ಬಳಕೆದಾರರ ಕೋಪಕ್ಕೆ ತುತ್ತಾಗಿರುವ ಐಫೋನ್ 4S

|
ಬಳಕೆದಾರರ ಕೋಪಕ್ಕೆ ತುತ್ತಾಗಿರುವ ಐಫೋನ್ 4S

ಗ್ರಾಹಕರ ದೂರುಗಳಿಗೆ ಐಪೋನ್ ಸ್ಪಂದಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಐಫೋನ್ 4S 2011 ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಗ್ರಾಹಕರು ಕೂಡ ಹೆಚ್ಚಾಗಿ ಆಕರ್ಷಿತರಾಗಿದ್ದರು. ಆದರೆ ಇದರಲ್ಲಿರುವ ಲೋಪದೋಷಗಳು ಬಳಕೆದಾರರಿಗೆ ಕಿರಿಕಿರಿಯನ್ನು ಉಂಟು ಮಾಡಿದೆ. ಇದರ ಬಗ್ಗೆ ಅನೇಕರು ದೂರನ್ನು ಕೊಟ್ಟಿದ್ದರೂ ಕಂಪನಿ ಯಾವುದೇ ನಡುವಳಿಕೆಯನ್ನು ತೆಗೆದುಕೊಳ್ಳದಿರುವುದು ಐಫೋನ್ ಬಳಕೆದಾರರಿಗೆ ಮತ್ತಷ್ಟು ಕಿರಿಕಿರಿಯನ್ನು ಉಂಟು ಮಾಡಿದೆ.

ಐಪೋನ್ ಬಳಕೆದಾರರಿಗೆ ಮುಖ್ಯವಾಗಿ ಕಂಡುಬರುವ ಸಮಸ್ಯೆ ಅಂದರೆ ಕೆಲವು ಕರೆಗಳಲ್ಲಿ ಕರೆ ಮಾಡಿದವರಿಗೆ ಆ ಕಡೆಯಿಂದ ಏನೂ ಶಬ್ದ ಕೇಳಿಸುವುದಿಲ್ಲ, ಆದರೆ ಕರೆ ಸ್ವೀಕರಿಸಿದವರಿಗೆ ಕರೆ ಮಾಡಿದವರ ಶಬ್ದ ಸರಿಯಾಗಿ ಕೇಳಿಸುತ್ತದೆ. ಈ ಒಂದು ಸಮಸ್ಯೆ ಐಫೋನ್ ಬಳಕೆದಾರರಿಗೆ ತಲೆನೋವನ್ನು ತಂದಿದೆ.

ಇದುವರೆಗೆ 108 ಪುಟದಷ್ಟು ದೂರುಗಳು ಐಫೋನ್ ನ ಈ ಸಮಸ್ಯೆಯ ಬಗ್ಗೆ ದೂರುಗಳು ದಾಖಲಾಗಿದ್ದರೂ ಕಂಪನಿ ಅದರತ್ತ ನಿರ್ಲಕ್ಷ್ಯ ತೋರಿದೆ.ಆಪಲ್ ಇದರ ಬಗ್ಗೆ ಸ್ಪಂದಿಸದಿದ್ದರೆ ಕಂಪನಿಯ ಮೇಲೆ ಬಳಕೆದಾರರ ವಿಶ್ವಾಸ ಕುಂದುತ್ತದೆ. ಆದ್ದರಿಂದ ಆಪಲ್ ಇದರತ್ತ ಗಮನ ಹರಿಸಿದರೆ ಒಳ್ಳೆಯದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X