Subscribe to Gizbot

ಆಪಲ್‌ ಐಫೊನ್‌ Vs ಹೆಚ್‌ಟಿಸಿ ವನ್‌ X

Posted By: Staff
ಆಪಲ್‌ ಐಫೊನ್‌ Vs ಹೆಚ್‌ಟಿಸಿ ವನ್‌ X

ಜಾಗತಿಕ ಮಾರುಕಟ್ಟೆಗೆ ಐಫೊನ್‌ 5 ಕಾಲಿಟ್ಟ ಕ್ಷಣದಿಂದಲೂ ತಂತ್ರಜ್ಞಾನ ಕ್ಷೇತ್ರವು ಆಪಲ್‌ ಸ್ಮಾರ್ಟ್‌ಫೋನ್‌ ಅನ್ನು ಇತರೆ ಸ್ಮಾರ್ಟ್‌ಫೋನ್‌ಳಿಗೆ ಹೋಲಿಕೆ ಮಾಡುವಲ್ಲಿ ನಿರತಾವಾಗಿದೆ. ಅದರಂತೆ ಈಗಾಗಲೇ ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3 ಹಾಗೂ ನೋಕಿಯಾ ಲೂಮಿಯಾ 920 ಯಂತಹ ಫೋನ್‌ ಗಳೊಂದಿಗೆ ಹೋಲಿಕೆ ಮಾಡಲಾಗಿದ್ದು ಇದೀಗ ಸ್ಮಾರ್ಟ್‌ಫೋನ್‌ಗಳ ರಾಜ ಎಂದೇ ಕರೆಸಿಕೊಂಡಿರುವ HTC ವನ್‌ X ಫೋನ್‌ ನೊಂದಿಗೆ ಹೋಲಿಕೆ ಮಾಡಲಾಗಿದೆ.

HTC ವನ್‌ X ಭಾರತದಲ್ಲಿ 34,999 ರೂಗಳಿಗೆ ಲಭ್ಯವಿದ್ದು ಸ್ಯಾಮ್ಸಂಗ್‌ ಗ್ಯಾಲಾಕ್ಸಿ S3 ಸೇರಿದಂತೆ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಅಂದಹಾಗೆ ಈ ಸ್ಮಾರ್ಟ್‌ಪೋನ್‌ಗಳ ರಾಜ ಆಪಲ್‌ ಐಫೋನ್‌ 5 ಯಂತಹ ಆರನೇ ತಲೆಮಾರಿನ ಫೊನ್‌ಗೆ ಯಾವರೀತಿ ಪೈಪೋಟಿ ನೀಡಲಿದೆ ಎಂಬುದನ್ನು ತಿಳಿದುಕೊಳ್ಳೋಣ.

 

ಸುತ್ತಳತೆ: 123.8 x 58.6 x 7.6 mm ಸುತ್ತಳತೆಯೊಂದಿಗೆ 112 ಗ್ರಾಂ ತೂಕ ವಿರುವ ಐಫೋನ್‌ 5, HTC ವನ್‌ X ನ 134.8 x 69.9 x 8.9mm ಸುತ್ತಳತೆ ಹಾಗೂ 130 ಗ್ರಾಂ ತೂಕಕ್ಕೆ ಹೋಲಿಸಿದರೆ ಹೆಚ್ಚು ಹಗುರ ಹಾಗೂ ತೆಳ್ಳಗಿದೆ.

ದರ್ಶಕ: ದರ್ಶಕದ ವಿಚಾರದಲ್ಲಿ ಐಫೋನ್‌ 5 ನಲ್ಲಿ 4 ಇಂಚಿನ LED-backlit IPS ಸಾಮರ್ತ್ಯದ ಟಚ್‌ಸ್ಕ್ರೀನ್‌ ರೆಟಿನಾ ದರ್ಶಕದೊಂದಿಗೆ 1136 x 640 ಪಿಕ್ಸೆಲಲ ರೆಸೆಲ್ಯೂಷನ್‌ ಹಾಗೂ 326 ppi ಪಿಕ್ಸೆಲ್‌ ಡೆನ್ಸಿಟಿ ಹೊಂದಿದೆ.

ಮತ್ತೊಂದೆಡೆ HTC ವನ್‌ X ನಲ್ಲಿ 4.7-ಇಂಚಿನ ಸೂಪರ್‌ LCD 2 IPS ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕದೊಂದಿಗೆ 720 x 1280 ಪಿಕ್ಸೆಲ್‌ ರೆಸೆಲ್ಯೂಷನ್‌ ಹಾಗೂ 312 ppi ಪಿಕಸೆಲ್‌ ಡೆನ್ಸಿಟಿ ಇದೆ.

