ನೀವು ತಿಳಿಯದ ಐಫೋನ್ ವಿಶೇಷತೆ ಸುತ್ತ

By Shwetha
|

ರೂ 53,000 ಕ್ಕೆ ಮೇಲ್ಪಟ್ಟು ಆಪಲ್ ಐಫೋನ್ 6 ಈಗ ವಿಶ್ವದಾದ್ಯಂತ ಲಭ್ಯವಾಗುತ್ತಿದೆ. ಈ ಹೊಸ ಹ್ಯಾಂಡ್‌ಸೆಟ್ 4.7 ಇಂಚಿನ ಡಿಸ್‌ಪ್ಲೇಯ ಜೊತೆಗೆ, ವೇಗವಾದ ಪ್ರೊಸೆಸರ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯೊಂದಿಗೆ ಬಂದಿದೆ. ಮೆಟಾಲಿಕ್ ದೇಹವನ್ನು ಹೊಂದಿರುವ ಈ ಫೋನ್ ಅನ್ನು ಭಾರತದಲ್ಲಿ ದುಬಾರಿ ಫೋನ್ ಎಂದೇ ಕರೆಯಲಾಗಿದೆ. ಇನ್ನು ಆಪಲ್‌ನ ಪ್ರಯತ್ನವನ್ನು ಹೊಗಳಿರು ಫೋನ್ ವಿಮರ್ಶಕರು ನಿಜಕ್ಕೂ ಇದೊಂದು ಅತ್ಯುತ್ತಮ ಫೋನ್ ಎಂಬುದಾಗಿ ಹೊಗಳಿದ್ದಾರೆ.

ಇನ್ನು ಈ ಫೋನ್ ತನ್ನೊಂದಿಗೆ ಆಕರ್ಷಕ ವಿಶೇಷತೆಗಳನ್ನು ಹೊಂದಿದ್ದು ನಿಜಕ್ಕೂ ಇದು ನಿಮ್ಮನ್ನು ಆಕರ್ಷಿಸುವುದು ಖಂಡಿತ. ಇದೇ ಪ್ರಯತ್ನದಲ್ಲಿ ನಾವು ಇಂದಿನ ಲೇಖನದಲ್ಲಿ ಬಂದಿದ್ದು ನಿಮಗೆ ಐಫೋನ್ 6 ನ ಹತ್ತು ವಿಶೇಷತೆಗಳನ್ನು ಪ್ರಸ್ತುತಪಡಿಸುವ ನಿಟ್ಟಿನಲ್ಲಿದ್ದೇವೆ. ಹಾಗಿದ್ದರೆ ಅವುಗಳೇನು ಎಂಬುದನ್ನು ಕೆಳಗಿನ ಸ್ಲೈಡ್‌ಗಳಲ್ಲಿ ನೋಡೋಣ.

#1

#1

ಸಿರಿ ಆಲಿಸುತ್ತಿದೆ. ಹೌದು ಧ್ವನಿ ನಿರ್ದೇಶಕವನ್ನು ಆನ್ ಮಾಡಲು ನೀವಿನ್ನು ಹೋಮ್ ಬಟನ್ ಅನ್ನು ಒತ್ತಬೇಕೆಂದೇನಿಲ್ಲ. ನೀವು 'ಹಾಯ್ ಸಿರಿ' ಎಂದು ಹೇಳಿದರೆ ಸಾಕು ಇದು ತಕ್ಷಣ ಜಾಗೃತಗೊಳ್ಳುತ್ತದೆ.

#2

#2

ಪ್ರತಿ ಸೆಕೆಂಡ್‌ಗೆ 240 ಫ್ರೇಮ್‌ನಲ್ಲಿ ಸ್ಲೋ ಮೋಶನ್ ವೀಡಿಯೊವನ್ನು ಇದೀಗ ಅತ್ಯಾಧುನಿಕ ಐಫೋನ್ 6 ನಲ್ಲಿ ದಾಖಲಿಸಬಹುದು. ಈ ಹೊಸ ಡಿವೈಸ್ ಟೈಮ್ ಲಾಪ್ಸ್ ವಿಶೇಷತೆಯನ್ನು ಬೆಂಬಲಿಸುತ್ತದೆ.

#3

#3

ಐಫೋನ್‌ನಲ್ಲಿ ಉತ್ತಮ ಗುಣಮಟ್ಟದ ಗೇಮ್‌ಗಳನ್ನು ರಚಿಸುವುದಕ್ಕಾಗಿ ಹೊಸ ಗೇಮ್ ಪರ್ಫಾಮೆನ್ಸ್ ಎಂಜಿನ್ ಆದ "ಮೆಟಲ್" ಅನ್ನು ವಿನ್ಯಾಸಗೊಳಿಸಲಾಗಿದೆ.

#4

#4

ಹೊಸ ಐಫೋನ್ 6, 4.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು, ಆಪಲ್ ಹೇಳುವಂತೆ 'ರೆಟೀನಾ ಎಚ್‌ಡಿ' ಪರದೆಯು ಉತ್ತಮ ಕಾಂಟ್ರಾಸ್ಟ್ ಮತ್ತು ವೀಕ್ಷಣೆ ಕೋನಗಳನ್ನು ಹೊಂದಿದೆ.

#5

#5

ಐಫೋನ್ 6 ಗಾಗಿ ಹೊಸದಾಗಿ ಪ್ರಾಯೋಜಿಸಿದ ವಿಶೇಷ ಅಂಶ ಇದಾಗಿದ್ದು ಡಿಸ್‌ಪ್ಲೇ ಜೂಮ್ ಅನ್ನು ಆನ್ ಮಾಡಿದಾಗ ಇದು ನಿಮ್ಮ ಫೋನ್‌ನ ಸ್ಕ್ರೀನ್ ಅನ್ನು ನಿಮಗೆ ಬೇಕಾದ ಹಾಗೆ ಹೊಂದಿಸಬಹುದಾಗಿದೆ.

#6

#6

ಫೋಕಸ್ ಪಿಕ್ಸೆಲ್ ಎಂಬ ಹೊಸ ಫೀಚರ್ ಅನ್ನು ಆಪಲ ಪ್ರಾಯೋಜಿಸಿದ್ದು, ಕಡಿಮೆ ಬೆಳಕಿನ ಚಿತ್ರಗಳನ್ನು ಕೂಡ ಕ್ಯಾಪ್ಚರ್ ಮಾಡುವ ಸಾಮರ್ಥ್ಯವನ್ನು ಐಫೋನ್ 6 ಹೊಂದಿದೆ ಎಂದಾಗಿದೆ.

#7

#7

ಐಫೋನ್ 6 ನಲ್ಲಿ 4G LTE ಅನ್ನು ಸಕ್ರಿಯಗೊಳಿಸಲಾಗಿದೆ. 150mbps ವರೆಗಿನ ಡೌನ್‌ಲೋಡ್ ವೇಗವನ್ನು ಇದು ಪಡೆದುಕೊಂಡಿದೆ.

#8

#8

ಐಫೋನ್ 6 ಬಿಲ್ಟ್ ಇನ್ ಬ್ಯಾರೋಮೀಟರ್ ಅನ್ನು ಹೊಂದಿದೆ. ಐಫೋನ್‌ನ ಹೆಲ್ತ್ ಅಪ್ಲಿಕೇಶನ್‌ನಲ್ಲಿ ನಿಮ್ಮೆಲ್ಲಾ ಆರೋಗ್ಯ ಮಾಹಿತಿ ಲಭ್ಯವಾಗುತ್ತದೆ.

#9

#9

ಐಫೋನ್ ತನ್ನ ಮುಖ್ಯಪರದೆಯಲ್ಲಿ ಲ್ಯಾಂಡ್‌ಸ್ಕೇಪ್ ಅನ್ನು ಹೊಂದಿದೆ. ಇದು ಐಪ್ಯಾಡ್‌ನಂತೆ ಕಾರ್ಯನಿರ್ವಹಿಸುತ್ತಿದ್ದು ಐಫೋನ್ 6 ಪ್ಲಸ್‌ನಲ್ಲಿ ಲಭ್ಯವಿದೆ.

#10

#10

ಐಫೋನ್ 6 ಪರದೆಯನ್ನು ನಿಮ್ಮ ಟೀವಿಗೆ ಸಂಪರ್ಕಪಡಿಸಿ ಫೋನ್‌ನ ಡಿಸ್‌ಪ್ಲೇಯ ಕಾರ್ಯವನ್ನು ಟಿವಿಯಲ್ಲಿ ನಿರ್ವಹಿಸಬಹುದಾಗಿದೆ. ಆದರೆ ಇದಕ್ಕಾಗಿ ನೀವು ರೂ 7,990 ಗಳ ಆಪಲ್ ಟಿವಿಯನ್ನು ಖರೀದಿಸಬೇಕಾಗುತ್ತದೆ.

Best Mobiles in India

English summary
This article tells about Apple iPhone 6: 10 Hidden Features You Should Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X