Subscribe to Gizbot

ಆಪಲ್ ಐಫೋನ್ 5ಸಿ ಇನ್ನು ಭಾರತದಲ್ಲಿ ರೂ 37,500 ಕ್ಕೆ

Written By:

ಈ ತಿಂಗಳ ಹಿಂದೆಯೇ, ಅತಿ ಕಡಿಮೆ ದರದ ಐಫೋನ್ 5ಸಿಯ ಬಗ್ಗೆ ವದಂತಿಗಳನ್ನು ಹಬ್ಬಿಸಲಾಗಿತ್ತು. ಆಪಲ್ ಈಗಾಗಲೇ ಭಾರತದಲ್ಲಿ 8 ಜಿಬಿ ಫೋನ್‌ ಅನ್ನು ರೂ 37,500 ಕ್ಕೆ ಮಾರಾಟ ಮಾಡುವುದನ್ನು ಪ್ರಾರಂಭಿಸಿದೆ.

ವರದಿಯ ಪ್ರಕಾರ, 8 ಜಿಬಿ ಐಫೋನ್ 5ಸಿಯ ಖರೀದಿಯಲ್ಲಿ ರೂ 3,000 ವಿನಾಯಿತಿಯನ್ನು ನೀಡಲಿದ್ದು ಈ ಫೋನ್ ನಿಮಗೆ ರೂ. 34,500 ಕ್ಕೆ ದೊರೆಯಲಿದೆ. ಈ ಕೊಡುಗೆ ಸೀಮಿತ ಅವಧಿಯಲ್ಲಿ ನಿಮಗೆ ದೊರೆಯಲಿದೆ. ಇದರ ಜೊತೆಗೆ ನಿಮಗೆ ಉಚಿತವಾಗಿ ಆಪಲ್ ಐಫೋನ್ 5ಸಿ ಕೇಸ್ ಕೂಡ ದೊರೆಯಲಿದ್ದು ಬಂಪರ್ ಕೊಡುಗೆಯೆನ್ನಿಸಲಿದೆ.

ಆಪಲ್ ಐಫೋನ್ 5ಸಿ ಇನ್ನು ಭಾರತದಲ್ಲಿ ರೂ 37,500 ಕ್ಕೆ

ಆಪಲ್ ಸದ್ಯವೇ ತನ್ನ 8 ಜಿಬಿ ದರದಲ್ಲಿ ಬೈಬ್ಯಾಕ್ ಆಫರ್ ಅನ್ನು ಒದಗಿಸಲಿದ್ದು ಇದರ ಹಿಂದಿನ ಮೊತ್ತವನ್ನು 30,000 ದ ಹತ್ತಿರಕ್ಕೆ ತರುವ ನಿರೀಕ್ಷೆಯಲ್ಲಿದೆ. ಐಫೋನ್ 5ಸಿ 16ಜಿಬಿ ಮಾಡೆಲ್‌ನ ಪ್ರಾರಂಭ ಬೆಲೆಯೇ ರೂ. 41,900 ಆಗಿದೆ. ಆಪಲ್ ತನ್ನ ಈ ಉತ್ಪನ್ನದಲ್ಲಿ ಪೋಲಿಕಾರ್ಬಿನೇಟ್ ಪ್ಲಾಸ್ಟಿಕ್ ಬಾಡಿಯನ್ನು ಬಳಸಿದ್ದು ಇದು 4 ಇಂಚಿನ ರೆಟಿನಾ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದರಲ್ಲಿ 8 ಮೆಗಾಪಿಕ್ಸೆಲ್‌ಗಳ ರಿಯರ್ ಫೇಸಿಂಗ್ ಕ್ಯಾಮೆರಾವಿದ್ದು ಹೆಚ್ಚು ಸುಧಾರಿತ ಎಚ್‌ಡಿ ಸಿದ್ಧ ಕ್ಯಾಮೆರಾ ಮುಂಭಾಗದಲ್ಲಿದೆ.

ಫೋನ್ ಇತ್ತೀಚಿನ iOS 7 ಮೊಬೈಲ್ ಐಒಎಸ್‌ನಲ್ಲಿ ಚಾಲನೆಯಾಗುತ್ತಿದೆ. ದುಬಾರಿ ಫೋನ್ ಆಗಿದ್ದರೂ ಬಳಸಲು ಉತ್ತಮವಾಗಿದೆ ಮತ್ತು ಹ್ಯಾಂಡಿಯಾಗಿದೆ.

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot