Just In
Don't Miss
- News
Karnataka assembly election 2023: ಮೂಲ ಕಾಂಗ್ರೆಸ್ಸಿಗರನ್ನು ಕಾಯುವುದೇ ನನ್ನ ಕೆಲಸ: ವೀರಪ್ಪ ಮೊಯ್ಲಿ
- Sports
Ind vs Aus Test: ರೋಹಿತ್ ಶರ್ಮಾ ನಾಯಕತ್ವವನ್ನು ನಿರ್ಧರಿಸಲಿವೆ ಮುಂದಿನ 5 ಟೆಸ್ಟ್ ಪಂದ್ಯಗಳು
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಪಲ್ ಐಫೋನ್ 5 VS ಗ್ಯಾಲಾಕ್ಸಿ ನೋಟ್ 2
ಇಂದು ಗ್ರಾಹಕರು ತಮ್ಮ ಸ್ಮಾರ್ಟ್‌ಪೋನ್ಸ್‌ಗಳಲ್ಲಿ ಬ್ರೌಸಿಂಗ್ ಮಾಡಲು, ವಿಡಿಯೊ ನೋಡಲು ಹಾಗೂ ಗೇಮ್‌ಗಳನ್ನು ಆಡಲು ಸಲುವಾಗಿ ದೊಡ್ಡ ಪರೆದೆಯುಳ್ಳ ಸ್ಮಾರ್ಟ್‌ಫೋನ್ಸ್‌ಗಳ ಮೊರೆ ಹೋಗುತ್ತಿರುವುದರಿಂದ ಜಾಗತಿಕ ಮೋಬೈಲ್ ತಯಾರಕರುಗಳಾದಂತಹ ಆಪಲ್, ಸ್ಯಾಮ್ಸಂಗ್ ಹಾಗೂ ಹೆಚ್‌ಟಿಸಿ 3 ರಿಂದ 5 ಇಂಚಿನ ಸ್ಕ್ರೀನ್ ಹೊಂದಿರುವಂತಹ ಸ್ಮಾರ್ಟ್‌ಫೋನ್ಸ್‌ಗಳನ್ನು ಮಾರುಕಟ್ಟೆಗೆ ತರುತ್ತಲೇ ಇದ್ದಾರೆ. ಅಂದಹಾಗೆ ಈ ಸಾಲಿಗೆ ನೂತನ ವಾಗಿ ಆಪಲ್ ಸಂಸ್ಥೆಯು ತನ್ನಯ ನೂತನ ಆರನೇ ತಲೆಮಾರಿನ ಸ್ಮಾರ್ಟ್‌ಫೋನ್ ಆದಂತಹ ಐಫೋನ್ 5 ಅನ್ನು ವಿಶ್ವದ ವಿವಿಧೆಡೆ ಬಿಡುಗಡೆ ಮಾಡಿದ್ದು ಮುಂಬರುವ ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿರಿಸಲಿದೆ.
ಐಫೋನ್ 5 ಗೆ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಈಗಾಗಲೆ ಸ್ಯಾಮ್ಸಂಗ್ ತನ್ನಯ ನೂತನ ಗ್ಯಾಲಾಕ್ಸಿ ನೋಟ್ 2 ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೀವೂ ಕೂಡಾ ಈ ಎರಡೂ ಸಾಧನಗಳಲ್ಲಿ ಯಾವುದನ್ನಾದರು ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ಅದಕ್ಕೂ ಮುನ್ನ ಇವೆರಡರ ನಡುವಿನ ಹೋಲಿಕೆಯನ್ನು ಒಮ್ಮೆ ಓದಿ ನೋಡಿ ನಂತರ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಿ.
ಗಾತ್ರ ಹಾಗೂ ಸುತ್ತಳತೆ: ಈ ವಿಚಾರದಲ್ಲಿ ಐಫೋನ್ 5 ಗ್ಯಾಲಾಕ್ಸಿ ನೋಟ್ 2 ಗಿಂತಲು ಕೊಂಚ ಕಡಿಮೆಯ ಅಂದರೆ 123.8 x 58.6 x 7.6 mm ಸುತ್ತಳೆ ಹೊಂದಿದ್ದು ಹಾಗೂ ಸ್ಲಿಮ್ ಹಾಗು ಹಗುರ ವಿನ್ಯಾಸ ಹೊಂದಿರುವುದರಿಂದ 112 ಗ್ರಾಂ ತೂಕವಿದೆ, ಹಾಗೂ ಗ್ಯಾಲಾಕ್ಸಿ ನೋಟ್ 2 ಕೊಂಚ ದೊಡ್ಡದಾಗಿರುವುದರಿಂದ 151.1 x 80.5 x 9.4 mm ಸುತ್ತಳತೆಯೊಂದಿಗೆ 180 ಗ್ರಾಂ ತೂಕವಿದೆ.
