ನಿಮ್ಮ ಬ್ಯಾಂಕಿಂಗ್ ಮಾಹಿತಿಗಳನ್ನು ಕದಿಯುವ ಎರಡು ಆಪ್ ಗಳಿವು
ಎಲ್ಲಾ ಸ್ಮಾರ್ಟ್ ಫೋನ್ ತಯಾರಕರು ಮಾಲ್ವೇರ್ ಮತ್ತು ಸ್ಪೈವೇರ್ ಗಳು ತಮ್ಮ ವಯಕ್ತಿಕ ಡಾಟಾ ಕದಿಯುವಿಕೆಯ ಬಗ್ಗೆ ಹೆದರಿದ್ದಾರೆ. ಆದರೆ ಈ ಮಾಲ್ವೇರ್ ತಯಾರಕರಿಗೆ ನಿದ್ದೆಗೆಡಿಸಿರುವುದೇನೆಂದರೆ ಯಾವುದಾದರೂ ಒಂದು ಮಾರ್ಗದಲ್ಲಿ ಭದ್ರತಾ ಅಧ್ಯಯನಕಾರರು ಇವರನ್ನು ಗುರುತಿಸಿ ಡಿಸೇಬಲ್ ಮಾಡುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ಪ್ರತಿಯೊಂದು ವ್ಯಕ್ತಿಯ ಸ್ಮಾರ್ಟ್ ಫೋನ್ ನಲ್ಲಿ ಇವರನ್ನು ಗುರುತಿಸುವುದಕ್ಕಿಂತ ಸ್ಯಾಂಡ್ ಬಾಕ್ಸ್ ವಾತಾವರಣದಲ್ಲಿ ಇವರನ್ನು ಗುರುತಿಸಿ ಡಿಪ್ಲಾಯ್ ಮಾಡುವುದು ಬಹಳ ಸುಲಭದ ಮಾರ್ಗವಾಗಿದೆ.

ಮಾಲ್ವೇರ್ ಗುರುತಿಸುವಿಕೆ:
ಆದರೆ ಮಾಲ್ವೇರ್ ಗಳು ಡಿಟೆಕ್ಟ್ ಆಗದಂತೆ ಕಾಪಾಡಿಕೊಳ್ಳಲು ಕಳ್ಳಮಾರ್ಗಗಳನ್ನು ಗುರುತಿಸಿಕೊಳ್ಳುತ್ತವೆ ಆದರೆ ಸೆಕ್ಯುರಿಟಿ ರೀಸರ್ಚರ್ ಗಳು ಹೊಸ ರೀತಿಯ ಮಾಲ್ವೇರ್ ಆಪ್ ಗಳನ್ನು ಟ್ರೆಂಡ್ ಮೈಕ್ರೋದಲ್ಲಿ ಕಂಡುಹಿಡಿದಿದ್ದಾರೆ. ಇದು ಸ್ಮಾರ್ಟ್ ಫೋನ್ ಗಳು ಚಲಿಸಿದಾಗ ಪೇಲೋಡ್( ಈ ಕೇಸ್ ನಲ್ಲಿ ಟ್ರಾಸನ್ ಆಗಿದ್ದಾಗ) ಗಳನ್ನು ಡಿಪ್ಲಾಯ್ ಮಾಡುತ್ತದೆ. ಟ್ರೆಂಡ್ ಮೈಕ್ರೋ ವರದಿಯು ಹೇಳುವಂತೆ ಪ್ರಶ್ನೆಯಲ್ಲಿರುವ ಆಪ್ಸ್ ಗಳೆಂದರೆ "ಕರೆನ್ಸಿ ಕನ್ವರ್ಟರ್" ಮತ್ತು "ಬ್ಯಾಟರಿ ಸೇವರ್ ಮೊಬಿ".

