ಆಪಲ್‌ನ iOS 6 ಮ್ಯಾಪ್‌ ಬದಲಾಗಿ ಟಾಪ್‌ 3 ಮ್ಯಾಪ್‌ಆಪ್ಸ್‌

By Super
|

ಆಪಲ್‌ನ iOS 6 ಮ್ಯಾಪ್‌ ಬದಲಾಗಿ ಟಾಪ್‌ 3 ಮ್ಯಾಪ್‌ಆಪ್ಸ್‌
ಆಪಲ್‌ ಸಂಸ್ಥೆಯು ತನ್ನಯ ನೂತನ iOS 6 ಆಪರೇಟಿಂಗ್‌ ಸಿಸ್ಟಂನಲ್ಲಿ ಗೂಗಲ್‌ ಮ್ಯಾಪ್‌ನ ಕೈಬಿಟ್ಟದ್ದು ಹಲವರಿಗೆ ಬೇಸರ ಮೂಡಿಸಿತು ಹಾಗೂ ಇದಕ್ಕೆ ಪ್ರತಿಯಾಗಿ ತನ್ನದೇ ಆದಂತಹ ಆಪಲ್‌ ಮ್ಯಾಪ್‌ ಹೆಸರಿನ ಮ್ಯಾಪಿಂಗ್‌ ಸೇವೆ ಬಿಡುಗಡೆ ಮಾಡಿತಾದರೂ ನಿರೀಕ್ಷೆಗೆ ತಕ್ಕ ಪ್ರತಿಕ್ರಿಯೆ ಬದಲಾಗಿ ಗ್ರಾಹಕರಿಂದ ನಕಾರಾತ್ಮಕ ಪ್ರತಿಕ್ರಿಯನ್ನೇ ಪಡೆದದ್ದು ಸಂಸ್ಥೆ ನಿರಾಸೆ ಅನುಭವಿಸುವಂತಾಗಿದೆ.

iOS 6 ಬಳಕೆದಾರರು ಆಪಲ್‌ ಮ್ಯಾಪ್‌ನಲ್ಲಿ ಸಾಕಷ್ಟು ಕೊರತೆಗಳಿರಿವುದಾಗಿ ದೂರು ನೀಡುತ್ತರುವುದರಿಂದ ಅದರ ಪ್ರತಿಸ್ಪರ್ಧಿಯಾದ ಗೂಗಲ್‌ ಮ್ಯಾಪ್‌ ಉತ್ತಮವೆಂದು ಸಾಬೀತು ಪಡಿಸುತ್ತದೆ. ಅಲ್ಲದೆ ಆಪಲ್‌ ಸಂಸ್ಥೆಯ ಸಿಇಒ ಟಿಮ್‌ ಕುಕ್‌ ಐಫೋನ್‌ 5 ನಲ್ಲಿನ ನೇಟೀವ್‌ ಮ್ಯಾಪ್‌ ಅಪ್ಲಿಕೇಷನ್ಸ್‌ನಲ್ಲಿ ಇರುವಂತಹ ನ್ಯೂನ್ಯತೆಗಳಿಗಾಗಿ ಗ್ರಾಹಕರಲ್ಲಿ ಕ್ಷಮೆಯಾಚಿಸಿದ್ದಾರೆ. "ಆಪಲ್‌ ಗ್ರಾಹಕರಿಗೆ ಆಗಿರುವ ತೊಂದರೆ ಕುರಿತಾಗಿ ಕ್ಷಮೆಕೋರುತ್ತೇವೆ, ಆಪಲ್‌ ಮ್ಯಾಪ್‌ ನಲ್ಲಿರುವ ನ್ಯೂನ್ಯೆಗಳನ್ನು ಸರಿ ಪಡಿಸಲು ಸಂಸ್ಥೆ ಪ್ರಯತ್ನಿಸುತ್ತದೆ" ಎಂದು ಟಿಮ್‌ ಕುಕ್‌ ತಿಳಿಸಿದ್ದಾರೆ.

ಅಂದಗಾಹೆ ಆಪಲ್‌ನ ಸಿಇಒ ಅವರೆ ತಿಳಿಸಿರುವಂತೆ ಸಂಸ್ಥೆಯು ನೂತನ ಮ್ಯಾಪಿಂಗ್‌ ಅಪ್ಲಿಕೇಷನ್‌ ಅಭಿವೃಧಿ ಪಡಿಸುವವರೆಗೂ ಐಫೋನ್‌ ಬಳಕೆದಾರರು ಆಪ್‌ ಸ್ಟೋರ್‌ನಲ್ಲಿ ಬದಲೀ ಆಪ್‌ಗಳನ್ನು ಢೌನ್ಲೋಡ್‌ ಮಾಡಿಕೊಂಡು ಬಳಸಲು ತಿಳಿಸಿದ್ದಾರೆ. ಅಂದಹಾಗೆ ಆಪಲ್‌ ಮ್ಯಾಪ್ಸ್‌ ಬದಲಾಗಿ ಬಳಸಬಹುದಾದ ಟಾಪ್‌ 3 ಮ್ಯಾಪ್ಸ್‌ ಪಟ್ಟಿ ಹೀಗಿದೆ ಒಮ್ಮೆ ಓದಿ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X