ಬಿಡುಗಡೆಗೆ ಸಿದ್ಧವಾಗಿರುವ ಆಪಲ್ ಗ್ರಾಂಡ್ ಸೆಂಟ್ರಲ್ ಸ್ಟೋರ್

Posted By:
ಬಿಡುಗಡೆಗೆ ಸಿದ್ಧವಾಗಿರುವ ಆಪಲ್ ಗ್ರಾಂಡ್ ಸೆಂಟ್ರಲ್ ಸ್ಟೋರ್

ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದಿಸುವ ಕಂಪನಿಯಲ್ಲಿ ಅತಿ ಹೆಚ್ಚು ಪ್ರಸಿದ್ಧಿಯನ್ನು ಪಡೆದಂತಹ ಕಂಪನಿಯೆಂದರೆ ಆಪಲ್. ಆಪಲ್ ಕಂಪನಿ ಏನೂ ಮಾಡಿದರೂ ಸುದ್ಧಿಯೆ. ಅದರ ವಸ್ತುಗಳ ಗುಣಮಟ್ಟ ಅದನ್ನು ಆ ಸ್ಥಾನಕ್ಕೇರಿಸಿದೆ. ಆಪಲ್ ಮಾರುಕಟ್ಟೆ ದಿನದಿಂದ ದಿಇನಕ್ಕೆ ಹೆಚ್ಚಾಗಿತ್ತಿದ್ದು, ಅದನ್ಉ ಮತ್ತಷ್ಟು ವಿಸ್ತರಿಸಲು ಆಪಲ್ ಇದೀಗ 'ಗ್ರಾಂಡ್ ಸೆಂಟ್ರಲ್ ' ನಲ್ಲಿ ಅದ್ಧೂರಿಯ ಸ್ಟೋರ್ ಡಿಸೆಂಬರ್ 9 ರಂದು ಪ್ರಾರಂಭಿಸಲಿದೆ ಎಂದು ನ್ಯೂಯಾರ್ಕ್ ಪೋಸ್ಟ್ ರಿಪೋರ್ಟ್ ತಿಳಿಸಿದೆ.

ಈ ಸ್ಟೋರ್ ಮುಂದಿನ ವಾರಾಂತ್ಯದಲ್ಲಿ ಪ್ರಾರಂಭವಾಗಲಿದ್ದು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಸ್ಥಾನವನ್ನು ಮತ್ತಷ್ಟು ವಿಸ್ತರಿಸಲಿದೆ. ಈ ಸ್ಟೋರ್ ಅಮೆರಿಕದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಸೆಂಟ್ರಲ್ ನಲ್ಲಿ ಪ್ರಾರಂಬಿಸಲಾಗುತ್ತಿದ್ದು ಇಲ್ಲಿ ಸ್ಥಳಕ್ಕೆ ಒಂದು ಚದರ ಅಡಿಗೆ ಡಾಲರ್ 200ರಷ್ಟು ಬೆಲೆಯಿದ್ದು, ಈ ಆಪಲ್ ಸ್ಟೋರ್ ಗಾಗಿ ಒಂದು ಚದರ ಅಡಿಗೆ 60 ಡಾಲರ್ ಗೆ ಲಭಿಸಿದೆ. ಆದರೆ ಆಪಲ್ ಆ ಜಾಗದಲ್ಲಿ ಮೊದಲಿದ್ದವರನ್ನು ಅದನ್ನು ಬಿಟ್ಟು ಕೊಡುವಂತೆ ಮಾಡಲು 5 ಮಿಲಿಯನ್ ಡಾಲರ್ ವೆಚ್ಚ ಮಾಡಿದೆ.ಈ ಸ್ಟೋರ್ ನ ರಕ್ಷಣೆಗಾಗಿ ಈಗಾಗಲೆ ಪೊಲೀಸ್ ನಾಯಿಗಳ ಕಾವಲನ್ನು ಸಹ ಒದಗಿಸದೆ.

ಈ ಸ್ಟೋರ್ ನಿಂದ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿ, ನೂರು ಮಿಲಿಯನ್ ಡಾಲರ್ ಗಿಂತ ಹೆಚ್ಚಿನ ವ್ಯಾಪಾರವನ್ನು ಗಳಿಸುವ ನಿರೀಕ್ಷೆಯನ್ನು ಇಟ್ಟುಕೊಂಡಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot