ಆಪಲ್ iOS 12 ಲಾಂಚ್...ಐಫೋನ್ ಮತ್ತು ಐಪ್ಯಾಡ್ ಗಳು ಬದಲಾಗುತ್ತೆ..ಸಿದ್ಧರಾಗಿ..!

|

ಆಪಲ್ ಸಂಸ್ಥೆಯು ಹೊಸ Ios ಆಪರೇಟಿಂಗ್ ಸಿಸ್ಟಮ್ ಅನ್ನು ಪರಿಚಯಿಸುತ್ತಿದೆ. ಈ ವರ್ಷದ ಅಂದರೆ 2018 ರ WWDC ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ iOS 12 ನ್ನು ಪರಿಚಯಿಸಿದೆ.ಈಗಾಗಲೇ ಸಂಸ್ಥೆಯು ಇದರ ವೈಶಿಷ್ಟ್ಯತೆಗಳ ಬಗ್ಗೆ ಮಾಹಿತಿ ನೀಡಿದ್ದು ಈಗಿನ ಕೆಲವು ಐಫೋನ್ ಮತ್ತು ಐಪ್ಯಾಡ್ ಗಳು iOS 12 ಗೆ ಅಪ್ ಡೇಟ್ ಆಗಲಿವೆ.

ಆಪಲ್ iOS 12 ಲಾಂಚ್...ಐಫೋನ್ ಮತ್ತು ಐಪ್ಯಾಡ್ ಗಳು ಬದಲಾಗುತ್ತೆ..ಸಿದ್ಧರಾಗಿ..!

ಹಾಗಾದ್ರೆ ಯಾವೆಲ್ಲ ಡಿವೈಸ್ ಗಳು iOS 12 ಗೆ ಅಪ್ ಡೇಟ್ ಆಗಲಿವೆ ಎಂಬುದನ್ನು ಆಪಲ್ ಸಂಸ್ಥೆ ಬಹಿರಂಗ ಪಡಿಸಿದೆ. iOS 11 ರಲ್ಲಿ ಸದ್ಯ ರನ್ ಆಗುತ್ತಿರುವ ಹಲವು ಐಫೋನ್ ಮತ್ತು ಐಪ್ಯಾಡ್ ಮಾಡೆಲ್ ಗಳು iOS 12 ಗೆ ಅಪ್ ಡೇಟ್ ಆಗಲಿವೆ. ಅವುಗಳ ಫೋಟೋಲಿಸ್ಟ್ ಪಟ್ಟಿ ಇಲ್ಲಿದೆ ನೋಡಿ.

ಶಿಯೋಮಿ ರೆಡ್ ಮಿ ವೈ 2 ಲಾಂಚ್...9,999 ರೂ.ಗೆ ಇದಕ್ಕಿಂತ ಬೇರೆ ಮೊಬೈಲ್ ಇಲ್ಲ..!ಶಿಯೋಮಿ ರೆಡ್ ಮಿ ವೈ 2 ಲಾಂಚ್...9,999 ರೂ.ಗೆ ಇದಕ್ಕಿಂತ ಬೇರೆ ಮೊಬೈಲ್ ಇಲ್ಲ..!

1.ಐಫೋನ್ ಎಕ್ಸ್

1.ಐಫೋನ್ ಎಕ್ಸ್

ವಾರ್ಷಿಕೋರ್ಷವದ ಎಡಿಷನ್ ಆಗಿರುವ ಐಫೋನ್ ಎಕ್ಸ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಂಡಿತ್ತು ಇದರ ಜೊತೆಗೆ ಐಫೋನ್ 8 ಮತ್ತು ಐಫೋನ್ 8 ಪ್ಲಸ್ ಕೂಡ ಬಿಡುಗಡೆಯಾಗಿತ್ತು. ಇದು ಇರುವುದರಲ್ಲೇ ಹೆಚ್ಚು ದುಬಾರಿಯಾಗಿರುವ ಐಫೋನ್ ಮತ್ತು ಇದು 5.8- ಇಂಚಿನ OLED ಡಿಸ್ಪ್ಲೇ ಹೊಂದಿದೆ. ಇದು ಮುಖಚರ್ಯೆ ಗುರುತಿಸುವ ತಂತ್ರಜ್ಞಾನವನ್ನೂ ಹೊಂದಿರುವ ಐಫೋನ್ ಆಗಿದ್ದು ಸದ್ಯ iOS 11 ರಲ್ಲಿ ರನ್ ಆಗುತ್ತಿದ್ದು, ಇನ್ನು ಕೆಲವೇ ದಿನದಲ್ಲಿ iOS 12 ಗೆ ಅಪ್ ಡೇಟ್ ಆಗಲಿದೆ.

