ಆಪಲ್ ಐಫೋನಿಗೆ ಒಮ್ಮೆಗೆ ಏರ್‌ಟೆಲ್-ಜಿಯೋ ಸಿಮ್ ಒಟ್ಟಿಗೆ...!
ಚಿಂತೆ ಬಿಡಿ ಇನ್ನು ಮುಂದೆ ಆಪಲ್‌ನಲ್ಲಿಯೂ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವು ದೊರೆಯಲಿದೆ. ಇಲ್ಲಿಯವರೆಗೆ ಸಿಂಗಲ್ ಸಿಮ್ ಐಫೋನ್ ಗಳನ್ನು ಮಾತ್ರವೇ ಬಿಡುಗಡೆ ಮಾಡುತ್ತಿದ್ದ ಆಪಲ್ ಕಂಪನಿ ಇನ್ನು ಮುಂದೆ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಇದಕ್ಕಾಗಿಯೇ ಹೊಸ ಮಾದರಿಯಲ್ಲಿ iOS 12 ಅನ್ನು ಬಿಡುಗಡೆ ಮಾಡಲಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ iOS 11 ಅನ್ನು ಬಿಡುಗಡೆ ಮಾಡಿದ್ದು, ಬಳಕೆದಾರರಿಗೆ ಸಾಕಷ್ಟು ಹೊಸ ಆಯ್ಕೆಗಳನ್ನು ನೀಡಿತ್ತು. ಇದೇ ಮಾದರಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ iOS 12ನಲ್ಲಿ ಬಹುದಿನಗಳ ಬೇಡಿಕೆಯಾದ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ.

ಸೆಕೆಂಡ್ ಸಿಮ್ ಸ್ಲಾಟ್:
ಈಗಾಗಲೇ iOS 12 ನಿರ್ಮಾಣದಲ್ಲಿರುವ ಆಪಲ್, ಐದನೇ ಡೆವಲಪರ್ ಬೀಟಾದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಹೊಸ ಫೀಚರ್ ಗಳನ್ನು ಆಡ್ ಮಾಡಿಲಾಗಿದೆ. ಇದರಲ್ಲಿ ಪ್ರಮುಖವಾಗಿ ಸಿಮ್ ಸ್ಟೇಟಸ್ ಮತ್ತು ಸೆಕೆಂಡ್ ಸಿಮ್ ಸ್ಲಾಟ್ ಆಯ್ಕೆಯನ್ನು ನೀಡಲು ಮುಂದಾಗಿದೆ.

ಸೆಪ್ಟೆಂಬರ್ ನಲ್ಲಿ ಲಾಂಚ್:
ಈ ವರ್ಷದ ಸೆಪ್ಟೆಂಬರ್ ನಲ್ಲಿ ಹೊಸದಾಗಿ ಆಪಲ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದ್ದು, ಇದೇ ಮೊದಲ ಬಾರಿಗೆ ಆಪಲ್ 6.5 ಇಂಚಿನ ಡ್ಯುಯಲ್ ಸಿಮ್ ಐಫೋನ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಲಿದೆ. ಇದರೊಂದಿಗೆ ಮೊದಲ ಬಾರಿಗೆ ಆಪಲ್ ಡ್ಯುಯಲ್ ಸಿಮ್ ಐಫೋನ್ ಅನ್ನು ಲಾಂಚ್ ಮಾಡುತ್ತಿದೆ. ಇದು ಆಪಲ್ ಅಭಿಮಾನಿಗಳಿಗೆ ಇದು ಸಿಹಿ ಸುದ್ದಿಯಾಗಲಿದೆ.

ಬೇಡಿಕೆ ಹೆಚ್ಚು:
ವಿಶ್ವ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿರುವ ಚೀನಾ ಮತ್ತು ಭಾರತದಲ್ಲಿ ಡ್ಯುಯಲ್ ಸಿಮ್ ಬೇಡಿಕೆಯೂ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ತನ್ನ ನಿಯಮಕ್ಕೆ ವಿರುದ್ಧವಾಗಿ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಡ್ಯುಯಲ್ ಸಿಮ್ ಐಫೋನ್ ಅನ್ನು ಲಾಂಚ್ ಮಾಡುತ್ತಿದೆ.

ಆಂಡ್ರಾಯ್ಡ್ ಫೋನ್‌ಗಳಿಗೆ ಸೆಡ್ಡು:
ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್‌ಗಳು ಹೆಚ್ಚಿನ ಪಾಲನ್ನು ಹೊಂದಿವೆ ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಫೋನ್‌ಗಳಿಗೆ ಸ್ಪರ್ಧೆ ನೀಡಲು ಈಗ ಆಪಲ್ ಡ್ಯುಯಲ್ ಸಿಮ್ ಐಪೋನ್ ಅನ್ನು ಲಾಂಚ್ ಮಾಡಲಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ಆಪಲ್ ಬೇಡಿಕೆಯನ್ನು ಹೆಚ್ಚು ಮಾಡಲಿದೆ.

ಆಪಲ್‌ನಲ್ಲಿ ಮಾತ್ರವೇ ಇಲ್ಲ:
ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಂಪನಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಡ್ಯುಯಲ್ ಸಿಮ್ ಅನ್ನು ಕಾಣಬಹುದಾಗಿದೆ. ಆದರೆ ಆಪಲ್ ನಲ್ಲಿ ಮಾತ್ರವೇ ಡ್ಯುಯಲ್ ಸಿಮ್ ಅನ್ನು ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿಲ್ಲ. ಆದರೆ ಇನ್ನು ಮುಂದೆ ಡ್ಯುಯಲ್ ಸಿಮ್ ಹಾಕಿಕೊಳ್ಳುವ ಅವಕಾಶವನ್ನು ಮಾಡಿಕೊಡಲಿದೆ.


Click it and Unblock the Notifications






