ಹೊಸ ಬಣ್ಣಗಳಲ್ಲಿ ಮಿಂಚಲಿದೆ ಆಪಲ್ ಐಫೋನ್ 2018
ದಿನದಿಂದ ದಿನಕ್ಕೆ ಹುಟ್ಟಿಕೊಳ್ಳುತ್ತಿರುವ ಮತ್ತು ಹಬ್ಬುತ್ತಿರುವ ಆಪಲ್ ಐಫೋನ್ 2018 ಬಗೆಗಿನ ಸುದ್ದಿಗಳು ಈ ಫೋನ್ ಬಗೆಗಿನ ಕಲ್ಪನೆಯನ್ನು ಹೆಚ್ಚಿಸುತ್ತಿದೆ. ಆದರೆ ಈಗಾಗಲೇ ಹರಿದಾಡುತ್ತಿರುವ ಕೆಲವು ಗಾಸಿವ್ ಸುದ್ದಿಗಳು ಮತ್ತು ಫೋಟೋಗಳ ಪ್ರಕಾರವೇ ಕೆಲವು ವೈಶಿಷ್ಟ್ಯತೆಗಳ ಬಗ್ಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿದೆ.
ಬ್ಲೂಮ್ ಬರ್ಗ್ ನಿಂದ ಬಂದಿರುವ ಹೊಸ ಸುದ್ದಿಯೊಂದು ಕೆಲವು ಸಣ್ಣಪುಟ್ಟ ಮಾಹಿತಿ ಮತ್ತು ಕುತೂಹಲಗಳಿಗೆ ತೆರೆ ಎಳೆಯುತ್ತಿದೆ. ಈ ವರ್ಷ ಬೆಳಕಿಗೆ ಬರುವ ಕೆಲವು ಅಧ್ಬುತ ಐಫೋನ್ ಮತ್ತು ಅವುಗಳ ಬಣ್ಣಗಳ ಬಗ್ಗೆ ವರದಿಯು ಕೆಲವು ಸುಳಿವುಗಳನ್ನು ನೀಡುತ್ತಿದೆ.

ಈ ವರದಿಯು ಈಗಾಗಲೇ ಹರಡಿರುವ ಗಾಸಿಪ್ ವೊಂದನ್ನು ದೃಢಪಡಿಸುತ್ತಿದ್ದು ಆಪಲ್ ಈ ಬಾರಿ ಮೂರು ಬಣ್ಣಗಳ ವೇರಿಯಂಟ್ ನಲ್ಲಿ ಹೊಸ ಐಫೋನ್ ನ್ನು ಬಿಡುಗಡೆಗೊಳಿಸುತ್ತದೆ ಎಂದು ಹೇಳುತ್ತಿದೆ. ಹೌದು ಈ ಎಲ್ಲಾ ಐಫೋನ್ ಎಕ್ಸ್ ಗಳು ಎಡ್ಜ್-ಟು-ಎಡ್ಜ್ ಡಿಸ್ಪ್ಲೇಯನ್ನು ಹೊಂದಿರಲಿದೆ.
ಇದು ದೊಡ್ಡ ಮಟ್ಟದ ಬೆಲೆ, ವೈಶಿಷ್ಟ್ಯತೆಗಳು ಮತ್ತು ಸೈಜ್ ನ್ನು ಕೂಡ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.ಇವುಗಳಲ್ಲಿ ಅತೀ ಹೆಚ್ಚು ಹೊಸ ವೈಶಿಷ್ಟ್ಯತೆಗಳಿದ್ದು ಡಿಸೈನ್ ಮತ್ತು ಫೋನಿನ ಅಂದಚೆಂದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಈ ಬಾರಿ ಆಪಲ್ ಸಂಸ್ಥೆ ನೀಡಿದೆ ಎಂದು ಹೇಳಲಾಗುತ್ತಿದೆ.
ಹೊಸ ಐಫೋನಿನಲ್ಲಿ ಆಗುವ ದೊಡ್ಡ ಬದಲಾವಣೆ ಎಂದರೆ ಡುಯಲ್ ಸಿಮ್ ಕಾರ್ಡ್ ಗೆ ಬೆಂಬಲ ನೀಡುವುದು.ಕೆಲವು ಪ್ರದೇಶಗಳಿಗೆ ಹೊಸ ಐಫೋನ್ ನಲ್ಲಿ ಎರಡು ಸಿಮ್ ಕಾರ್ಡ್ ಬಳಸಲು ಆಪಲ್ ಅನುವು ಮಾಡಿಕೊಡುವ ಸಾಧ್ಯತೆಯನ್ನು ಈ ವರದಿ ಹೇಳುತ್ತಿದೆ.
ಆಪಲ್ ನ ಹೈ-ಎಂಡ್ ಐಫೋನ್ ಗಳು 6.5-ಇಂಚಿನ ಡಿಸ್ಪ್ಲೇಯನ್ನು ಹೊಂದಿರಲಿದ್ದು ಸದ್ಯ ಮಾರುಕಟ್ಟೆಗೆ ಬರುವು ಅತೀ ದೊಡ್ಡ ಡಿಸ್ಪ್ಲೇ ಇರುವ ಫೋನ್ ಗಳೆಂದು ಗುರುತಿಸಿಕೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಐಫೋನಿನ ಹಿಂಭಾಗದಲ್ಲಿ ಗ್ಲಾಸ್ ಬ್ಯಾಕ್ ಇದೆ ಮತ್ತು ಎರಡೂ ಭಾಗದಲ್ಲೂ ಸ್ಟೈನ್ ಲೆಸ್ ಸ್ಟೀಲ್ ಇದೆ.
ಜೊತೆಗೆ ಡುಯಲ್ ಕ್ಯಾಮರಾ ಸೆಟ್ ಅಪ್ ನ್ನು ಇದು ಹೊಂದಿರಲಿದೆ ಎಂದು ವರದಿ ಹೇಳಿದೆ. ಇನ್ನೊಂದು ದೊಡ್ಡ ಬದಲಾವಣೆ ಏನೆಂದರೆ ಸೈಡ್-ಬೈ-ಸೈಡ್ ಆಪ್ ಗಳು ಅಂದರೆ ಕ್ಯಾಲೆಂಡ್ ಮತ್ತು ಮೇಲ್ ಆಪ್ ಗಳು ಕಟೆಂಟ್ ಗಳನ್ನು ಸೈಡ್-ಸೈಡ್ ಡಿಸ್ಪ್ಲೇ ಮಾಡಲಿವೆ. 6.5 ಇಂಚಿನ ಮಾಡೆಲ್ ನಲ್ಲಿ OLED ಸ್ಕ್ರೀನ್ ಕೂಡ ಇರಲಿದೆ.

