್ಟಿನ ಉಪಯೋಗ ಪಡೆದುಕೊಳ್ಳಬಹುದು. ಈ ಶಾರ್ಟ್ ಕಟ್ಟಿನ ಮೇಲೆ ಕ್ಲಿಕ್ಕಿಸುವುದರಿಂದ ಸಂಪರ್ಕದ ವಿವರಗಳು ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಕರೆ, ಸಂದೇಶ ಅಥವಾ ಈ ಮೇಲ್ ಕಳುಹಿಸಬಹುದು.

ಒಕೆ, ಗೂಗಲ್ಲನ್ನು ಚಾಲ್ತಿಯಲ್ಲಿಡಿ.
ಯಾವುದೇ ಪರದೆಯಲ್ಲಿದ್ದಾಗಲೂ ನಿಮ್ಮ ಪ್ರಶ್ನೆಗಳಿಗೆ ಉತ್ತರ ಬೇಕಿದ್ದಲ್ಲಿ 'ಒಕೆ.ಗೂಗಲ್ಲನ್ನು' ಚಾಲ್ತಿಯಲ್ಲಿಡಿ. ಗೂಗಲ್ ಸರ್ಚ್ ತಂತ್ರಾಂಶವನ್ನು ತೆರೆಯಿರಿ - ಸೆಟ್ಟಿಂಗ್ಸ್ ಗೆ ಹೋಗಿ - ವಾಯ್ಸ್ - 'ಒಕೆ ಗೂಗಲ್' - 'ಫ್ರಮ್ ಎನಿ ಸ್ಕ್ರೀನ್' ಆಯ್ಕೆಯನ್ನು ಎನೇಬಲ್ ಮಾಡಿ. ಒಕೆ ಗೂಗಲ್ ಎಂದು ಮೂರು ಸಲ ಹೇಳಿ, ಅಲ್ಲಿಗೆ ಮುಗಿಯಿತು! ಇದರಿಂದಾಗಿ, ಸ್ಕ್ರೀನ್ ಅನ್ ಲಾಕ್ ಮಾಡಲು ವಾಯ್ಸ್ ಆಪ್ಷನ್ ಅನ್ನು ಕೂಡ ಉಪಯೋಗಿಸಬಹುದು.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