ಮೋಷನ್ ಸೆನ್ಸರ್ ಮಾಹಿತಿ:
ಹಾಗಾದ್ರೆ ಸ್ಮಾರ್ಟ್ ಫೋನ್ ಮೂವ್ಮೆಂಟ್ ಮಾಹಿತಿಯು ಹೇಗೆ ಮಾಲ್ವೇರ್ ಗಳಿಗೆ ಸಹಾಯ ಮಾಡುತ್ತದೆ. ಇದು ತುಂಬಾ ಸರಳವಾದದ್ದು. ಯಾರದೇ ಸ್ಮಾರ್ಟ್ ಫೋನ್ ನಿಂದ ಮೋಷನ್ ಸೆನ್ಸರ್ ಮಾಹಿತಿಗಳನ್ನು ಪಡೆಯಲು ಮಾಲ್ವೇರ್ ಗಳಿಗೆ ಒಂದು ವೇಳೆ ಸಾಧ್ಯವಾದರೆ, ರಿಯಲ್ ವ್ಯಕ್ತಿಯ ಸ್ಮಾರ್ಟ್ ಫೋನ್ ನಲ್ಲಿ ಮಾಲ್ವೇರ್ ಗಳು ಇನ್ಸ್ಟಾಲ್ ಆಗಿದೆ ಎಂದರ್ಥ. ಒಂದು ವೇಳೆ ಯಾವುದೇ ಮೋಷನ್ ಸೆನ್ಸರ್ ಮಾಹಿತಿ ಇಲ್ಲದೇ ಇದ್ದಲ್ಲಿ ಆಪ್ ಸ್ಯಾಂಡ್ ಬಾಕ್ಸ್ಡ್ ಆಗಿದೆ ಮತ್ತು ಭದ್ರತಾ ಅಧಿಕಾರಿಗಳು ಅದರ ಪರಿಶೀಲನೆ ಮಾಡಬಹುದು.

ಪೇಲೋಡ್ ಡಿಪ್ಲಾಯ್:
ಒಂದು ವೇಳೆ ಯಾವುದೇ ಮೋಷನ್ ಗುರುತಿಸಲ್ಪಡದೇ ಇದ್ದಲ್ಲಿ ಅಪ್ಲಿಕೇಷನ್ ಗಳು ಸರಳವಾಗಿ ಸುಪ್ತವಾಗಿ ಉಳಿಯುತ್ತದೆ ಉದಾಹರಣೆಗೆ ಡಿಟೆಕ್ಷನ್ ತಪ್ಪಿಸಲು ಕ್ರಮವಾಗಿ ಕರೆನ್ಸಿ ಕನ್ವರ್ಟರ್ ಅಥವಾ ಬ್ಯಾಟರಿ ಸೇವರ್ ಮೊಬಿ.ಆದರೆ ಒಂದು ವೇಳೆ ಮೋಷನ್ ನ್ನು ಈ ಆಪ್ಸ್ ಗಳು ಡಿಟೆಕ್ಟ್ ಮಾಡಿದ್ದಲ್ಲಿ ಇವು ಪೇಲೋಡ್ ಗಳನ್ನು ಸರಳವಾಗಿ ಡಿಪ್ಲಾಯ್ ಮಾಡುತ್ತದೆ.

