ಇಬೇನಲ್ಲಿ ಐಫೊನ್‌ 5ನ ಪ್ರೀ ಆರ್ಡರ್‌ ಬೆಲೆ ಹೀಗಿದೆ

Posted By: Staff
ಇಬೇನಲ್ಲಿ ಐಫೊನ್‌ 5ನ ಪ್ರೀ ಆರ್ಡರ್‌ ಬೆಲೆ ಹೀಗಿದೆ

ಸೆಪ್ಟೆಂಬರ್‌ 12 ರಂದು ಅನಾವರಣ ಗೊಂಡಂತಹ ಆಪಲ್‌ ನ ಐಫೋನ್‌ 5 ಈಗಾಗಲೇ ಅಮೇರಿಕಾ ಹಾಗೂ ಬ್ರಿಟನ್‌ನಂತಹ ಆಯ್ದ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದೆ ಹಾಗೂ ಭಾರತೀಯ ಮಾರುಕಟ್ಟೆಗೆ ಡಿಸೆಂಬರ್‌ ವೇಳೆಗೆ ಬಿಡುಗಡೆ ಯಾಗುವ ನಿರೀಕ್ಷೆಯಿದೆ.

ಅಂದಹಾಗೆ ಭಾರತದಲ್ಲಿ ಬಿಡುಗಡೆ ಯಾಗುವವರೆಗೂ ಕಾಯುವ ತಾಳ್ಮೆ ಇಲ್ಲದೇ ಇರುವಂತಹ ಐಫೋನ್‌ ಪ್ರಿಯರು ಗ್ರೇ ಮಾರುಕಟ್ಟೆಯ ಮೂಲಕ ದುಪ್ಪಟ್ಟು ಹಣ ಪಾವತಿಸಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಪ್ರವೇಶಿಸುವ ಮುನ್ನವೇ ಐಫೊನ್‌ 5ಯನ್ನು ತಮ್ಮದಾಗಿಸಿ ಕೊಳ್ಳಬಹುದಾಗಿದೆ.

ಆರನೇ ತಲೆಮಾರಿನ ಫೋನ್‌ ಎಂದು ಕರೆಸಿಕೊಂಡಿರುವ ಐಫೋನ್‌ 5 ಯನ್ನು ಭಾರತದಲ್ಲಿ ಕೇವಲ ಗ್ರೇ ಮಾರುಕಟ್ಟೆ ಹೊರತಾಗಿ ಇಬೇ ನಲ್ಲಿಯೂ ಕೂಡ ಲಭ್ಯವಿದ್ದು, ಐಫೋನ್‌ 5 16GB, 32GB ಹಾಗೂ 64 GB ಮಾದರಿಯ ಫೊನ್‌ಗಳು ಇಬೇನಲ್ಲಿ ಕ್ರಮವಾಗಿ 92,000, 1,00,000 ಹಾಗೂ 1,10,000 ರೂಪಾಯಿ ಮೌಲ್ಯದಲ್ಲಿ ಲಭ್ಯವಿದೆ.

ಕುತೂಹಲಕಾರಿ ಅಂಶವೇನೆಂದರೆ ಆನ್‌ಲೈನ್‌ ಮೂಲಕ ಖರೀದಿಸುವವರಿಗೆ ಫ್ರೀ ಶಿಪ್ಪಿಂಗ್‌ ಮಾಡಲಾಗುವುದು ಎಂದು ವೆಬ್ಸೈಟ್‌ ತಿಳಿಸಿದೆ. ಅಂದಹಾಗೇ ಈ ಎಲ್ಲಾ ಐಫೋನ್‌ಗಳೂ ಪ್ಯಾಕ್ಟರೀ ಅನ್‌ಲಾಕ್‌ ಮಾದರಿಯ ಫೋನ್‌ಗಳಾಗಿವೆ.

ಐಫೋನ್‌ 5 ಕುರಿತಾದ ಸಂಕ್ಷಿಪ್ತ ವಿವರಣೆ ಹೀಗಿದೆ, 4 ಇಂಚಿನ ದರ್ಶಕ, 1136 x 640 ಪಿಕ್ಸೆಲ್ಸ್‌, ಆಪಲ್‌ A6 ಚಿಪ್‌ಸೆಟ್‌, 1GB RAM, 16GB/32GB/64GB ಆಂತರಿಕ ಮೆಮೊರಿ, 8MP ಕ್ಯಾಮೆರಾ ಹಾಗೂ 1.2MP ಮುಂಬದಿಯ ಕ್ಯಾಮೆರಾ.

ಇದಲ್ಲದೆ, ಐಫೋನ್‌ 5ನಲ್ಲಿ Wi-Fi 802.11 b/g/n, ಬ್ಲೂಟೂತ್‌ 4.0 ಹಾಗೂ A2DP, 4G LTE, 3G, ಮೈಕ್ರೋ USB 2.0 ಹೊಂದಿದೆ. ಆಪಲ್‌ ಸಂಸ್ಥೆ ಹೇಳುವಂತೆ ಈಸ್ಮಾರ್ಟ್‌ಫೋನ್‌ 8 ಟಾಕ್‌ಟೈಮ್‌ ಹಾಗೂ 225 ಸ್ಟ್ಯಾಂಡ್‌ಬೈ ನೀಡುತ್ತದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot