ಐಫೋನ್ ಪ್ರಿಯರಿಗೆ ಸಿಹಿ ಸುದ್ದಿ: ಲೀಕ್ ಆಗಿದೆ ಐಫೋನ್ 8 ವಿನ್ಯಾಸ..!!
ಐಫೋನ್ 8 ಮತ್ತು ಐಫೋನ್ x ಹೇಗಿರಲಿದೆ ಎಂಬ ಕೂತುಹಲಕ್ಕೆ ಪುಷ್ಟಿಕೊಡುವಂತೆ ಡ್ರಾಯಿಂಗ್ ವೊಂದು ಬಿಡುಗಡೆಯಾಗಿದ್ದು, ಮೂಲಗಳ ಪ್ರಕಾರ ಇದೇ ಅಂತಿಮ ವಿನ್ಯಾಸ ಎಂಬ ಮಾತುಗಳು ಕೇಳಿಬಂದಿದೆ.
ಆಪಲ್ ಸದ್ಯ ಮಾರುಕಟ್ಟೆಗೆ ಬಿಡಲು ತಯಾರಿ ನಡೆಸಿರುವ ಐಫೋನ್ 8 ಮತ್ತು ಐಫೋನ್ ಎಕ್ಸ್ ಕುರಿತಂತೆ ಸಾಕಷ್ಟು ರೂಮರ್್ಗಳು ಹರಿದಾಡುತ್ತಿದೆ. ಈ ಐಫೋನಿನಲ್ಲಿ ಆ ಆಯ್ಕೆ ಇರಲಿದೆಯಂತೆ, ಈ ಆಯ್ಕೆ ಇರಲಿದೆ ಎಂಬ ಸುದ್ದಿಗಳು ರೆಕ್ಕೆ ಪುಕ್ಕ ಕಟ್ಟಿಕೊಂಡು ಹಾರಾಡುತ್ತಿವೆ. ಈ ರೀತಿಯಲ್ಲಿ ದಿನಕ್ಕೊಂದು ಹೊಸ ರೂಮರ್ಸ್ ಹುಟ್ಟಿಕೊಳ್ಳಲು ಪ್ರಮುಖ ಕಾರಣ ಎಂದರೆ ಇದು ಆಪಲ್್ನ 10ನೇ ವಾರ್ಷಿಕೋತ್ಸವ ಆಗಿರುವುದರಿಂದ ಏನಾದರು ಹೊಸದನ್ನೇ ಗ್ರಾಹಕರಿಗೆ ನೀಡಲಿದೆ ಎಂಬ ಬಲವಾದ ಕಾರಣದಿಂದ.
ಈ ವರ್ಷದ ಅಂತ್ಯ ಭಾಗದಲ್ಲಿ ಎಂದರೆ ಅಕ್ಟೋಬರ್ ಕೊನೆಯ ವಾರದಲ್ಲಿ ಆಪಲ್. ಐಫೋನ್ 8 ಲಾಂಚ್ ಮಾಡಲಿದೆ ಎನ್ನಲಾಗಿದೆ. ಈಗಾಗಲೇ OLED ಡಿಸ್್ಪ್ಲೇಯನ್ನು ಹೊಂದಿರಲಿದೆ ಎಂಬುದು ತಿಳಿದುಬಂದಿದೆ. ಅಲ್ಲದೇ ಈ ಬಾರಿ ಐಫೋನ್ ಬೆಲೆಯಲ್ಲಿ ಸ್ಪಲ್ಪ ಮಟ್ಟದ ಕಡಿತವೂ ಇರಲಿದೆ ಎನ್ನಲಾಗಿದ್ದು, $1000 ಗೆ ದೊರೆಯುವ ನಿರೀಕ್ಷೆ ಇದೆ.
ಐಫೋನ್ 8 ಮತ್ತು ಐಫೋನ್ x ಹೇಗಿರಲಿದೆ ಎಂಬ ಕೂತುಹಲಕ್ಕೆ ಪುಷ್ಟಿಕೊಡುವಂತೆ ಡ್ರಾಯಿಂಗ್ ವೊಂದು ಬಿಡುಗಡೆಯಾಗಿದ್ದು, ಮೂಲಗಳ ಪ್ರಕಾರ ಇದೇ ಅಂತಿಮ ವಿನ್ಯಾಸ ಎಂಬ ಮಾತುಗಳು ಕೇಳಿಬಂದಿದೆ.

ಫುಲ್ ಡಿಸ್್ಪ್ಲೇ:
ಐಫೋನ್ 8 ಮತ್ತು ಐಫೋನ್ x ನಲ್ಲಿ ಈ ಹಿಂದೆ ಹೇಳಿದಂತೆ ಫುಲ್ ಡಿಸ್್ಪ್ಲೇ ಇರಲಿದೆ. ಸದ್ಯ ಈಗ ಬಿಡುಗಡೆಯಾಗಿರುವ ಡ್ರಾಯಿಂಗ್ ಅನ್ನು ಫಾಕ್ಸ್ಕಾನ್ ಲೀಕ್ ಮಾಡಿದ್ದು, ಇದು ಐಫೋನ್ ತಯಾರಕ ಕಂಪನಿಗಳ ಪ್ಲಾಂಟ್್ನಲ್ಲಿ ಒಂದಾಗಿದೆ. ಐಫೋನ್ 8 ಮತ್ತು ಐಫೋನ್ xನ ಡಿಸ್್ಪ್ಲೇನಲ್ಲಿ ಯಾವುದೇ ಬಟನ್ ಆಗಲಿ, ಕ್ಯಾಮೆರಾ ಅಗಲಿ ಕಾಣುವುದಿಲ್ಲ ಎಲ್ಲಾವು ಸ್ಕ್ರಿನ್ ಒಳಗೆಯೇ ಇರಲಿದೆ. ಮುಂಭಾಗದ ಕ್ಯಾಮೆರಾ ಸಹ ಕಣ್ಣಿಗೆ ಕಾಣುವುದಿಲ್ಲ ಎನ್ನಲಾಗಿದೆ.

ಡ್ಯುಯಲ್ ಕ್ಯಾಮೆರಾ:
ಸದ್ಯ ಲೀಕ್ ಆಗಿರು ಡ್ರಾಯಿಂಗ್್ನ ಪ್ರಕಾರ ಐಫೋನ್ 8 ಮತ್ತು ಐಫೋನ್ xನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗುತ್ತಿದೆ. ಈ ಹಿಂದಿನ ಐಫೋನ್್ನಲ್ಲಿಯೂ ಡ್ಯುಯಲ್ ಕ್ಯಾಮೆರಾ ನೀಡಲಾಗಿತ್ತು. ಆದರೆ ಈ ಬಾರಿ ಡ್ಯುಯಲ್ ಕ್ಯಾಮೆರಾವನ್ನು ವರ್ಟಿಕಲ್ ಆಗಿ(ಮೇಲಿನಿಂದ ಕೆಳಗೆ) ಅಳಡಿಸಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ LED ಫ್ಲಾಷ್ ಸಹ ನೀಡಲಾಗಿದೆ. ಎರಡು ಕ್ಯಾಮೆರಾಗಳ ಮಧ್ಯ ಭಾಗದಲ್ಲಿ ಫ್ಲಾಷ್ ಲೈಟ್ ಇದೆ.

ಐಫೋನಿನ ಹಿಂಭಾಗ ಮಾಮೂಲಿಯಂತಿದೆ:
ಈ ಮೊದಲೇ ತಿಳಿಸಿದಂತೆ ಐಫೋನ್ 8 ಮತ್ತು ಐಫೋನ್ xನಲ್ಲಿ ಯಾವುದೇ ಬಟನ್್ಗಳು ಇರುವುದಿಲ್ಲ ಹೋಮ್ ಬಟನ್ ಅಥಾವ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಆಗಲಿ ಇರುವುದಿಲ್ಲ. ಇದೇ ಮಾದರಿಯಲ್ಲಿ ಹಿಂಭಾಗದ ಹೊರ ಕವಚವೂ ಈ ಹಿಂದಿನಂತೆಯೇ ಇರಲಿದ್ದು, ವಾಲ್ಯೂಮ್ ಬಟನ್ ಹಾಗೂ ಪವರ್ ಬಟನ್ ಮಾತ್ರವೇ ಈ ಫೋನಿನಲ್ಲಿ ಇರಲಿದೆ ಎಂಬುದು ಈ ಡ್ರಾಯಿಂಗ್ ನಿಂದ ತಿಳಿಯಲಿದೆ.


Click it and Unblock the Notifications