ಸದ್ಯದ 5.8 ಇಂಚಿನ ಐಫೋನ್ ಎಕ್ಸ್ ನ ಮಾಡೆಲ್ ಕೂಡ ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಇದರಲ್ಲಿರುವ ಪ್ರಮುಖ ಬದಲಾವಣೆ ಎಂದರೆ ಪ್ರೊಸೆಸ್ಸಿಂಗ್ ವೇಗ ಮತ್ತು ಕ್ಯಾಮರಾ ವಿಭಾಗದಲ್ಲಿ ಹೆಚ್ಚು ಬದಲಾವಣೆಗಳು ಇರಲಿದೆ. ಹೊಸ ಪ್ರೊಸೆಸರ್ ಮತ್ತು ಉತ್ತಮ ಪ್ರದರ್ಶನ ನೀಡುವ ಕ್ಯಾಮರಾವನ್ನು ಐಫೋನ್ ಎಕ್ಸ್ ನಲ್ಲಿ ಆಪಲ್ ಅಳವಡಿಸಿರುತ್ತದೆ ಎಂದು ನಂಬಲಾಗಿದೆ.
ಹೊಸದಾದ ಕಡಿಮೆ ಬೆಲೆಯ ಐಫೋನ್ ಬಹಳ ಮಹತ್ವಪೂರ್ಣದ್ದಾಗಿದೆ. ಅದರ ಕೋಡ್ ನೇಮ್ N84 ಆಗಿದ್ದು ಐಫೋನ್ ಎಕ್ಸ್ ನಂತಹ ಡಿಸೈನ್ ನ್ನೇ ಹೊಂದಿರುತ್ತದೆ ಆದರೆ ಇದರ ವೈಶಿಷ್ಟ್ಯತೆಗಳಲ್ಲಿ ಪ್ರಮುಖವಾದಿ 6.1– ಇಂಚಿನ ಸ್ಕ್ರೀನ್ ಮತ್ತು ಹಲವು ಬಣ್ಣಗಳ ವೇರಿಯಂಟ್ ಇರುತ್ತದೆ.
ಸ್ಟೈನ್ ಲೆಸ್ ಸ್ಟೀಲ್ ನ ಅಲ್ಯುಮಿನಿಯಂ ಎಡ್ಜ್ ಇರಲಿದೆ ಮತ್ತು LCD ಡಿಸ್ಪ್ಲೇಯನ್ನು ಹೊಂದಿರಲಿದೆ. ವರದಿಯ ಪ್ರಕಾರ ಎಲ್ ಸಿಡಿ ಐಫೋನ್ ಗಳು ಹಾನ್ ಹೈ ಮತ್ತು ಪೆಗಟ್ರಾನ್ ಕ್ರಾಪ್ ನಿಂದ ಎರಡರಿಂದಲೂ ವಿಭಾಗಿಸಿ ಜೋಡಣೆ ಮಾಡಿರಲಾಗಿರುತ್ತದೆ ಎನ್ನಲಾಗಿದೆ.


Click it and Unblock the Notifications



