ಆಪಲ್ ಐಫೋನ್ 8 ಬಿಡುಗಡೆ ದಿನಾಂಕ ಫಿಕ್ಸ್: 5 ವಿಶೇಷತೆಗಳು!
10ನೇ ವಾರ್ಷಿಕೋತ್ಸವದ ಅಂಗವಾಗಿ ಆಪಲ್ ಬಿಡುಗಡೆ ಮಾಡುತ್ತಿರುವ ಐಫೋನ್ 8 ಇದೇ ಸೆಪ್ಟೆಂಬರ್ 15 ರಂದು ಲಾಂಚ್ ಆಗಲಿದೆ ಎನ್ನಲಾಗಿದೆ.
ಐಫೋನ್ ಪ್ರಿಯರು ಬಹಳ ದಿನಗಳಿಂದ ಕಾಯುತ್ತಿದ್ದ ಗಳಿಗೆಯೂ ಹತ್ತಿರವಾಗಿದ್ದು, 10ನೇ ವಾರ್ಷಿಕೋತ್ಸವದ ಅಂಗವಾಗಿ ಆಪಲ್ ಬಿಡುಗಡೆ ಮಾಡುತ್ತಿರುವ ಐಫೋನ್ 8 ಇದೇ ಸೆಪ್ಟೆಂಬರ್ 15 ರಂದು ಲಾಂಚ್ ಆಗಲಿದೆ ಎನ್ನಲಾಗಿದೆ.

ಈಗಾಗಲೇ ಆಪಲ್ ಅಧಿಕೃತವಾಗಿ ಅಂದು ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನವನ್ನು ಕಳುಹಿಸಿದೆ ಎನ್ನಲಾಗಿದೆ. ಕ್ಯುಪರ್ಟಿನೋ ದಲ್ಲಿರುವ ಆಪಲ್ ಕಂಪನಿಯ ಸ್ವೀವ್ ಜಾಬ್ಸ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಫೋನ್ ಬಿಡುಗಡೆಯಾಗಲಿದೆ. ಈ ಹಿನ್ನಲೆಯಲ್ಲಿ ಈ ಫೋನಿನ ವಿಶೇಷತೆಗಳೇನು ಎನ್ನುವದರ ಬಗ್ಗೆ ತಿಳಿದುಕೊಳ್ಳುವ.

ಕಡಿಮೆ ಅಂಚಿನ ಡಿಸ್‌ಪ್ಲೇ:
ಐಫೋನ್ 8 ನಲ್ಲಿ ಬಳಕೆ ಮಾಡಿಕೊಂಡಿರುವ ಡಿಸ್‌ಪ್ಲೇಯಲ್ಲಿ ಕಡಿಮೆ ಅಂಚನ್ನು ಬಿಡಲಾಗಿದ್ದು, ಮೊಬೈಲ್ ನೋಡಿದರೆ ಪೂರ್ತಿ ಪ್ರಮಾಣದಲ್ಲಿ ಡಿಸ್‌ಪ್ಲೇ ಆವರಿಸಿಕೊಂಡಿರುವಂತೆ ಕಾಣುತ್ತದೆ. ಇದು 5.8 ಇಂಚಿನಿಂದ ಕೂಡಿದೆ ಎನ್ನಲಾಗಿದೆ.

ಹೋಮ್ ಬಟನ್ ಇಲ್ಲ:
ಈ ಹಿಂದೆ ಐಫೋನಿನ ಮಧ್ಯದಲ್ಲಿ ಇರುತ್ತಿದ್ದ ಹೋಮ್ ಬಟನ್ ಕಾಣೆಯಾಗಿದೆ. ಫುಲ್ ಸ್ಕ್ರಿನ್‌ನಲ್ಲಿ ಇದು ಉದುಗಿಹೊಗಿದ್ದು, ಹೋಮ್ ಬಟನ್ ಸಹ ಟೆಚ್ ಸ್ಕ್ರಿನ್‌ನಲ್ಲಿಯೇ ಇರಲಿದೆ. ಫಿಜಿಕಲ್ ಹೋಮ್ ಬಟನ್ ಅನ್ನು ಈ ಫೋನಿನಲ್ಲಿ ನೀಡಿಲ್ಲ.

ಮುಖ ಚಹರೆ ಸ್ಕ್ಯಾನರ್:
ಈ ಫೋನಿನಲ್ಲಿ ಟಚ್ ಐಡಿಯ ಬದಲಿಗೆ ಫೇಸ್ ರೆಕ್ಗನಿಷನ್ ಆಯ್ಕೆಯನ್ನು ನೀಡಲಾಗಿದ್ದು, ಇದು ನಿಮ್ಮ ಮುಖ ಚಹರೆಯನ್ನು ಸ್ಕ್ಯಾನ್ ಮಾಡಿಕೊಳ್ಳಲಿದೆ. ಇದರಿಂದಾಗಿ ನಿಮ್ಮ ಫೋನ್ ಅನ್ನು ಬೇರೆಯಾರು ಬಳಸಲು ಸಾಧ್ಯವಿಲ್ಲ.

ವೈರ್‌ಲೇಸ್ ಚಾರ್ಜರ್:
ಐಫೋನ್ 8 ನೊಂದಿಗೆ ವೈರ್ಲೇಸ್ ಚಾರ್ಜರ್ ಅನ್ನು ಕಾಣಬಹುದಾಗಿದೆ. ಅಲ್ಲದೇ ಇದರಲ್ಲಿ USB ಟೈಪ್ C ಚಾರ್ಜರ್ ಅನ್ನು ನೀಡಲಾಗಿದೆ. ಚಾರ್ಜ್ ಮಾಡಲು ಈ ಫೋನ್ ಅನ್ನು ಚಾರ್ಜರ್ ನೊಂದಿಗೆ ಜೋಡಿಸುವ ಅಗತ್ಯವೇ ಇಲ್ಲ ಎನ್ನಲಾಗಿದೆ.


ಗ್ಲಾಸ್ ಮತ್ತು ಸ್ಟೀಲ್ ವಿನ್ಯಾಸ:
ಇದಲ್ಲದೇ ಐಫೋನ್ 8 ನಲ್ಲಿ ಸ್ಟೀಲ್ ಮತ್ತು ಗ್ಲಾಸ್ ವಿನ್ಯಾಸವನ್ನು ಕಾಣಬಹುದಾಗಿದೆ. ಅಲ್ಯೂಮಿನಿಯಮ್ ಬಾಡಿ ಹೊಂದಿದ್ದು, ಹಿಂಭಾಗದಲ್ಲಿ ಗ್ಲಾಸ್ ಫಿನಿಷಿಂಗ್ ಕಾಣಬಹುದಾಗಿದೆ. ಇದು ಐಫೋನ್ ಅನ್ನು ಇನಷ್ಟು ಸುಂದರವಾಗಿಸಿದೆ.


Click it and Unblock the Notifications