ಆ್ಯಪಲ್ ಐಫೋನ್ 7, 7 ಪ್ಲಸ್ ಹೇಗಿರುತ್ತದೆ ಗೊತ್ತೆ?

|

ಆಗಸ್ಟಿನ ಶುರುವಿನಲ್ಲಿ ಗ್ಯಾಲಕ್ಸಿ ನೋಟ್ 7 ಬಿಡುಗಡೆಯಾಯಿತು ಮತ್ತು ಈಗ ಎಲ್ಲರ ಗಮನ ಆ್ಯಪಲ್ ಐಫೋನುಗಳ ಕಡೆಗಿದೆ. ಕಳೆದೊಂದು ವಾರದಿಂದ ಅನೇಕ ಮಾಹಿತಿ ಸೋರಿಕೆಯಾಗಿತ್ತು, ಬಹುಶಃ ಕೊನೆಗೆ ಐಫೋನ್ 7 ಮತ್ತು 7 ಪ್ಲಸ್ ನ ವಿಶೇಷತೆಗಳು ನಮಗೆ ಸಿಕ್ಕಿವೆ.

ಆ್ಯಪಲ್ ಐಫೋನ್ 7, 7 ಪ್ಲಸ್ ಹೇಗಿರುತ್ತದೆ ಗೊತ್ತೆ?

ಈ ಮುಂಚೆ ಸೋರಿಕೆಯಾದ ಮಾಹಿತಿಯಂತೆಯೇ ಐಫೋನ್ 7 ಮತ್ತು 7 ಪ್ಲಸ್ ನಲ್ಲಿ 6ಎಸ್ ಹಾಗೂ 6ಎಸ್ ಪ್ಲಸ್ ಗೆ ಹೋಲಿಸಿದರೆ ವಿನ್ಯಾಸದಲ್ಲಿ ತುಂಬಾ ಬದಲಾವಣೆಗಳೇನೂ ಇರುವುದಿಲ್ಲ. ಆದರೆ ಒಳಗಡೆ ಹೆಚ್ಚಿನ ಬದಲಾವಣೆಗಳಾಗಿವೆ.

ಓದಿರಿ: ಜಿಯೋ ಸಿಮ್‌ನಲ್ಲಿ ಬಳಕೆದಾರರಿಗೆ ತಲೆನೋವಾಗಿರುವ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇವತ್ತು ಸೋರಿಕೆಯಾದ ಮಾಹಿತಿಯು ಈ ಅಂಶವನ್ನು ದೃಡಪಡಿಸುತ್ತದೆ. ಹಾರ್ಡ್ ವೇರ್ ವಿಷಯದಲ್ಲಿ ಐಫೋನ್ 7 ಮತ್ತು 7ಪ್ಲಸ್ ನಲ್ಲಿ ಹೆಚ್ಚಿನ ಬದಲಾವಣೆಗಳಾಗಿವೆ, ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ವ್ಯೀಬೋದ ಪೋಸ್ಟ್ ಇದನ್ನೇ ಹೇಳುತ್ತಿದೆ. ಹೊಸ ಐಫೋನಿನ ಗುಣವೈಶಿಷ್ಟ್ಯತೆಗಳನ್ನು ಅರಿಯಲು ಕೆಳಗಿನ ಸ್ಲೈಡರ್ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂಚಿನ ಪರದೆಯೇ ಇರಲಿದೆ.

ಮುಂಚಿನ ಪರದೆಯೇ ಇರಲಿದೆ.

ಈ ಮುಂಚಿನ ಗಾಳಿಸುದ್ದಿಗಳನ್ನು ವ್ಯೀಬೋ ಕೂಡ ದೃಡಪಡಿಸಿದೆ. ಆ್ಯಪಲ್ ಐಫೋನ್ 7 ಹಾಗೂ 7ಪ್ಲಸ್ ನಲ್ಲಿ ಕ್ರಮವಾಗಿ 4.7 ಇಂಚಿನ ಹಾಗೂ 5.5 ಇಂಚಿನ ಪರದೆಯಿರಲಿದೆ. 2016ರ ಐಫೋನುಗಳಲ್ಲಿ ಒಲೆಡ್ ಪರದೆಗಳಿರಲಿದೆ.

ಆ್ಯಪಲ್ ಎ10 ಚಿಪ್ ಸೆಟ್.

ಆ್ಯಪಲ್ ಎ10 ಚಿಪ್ ಸೆಟ್.