2. ಐಫೋನ್ 8 ಪ್ಲಸ್

2. ಐಫೋನ್ 8 ಪ್ಲಸ್

ಐಫೋನ್ 8 ಜೊತೆಗೆ ಕಳೆದ ಐಫೋನ್ 8 ಪ್ಲಸ್ ಕೂಡ ಬಿಡುಗಡೆಗೊಂಡಿತ್ತು. ಎರಡು 12 ಎಂಪಿ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿದ್ದು, ಗಾಜಿನ ಬಾಡಿಯನ್ನು ಹೊಂದಿರುತ್ತೆ ಮತ್ತು ವಯರ್ ಲೆಸ್ ಚಾರ್ಜಿಂಗ್ ಸಪೋರ್ಟ್ ಇದರಲ್ಲಿರುತ್ತೆ.

3.ಐಫೋನ್ 8

3.ಐಫೋನ್ 8

ಕಳೆದ ವರ್ಷ ಆಪಲ್ ಸಂಸ್ಥೆ ಮೂರು ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿತ್ತು. ಆದರಲ್ಲಿ ಒಂದು ಐಫೋನ್ 8. ಇದು iOS 11 out-of-the-box ನ್ನು ಹೊಂದಿದೆ ಮತ್ತು ಈಗ iOS 12 ಗೆ ಇದೂ ಕೂಡ ಅಪ್ ಡೇಟ್ ಆಗಲಿದೆ. ಐಪೋನ್ 8 ರ ಮುಖಾಂತರ ವಯರ್ ಲೆಸ್ ಚಾರ್ಚಿಂಗ್ ವೈಶಿಷ್ಟ್ಯತೆಯನ್ನು ಐಫೋನ್ ಪರಿಚಯಿಸಿದ್ದು. A11 Bionic chipset ನ್ನು ಇದು ಹೊಂದಿದ್ದು, ಹೆಚ್ಚು ಪವರ್ ಎಫೀಷಿಯಂಟ್ ಆಗಿದೆ ಮತ್ತು ಹಿಂದಿನ ಪ್ರೊಸೆಸರ್ ಗಳಿಗೆ ಹೋಲಿಸಿದ್ರೆ ಬಹಳ ಉತ್ತಮವಾಗಿತ್ತು.

4. ಐಫೋನ್ 7 ಪ್ಲಸ್

4. ಐಫೋನ್ 7 ಪ್ಲಸ್

ಸೆಪ್ಟೆಂಬರ್ 2016 ರಲ್ಲಿ ಬಿಡುಗಡೆಯಾಗಿದೆ. ಇದು ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹೊಂದಿರುವ ಮೊದಲ ಐಫೋನ್ ಆಗಿತ್ತು. ಇದು ಇಮೇಜ್ ಸಿಗ್ನಲ್ ಪ್ರೊಸೆಸರ್ ನ್ನು ಬಳಸಿ ವಸ್ತು ಮತ್ತು ಮನುಷ್ಯನ ಗುರುತನ್ನು ಫೋಟೋದಲ್ಲಿ ಗುರುತಿಸುವ ಸಾಮರ್ಥ್ಯವನ್ನು ಹೊಂದಿತ್ತು. ಅದರ ಅನುಸಾರ ಬ್ರೈಟ್ ನೆಸ್ ಮತ್ತು ಶಬ್ದವನ್ನು ಹೊಂದಿಸಲು ಅನುಕೂಲಕರವಾಗಿತ್ತು.

