ಬೆಂಗಳೂರಿನ ಮೇಲೆ ಮತ್ತೊಮ್ಮೆ ಪ್ರೀತಿ ತೋರಿಸಿದ ಆಪಲ್..!

|

ಭಾರತೀಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಐಫೋನ್ ಮಾರಾಟ ಮಾಡಬೇಕು ಎನ್ನುವ ಕಾರಣಕ್ಕಾಗಿ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಬೆಂಗಳೂರಿನಲ್ಲಿ ತನ್ನ ತಯಾರಿಕಾ ಘಟಕವನ್ನು ಆರಂಭಿಸಿದ್ದ ಆಪಲ್, ಇದುವರೆಗೂ ಇಲ್ಲಿ ಕೇವಲ ಒಂದು ಐಫೋನ್ ಅನ್ನು ಮಾತ್ರವೇ ನಿರ್ಮಾಣ ಮಾಡುತಿತ್ತು. ಆದರೆ ಇನ್ನು ಮುಂದೇ ಭಾರತದಲ್ಲಿಯೇ ಇನ್ನೊಂದು ಬೇಡಿಕೆಯ ಐಫೋನ್ ಅನ್ನು ನಿರ್ಮಿಸುವ ಯೋಜನೆಯನ್ನು ರೂಪಿಸಿದೆ. ಇದಕ್ಕಾಗಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಂಡಿದೆ.

ಬೆಂಗಳೂರಿನ ಮೇಲೆ ಮತ್ತೊಮ್ಮೆ ಪ್ರೀತಿ ತೋರಿಸಿದ ಆಪಲ್..!

ಈಗಾಗಲೇ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಐಫೋನ್ 6s ಪ್ಲಸ್ ಅನ್ನು ಬೆಂಗಳೂರಿನ ಘಟಕದಲ್ಲಿ ನಿರ್ಮಾಣ ಮಾಡಲು ಪ್ರಾಯೋಗಿಕ ಪರೀಕ್ಷೆಯನ್ನು ಇನ್ನು ಎರಡು ದಿನಗಳಲ್ಲಿ ಆರಂಭಿಸಲಿದ್ದು, ಇದಾದ ನಂತರದಲ್ಲಿ ಪೂರ್ಣ ಪ್ರಮಾಣದಲ್ಲಿ ಐಫೋನ್ 6s ಪ್ಲಸ್ ಅನ್ನು ಭಾರತದಲ್ಲಿಯೇ ನಿರ್ಮಾಣ ಚಾಲನೆ ನೀಡಲಿದೆ ಎನ್ನಲಾಗಿದೆ.

ಇದರಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ 6s ಪ್ಲಸ್ ಬೆಲೆಯಲ್ಲಿ ಇಳಿಕೆಯಾಗಲಿದ್ದು, ಕಡಿಮೆ ಬೆಲೆಗೆ ಐಫೋನ್ ಖರೀದಿಸಬೇಕು ಎನ್ನುವ ಭಾರತೀಯರ ಬೇಡಿಕೆಯೂ ಇಡೇರಲಿದೆ ಎನ್ನಲಾಗಿದೆ. ಈಗಾಗಲೇ ಐಫೋನ್ SE ಬೆಂಗಳೂರಿನಲ್ಲಿಯೇ ನಿರ್ಮಾಣವಾಗುತ್ತಿದ್ದು, ಇತರೇ ಐಪೋನಿಗಿಂತ ಕಡಿಮೆ ಬೆಲೆಗೆ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಮತ್ತೊಂದು ಐಫೋನ್ ನಿರ್ಮಾಣವನ್ನು ಇಲ್ಲಿಯೇ ಆರಂಭಿಸಲಿದೆ.

ಬೆಂಗಳೂರಿನ ಮೇಲೆ ಮತ್ತೊಮ್ಮೆ ಪ್ರೀತಿ ತೋರಿಸಿದ ಆಪಲ್..!

ಭಾರತದಲ್ಲಿಯೇ ಐಫೋನ್ ನಿರ್ಮಿಸುವುದರಿಂದ ಆಪಲ್ ಆಮದು ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಅದರನ್ನು ಕಡಿಮೆ ಮಾಡವದರಿಂದ ಐಫೋನ್ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವನ್ನು ಕಾಣಬಹುದಾಗಿದೆ. ಇದರಿಂದಾಗಿ ಆಪಲ್ ಕಡಿಮೆ ಬೆಲೆಗೆ ಐಫೋನ್ ಮಾರಾಟ ಮಾಡುವ ಮೂಲಕ ಅತೀ ಹೆಚ್ಚಿನ ಜನರನ್ನು ತಲುಪಬಹುದಾಗಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?

ಈಗಾಗಲೇ ಮಾರುಕಟ್ಟೆಯಲ್ಲಿ ಆಪಲ್ ಹೆಚ್ಚಿನ ಸದ್ದು ಮಾಡುತ್ತಿದೆ. ಇದಕ್ಕಾಗಿಯೇ ಐಫೋನ್ X ES ಯನ್ನು ಮಾರುಕಟ್ಟೆಗೆ ಪರಿಚಯ ಮಾಡಲು ಮುಂದಾಗಿದೆ. ಇದು ಸಹ ಹೆಚ್ಚಿನ ಪ್ರಮಾಣದ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಲಿದೆ ಎನ್ನಲಾಗಿದ್ದು, ಮಾರುಕಟ್ಟೆಯಲ್ಲಿ ಮತ್ತೊಮ್ಮೆ ಆಪಲ್ ಜಾದೂ ನಡೆಯುವ ಸಾಧ್ಯತೆ ಇದೆ.

Best Mobiles in India

English summary
Apple could start making iPhone 6s Plus. to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X