ಆಪಲ್ ಐಫೋನ್ 6 ನಿಮಗೆ ತಿಳಿದಿರಬೇಕಾದ ರೂಮರ್‌ಗಳು

By Shwetha
|

ನೆಕ್ಸ್ ಜನರೇಶನ್ ಐಫೋನ್ ಸದ್ಯದಲ್ಲೇ ಬರಲಿದ್ದು ಅದು ಹೇಗಿರಬಹುದೆಂಬ ಊಹಪೋಹಗಳು ಮತ್ತಷ್ಟು ಬಲವಾಗುತ್ತಿದೆ. ಇಲ್ಲಿಯವೆರೆಗೆ ಆಪಲ್ ಕೂಡ ಫೋನ್‌ನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

ಆಪಲ್‌ನ ಹಿಂದಿನ ಐಫೋನ್ ಲಾಂಚ್ ಈವೆಂಟ್‌ಗಳನ್ನು ಗಮನಿಸಿದಾಗ ಅಂದರೆ ಐಫೋನ್ 5s ಮತ್ತು ಐಫೋನ್ 5c ಯನ್ನು ಕಳೆದ ವರ್ಷವಷ್ಟೇ ಲಾಂಚ್ ಮಾಡಲಾಗಿತ್ತು. ಆದ್ದರಿಂದಲೇ ಐಫೋನ್ ಸಾಂಪ್ರದಾಯಿಕವಾಗಿ ಹೊಸ ಐಫೋನ್ ಅನ್ನು ಜೂನ್‌ನಲ್ಲಿ ಲಾಂಚ್ ಮಾಡಲಿದೆ. ಆದರೆ ಐಫೋನ್ 6 ನ ಕಾರ್ಯಗಳು ಇನ್ನೂ ನಡೆಯುತ್ತಿದ್ದು ಅದು ಹೇಗಿರದೆಂಬ ಕಲ್ಪನೆಗೆ ಪುಷ್ಟಿಯಾಗಿ ಆನ್‌ಲೈನ್‌ನಲ್ಲಿ ಕೆಲವೊಂದು ಚಿತ್ರಗಳು ಮುದ್ರಿತವಾಗಿದೆ.

4.7-ಇಂಚಿನ ಐಫೋನ್ 6 ಮಾದರಿ 137.5x67x7 ಎಂಎಂ ನಷ್ಟು ಡೈಮೆನ್ಶನ್ ಅನ್ನು ಬೆಂಬಲಿಸುತ್ತದೆ, ಐಫೋನ್ 5S 123.8x58.6x7.6 ಎಂಎಂ ಆಗಿದ್ದು ದೊಡ್ಡ ಡಿಸ್‌ಪ್ಲೇ ಐಫೋನ್ 6 ಗೆ ಹೆಚ್ಚಿನ ಮೌಲ್ಯವನ್ನು ಒದಗಿಸಲಿದೆ. ಇಷ್ಟೆಲ್ಲಾ ಮಾಹಿತಿಯನ್ನು ಒಳಗೊಂಡು ನಿಮ್ಮ ಕೈ ಸೇರಲಿರುವ ಐಫೋನ್ 6 ಹೇಗಿರಬಹುದೆಂಬ ಒಂದು ವದಂತಿಗೆ ಪುಷ್ಟಿ ನೀಡುವ ಮಾಹಿತಿಗಳು ಇಲ್ಲಿದೆ.

#1

#1

ಪ್ರಸ್ತುತ ಚಾಲ್ತಿಯಲ್ಲಿರುವ ಐಫೋನ್ 5S ಸ್ಯಾಮ್‌ಸಂಗ್ ಗ್ಯಾಲಕ್ಸಿ S5 ಮುಂದೆ ತುಂಬಾ ಸಣ್ಣದಾಗಿದೆ. ಆದ್ದರಿಂದ ಆಪಲ್ ತನ್ನ ಹೊಸ ಐಫೋನ್‌ನಲ್ಲಿ ಸಾಫಿಯರ್ ಡಿಸ್‌ಪ್ಲೇಯನ್ನು ರೂಪಿಸಲಿದೆ.

#2

#2

ಆಪಲ್ ವದಂತಿಗಳೊಂದಿಗೆ ಈ ಹೊಸ ಐಫೋನ್ ಬೇರೆಲ್ಲಾ ಐಫೋನ್‌ಗಳಿಗಿಂತ ತೆಳುವಾಗಿದ್ದು ಇದರಲ್ಲಿ ರಿಯರ್ ಕ್ಯಾಮೆರಾವನ್ನು ನೀವು ಕಾಣಲಿದ್ದೀರಿ. ಫಾಕ್ಸನ್ ಸೌಲಭ್ಯದಡಿಯಲ್ಲಿ ಇದರನ್ನು ಪರೀಕ್ಷೆಗೊಳಪಡಿಸಿದ್ದು ಇದರ ಫೋಟೋ ಫೀಚರ್ ಉತ್ತಮವಾಗಿದೆ.

#3

#3

ಐಫೋನ್ 5s ಆಪಲ್‌ನ ಪ್ರಥಮ 64 ಬಿಟ್ ಪ್ರೊಸೆಸರ್‌ನೊಂದಿಗೆ, ಕಂಪೆನಿಯ A7 ಚಿಪ್‌ನೊಂದಿಗೆ ಬಂದಿದೆ. 20-ನ್ಯಾನೋಮೀಟರ್ 64-ಬಿಟ್ A8 ಸಿಪಿಯುವನ್ನು ತನ್ನ ಮುಂದಿನ-ಸ್ಮಾರ್ಟ್‌ಫೋನ್‌ನಲ್ಲಿ ಹೊರತರಲಿದೆ ಇದನ್ನೇ ಐಫೋನ್ 6 ಎಂದು ಕಂಪೆನಿ ಕರೆದಿದೆ.

#4

#4

ಚೈನೀಸ್ ವೆಬ್‌ಸೈಟ್ ವರದಿಯ ಪ್ರಕಾರ IT168 ಮೊಬೈಲ್, ಐಫೋನ್ 6 ದೊಡ್ಡದಾದ 10-ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದ್ದು ಇದರಲ್ಲಿ 1.8 ಅಪೆಚರ್ ಲೆನ್ಸ್ ಇದೆ.

#5

#5

ಆಪಲ್ ರಚಿತ ಫೋನ್‌ಗಳು ಯಾವಾಗಲೂ ದುಬಾರಿಯಾಗಿರುತ್ತವೆ. ಮುಂಬರುವ ಐಫೋನ್ 6 ಕೂಡ ಆಪಲ್‌ನ ಹೆಚ್ಚಿನ ವಿಶೇಷತೆಯನ್ನು ಒಳಗೊಳ್ಳಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X