5. ಐಫೋನ್ 7

5. ಐಫೋನ್ 7

ಐಫೋನ್ 7 ಪ್ಲಸ್ ಜೊತೆಗೆ 2016ರಲ್ಲಿ ಬಿಡುಗಡೆಗೊಂಡ ಮತ್ತೊಂದು ಫೋನ್ ಎಂದರೆ ಅದು ಐಫೋನ್ 7. ಐಫೋನ್ 7 ನ ಪ್ರಮುಖ ವೈಶಿಷ್ಟ್ಯತೆಯಂದರೆ 4.7 ಇಂಚಿನ ರೆಟಿನಾ HD ಡಿಸ್ಪ್ಲೇ. ಇದು 12 ಎಂಪಿ ಹಿಂಭಾಗದ ಕ್ಯಾಮರಾ ಮತ್ತು 7 ಎಂಪಿ ಫೇಸ್ ಟೈಮ್ ಕ್ಯಾಮರಾವನ್ನು ಒಳಗೊಂಡಿತ್ತು. ಇಷ್ಟರವರೆಗೆ IOS 11 ರಲ್ಲಿ ರನ್ ಆಗುತ್ತಿದ್ದ ಇದು ಇನ್ನು ಮುಂದೆ IOS 12 ಕ್ಕೆ ಅಪ್ ಡೇಟ್ ಆಗಲಿದೆ.

6. ಐಫೋನ್ 6 ಎಸ್

6. ಐಫೋನ್ 6 ಎಸ್

2015 ರಲ್ಲಿ ಐಫೋನ್ 6ಎಸ್ ಬಿಡುಗಡೆಗೊಂಡಿದ್ದು ಐಫೋನ್ 6 ನಂತೆಯೇ ಎಲ್ಲಾ ಫೀಚರ್ ಗಳನ್ನು ಹೊಂದಿದೆ. IOS 9 ರಲ್ಲಿ ಇದು ರನ್ ಆಗುತ್ತಿದ್ದು, 3ಡಿ ಟಚ್ ಟೆಕ್ನಾಲಜಿಯನ್ನು ಈ ಫೋನ್ ಮುಖಾಂತರವೇ ಕಂಪೆನಿ ಜಗತ್ತಿಗೆ ಪರಿಚಯಿಸಿದ್ದು. ಕಂಪೆನಿಯ ಸ್ವಂತ ಎ9 ಪ್ರೊಸೆಸರ್ ನ್ನು ಇದು ಹೊಂದಿದ್ದು ಬಿಡುಗಡೆಗೊಂಡ ಒಂದೇ ವಾರದಲ್ಲಿ 13 ಮಿಲಿಯನ್ ಯುನಿಟ್ಸ್ ಗಳನ್ನು ಕಂಪೆನಿ ಮ್ಯಾನೇಜ್ ಮಾಡಿತ್ತು.

7. ಐಫೋನ್ 6ಎಸ್ ಪ್ಲಸ್

7. ಐಫೋನ್ 6ಎಸ್ ಪ್ಲಸ್

2015 ರಲ್ಲಿ ಐಫೋನ್ 6ಎಸ್ ಜೊತೆಗೆ ಐಫೋನ್ 6 ಎಸ್ ಪ್ಲಸ್ ನ್ನು ಕೂಡ ಆಪಲ್ ಸಂಸ್ಥೆ ಬಿಡುಗಡೆಗೊಳಿಸಿತ್ತು. ಇದು IOS 9 ರಲ್ಲಿ ಬಿಡುಗಡೆಗೊಂಡಿತ್ತು ಇದೀಗ IOS 12 ಕ್ಕೆ ಅಪ್ ಡೇಟ್ ಆಗಲಿದೆ.ಯ 3ಡಿ ಟಟ್ ಮತ್ 12 ಎಂಪಿ ಐಸೆಟ್ ಕ್ಯಾಮರಾವನ್ನು ಇದು ಹೊಂದಿದ್ದು 4ಕೆ ವಿಡಿಯೋಗಳನ್ನು ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ.