ಪ್ರೊಸೆಸರ್‌:ಈ ವಿಭಾಗದಲ್ಲಿ ಐಫೋನ್‌ 5 ನೂತನ ಆಪಲ್‌ A6 ಚಿಪ್ಸೆಟ್‌ ಹೊಂದಿದ್ದರೆ, ವನ್‌ X ಕ್ವಾಡ್‌ ಕೋರ್‌ NVIDIA ಟೆಗ್ರಾ 3 ಚಿಪ್ಸೆಟ್‌ ನೊಂದಿಗೆ 1.5GHz ಹೊಂದಿದೆ.

ಆಪರೇಟಿಂಗ್‌ ಸಿಸ್ಟಂ: ಐಫೋನ್ 5 iOS 6 ಚಾಲಿತ ವಾಗಿದ್ದರೆ, ವನ್‌ X ಆಂಡ್ರಾಯ್ಡ್‌ 4.0.4 ಐಸ್‌ ಕ್ರೀಮ್‌ ಸ್ಯಾಂಡ್ವಿಚ್‌ ಚಾಲಿತ ವಾಗಿದ್ದು HTC ಸೆನ್ಸ್‌ UI ಒಳಗೊಂಡಿದೆ.

ಕ್ಯಾಮೆರಾ: ಎರಡೂ ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂಬದಿಯ 8MP ಕ್ಯಾಮೆರಾದೊಂದಿಗೆ ಆಟೋ ಫೋಕಸ್‌, LED ಫ್ಳಾಷ್‌, geo-ಟ್ಯಾಗಿಂಗ್‌, ಟಚ್‌ ಫೋಕಸ್‌ ಹಾಗೂ ಫೇಸ್‌ ಡಿತೆಕ್ಷನ್‌ ಸೇರಿದಂತೆ ವಿಡಿಯೋ ಕಾಲಿಂಗ್‌ಗಾಗಿ 1.3MP ನ ಮುಂಬದಿಯ ಕ್ಯಾಮೆರಾ ಹೊಂದಿದೆ.

ಸ್ಟೊರೇಜ್‌: ಐಫೋನ್‌ 5 16GB/32GB/64GB ಗಳಲ್ಲಿ ಲಭ್ಯವಿದ್ದು 1GB RAM ಹೊಂದಿದೆ. ಮತ್ತೊಂದೆಡೆ ವನ್‌ X 32GB ಫ್ಲಾಷ್‌ ಮೆಮೊರಿಯೊಂದಿಗೆ 1GB RAM ಒಳಗೊಂಡಿದೆ.

ಕನೆಕ್ಟಿವಿಟಿ: ಈ ವಿಭಾಗದಲ್ಲಿ ಐಫೊನ್‌ 5 ನಲ್ಲಿ DC-HSDPA 42Mbps, HSDPA 21Mbps, HSUPA 5.76Mbps, 4G LTE, Wi-Fi 802.11 a/b/g/n, Wi-Fi ಪಲ್ಸ್‌ ಸೆಲ್ಯುಲರ್‌, ಬ್ಲೂಟೂತ್‌ v4.0 ಜೊತೆಗೆ A2DP ಹಾಗೂ ಮೈಕ್ರೋ USB 2.0 ಹೊಂದಿದೆ.

ಮತ್ತೊಂದೆಡೆ HTC ವನ್‌ X ನಲ್ಲಿ Wi-Fi 802.11 b/g/n, Wi-Fi ಡೈರೆಕ್ಟ್‌, DLNA, Wi-Fi ಹಾಟ್‌ಸ್ಪಾಟ್‌, ಬ್ಲೂಟುತ್‌ ಜೊತೆಗೆ A2DP ಹಾಗೂ ಮೈಕ್ರೋ USB 2.0 ಸೇರಿದಂತೆ USB ಆನ್‌ ದಿ ಗೋ ಜೊತೆಗೆ ಬೆಸ್ಟ್‌ ಆಡಿಯೋ ಸರೌಂಡಿಂಗ್‌ ಒಳಗೊಂಡಿದೆ.

ಬ್ಯಾಟರಿ: ಐಫೋನ್‌ 5 ನಲ್ಲಿ Li-Po ಬ್ಯಾಟರಿ ಇದ್ದು 225 ಗಂಡೆಗಳ ಸ್ಟ್ಯಾಂಡ್‌ ಬೈ ಹಾಗೂ 8 ಟಾಕ್‌ ಟೈಮ್‌ ನೀಡುತ್ತದೆ. ಮತ್ತೊಂದೆಡೆ HTC ವನ್‌ X ನಲ್ಲಿ 1,800 mAh Li-ion ಬ್ಯಾಟರಿ ಇದ್ದು 8 ಗಂಟೆಗಳಿಗೂ ಹೆಚ್ಚಿನ ಟಾಕ್‌ ಟೈಮ್‌ ನೀಡುತ್ತದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot