ಐಫೋನ್ 17 ಏರ್ ಚಿತ್ರ ಲೀಕ್: ಕಡಿಮೆ ಬೆಲೆ!..ಊಹಿಸಲಾಗದಷ್ಟು ಅಲ್ಟ್ರಾ ಸ್ಲಿಮ್!
ಆಪಲ್‌ನ ಮುಂಬರುವ ಐಫೋನ್ 17 ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಐಫೋನ್ 17 ಏರ್ ಎಂಬ ಹೊಸ ಮಾದರಿಯು ಇರಬಹುದು, ಇದು ಕಂಪನಿಯ ಅತ್ಯಂತ ತೆಳುವಾದ ಐಫೋನ್ ಆಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿದೆ ಎಂದು ಇತ್ತೀಚಿನ ವರದಿಗಳು ತಿಳಿಸುತ್ತವೆ. ಇದೀಗ, ಟಿಪ್‌ಸ್ಟರ್ ಒಬ್ಬರು ಎಕ್ಸ್‌ನಲ್ಲಿ ಐಫೋನ್ 17 ಶ್ರೇಣಿಯ ಸೋರಿಕೆಯಾದ ಚಿತ್ರಗಳು ಮತ್ತು ನಕಲಿ ಘಟಕಗಳನ್ನು ಹಂಚಿಕೊಂಡಿದ್ದಾರೆ. ಈ ಸೋರಿಕೆಗಳು ಹೊಸ ಐಫೋನ್ 17 ಶ್ರೇಣಿಯ ವಿನ್ಯಾಸದ ವಿವರಗಳನ್ನು ಮಾತ್ರವಲ್ಲ, ಐಫೋನ್ 17 ಏರ್ ಫೋನಿನ ಅಲ್ಟ್ರಾ ವಿನ್ಯಾಸವನ್ನು ಸಹ ತೋರಿಸುತ್ತವೆ.
ಹೌದು, ಟಿಪ್‌ಸ್ಟರ್ ಸೋನಿ ಡಿಕನ್ಸನ್ ಅವರು ಹಂಚಿಕೊಂಡ ಚಿತ್ರಗಳ ಪ್ರಕಾರ, ಐಫೋನ್ 17 ಏರ್ ನ ವಿಶೇಷವಾಗಿ ಸ್ಲಿಮ್ ಪ್ರೊಫೈಲ್ ಅನ್ನು ಹೊಂದಿದ್ದು, ಇದರ ಅಳತೆಯು 5.65 ಮಿಮೀ ಆಗಿರಬಹುದು. ಇದು ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿರುವ ಸ್ಟ್ಯಾಂಡರ್ಡ್ ಐಫೋನ್ 17, ಐಫೋನ್ 17 ಪ್ರೊ ಮತ್ತು ಐಫೋನ್ 17 ಪ್ರೊ ಮ್ಯಾಕ್ಸ್ ಮಾದರಿಗಳಿಗಿಂತ ಹೆಚ್ಚು ತೆಳುವಾಗಿರುತ್ತದೆ ಎಂದು ತಿಳಿದುಬಂದಿದೆ. ಈ ಚಿತ್ರಗಳು ಮುಂಬರುವ ಮಾದರಿಗಳ ಎಡ, ಬಲ ಮತ್ತು ಕೆಳಗಿನ ಅಂಚುಗಳನ್ನು ಹೈಲೈಟ್ ಮಾಡುತ್ತವೆ. ಇದರಲ್ಲಿ ಏರ್ ಮಾದರಿಯು ವಿಶೇಷವಾಗಿದೆ.
ಲೀಕ್ ಆಗಿರುವ ಚಿತ್ರಗಳಲ್ಲಿ ಐಫೋನ್ ಏರ್ ಮಾದರಿಯು ಸ್ಟ್ಯಾಂಡರ್ಡ್ ಮತ್ತು ಪ್ರೊ ಮಾದರಿಗಳಿಗಿಂತ ಹೆಚ್ಚು ತೆಳುವಾಗಿದ್ದು, ಎತ್ತರವಾಗಿ ಕಾಣುತ್ತಿದೆ. ಈ ಹಿಂದೆಯೇ ಹಲವಾರು ಸೋರಿಕೆಗಳು ಮತ್ತು ಆನ್‌ಲೈನ್ ವರದಿಗಳ ಪ್ರಕಾರ, ಐಫೋನ್ Mini ಮತ್ತು ಐಫೋನ್ Plus ನಂತಹ ಹಿಂದಿನ ಪ್ರಯತ್ನಗಳಂತೆಯೇ ಈ ಬಾರಿ ಐಫೋನ್ 17 ಏರ್ ಎಂಬ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಲಾಗುತ್ತದೆ. ಈ ಸಾಧನವು ಕೇವಲ 5.5mm ನಿಂದ 6mm ರವರೆಗೆ ಇರಬಹುದೆಂದು ಅಂದಾಜಿಸಲಾಗಿತ್ತು. ಇದೀಗ ಇದರ ಅಳತೆಯು ನಿಖರವಾಗಿ 5.65 ಮಿಮೀ ಆಗಿರಬಹುದು ಎನ್ನಲಾಗಿದೆ.
ಹಿಂದಿನ ವರದಿಗಳ ಪ್ರಕಾರ, ಐಫೋನ್ 17 ಏರ್ ಸ್ಮಾರ್ಟ್‌ಫೋನಿನ ತೆಳುವಾದ ವಿನ್ಯಾಸವು ಕೆಲವು ಹೊಂದಾಣಿಕೆಗಳನ್ನು ಬಯಸಬಹುದು. ಇದು ಕೇವಲ ಒಂದು 48-ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿರಬಹುದು. ಇದರಲ್ಲಿ ಆಪ್ಟಿಕಲ್ ಜೂಮ್ ಇರುವುದಿಲ್ಲ ಮತ್ತು ಇದರ ಸ್ಪೀಕರ್ ಹಾಗೂ ಮುಂಭಾಗದ ಕ್ಯಾಮೆರಾದ ಗುಣಮಟ್ಟವು ಪ್ರೀಮಿಯಂ ಮಾದರಿಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಇರಬಹುದು. ಕ್ಯಾಮೆರಾವನ್ನು ಹಿಂಭಾಗದಲ್ಲಿ ಅಗಲವಾದ ಆಯತಾಕಾರದ ವಿನ್ಯಾಸದಲ್ಲಿ ಇರಿಸಲಾಗುವುದು ಎಂದು ಹೇಳಲಾಗುತ್ತಿದೆ, ಇದು ಆಪಲ್ ನ ಸಾಂಪ್ರದಾಯಿಕ ವಿನ್ಯಾಸ ಶೈಲಿಯಿಂದ ಭಿನ್ನವಾಗಿದೆ.
ಇಷ್ಟೇ ಅಲ್ಲದೆ, ಐಫೋನ್ 17 ಏರ್ ಸ್ಮಾರ್ಟ್‌ಫೋನ್ 6.6-ಇಂಚಿನಿಂದ 6.7-ಇಂಚಿನ ಡಿಸ್ಪ್ಲೇಯನ್ನು ಹೊಂದಿರಬಹುದೆಂದು ವರದಿಯಾಗಿದೆ. ಇದು ನಿರೀಕ್ಷಿತ 6.3-ಇಂಚಿನ ಐಫೋನ್ 17 ಗಿಂತ ದೊಡ್ಡದಾಗಿದೆ ಮತ್ತು 6.9-ಇಂಚಿನ ಪ್ರೊ ಮ್ಯಾಕ್ಸ್ ಗಿಂತ ಸ್ವಲ್ಪ ಚಿಕ್ಕದಾಗಿದೆ. ಇದರರ್ಥ ದೊಡ್ಡದಾದ ಪರದೆಯನ್ನು ಬಯಸುವ ಆದರೆ ಅತಿಯಾದ ಗಾತ್ರವನ್ನು ಇಷ್ಟಪಡದ ಬಳಕೆದಾರರನ್ನು ಆಪಲ್ ಗುರಿಯಾಗಿಸಿಕೊಂಡಿರಬಹುದು. ಕುತೂಹಲಕಾರಿಯಾಗಿ, ಈ ಸ್ಮಾರ್ಟ್‌ಫೋನಿನ ಹೊಸ ಕ್ಯಾಮೆರಾ ವಿನ್ಯಾಸವು ಈ ಹಿಂದೆ ಕೇಳಿಬಂದಿದ್ದ ಉನ್ನತ-ಕೇಂದ್ರಿತ ಕ್ಯಾಮೆರಾ ವಿನ್ಯಾಸದ ವರದಿಗಳಿಗೆ ವಿರುದ್ಧವಾಗಿದೆ ಎಂದು ಸಹ ಹೇಳಲಾಗಿದೆ.