8. ಐಫೋನ್ 6 ಪ್ಲಸ್

8. ಐಫೋನ್ 6 ಪ್ಲಸ್

ಸೆಪ್ಟೆಂಬರ್ 2015 ರಲ್ಲಿ ಐಫೋನ್ 6 ಜೊತೆಗೆ ಐಫೋನ್ 5 ಪ್ಲಸ್ ಕೂಡ ಬಿಡುಗಡೆಯಾಗಿದೆ. ಈ ಸ್ಮಾರ್ಟ್ ಫೋನ್ IOS 8 ರಲ್ಲಿ ಬಿಡುಗಡೆಗೊಂಡಿತ್ತು ಮತ್ತು ನಂತರದ ದಿನಗಳಲ್ಲಿ IOS 11 ಕ್ಕೆ ಅಪ್ ಡೇಟ್ ಆಗಿತ್ತು. 5.5 ಇಂಚಿನ ಡಿಸ್ಪ್ಲೇ ಹೊಂದಿರುವ ಇದು ಕಂಪೆನಿಯ ಸ್ವಂತ A8 ಪ್ರೊಸೆಸರ್ ನ್ನು ಹೊಂದಿದೆ.

9. ಐಫೋನ್ 6

9. ಐಫೋನ್ 6

ಐಫೋನ್ 6 ಪ್ಲಸ್ ನ ದೊಡ್ಡ ಪರದೆಯ ವೇರಿಯಂಟ್ ಜೊತೆಗೆ 2014 ರಲ್ಲಿ ಐಫೋನ್ 6 ಕೂಡ ಬಿಡುಗಡೆಗೊಂಡಿದೆ. ಆರಂಭದಲ್ಲಿ IOS 8 ರಲ್ಲಿದ್ದು ಇದು ಈಗ ಹೊಸ ಆಪರೇಟಿಂಗ್ ಸಿಸ್ಟಂ ಗೆ ಅಪ್ ಡೇಟ್ ಆಗಲಿದೆ. 4.7 ಇಂಚಿನ ಡಿಸ್ಪ್ಲೇ ಮತ್ತು ಆಪಲ್ ಸಂಸ್ಥೆಯ ಸ್ವಂತ A8 ಪ್ರೊಸೆಸರ್ ನಿಂದ ಕೆಲಸ ಮಾಡುವ ಇದು ಸಿಕ್ಕಾಪಟ್ಟೆ ಫಾಸ್ಟ್ ಮತ್ತು ಇತರೆ ಹಿಂದಿನ ವರ್ಷನ್ ಗಳಿಗೆ ಹೋಲಿಕೆ ಮಾಡಿದರೆ ಎಫಿಷಿಯಂಟ್ ಆಗಿದೆ.

10. ಐಫೋನ್ ಎಸ್ ಇ

10. ಐಫೋನ್ ಎಸ್ ಇ

2016 ರಲ್ಲಿ ಆಪಲ್ ಸಂಸ್ಥೆ ಸ್ಪೆಷಲ್ ಎಡಿಷನ್ ಐಫೋನ್ ಎಸ್ ಇ ಯನ್ನು ಬಿಡುಗಡೆಗೊಳಿಸಿತು. ಇದು ಇತರೆ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಸಣ್ಣ ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಸದ್ಯ IOS 11 ರಲ್ಲಿ ರನ್ ಆಗುತ್ತಿದೆ. ಇದರ ಇತರೆ ವೈಶಿಷ್ಟ್ಯತೆಗಳೆಂದರೆ 12 ಎಂಪಿ ಹಿಂಭಾಗದ ಕ್ಯಾಮರಾ ಮತ್ತು 1,2 ಎಂಪಿ ಮುಂಭಾಗದ ಕ್ಯಾಮರಾವನ್ನು ಹೊಂದಿದ್ದು ಟಚ್ ಐಡಿ ಇ. ಡಿಸೈನ್ ಬಗ್ಗೆ ಹೇಳುವುದಾದರೆ ಐಫೋನ್ 5ಎಸ್ ಹಲವು ಹೋಲಿಕೆಗಳು ಇದರಲ್ಲಿದೆ.