ಹೊಸ ಐಫೋನುಗಳಲ್ಲಿ ಆ್ಯಪಲ್ ಎ10 ಪ್ರೊಸೆಸರ್ ಇರಲಿದೆ. ಆ್ಯಪಲ್ 9 ಪ್ರೊಸೆಸರ್ ಗೆ ಹೋಲಿಸಿದರೆ ಆ್ಯಪಲ್ ಎ10 ತುಂಬ ಉತ್ತಮವೇನಲ್ಲ ಆದರೆ ಖಂಡಿತವಾಗಿಯೂ ಇದು ವೇಗವನ್ನು ಹೆಚ್ಚಿಸುತ್ತದೆ. ಎ10 ಚಿಪ್ ಅನ್ನು 16ಎನ್.ಎಂ ಟಿ.ಎಸ್.ಎಂ.ಸಿಯ ಫಿನ್ ಎಫ್.ಇ.ಟಿ ಮೇಲೆ ತಯಾರಿಸಲಾಗುತ್ತದೆ.

ಐಫೋನ್ 7ರಲ್ಲಿ 2ಜಿಬಿ ರ್ಯಾಮ್, ಐಫೋನ್ 7ಪ್ಲಸ್ ನಲ್ಲಿ 3ಜಿಬಿ ರ್ಯಾಮ್.

ಐಫೋನ್ 7ರಲ್ಲಿ 2ಜಿಬಿ ರ್ಯಾಮ್, ಐಫೋನ್ 7ಪ್ಲಸ್ ನಲ್ಲಿ 3ಜಿಬಿ ರ್ಯಾಮ್.

ಇದು ನಿರೀಕ್ಷಿತ. ಐಫೋನ್ 7ಪ್ಲಸ್ ನ ರ್ಯಾಮ್ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ, ಐಫೋನ್ 7ರಲ್ಲಿ ಮುಂಚಿನ ಎಲ್.ಪಿ.ಡಿ.ಡಿ.ಆರ್4 2ಜಿಬಿ ರ್ಯಾಮ್ ಇರಲಿದೆ.

ಎಫ್/1.9 ಅಪರ್ಚರ್ ಇರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

ಎಫ್/1.9 ಅಪರ್ಚರ್ ಇರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.

ವ್ಯೀಬೋದಲ್ಲಿರುವ ಚಿತ್ರಗಳ ಪ್ರಕಾರ ಐಫೋನ್ 7ನಲ್ಲಿ ಎಫ್/1.9 ಅಪರ್ಚರ್ ಇರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಇರಲಿದೆ. ಕ್ಯಾಮೆರ ಸೆನ್ಸಾರನ್ನು ಉತ್ತಮಗೊಳಿಸಲಾಗಿದೆ, 1/2.6 ಇರಲಿದೆ.

7 ಪ್ಲಸ್ ನಲ್ಲಿ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ, ದೊಡ್ಡ ಅಪರ್ಚರ್.

7 ಪ್ಲಸ್ ನಲ್ಲಿ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ, ದೊಡ್ಡ ಅಪರ್ಚರ್.

ಆ್ಯಪಲ್ ಐಫೋನ್ 7 ಪ್ಲಸ್ ನ ಕ್ಯಾಮೆರ ಸೆನ್ಸಾರಿನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಆದರೆ ಅಪರ್ಚರ್ ಎಫ್/1.9 ಇರಲಿದೆ. ಈ ಮುಂಚಿನ ಗಾಳಿ ಸುದ್ದಿಗಳು 7ಪ್ಲಸ್ ನ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳಿರುತ್ತವೆ ಎಂದು ಹೇಳಿದ್ದವು.

ಬ್ಯಾಟರಿ ಸಾಮರ್ಥ್ಯದಲ್ಲಿ 14 ಪರ್ಸೆಂಟಿನಷ್ಟು ಏರಿಕೆ.

ಬ್ಯಾಟರಿ ಸಾಮರ್ಥ್ಯದಲ್ಲಿ 14 ಪರ್ಸೆಂಟಿನಷ್ಟು ಏರಿಕೆ.

ಇದು ಹೊಸ ಸುದ್ದಿ. ಆ್ಯಪಲ್ ತನ್ನ ಐಫೋನ್ 7 ಹಾಗು 7ಪ್ಲಸ್ ನ ಬ್ಯಾಟರಿ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ. ವ್ಯೀಬೋದ ಸೋರಿಕೆ ಪ್ರಕಾರ ಬ್ಯಾಟರಿಯ ಸಾಮರ್ಥ್ಯ 14 ಪರ್ಸೆಂಟಿನಷ್ಟು ಏರಲಿದೆ. ಐಫೋನ್ 7 ಫೋನಿನಲ್ಲಿ 1960 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ, ಐಫೋನ್ 7 ಪ್ಲಸ್ ನಲ್ಲಿ 2,910 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇರಲಿದೆ.

Best Mobiles in India

English summary
The Galaxy Note 7 was released at the start of August and now the focus has been shifted over to the Apple's iPhones. With numerous leaks for a week, we may have finally received the final specs of both the iPhone 7 and 7 Plus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X