ಹೊಸ iPhone 16e ಸೇಲ್ ಶುರು; 10,000 ರಿಯಾಯಿತಿ.. ಕಡಿಮೆ ಬೆಲೆ.. ಬೊಂಬಾಟ್ ಫೀಚರ್ಸ್
ಐಫೋನ್ ಪ್ರಿಯರಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಇಂದಿನಿಂದ ಐಫೋನ್ 16e ಮೊಬೈಲ್‌ನ ಅಬ್ಬರ ಶುರುವಾಗಲಿದೆ. ಹೌದು, ಆಪಲ್ ಇತ್ತೀಚೆಗೆ ಬಹುನಿರೀಕ್ಷಿತ ಐಫೋನ್ 16e ( iPhone 16e) ಅನ್ನು ಬಿಡುಗಡೆ ಮಾಡಿದೆ. ಈ ಮೂಲಕ ತನ್ನ ಐಫೋನ್ 16 ಸರಣಿಯನ್ನು ವಿಸ್ತರಿಸಿದೆ. ಅಂದಹಾಗೆ, ಇಂದಿನಿಂದ (ಫೆಬ್ರವರಿ 28) ಐಫೋನ್ 16e ಭಾರತದಲ್ಲಿ ತನ್ನ ಮೊದಲ ಮಾರಾಟ ಪ್ರಾರಂಭಿಸಲಿದೆ. ನೀವು ಈ ಈ ಆಪಲ್ ಫೋನನ್ನು ಕಡಿಮೆ ಬೆಲೆಗೆ ಖರೀದಿಸಬಹುದು. ಕಂಪನಿಯು ಮೊದಲ ಮಾರಾಟ ಅಂಗವಾಗಿ 10 ಸಾವಿರ ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಬನ್ನಿ, ಈ ಹೊಸ ಐಫೋನ್ 16e ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.
ಐಫೋನ್ 16e ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಐಫೋನ್ ಅನ್ನು 52,990 ರೂ.ಗೆ ನಿಮ್ಮದಾಗಿಸಿಕೊಳ್ಳಬಹುದು. ಇದು ಅತ್ಯಂತ ಕೈಗೆಟುಕುವ ಐಫೋನ್ ಮಾದರಿಯಾಗಿದೆ. ಈ ಐಫೋನ್ 16e ಸ್ಮಾರ್ಟ್‌ಫೋನ್ ಆಪಲ್ ಇಂಟೆಲಿಜೆನ್ಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಇದಲ್ಲದೆ, ಐಫೋನ್ 16e ಅನೇಕ ಪ್ರಮುಖ ಅಪ್‌ಗ್ರೇಡ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಶಕ್ತಿಶಾಲಿ ಪ್ರೊಸೆಸರ್, ದೊಡ್ಡ ಡಿಸ್ಪ್ಲೇ ಮತ್ತು ಸುಧಾರಿತ ಕ್ಯಾಮೆರಾ ಸೆಟಪ್ ಲಭ್ಯವಿದೆ. ಈ ಫೋನಿನ ಆಫರ್ ಬೆಲೆ ತಿಳಿಯಲು ಮುಂದೆ ಓದಿ.

ಯಾವೆಲ್ಲಾ ಆಫರ್ ಲಭ್ಯ
ಐಫೋನ್ 16e ಮೊಬೈಲ್ 59,990 ರೂ.ಗಳ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು ಐಫೋನ್ 16e ಫೋನಿನ 128GB ಸ್ಟೋರೇಜ್ ರೂಪಾಂತರದ ಬೆಲೆಯಾಗಿದೆ. ಕಂಪನಿಯು ಮೊದಲ ಮಾರಾಟದಲ್ಲಿ, ಈ ಐಫೋನ್ ಖರೀದಿಸುವ ಗ್ರಾಹಕರಿಗೆ 4,000 ರೂ.ಗಳ ರಿಯಾಯಿತಿ ನೀಡುತ್ತಿದೆ. ಎಲ್ಲಾ ಐಸಿಐಸಿಐ ಬ್ಯಾಂಕ್ ಗ್ರಾಹಕರು ಈ ರಿಯಾಯಿತಿಯ ಲಾಭ ಪಡೆಯಬಹುದು. ಯಾವುದೇ ಐಸಿಐಸಿಐ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಐಫೋನ್ 16e ಖರೀದಿಸಿದರೆ 4,000 ರಷ್ಟು ಫ್ಲಾಟ್ ಡಿಸ್ಕೌಂಟ್ ಸಹ ಪಡೆಯಬಹುದು.