11. ಐಫೋನ್ 5 ಎಸ್

11. ಐಫೋನ್ 5 ಎಸ್

ಐಫೋನ್ 5ಎಸ್ ನ್ನು ಆಪಲ್ ಸಂಸ್ಥೆಯು 2013 ರಲ್ಲಿ ಬಿಡುಗಡೆಗೊಳಿಸಿತ್ತು. ಇದು IOS 7 ರಲ್ಲಿ ಬಿಡುಗಡೆಯಾಗಿತ್ತು ಮತ್ತು ನಂತರದ ದಿನಗಳಲ್ಲಿ IOS 11 ಕ್ಕೆ ಅಪ್ ಡೇಟ್ ಮಾಡಲಾಯಿತು. ಇದೀಗ ಈ ಐಫೋನ್ 5ಎಸ್ ನ್ನು IOS 12 ಗೆ ಅಪ್ ಡೇಟ್ ಮಾಡಲಾಗುತ್ತೆ. ಇದು 64 ಬಿಟ್ ಪ್ರೊಸೆಸರ್ ನ್ನು ಹೊಂದಿದ ಮೊದಲ ಸ್ಮಾರ್ಟ್ ಫೋನ್ ಆಗಿತ್ತು ಮತ್ತು ಹೋಮ್ ಬಟನ್ ಜೊತೆಗೆ ಟಚ್ ಐಡಿ ಇರುವಂತೆ ಇದನ್ನು ರಿಡಿಸೈನ್ ಮಾಡಲಾಗಿತ್ತು.

12. 12.9-ಇಂಚಿನ ಐಪ್ಯಾಡ್ ಪ್ರೋ (2015)

12. 12.9-ಇಂಚಿನ ಐಪ್ಯಾಡ್ ಪ್ರೋ (2015)

12.9 ಇಂಚಿನ ಐಪ್ಯಾಡ್ ಪ್ರೋ 2015 ರಲ್ಲಿ ನಡೆದ ಆಪಲ್ ನ ಸ್ಪೆಷಲ್ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. 12.9 ಇಂಚಿನ ರೆಟಿನಾ ಡಿಸ್ಪ್ಲೇಯನ್ನು ಇದು ಹೊಂದಿದ್ದು, 5.6 ಮಿಲಿಯನ್ ಪಿಕ್ಸಲ್ ಕೆಪಾಸಿಟಿ ಇದೆ. A9X ಚಿಪ್ ಸೆಟ್ ಹೊಂದಿದ್ದು, ಮೊದಲಿಗೆ IOS 9 ರಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದೀಗ IOS12 ಆಪರೇಟಿಂಗ್ ಸಿಸ್ಟಮ್ ಗೆ ಅಪ್ ಡೇಟ್ ಆಗಲಿದೆ.

13. 10.5-ಇಂಚಿನ ಐಪ್ಯಾಡ್ ಪ್ರೋ (2017)

13. 10.5-ಇಂಚಿನ ಐಪ್ಯಾಡ್ ಪ್ರೋ (2017)

10.5 ಇಂಚಿನ ಐಪ್ಯಾಡ್ ಪ್ರೋ ಕಳೆದ ವರ್ಷ ಜೂನ್ ತಿಂಗಳಲ್ಲಿ WWDC 2017 ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದ್ದು IOS 11 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. HDR10 ಮತ್ತು ಡಾಲಿ ವಿಷನ್ ಕಂಟೆಂಟ್ ಗೆ ಬೆಂಬಲ ನೀಡುವ ಇದು ಇದೀಗ IOS 12 ಗೆ ಅಪ್ ಡೇಟ್ ಆಗಲಿದೆ.