ದರ್ಶಕ: ಐಫೋನ್ 5 ನಲ್ಲಿ 4 ಇಂಚಿನ LED-ಬ್ಯಾಕ್‌ಲೈಟ್ IPS ಸಾಮರ್ತ್ಯದ ಟಚ್‌ಸ್ಕ್ರೀನ್ ರೆಟಿನಾ ಡಿಸ್ಪ್ಲೇಯೊಂದಿಗೆ 1136 x 640 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದ್ದರೆ, ಮತ್ತೊಂದೆಡೆ ಗ್ಯಾಲಾಕ್ಸಿ ನೋಟ್ 2 ನಲ್ಲಿ ಕೊಂಚ ಹಿರಿದಾದ 5.5 ಇಂಚಿನ ಸೂಪರ್ AMOLED ಟಚ್‌ಸ್ಕ್ರೀನ್ ದರ್ಶಕದೊಂದಿಗೆ 1280 x 720 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ. ಅಲ್ಲದೆ ಗ್ಯಾಲಾಕ್ಸಿ ನೋಟ್ 2 ನಲ್ಲಿ ಎಸ್-ಪೆನ್ ಸೌಲಭ್ಯವಿದ್ದು ಉತ್ತಮ ಟಚ್ ಪ್ರತಿಕ್ರಿಯೆ ಪಡೆಯ ಬಹುದಾಗಿದೆ.
ಪ್ರೊಸೆಸರ್: ಐಫೋನ್ 5 ನಲ್ಲಿ ಆಪಲ್‌ನ ನೂತನ ಆಪಲ್ ಎ6 ಚಿಪ್‌ಸೆಟ್ ಹೊಂದಿದ್ದರೆ, ಗ್ಯಾಲಾಕ್ಸಿ ನೋಟ್ 2 ನಲ್ಲಿ ಸ್ಯಾಮ್ಸಂಗ್ Exynos 4412 ಕ್ವಾಡ್ ಚಿಪ್‌ಸೆಟ್ ಹೊಂದಿದೆ.
ಆಪರೇಟಿಂಗ್ ಸಿಸ್ಟಂ: ಈ ವಿಚಾರದಲ್ಲಿ ಐಫೋನ್ 5 iOS 6 ಚಾಲಿತ ವಾಗಿದ್ದರೆ, ಗ್ಯಾಲಾಕ್ಸಿ ನೋಟ್ 2 ಆಂಡ್ರಾಯ್ಡ್ 4.1 ಜೆಲ್ಲಿ ಬೀನ್ ಆಪರೇಟಿಂಗ್ ಸಿಸ್ಟಂ ಹೊಂದಿದೆ
ಕ್ಯಾಮೆರಾ: ಈ ವಿಚಾರದಲ್ಲಿ ಎರಡೂ ಸಾಧನಗಳಲ್ಲಿ 8MPನ ಹಿಂಬದಿಯ ಕ್ಯಾಮೆರಾ ಹಾಗೂ ಆಟೋ ಫೋಕಸ್ ಸೇರಿದಂತೆ LED ಫ್ಲಾಷ್ ಫೀಚರ್ಸ್ ಹೊಂದಿವೆ. ಇದಲ್ಲದೆ ಐಫೋನ್ 5ನಲ್ಲಿ ಐಸೈಟ್ ತಂತ್ರಜ್ಞಾನದೊಂದಿಗೆ ಬ್ಯಾಕ್‌ಸೈಟ್ ಇಲ್ಲಯುಮಿನೇಷನ್ ಹಾಗೂ ಪನೋರಮಾ ಫೀಚರ್ಸ್ ಹೊಂದಿದೆ. ಮುಂಬದಿಯ ಕ್ಯಾಮೆರಾ ಕುರಿತು ಹೇಲುವುದಾದರೆ ಐಫೋನ್ 5 ನಲ್ಲಿ 1.3MP ನ ಕ್ಯಾಮಡರಾ ಹೊಂದಿದ್ದರೆ ಗ್ಯಾಲಾಕ್ಸಿ ನೋಟ್ 2 ನಲ್ಲಿ ಕೊಂಚ ಉತ್ತಮವಾದ 1.9MP ಕ್ಯಾಮೆರಾ ಹೊಂದಿದೆ.