ಬ್ಯಾಂಕಿಂಗ್ ಮಾಹಿತಿಗೆ ಕನ್ನ:
ಸಿಹಿಸುದ್ದಿ ಏನೆಂದರೆ ಟ್ರಾಝನ್ ಗಳು ತಮ್ಮಷ್ಟಕ್ಕೇ ತಾವೇ ಡಿಪ್ಲಾಯ್ ಆಗುವುದಿಲ್ಲ. ಎರಡೂ ಆಪ್ ಗಳು ವಿಕ್ಟಿಮ್ ಬಳಿ ಆಪ್ ನ ಅಪ್ ಗ್ರೇಡ್ ವರ್ಷನ್ ನ್ನು ಡೌನ್ ಲೋಡ್ ಮಾಡಿಕೊಳ್ಳುವಂತೆ ಕೇಳುತ್ತದೆ ಆದರೆ ನಿಜಕ್ಕೂ ಇದರಲ್ಲಿ ಅನುಬಿಸ್ ಗಳಿರುತ್ತದೆ. ಒಮ್ಮೆ ಫೋನಿನಲ್ಲಿ ಟ್ರೋಝನ್ ಇನ್ಸ್ಟಾಲ್ ಆಗಿಬಿಟ್ಟರೆ ಈ ಆಪ್ ಗಳು ಗುಪ್ತವಾಗಿ ನಿಮ್ಮ ಬ್ಯಾಂಕಿಂಗ್ ಮಾಹಿತಿಗಳನ್ನು ಕದಿಯಲು ಪ್ರಾರಂಭಿಸುತ್ತದೆ. ಕೀಲಾಗರ್ ಗಳನ್ನು ಅನೇಬಲ್ ಮಾಡಲು ಪ್ರಾರಂಭಿಸುತ್ತದೆ. ಕೀಟೈಪ್ ಗಳನ್ನು ಕದಿಯಲು ಪ್ರೋಗ್ರಾಮಿಂಗ್ ಮಾಡಿಕೊಳ್ಳುತ್ತದೆ ಅಷ್ಟೇ ಯಾಕೆ ಕೆಲವು ಸ್ಕ್ರೀನ್ ಶಾಟ್ ಗಳನ್ನು ಕೂಡ ತೆಗೆದುಕೊಳ್ಳಲು ಪ್ರಾರಂಭಿಸಿರುತ್ತದೆ.

ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಕಳ್ಳತನ:
ಹಾಗಾಗಿ ಒಂದು ವೇಳೆ ನೀವು ಕಳ್ಳರ ಸೋಂಕಿಗೆ ಒಳಗಾಗಿರುವ ಫೋನ್ ನಲ್ಲಿ ಬ್ಯಾಂಕಿಂಗ್ ಮಾಹಿತಿಗಳನ್ನು, ಬ್ಯಾಂಕಿಂಗ್ ವೆಬ್ ಸೈಟ್ ಗಳನ್ನು ತೆರೆದರೆ ಅದರ ಸ್ಕ್ರೀನ್ ಶಾಟ್ ಗಳನ್ನು ಇವು ಕದಿಯುತ್ತವೆ, ಆ ಮೂಲಕ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಗಳನ್ನು ಪಡೆಯಲು ಪ್ರಯತ್ನಿಸುತ್ತದೆ ಮತ್ತು ಮಾಲ್ವೇರ್ ಗಳ ಕಮಾಂಡ್ ಸೆಂಟರ್ ಗೆ ಕಳುಹಿಸುತ್ತದೆ. ಆ ಮೂಲಕ ನಿಮ್ಮ ಬ್ಯಾಂಕಿಂಗ್ ಖಾತೆಗೆ ಕನ್ನ ಬೀಳುವ ಸಾಧ್ಯತೆ ಇದೆ.

ಹ್ಯಾಕಿಂಗ್ ತಂತ್ರಗಾರಿಕೆ:
ಮಾಲ್ವೇರ್ ಗಳು ಕಾಂಟ್ಯಾಕ್ಟ್ ಲಿಸ್ಟ್, ಲೊಕೇಷನ್ ಡಾಟಾ ಮತ್ತು ಆಡಿಯೋವನ್ನು ಕೂಡ ಗುಪ್ತವಾಗಿ ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇವು ನಿಮಗೆ ಗೊತ್ತಿಲ್ಲದಂತೆ ಕರೆಗಳನ್ನು ಮಾಡಬಹುದು ಅಥವಾ ಎಸ್ಎಂಎಸ್ ಗಳನ್ನು ಕಳುಹಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿ ಈ ಮಾಲ್ವೇರ್ ಗಳು ಒಬ್ಬರ ಕಾಂಟ್ಯಾಕ್ಟ್ ಲಿಸ್ಟ್ ನಿಂದ ಮತ್ತೊಂದು ಡಿವೈಸ್ ನ್ನು ಹ್ಯಾಕ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿರುತ್ತದೆ.


Click it and Unblock the Notifications