14. 9.7-ಇಂಚಿನ ಐಪ್ಯಾಡ್ ಪ್ರೋ

14. 9.7-ಇಂಚಿನ ಐಪ್ಯಾಡ್ ಪ್ರೋ

9.7 ಇಂಚಿನ ಐಪ್ಯಾಡ್ ಪ್ರೋ 2015 ರಲ್ಲಿ ಬಿಡುಗಡೆಗೊಂಡಿದೆ. ಈ ಐಪ್ಯಾಡ್ ಟ್ರೂ ಟೋನ್ ಫ್ಲ್ಯಾಶ್ ಮತ್ತು ರೆಟಿನಾ ಫ್ಲ್ಯಾಶ್ ಗಳನ್ನು ಒಳಗೊಂಡಿದೆ. ಇದು ಅತೀ ಹೆಚ್ಚು ಸ್ಟೋರೇಜ್ ಕೆಪಾಸಿಟಿ ಹೊಂದಿದ್ದು 256 ಜಿಬಿ ಸ್ಟೋರೇಜ್ ವರ್ಷನ್ ಹೊಂದಿದೆ. Apple M9 motion co-ಪ್ರೊಸೆಸರ್ ಹೊಂದಿದ್ದ ಇದು ಇದೀಗ IOS 12 ಗೆ ಅಪ್ ಡೇಟ್ ಆಗುತ್ತಿದೆ.

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
15. ಐಪ್ಯಾಡ್ ಏರ್

15. ಐಪ್ಯಾಡ್ ಏರ್

2013 ರಲ್ಲಿ ಐಪ್ಯಾಡ್ ಏರ್ ಬಿಡುಗಡೆಯಾಗಿದ್ದು ಐಪ್ಯಾಡ್ ಮಿನಿ2 ಗೆ ಹೋಲಿಕೆಯಾಗುತ್ತೆ. 64-ಬಿಟ್ ಆಪಲ್ A7 ಪ್ರೊಸೆಸರ್ ನ್ನು ಹೊಂದಿತ್ತು. ಆದರೆ ಮಾರ್ಚ್ 2016 ರಲ್ಲಿ 9.7 ಇಂಚಿನ ಐಪ್ಯಾಡ್ ಪ್ರೋ ಬಿಡುಗಡೆಯಾದಾಗ ಇದು ಸ್ಥಗಿತವಾಯ್ತು. ಐಪ್ಯಾಡ್ ಏರ್ ನ್ನು ಹೊಂದಿತ್ತು ಮತ್ತು ಆದಾದ ನಂತರದ ಎಲ್ಲಾ ಆಪರೇಟಿಂಗ್ ಸಿಸ್ಟಮ್ ನ ಅಪ್ ಡೇಟ್ ನ್ನು ಇದು ಪಡೆದಿದೆ. ಇದೀಗ ಪುನಃ IOS ಗೆ ಅಪ್ ಡೇಟ್ ಆಗುತ್ತಿದೆ.

16. ಐಪ್ಯಾಡ್ (fifth-gen)

16. ಐಪ್ಯಾಡ್ (fifth-gen)

ಐದನೇ ಜನರೇಷನ್ ನ್ನಿನ ಐಪ್ಯಾಡ್ 9.7- ಇಂಚಿನ ಡಿವೈಸ್ ಆಗಿದ್ದು ಕಳೆದ ವರ್ಷ ಮಾರ್ಚ್ ನಲ್ಲಿ ಬಿಡುಗಡೆಗೊಂಡಿದೆ. IOS 10 ರಲ್ಲಿ ಇದು ಬಿಡುಗಡೆಗೊಂಡಿತ್ತು ಮತ್ತು ನಂತರದ ದಿನಗಳಲ್ಲಿ IOS 11 ಕ್ಕೆ ಅಪ್ ಡೇಟ್ ಆಯಿತು. ಇದೀಗ IOS12 ಕ್ಕೆ ಇದು ಮತ್ತೆ ಪುನಃ ಅಪ್ ಡೇಟ್ ಆಗಲಿದೆ. ಐಪ್ಯಾಡ್ 2 ಜಿಬಿ RAM ಹೊಂದಿದ್ದು, 7.5ಎಂಎಂನಷ್ಟು ದಪ್ಪವಾಗಿದೆ.

17. ಐಪ್ಯಾಡ್ ಮಿನಿ 4

17. ಐಪ್ಯಾಡ್ ಮಿನಿ 4

ಆಪಲ್ ಐಪ್ಯಾಡ್ ಮಿನಿ 4 ನ್ನು ಸೆಪ್ಟೆಂಬರ್ 2015 ರಲ್ಲಿ "ಹೇ ಸಿರಿ" ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿ ಬಿಡುಗಡೆಗೊಳಿಸಿತ್ತು. ಐಪ್ಯಾಡ್ ಮಿನಿ 4 IOS 9 ರಲ್ಲಿದ್ದು 1 ಜಿಬಿ RAM ಹೊಂದಿದೆ. ಐಪ್ಯಾಡಿ ಮಿನಿ 2 ಮತ್ತು ಐಪ್ಯಾಡ್ ಮಿನಿ 3 ಗೆ ಹೋಲಿಸಿದರೆ ಇದರ ಆಕೃತಿ ಅಗಲವಾಗಿ ಮತ್ತು ಉದ್ದವಾಗಿದೆ.