ಮೆಮೊರಿ: ಎರಡೂ ಡಿವೈಜ್‌ಗಳು – 16GB, 32GB ಹಾಗೂ 64GB ಆಂತರಿಕ ಸ್ಟೋರೇಜ್ ಮಾದರಿಗಳಲ್ಲಿ ಲಭ್ಯವಿದೆ. ಹಾಗೂ ಐಫೋನ್ 5 ಕೇವಲ 1GB RAM ಹೊಂದಿದ್ದರೆ, ಗ್ಯಾಲಾಕ್ಸಿ ನೋಟ್ 2 2GB RAM ಹೊಂದಿದೆ ಅಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.
ಕನೆಕ್ಟಿವಿಟಿ: ಎರಡೂ ಡಿವೈಜ್‌ಗಳಲ್ಲಿ HSDPA 21Mbps, HSUPA 5.76Mbps, 4G LTE, ವೈ-ಫೈ 802.11 a/b/g/n, ಬ್ಲೂಟೂತ್ v4.0 ಹಾಗೂ A2DP ಸೇರಿದಂತೆ ಮೈಕ್ರೋ USB 2.0 ಹೊಂದಿವೆ. ಹೆಚ್ಚುವರಿ ಎಂಬಂತೆ ಗ್ಯಾಲಾಕ್ಸಿ ನೋಟ್ ಎನ್‌ಎಫ್‌ಸಿ ಫೀಚರ್ ಲಭ್ಯವಿದ್ದು, ಐಫೋನ್ 5 ನಲ್ಲಿ ಈ ಫೀಚರ್ ಇಲ್ಲವಾಗಿದೆ.
ಬ್ಯಾಟರಿ: ಐಫೋನ್ 5 ನಲ್ಲಿ Li-ion ಬ್ಯಾಟರಿ ಇದ್ದು 225 ಗಂಟೆಗಳ ಸ್ಟ್ಯಾಂಡ್ ಬೈ 8 ಟಾಕ್ ಟೈಮ್ ನೀಡುತ್ತದೆ. ಮತ್ತೊಂದೆಡೆ ಗ್ಯಾಲಾಕ್ಸಿ ನೋಟ್ 2 ನಲ್ಲಿ 3,100 mAh Li-ion ಸಾಮರ್ತ್ಯದ ದೊಡ್ಡ ಗಾತ್ರದ ಬ್ಯಾಟರಿ ಇದ್ದು ದೀರ್ಘ ಕಾಲದ ಬ್ಯಾಟರೀ ಲೈಫ್ ನೀಡಿತ್ತದೆ.
ದರ: ಖರೀದಿಸುವುದಾದರೆ ಐಫೋನ್ 5 ಭಾರತಕ್ಕೆ ಅಧಿಕೃತವಾಗಿ ಪ್ರವೇಶ ಪಡೆಯ ಬೇಕಾಗಿದೆ, ಅಂದಹಾಗೆ ಈಗಾಗಲೇ ಹಲವು ಆನ್‌ಲೈನ್ ಸೈಟ್‌ಗಳ ಮೂಲಕ ನೂತನ ಸ್ಮಾರ್ಟ್‌ಫೋನ್‌ನ 16GB ಮಾದರಿಯು ರೂ. 45,500 ದರದಲಲಿ ಪ್ರೀ ಆರ್ಡರ್‌ನಲ್ಲಿ ಲಭ್ಯವಿದೆ. ಅಂದಹಾಗೆ ಗ್ಯಾಲಾಕ್ಸಿ ನೋಟ್ 2 ನ 16GB ಮಾದರಿಯು ರೂ.39,990 ದರದಲ್ಲಿ ಲಭ್ಯವಿದೆ.
ದರ ಇಳಿಕೆ ಕಂಡ ಟಾಪ್ 5 ಸ್ಮಾರ್ಟ್‌ಫೋನ್‌ಗಳು
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470