ಹೊಸ ಐಫೋನ್ 16e ಖರೀದಿಸುವಾಗ ಹಳೆಯ ಮೊಬೈಲ್ ಎಕ್ಸ್‌ಚೇಂಜ್ ಮಾಡಿಕೊಂಡರೆ, ಕಂಪನಿಯು ನಿಮಗೆ 6,000 ರೂ.ಗಳ ಎಕ್ಸ್‌ಚೇಂಜ್ ಬೋನಸ್ ಸಹ ನೀಡುತ್ತದೆ. ಈ 3000 ರೂ. ರಿಯಾಯಿತಿ ಫೋನಿನ ಎಕ್ಸ್‌ಚೇಂಜ್ ಮೌಲ್ಯದಿಂದ ಪ್ರತ್ಯೇಕವಾಗಿ ಸಿಗುತ್ತದೆ. ಅಂದರೆ, ಹಳೆಯ ಫೋನಿನ ಬೆಲೆ 17,000 ರೂ.ಗಳಾಗಿದ್ದರೆ, ನೀವು 3000 ರೂ. ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಇದಲ್ಲದೆ ಕೋಟಕ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಈ ಮೊಬೈಲ್ ಖರೀದಿಸಿದರೆ, 4000 ರೂ.ಗಳ ಡಿಸ್ಕೌಂಟ್ ಸಹ ಲಭ್ಯವಿದೆ. ಈ ಐಫೋನ್ ಭಾರತ, ಅಮೆರಿಕ, ಯುಕೆ, ಜಪಾನ್, ಯುಎಇ, ಮಲೇಷ್ಯಾ, ಚೀನಾ, ಕೆನಡಾ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಒಟ್ಟು 59 ದೇಶಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಐಫೋನ್ 16e ವೈಶಿಷ್ಟ್ಯಗಳು
ಡಿಸ್ಪ್ಲೇ ಹೇಗಿದೆ
ಐಫೋನ್ 16e ಮೊಬೈಲ್ 6.1 ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಹೊಂದಿದೆ. ಇದು OLED ಪ್ಯಾನೆಲ್‌ನಲ್ಲಿ ನಿರ್ಮಿಸಿರುವ ಡಿಸ್ಪ್ಲೇ ಆಗಿದೆ. ಇದು 800 ನಿಟ್‌ಗಳ ಗರಿಷ್ಠ ಮತ್ತು 1200 ನಿಟ್‌ಗಳ HDR ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಐಫೋನ್ 16e ಡಿಸ್ಪ್ಲೇಯು 460ppi ಅನ್ನು ಬೆಂಬಲಿಸುತ್ತದೆ.
ಶಕ್ತಿಶಾಲಿ ಪ್ರೊಸೆಸರ್
ಹೊಸ ಐಫೋನ್ 16e ಫೋನ್ ಶಕ್ತಿಶಾಲಿ ಆಪಲ್ A18 ಪ್ರೊಸೆಸರ್ ಹೊಂದಿದೆ. ಇದು 6 ಕೋರ್ ಸಿಪಿಯು ಆಗಿದೆ. ಎರಡು ಕಾರ್ಯಕ್ಷಮತೆಯ ಕೋರ್‌ಗಳು ಮತ್ತು ನಾಲ್ಕು ದಕ್ಷತೆಯ ಕೋರ್‌ಗಳನ್ನು ಒಳಗೊಂಡಿದೆ. ಐಫೋನ್ 16 ನಲ್ಲಿಯೂ ಅದೇ ಪ್ರೊಸೆಸರ್ ಲಭ್ಯವಿದೆ. ಇದು ಸುಗಮ ಮತ್ತು ವೇಗದ ಬಹುಕಾರ್ಯಕಗಳಿಗೆ ಉತ್ತಮವಾಗಿದೆ.
ಅದ್ಭುತ ಕ್ಯಾಮೆರಾ ಸೆಟಪ್
ಐಫೋನ್ 16e ಸ್ಮಾರ್ಟ್‌ಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ವಿಶೇಷವೆಂದರೆ, ಈ ಲೆನ್ಸ್ ಆಪಲ್ ಇಮೇಜಿಂಗ್ ತಂತ್ರಜ್ಞಾನವನ್ನು ಹೊಂದಿದೆ. ಇದು 2x ಟೆಲಿಫೋಟೋ ಲೆನ್ಸ್. ಹಾಗೆಯೇ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಐಫೋನ್ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ಟೆಕ್ ದೈತ್ಯ ಆಪಲ್ ಯಾವುದೇ ಐಫೋನಿನ ಬ್ಯಾಟರಿ ಬಗ್ಗೆ ಮಾಹಿತಿ ಬಹಿರಂಗಪಡಿಸಲ್ಲ. ಹೀಗಾಗಿ, ಐಫೋನ್ 16e ಬ್ಯಾಟರಿ ಬಗ್ಗೆಯೂ ಇದೇ ನಿರ್ಧಾರ ತೆಗೆದುಕೊಂಡಿದೆ. ಆದರೆ, ಈ ಐಫೋನ್ ಪೂರ್ಣ ಚಾರ್ಜ್ ಮಾಡಿದ ಬಳಿಕ, 26 ಗಂಟೆ ಬಾಳಿಕೆ ಬರುತ್ತದೆ. ಈ ಐಫೋನಿನಲ್ಲಿ ವೈರ್‌ಲೆಸ್ ಕ್ವಿ ಚಾರ್ಜಿಂಗ್ ಸಹ ಇದೆ. ಈ ಹೊಸ ಐಫೋನ್ ಆಪಲ್ ಇಂಟೆಲಿಜೆನ್ಸ್ ಹೊಂದಿದೆ.


Click it and Unblock the Notifications