18. ಐಪ್ಯಾಡ್ ಮಿನಿ 3

18. ಐಪ್ಯಾಡ್ ಮಿನಿ 3

ಅಕ್ಟೋಬರ್ 2014 ರಲ್ಲಿ ಬಿಡುಗಡೆಯಾಗಿರುವ ಐಪ್ಯಾಡ್ ಮಿನಿ 3 ಮೂರನೇ ಐಪ್ಯಾಡ್ ಮಿನಿ ಟ್ಯಾಬ್ಲೆಟ್ ಆಗಿತ್ತು ಇದರ ಜೊತೆಗೆ ಐಪ್ಯಾಡ್ ಏರ್ 2 ಕೂಡ ಇತ್ತು. ಈ ಡಿವೈಸ್ ನಲ್ಲಿ ಟಬ್ Id ಮತ್ತು ಆಪಲ್ ಪೇ ಜೊತೆ ತುಂಬಾ ಕಂಪಾಟೇಬಲ್ ಆಗಿತ್ತು. ಇದು IOS 8.1 ರಲ್ಲಿ ರನ್ ಆಗುತಿದ್ದು ಇದೀಗ IOS 12 ಗೆ ಅಪ್ ಡೇಟ್ ಆಗಲಿದೆ.

19. ಐಪ್ಯಾಡ್ ಮಿನಿ 2

19. ಐಪ್ಯಾಡ್ ಮಿನಿ 2

2013 ರಲ್ಲಿ ಬಿಡುಗಡೆಗೊಂಡಿರುವ ಐಪ್ಯಾಡ್ ಮಿನಿ 2 ಫಸ್ಟ್ ಜನರೇಷನ್ನಿನ ಐಪ್ಯಾಡ್ ಮಿನಿಯ ಕೆಲವು ಡಿಸೈನ್ ಗೆ ಸರಿಸಮನಾಗಿಯೇ ಇದೆ. ಕಂಪನೆಯ ಸ್ವಂತ ಚಿಪ್ ಸೆಟ್ A7 ನಲ್ಲಿ ಇದು ಇದ್ದು, ರೆಟಿನಾ ಡಿಸ್ಪ್ಲೇಯು 1536x2048 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಇದು IOS 7 ನಲ್ಲಿ ಲಾಂಚ್ ಆಗಿತ್ತು ಈಗ IOS 12 ಗೆ ಅಪ್ ಡೇಟ್ ಆಗಲಿದೆ.

20. ಐಪ್ಯಾಡ್ ಏರ್ 2

20. ಐಪ್ಯಾಡ್ ಏರ್ 2

ಐಪ್ಯಾಡ್ ಏರ್ 2 ಸೆಕೆಂಡ್ ಜನರೇಷನ್ ನ ಐಪ್ಯಾಡ್ ಆಗಿದ್ದು, 2014 ಅಕ್ಟೋಬರ್ ನಲ್ಲಿಇದು ಬಿಡುಗಡೆಗೊಂಡಿದೆ. ಐಪ್ಯಾಡ್ ಏರ್ 2 ಹಿಂದಿನವುಗಳಿಗೆ ಹೋಲಿಸಿದರೆ ತುಂಬಾ ವೇಗವಾಗಿದ್ದು ಬಹಳ ತೆಳುವಾಗಿದೆ. ಡಿವೈಸ್ IOS 9 ರಲ್ಲಿ ಕೆಲಸ ಮಾಡುತ್ತಿದ್ದು, ಈಗ IOS 12 ಗೆ ಅಪ್ ಡೇಟ್ ಆಗಲಿದೆ.

Best Mobiles in India

English summary
Apple ios 12: these 20 iphones and ipads are set to change. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X