ಮೊಬೈಲ್ ನಲ್ಲಿ ಹತ್ತಿರದ ಶೌಚಾಲಯ ಹುಡುಕಲು ತಂತ್ರಾಂಶ

Posted By: Varun
ಮೊಬೈಲ್ ನಲ್ಲಿ ಹತ್ತಿರದ ಶೌಚಾಲಯ ಹುಡುಕಲು ತಂತ್ರಾಂಶ

ವಿಜ್ಞಾನ ಭವನದಲ್ಲಿ ನೆನ್ನೆ ನಡೆದ ಕುಡಿಯುವ ನೀರು ಹಾಗು ಶೌಚಾಲಯದ ಬಗೆಗಿನ ಚರ್ಚೆ ಯಲ್ಲಿ, ಸರ್ಕಾರಕ್ಕೆ ಸಹಾಯ ಮಾಡುವ ಇಂತಹ "ಆಪ್" ಗಳ ಪ್ರದರ್ಶನ ನಡೆಯಿತು.

6 ಜನರ ಸಾಫ್ಟ್ ವೇರ್ ನಿಪುಣರ ತಂಡವೊಂದು, ಸರ್ಕಾರವು ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಹಾಗು ಜನರಿಗೆ ತಲುಪಿಸಲು ಈ "ಆಪ್" ಗಳುಹೇಗೆ ಸಹಾಯಕವಾಗಲಿದೆಯೆಂದು ತೋರಿಸಿಕೊಟ್ಟಿತು. ಪೀಕ್ ಯೂ ಎಂಬ ತಂಡವೊಂದು ತನ್ನ ಆಪ್ ನ ಮೂಲಕ, ಮೊಬೈಲ್ ನಲ್ಲಿ ಹತ್ತಿರವೇ ಇರುವ ಶೌಚಾಲಯ ಹುಡುಕುವುದು ಹೇಗೆಂದು ತೋರಿಸಿಕೊಟ್ಟಿತು.

ಕಡಿಮೆ ಬಜೆಟ್ ನ ಆಂಡ್ರಾಯ್ಡ ಫೋನ್ ಉಪಯೋಗಿಸಿಕೊಂಡು ಸರಕಾರವೇ ಈ ತಂತ್ರಾಂಶಗಳನ್ನು ಖರೀದಿಸಿ ಆನ್ಲೈನ್ ಅಂಗಡಿಯ ಮೂಲಕ ಮತ್ತಷ್ಟು ಸೇವೆ ಒದಗಿಸುವ ಚಿಂತನೆಯಲ್ಲಿದೆಯಂತೆ.

ಸರ್ಕಾರ ಹಾಗು ತಂತ್ರಜ್ಞರ ಸಮ್ಮಿಲನದಿಂದಾಗಿ ನಾಗರೀಕರಿಗೆ ಸಹಾಯವಾಗಿರುವ ತಂತ್ರಂಶಗಳು ಬಂದರೆ ಸರಕಾರೀ ಯೋಜನೆಗಳು ಹೆಚ್ಚು ಸಾರ್ಥಕವಾದೀತು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot