iPhone 16 Series: ಬಿಡುಗಡೆ ದಿನಾಂಕ ಸೋರಿಕೆ; 4 ಹೊಸ ಐಫೋನ್.. ವಾಚ್, ಏರ್‌ಪಾಡ್ಸ್ ಲಾಂಚ್!
iPhone 16 Series: ಟೆಕ್ ದೈತ್ಯ ಆಪಲ್ ಪ್ರತಿ ವರ್ಷ ಹೊಸ ಐಫೋನ್ ಸರಣಿ ಬಿಡುಗಡೆ ಮಾಡುತ್ತದೆ. ಕಳೆದ ವರ್ಷ ಇದೇ ವೇಳೆ ಐಫೋನ್ 15 ಸೀರಿಸ್ ಅನ್ನು ಬಿಡುಗಡೆ ಮಾಡಿತ್ತು. ಪ್ರೀಮಿಯಂ ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಐಫೋನ್ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯನ್ನು ಹೊಂದಿದೆ. ಇದೀಗ, ಐಫೋನ್ 16 ಸರಣಿಯ (Apple iPhone 16) ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 10 ರಂದು ಐಫೋನ್ 16 ಸೀರಿಸ್ ಬಿಡುಗಡೆಯಾಗಲಿದೆ. ಹೊಸ ಆಪಲ್ ಸ್ಮಾರ್ಟ್‌ವಾಚ್ ಮತ್ತು ಏರ್‌ಪಾಡ್ಸ್ ಸಹ ಲಾಂಚ್ ಮಾಡುವ ಸಾಧ್ಯತೆಯಿದೆ.
ಹೌದು, ಆಪಲ್ ಐಫೋನ್ 16 ಸರಣಿಯ ಬಿಡುಗಡೆ ದಿನಾಂಕ ಸೋರಿಕೆಯಾಗಿದೆ. ವರದಿಯ ಪ್ರಕಾರ, ಸೆಪ್ಟೆಂಬರ್ 10 ರಂದು ನಡೆಯುವ ಸಮಾರಂಭದಲ್ಲಿ ಐಫೋನ್ 16 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಐಫೋನ್ 16, iPhone 16 Plus, iPhone 16 Pro ಮತ್ತು iPhone 16 Pro Max ಸೆಪ್ಟೆಂಬರ್ 20 ರಂದು ಶುಕ್ರವಾರ ಮಾರಾಟವಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ಐಫೋನ್‌ಗಳ ವೈಶಿಷ್ಟ್ಯಗಳನ್ನು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಪಿಕ್ಸೆಲ್ 9 ಸರಣಿ, ಗ್ಯಾಲಕ್ಸಿ Z ಫೋಲ್ಡ್‌ಗೆ ಪೈಪೋಟಿ
ಐಫೋನ್ 16 ಶ್ರೇಣಿಯು ಹೊಸ ಗೂಗಲ್ ಪಿಕ್ಸೆಲ್ 9 ಸರಣಿ ಮತ್ತು ಸ್ಯಾಮ್‌ಸಗ್ ಗ್ಯಾಲಕ್ಸಿ Z ಫೋಲ್ಡ್ ಫೋನ್‌ಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. ಮೂರು ಕಂಪನಿಗಳು ಎಐ (AI) ತಂತ್ರಜ್ಞಾನಕ್ಕೆ ಹೆಚ್ಚು ಒತ್ತು ನೀಡಿವೆ. ಐಫೋನ್ 16 ಸರಣಿಯು ವಿನ್ಯಾಸದ ರೆಜಿಗ್ ಅನ್ನು ಪಡೆಯಬಹುದು. ಹೊಸ ಎ ಸರಣಿಯ ಹಾರ್ಡ್‌ವೇರ್ ಅನ್ನು ಹೊಂದಿರಲಿದೆ. ಸಾಮಾನ್ಯ ರೂಪಾಂತರಗಳು ಎಐ ವೈಶಿಷ್ಟ್ಯಗಳನ್ನು ಪಡೆಯಬಹುದು.
ಐಫೋನ್ 16, ಐಫೋನ್ 16 ಪ್ಲಸ್ ವೈಶಿಷ್ಟ್ಯಗಳು
ವರದಿಗಳ ಪ್ರಕಾರ, ಎರಡೂ ಫೋನ್‌ಗಳು ಐಫೋನ್ 15 ಮತ್ತು ಐಫೋನ್ 15 ಪ್ಲಸ್‌ನಂತೆ ಮುಂಭಾಗದ ವಿನ್ಯಾಸವನ್ನು ಒಳಗೊಂಡಿರುತ್ತವೆ. ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಎರಡೂ ಫೋನ್‌ಗಳು ಆಪಲ್‌ನ ಎ18 ಚಿಪ್‌ಸೆಟ್‌ನೊಂದಿಗೆ ಬರಲಿವೆ. ಐಫೋನ್ 16 ಫೋನ್ 60Hz ರಿಫ್ರೆಶ್ ದರದೊಂದಿಗೆ 6.1 ಇಂಚಿನ ಡಿಸ್ಲ್ಪೇಯನ್ನು ಹೊಂದಿರಲಿದೆ. ಐಫೋನ್ 16 ಪ್ಲಸ್ ಫೋನ್ 6.7 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದೆ.
ಹೊಸ ಫೋನ್‌ಗಳು 8GB RAM ಹೊಂದಿರಲಿವೆ. ಐಫೋನ್ 16 ಫೋನ್ 3,561mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುತ್ತದೆ. ಇದು ಐಫೋನ್ 15 ಫೋನಿನ 3349mAh ಬ್ಯಾಟರಿಗಿಂತ ದೊಡ್ಡದಾಗಿದೆ. ಐಫೋನ್ 16 ಪ್ಲಸ್ ಮೊಬೈಲ್ 4006mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದಿರಲಿದೆ. ಇದು ಐಫೋನ್ 15 ಸ್ಮಾರ್ಟ್‌ಫೋನಿನ 4383mAh ಬ್ಯಾಟರಿಗಿಂತ ಸ್ವಲ್ಪ ಚಿಕ್ಕದಾಗಿರಲಿದೆ.
ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಫೀಚರ್ಸ್
ಮುಂಬರುವ ಐಫೋನ್ 16 ಪ್ರೊ ಫೋನ್ 6.3 ಇಂಚಿನ ಡಿಸ್ಲ್ಪೇಯನ್ನು ಹೊಂದಿರಲಿದೆ. ಐಫೋನ್ 16 ಪ್ರೊ ಮ್ಯಾಕ್ಸ್ ಮೊಬೈಲ್ 6.9 ಇಂಚಿನ ಡಿಸ್ಪ್ಲೇ ಒಳಗೊಂಡಿರಲಿದೆ. ಎರಡೂ ಫೋನ್‌ಗಳು ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಇನ್ನೂ, ಐಫೋನ್ 16 ಪ್ರೊ ಮೊಬೈಲ್‌ಗಳು ಕಂಪನಿಯ ಎ18 ಪ್ರೊ ಚಿಪ್‌ಸೆಟ್ ಅನ್ನು ಹೊಂದಿರಲಿವೆ. ಕಂಪನಿಯು ಐಫೋನ್ 16 ಪ್ರೊ ಫೋನಿನಲ್ಲಿ 3,355mAh ಬ್ಯಾಟರಿಯನ್ನು ಒದಗಿಸಲಿದೆ. ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್ 4,676mAh ಬ್ಯಾಟರಿಯನ್ನು ಹೊಂದಿರಲಿದೆ.
ಐಫೋನ್ 16 ಸರಣಿಯ ಕ್ಯಾಮೆರಾ ಸೆಟಪ್
ಕಂಪನಿಯು ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಫೋನ್‌ಗಳನ್ನು 48 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾದೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್ 5x ಆಪ್ಟಿಕಲ್ ಜೂಮ್ ಬೆಂಬಲ ಒಳಗೊಂಡಿರಲಿದೆ. ಐಫೋನ್ 16 ಪ್ರೊ ಮೊಬೈಲ್‌ಗಳು ಟೆಟ್ರಾಪ್ರಿಸಂ ಪೆರಿಸ್ಕೋಪ್ ಲೆನ್ಸ್ ಅನ್ನು ಹೊಂದಿರುವ ಸಾಧ್ಯತೆಯಿದೆ.
ಐಫೋನ್ 16 ಸರಣಿಯ ಬೆಲೆ (ನಿರೀಕ್ಷಿತ)
ಐಫೋನ್ 16 ಬೆಲೆ = ಅಂದಾಜು 67,100 ರೂ.
ಐಫೋನ್ 16 ಪ್ಲಸ್ ಬೆಲೆ = ಅಂದಾಜು 75,500 ರೂ.
ಐಫೋನ್ 16 ಪ್ರೋ ಬೆಲೆ = ಸುಮಾರು 92,300 ರೂ.
ಐಫೋನ್ 16 ಪ್ರೊ ಮ್ಯಾಕ್ಸ್ ಬೆಲೆ = ಸುಮಾರು 1,00,700 ರೂ.


Click it and Unblock the Notifications








