Home
ಮೊಬೈಲ್

ಆಪಲ್ ಐಫೋನ್ 6 ಕುರಿತ ಟಾಪ್ ರೂಮರ್‌ಗಳು

By Shwetha

ವರ್ಷದ ನಂತರವೂ ದೊಡ್ಡ ಸ್ಕ್ರೀನ್ ಅನ್ನು ಹೊಂದಿರುವ ಐಫೋನ್ 6 ಕುರಿತ ಹೆಚ್ಚಿನ ಸಂಖ್ಯೆಯ ರೂಮರ್‌ಗಳು ಹರಿದಾಡುತ್ತಲೇ ಇವೆ. 4.7 ಇಂಚಿನ ಐಫೋನ್ 6 ಸಪ್ಟೆಂಬರ್‌ನಲ್ಲಿ ಲಾ‍ಂಚ್ ಆಗಬಹುದು ಇಲ್ಲವೇ 5.5 ಇಂಚಿನ ಮಾಡೆಲ್ ಕೆಲವೊಂದು ಉತ್ಪಾದನಾ ಸಮಸ್ಯೆಗಳಿಗಾಗಿ ಇದನ್ನು 2015 ಕ್ಕೆ ಮುಂದೂಡಬಹುದು ಹೀಗೆಂದು ಸಂಸ್ಥೆ ವಿಶ್ಲೇಷಣೆಯು ತಿಳಿಸುತ್ತಿದೆ.

ಹೆಚ್ಚಿನವರು ನಂಬುವಂತೆ ಆಪಲ್ ತನ್ನ ಮುಂದಿನ ಫ್ಲ್ಯಾಗ್‌ಶಿಪ್ ಡಿವೈಸ್ ಅನ್ನು ಎರಡು ವಿಭಿನ್ನ ಪರದೆ ಗಾತ್ರಗಳಲ್ಲಿ ಹೊರತರುತ್ತಿದೆ. ಒಂದು ಡಿವೈಸ್ 4.7 ಇಂಚಿನ ಪರದೆಯನ್ನು ಹೊಂದಿದ್ದರೆ ಇನ್ನೊಂದು ದೊಡ್ಡದಾದ 5.5 ಇಂಚಿನ ಪರದೆಯನ್ನು ಹೊಂದಿದೆ. ಇದಕ್ಕಾಗಿ ಬಳಕೆದಾರರು 2015 ರವರೆಗೆ ಕಾಯಲೇಬೇಕಿದೆ

5.5 ಇಂಚಿನ ಐಫೋನ್ 6 2014 ರ ಕೊನೆಯಲ್ಲಿ ಲಾಂಚ್ ಆಗಬಹುದು, ಅಥವಾ ಅಕ್ಟೋಬರ್ ನಂತರ ಕೂಡ ಲಾಂಚ್ ಆಗಬಹುದು ಎಂದು ಮೆಕ್‌ರೂಮರ್ಸ್ ತಿಳಿಸಿದೆ. ಇದೇ ಸಮಯದಲ್ಲಿ ಗಿಜ್‌ಬಾಟ್ ದೊಡ್ಡ ಪರದೆಯನ್ನು ಹೊಂದಿರುವ ಐಫೋನ್ 6 ಕುರಿತಾದ ಕೆಲವೊಂದು ವದಂತಿ ಮಾಹಿತಿಗಳನ್ನು ಸಂಗ್ರಹಿಸಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ನೋಟ ಹರಿಸಿ.

#1

#1

ಸಫಾಯರ್ ಡಿಸ್‌ಪ್ಲೇಯಲ್ಲಿ ಸ್ಕ್ರಾಚ್ ಮಾಡುವುದು ಕೂಡ ಅಸಾಧ್ಯವಾಗಿದೆ. ಐಫೋನ್ 6 ಸಫಾಯರ್ ಗ್ಲಾಸ್ ಅನ್ನು ಒಳಗೊಂಡಿರಬಹುದೆಂದು ವದಂತಿಗಳು ಹೇಳುತ್ತಿವೆ. ಇಂತಹ ಗ್ಲಾಸ್ ಅನ್ನು ಐಫೋನ್‌ನ ಕೆಲವು ಆವೃತ್ತಿಗಳಲ್ಲಿ ಬಳಸಲಾಗಿತ್ತು.

#2

#2

ನೆಕ್ಸ್ಟ್ ಜನರೇಶನ್ ಐಫೋನ್ 12 ಅಥವಾ 16 ಮೆಗಾಪಿಕ್ಸೆಲ್ ಕ್ಯಾಮೆರಾದೊಂದಿಗೆ ಬರುತ್ತಿಲ್ಲ. ಇದು ಪ್ರಸ್ತುತವಿರುವ 8 ಮೆಗಾಪಿಕ್ಸೆಲ್ ಕ್ಯಾಮೆರಾಕ್ಕೆ ಹೆಚ್ಚು ಅಂಟಿಕೊಂಡಿರುವಂತೆ ಕಾಣುತ್ತಿದೆ ಎಂದು ಚೀನಾದ ವರದಿಯೊಂದು ತಿಳಿಸಿದೆ. ಅಂದರೆ ಇದರ ಕ್ಯಾಮೆರಾ ಸಾಮರ್ಥ್ಯ 8 ಮೆಗಾಪಿಕ್ಸೆಲ್ ಆಗಿದೆ ಎಂಬುದನ್ನು ಖಾತ್ರಿಗೊಳಿಸಬಹುದಾಗಿದೆ.

#3

#3

ಚೀನಾದ ಆಪಲ್ ಬ್ಲಾಗ್ ಫೆಂಗ್.ಕಾಮ್ ಹೇಳುವಂತೆ ಆಪಲ್ ತನ್ನ 128 ಜಿಬಿ :ಐಫೋನ್ 6" ವದಂತಿಯಲ್ಲಿರುವಂತೆ 5.5 ಇಂಚಿನ ಹ್ಯಾಂಡ್‌ಸೆಟ್ ಅನ್ನು ಒದಗಿಸುತ್ತಿದೆ. ಆಪಲ್ 128 ಜಿಬಿ ಆವೃತ್ತಿಯ ನೆಕ್ಸ್ಟ್ ಜನರೇಶನ್ ಐಫೋನ್ 6 ಆವೃತ್ತಿಯೊಂದಿಗೆ ಬರಬಹುದು ಆದರೆ, ಆದರೆ ಈ ಆಯ್ಕೆಯನ್ನು 5.5 ಮಾಡೆಲ್‌ಗೆ ನಿರ್ದಿಷ್ಟಪಡಿಸಬಹುದು.

#4

#4

Gforgames ನ ವರದಿಯಂತೆ, TSMC ಯು ಆಪಲ್ ಐಫೋನ್ 6 ನ A8 ಚಿಪ್‌ಸೆಟ್ ಉತ್ಪಾದನೆಯ ಹೊಣೆಯನ್ನು ಹೊತ್ತುಕೊಂಡಿದೆ. ಆಪಲ್‌ನ ಎಲ್ಲಾ ಪ್ರಕಾರದ ಅಂಗೀಕಾರಗಳನ್ನು ಈಡೇರಿಸುವ ಗುರಿಯನ್ನು TSMC ಹೊತ್ತುಕೊಂಡಿದ್ದು ಈ ಐಫೋನ್‌ನ ಎಲ್ಲಾ ಉತ್ಪನ್ನ ಜವಬ್ದಾರಿಯನ್ನು ಈ ಸಂಸ್ಥೆ ನಿಭಾಯಿಸುವ ನಿಟ್ಟಿನಲ್ಲಿದೆ.

#5

#5

ಸಪ್ಟೆಂಬರ್ ತಿಂಗಳ ಪ್ರಥಮ ಅಥವಾ ದ್ವಿತೀಯ ವಾರದಂದು ಆಪಲ್ ಐಫೋನ್ 6 ಅನ್ನು ಫೋಷಿಸುತ್ತಿದೆ.

Best Mobiles in India

English summary
This article tells that Apple IPhone 6 top 5 rumors you all need to know.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+