ಕಾರ್ಯಕ್ಷಮತೆಯ ವಿಷಯಕ್ಕೆ ಬಂದರೆ, ಐಫೋನ್ 17 ಏರ್ ಸ್ಮಾರ್ಟ್‌ಫೋನ್ ಸ್ಟ್ಯಾಂಡರ್ಡ್ A19 ಚಿಪ್‌ನೊಂದಿಗೆ ಬರಬಹುದೆಂದು ನಿರೀಕ್ಷಿಸಲಾಗಿದೆ. ಅದೇ A19 ಪ್ರೊ ಚಿಪ್ ಅನ್ನು ಪ್ರೊ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳಲ್ಲಿ ಬಳಸಲಾಗುವುದು ಎಂದು ಹೇಳಲಾಗುತ್ತಿದೆ. ಈ ವ್ಯತ್ಯಾಸವು ಆಪಲ್ ಏರ್ ಮಾದರಿಯನ್ನು ಮಧ್ಯಮ ಶ್ರೇಣಿಯ ವಿಶೇಷಣಗಳೊಂದಿಗೆ, ಕೈಗೆಟುಕುವ ಬೆಲೆಯಲ್ಲಿ ಮತ್ತು ವಿನ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಫೋನ್ ಆಗಿ ಮಾಡಲು ಸಹಾಯ ಮಾಡುತ್ತದೆ. ಒಂದು ವೇಳೆ ಈ ಸ್ಮಾರ್ಟ್‌ಫೋನ್ A19 ಪ್ರೊ ಚಿಪ್ ಹೊಂದಿದ್ದರೆ ಮೊಬೈಲ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಹ ಸಾಧ್ಯವಿದೆ.

ಆಪಲ್ ಸಾಮಾನ್ಯವಾಗಿ ತನ್ನ ವಾರ್ಷಿಕ ಕಾರ್ಯಕ್ರಮದಲ್ಲಿ ಹೊಸ ಐಫೋನ್ ಸರಣಿಯನ್ನು ಅನಾವರಣಗೊಳಿಸುತ್ತದೆ. ಅದರಂತೆ, ಐಫೋನ್ 17 ಸರಣಿಯು ಸೆಪ್ಟೆಂಬರ್ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಲ್ಲಿಯವರೆಗೆ, ಈ ಎಲ್ಲಾ ಮಾಹಿತಿಯನ್ನು ಕೇವಲ ಊಹೆಗಳೆಂದು ಪರಿಗಣಿಸುವುದು ಸೂಕ್ತ. ಆದರೆ, ಐಫೋನ್ 17 ಏರ್ ವದಂತಿಗಳಂತೆ ನಿಜವಾಗಿಯೂ ಮಾರುಕಟ್ಟೆಗೆ ಬಂದರೆ, ಅದು ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗುವ ಅತ್ಯಂತ ವಿಶಿಷ್ಟವಾದ ಐಫೋನ್‌ಗಳಲ್ಲಿ ಒಂದಾಗುವುದರಲ್ಲಿ ಸಂಶಯವಿಲ್ಲ. ಮತ್ತು ಆಪಲ್ ಅಂತಿಮವಾಗಿ ಯಾವ ವಿನ್ಯಾಸವನ್ನು ಅಳವಡಿಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications








