ರೂ.9,296ಕ್ಕೆ ಐಫೋನ್: ಅಮೆಜಾನ್‌ನಲ್ಲಿ ಮಾತ್ರವೇ ಈ ಆಫರ್..!
ವಾಲ್‌ಮಾರ್ಟ್‌ಗೆ ಮಾರಾಟವಾಗಿರುವ ಫ್ಲಿಪ್‌ಕಾರ್ಟ್‌ಗೆ ಸೆಡ್ಡು ಹೊಡೆಯುವಂತೆ ಸಮ್ಮರ್ ಸೇಲ್ ಆಫರ್ ಅನ್ನು ಆರಂಭಿಸಿರುವ ಅಮೆಜಾನ್ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ನೀಡಲು ಮುಂದಾಗಿದೆ. ಇದರಲ್ಲಿ ಐಪೋನ್‌ಗಳ ಮೇಲೆ ಭಾರೀ ಆಫರ್ ಅನ್ನು ಲಾಂಚ್ ನೀಡಿದೆ. ಇದರಿಂದಾಗಿ ನೀವು ಐಫೋನ್ 6 ಅನ್ನು ನೀವು ರೂ.9296ಕ್ಕೆ ಪಡೆಯಬಹುದಾಗಿದೆ.

ಅಮೆಜಾನ್ ಐಫೋನ್ ಮಾತ್ರವಲ್ಲದೇ ಟಾಪ್ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಆಫರ್ ನೀಡಿದ್ದು, ಬಳಕೆದಾರರಿಗೆ ಸಾಕಷ್ಟು ಆಫರ್ ಗಳು ಲಭ್ಯವಿದೆ. ಈ ಹಿನ್ನಲೆಯಲ್ಲಿ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಇದು ಬೆಸ್ಟ್ ಸಮಯ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಐಫೋನ್ ಆಫರ್ ಕುರಿತ ಮಾಹಿತಿಯೂ ಮುಂದಿದೆ.

ಐಫೋನ್ 6:
ಐಫೋನ್ 6 ಅನ್ನು ರೂ.23,999ಕ್ಕೆ ಮಾರಾಟವಾಗುತ್ತಿದ್ದು, ಈ ಐಫೋನ್ ಮೇಲೆ ಎಕ್ಸ್‌ಚೇಂಜ್ ಆಫರ್ ಅನ್ನು ನೀಡಿದೆ. ನಿಮ್ಮ ಹಳೇಯ ಸ್ಮಾರ್ಟ್‌ಫೋನ್ ಮೇಲೆ ರೂ.14,703 ಕಡಿತವನ್ನು ಪಡೆಯಬಹುದಾಗಿದ್ದು, ರೂ.9296ಕ್ಕೆ ಐಫೋನ್ 6 ಅನ್ನು ಪಡೆದುಕೊಳ್ಳಬಹುದಾಗಿದೆ.

ಇತರೆ ಐಪೋನ್‌ಗಳ ಮೇಲೆಯೂ:
ಇದೇ ಮಾದರಿಯಲ್ಲಿ ಐಫೋನ್ 7 ಪ್ಲಸ್ ಮೇಲೆಯೂ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಐಫೋನ್ 7 ಪ್ಲಸ್ ಮೇಲೆ ರೂ.14,703 ವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ಹೆಚ್ಚಿನ ಲಾಭವಾಗಲಿದೆ.

ಬೇರೆ ಸ್ಮಾರ್ಟ್‌ಫೋನ್‌ಗಳ ಮೇಲೆ:
ಇದಲ್ಲದೇ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಮೇಲೆಯೂ ರೂ.12000ದ ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯವಿದ್ದು, ಅಮೆಜಾನ್ ಸಮ್ಮರ್ ಆಫರ್ ಮೇ.16ರ ವರೆಗೆ ಮಾತ್ರವೇ ದೊರೆಯಲಿದೆ. ಬೇಗ ಖರೀದಿಸಿದವರಿಗೆ ಹೆಚ್ಚಿನ ಲಾಭ.


ಇನ್ನು ಇದೆ:
ಇದಲ್ಲದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಗೂಗಲ್ ಪಿಕ್ಸಲ್ 2 XL ಸ್ಮಾರ್ಟ್ ಫೋನ್ ಹಾಗೂ ಸ್ಯಾಮ್‌ಸಂಗ್ ಗ್ಯಾಲೆಕ್ಸಿ ನೋಟ್ 8 ಸ್ಮಾರ್ಟ್‌ಫೋನ್ ಮೇಲೆಯೂ ಕ್ರಮವಾಗಿ ರೂ.10000 ಮತ್ತು ರೂ. 7000ದಷ್ಟು ಎಕ್ಸ್‌ಚೇಂಜ್ ಆಫರ್ ದೊರೆಯುತ್ತಿದೆ. ಗ್ರಾಹಕರು ಹೆಚ್ಚಿನ ಲಾಭವನ್ನು ಮಾಡಿಕೊಡುತ್ತಿದೆ.


Click it and Unblock the Notifications








