Home
ಮೊಬೈಲ್

ಬೇಸಿಕ್ iPhone 17 vs ಐತಿಹಾಸಿಕ ಸ್ಲಿಮ್ iPhone Air: ಯಾವ ಫೋನ್ ಬೆಸ್ಟ್?

ಟೆಕ್ ದೈತ್ಯ ಆಪಲ್ ತನ್ನ ಇತ್ತೀಚಿನ 'Awe-Dropping' ಕಾರ್ಯಕ್ರಮದಲ್ಲಿ ಬಹುನಿರೀಕ್ಷಿತ iPhone 17 ಸರಣಿಯಲ್ಲಿ ನಾಲ್ಕು ಫೋನ್‌ಗಳನ್ನು ಅನಾವರಣಗೊಳಿಸಿದೆ. ಇವುಗಳಲ್ಲಿ ಗ್ರಾಹಕರಲ್ಲಿ ಭಾರೀ ಕುತೂಹಲ ಮೂಡಿಸಿರುವುದು ಆಪಲ್ ಇತಿಹಾಸದಲ್ಲಿಯೇ ಅತಿ ತೆಳ್ಳನೆಯ iPhone Air ಮತ್ತು ಸಾಮಾನ್ಯ ಗ್ರಾಹಕರಿಗೂ ಪ್ರೀಮಿಯಂ ವೈಶಿಷ್ಟ್ಯಗಳನ್ನು ತಲುಪಿಸುವ iPhone 17.

ಈ ಎರಡೂ ಫೋನ್‌ಗಳು Apple ನ ನಾವೀನ್ಯತೆ ಮತ್ತು ಪ್ರಮುಖ ತಂತ್ರಜ್ಞಾನದ ಪ್ರತೀಕಗಳಾಗಿವೆ. ಹಾಗಾದರೆ, ಅತಿ ಸ್ಲಿಮ್ iPhone Air ಮತ್ತು ಸ್ಟಾಂಡರ್ಡ್ iPhone 17 ನಡುವೆ ಹೋಲಿಕೆ ಹೇಗಿದೆ?. ಇಂದಿನ ಲೇಖನದಲ್ಲಿ ಇವೆರಡರ ನಡುವಿನ ವೈಶಿಷ್ಟ್ಯಗಳು, ಬೆಲೆ ಮತ್ತು ಕಾರ್ಯಕ್ಷಮತೆಯ ವ್ಯತ್ಯಾಸಗಳನ್ನು ಇಲ್ಲಿ ಸಮಗ್ರವಾಗಿ ವಿಶ್ಲೇಷಿಸೋಣ,. ನಂತರ ನಿಮ್ಮ ಆಯ್ಕೆ!

ಬೇಸಿಕ್ iPhone 17 vs ಐತಿಹಾಸಿಕ ಸ್ಲಿಮ್ iPhone Air: ಯಾವ ಫೋನ್ ಬೆಸ್ಟ್?

ವಿನ್ಯಾಸ ಮತ್ತು ಪ್ರದರ್ಶನ
ಬಹುನಿರೀಕ್ಷಿತ iPhone Air ನ ಪ್ರಮುಖ ಆಕರ್ಷಣೆಯೇ ಅದರ ಅತ್ಯಂತ ಸ್ಲಿಮ್ ವಿನ್ಯಾಸ. ಕೇವಲ 5.6 mm ದಪ್ಪ ಹೊಂದಿರುವ ಈ ಫೋನ್, ಹೊಳಪುಳ್ಳ ಟೈಟಾನಿಯಂನಿಂದ ತಯಾರಿಸಲ್ಪಟ್ಟಿದೆ. ಇದು ಪ್ರೀಮಿಯಂ ಅನುಭವ ನೀಡುವುದಲ್ಲದೆ, ಇದರಲ್ಲಿ ಕೇವಲ eSIM ಮಾತ್ರ ಇರುವುದರಿಂದ ವಿನ್ಯಾಸವು ಮತ್ತಷ್ಟು ತೆಳುವಾಗಿದೆ. ಇದರ ಡಿಸ್‌ಪ್ಲೇ 6.5-ಇಂಚಿನ ProMotion OLED ಆಗಿದ್ದು, 120Hz ರಿಫ್ರೆಶ್ ರೇಟ್ ಮತ್ತು 3,000 nits ನ ಗರಿಷ್ಠ ಪ್ರಕಾಶಮಾನತೆ ಹೊಂದಿದೆ. ಇದರ ಮುಂಭಾಗ ಮತ್ತು ಹಿಂಭಾಗದಲ್ಲಿ Ceramic Shield 2 ಗ್ಲಾಸ್ ಇದೆ.

ಮತ್ತೊಂದೆಡೆ, iPhone 17 ಸಹ ಪ್ರೀಮಿಯಂ ವಿನ್ಯಾಸವನ್ನು ಹೊಂದಿದೆ ಮತ್ತು ಇದು IP68 ರೇಟಿಂಗ್ ಅನ್ನು ಪಡೆದುಕೊಂಡಿದೆ. ಇದರ 6.3 ಇಂಚಿನ Super Retina XDR OLED ಪರದೆಯು, ಇದೇ ಮೊದಲ ಬಾರಿಗೆ 120Hz ProMotion ಮತ್ತು Always-On Display ವೈಶಿಷ್ಟ್ಯಗಳನ್ನು ಬೇಸ್ ಮಾದರಿಗೆ ತಂದಿದೆ. ಎರಡೂ ಫೋನ್‌ಗಳಲ್ಲಿ ಬೆಳಕಿನ ಪ್ರತಿಫಲನವನ್ನು ಕಡಿಮೆ ಮಾಡುವ ಕೋಟಿಂಗ್ ಅನ್ನು ಸೇರಿಸಲಾಗಿದೆ. iPhone Air ನಾವೀನ್ಯತೆಗೆ ಹೆಚ್ಚು ಒತ್ತು ನೀಡಿದರೆ, iPhone 17 ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಸಮತೋಲಿತ ಮತ್ತು ಬಾಳಿಕೆ ಬರುವ ವಿನ್ಯಾಸ ನೀಡುತ್ತದೆ.

ಕಾರ್ಯಕ್ಷಮತೆ ಮತ್ತು ಬ್ಯಾಟರಿ
iPhone Air ಹೊಸ A19 Pro ಚಿಪ್‌ಸೆಟ್‌ನಿಂದ ಶಕ್ತಿಶಾಲಿಯಾಗಿ ಕಾರ್ಯನಿರ್ವಹಿಸುತ್ತದೆ. ಇದು ಆಧುನಿಕ AI ಕಾರ್ಯಗಳು ಸೇರಿದಂತೆ Apple Intelligence ವೈಶಿಷ್ಟ್ಯಗಳನ್ನು ಸಹ ಬೆಂಬಲಿಸುತ್ತದೆ. C1x ಮೊಡೆಮ್ ಮತ್ತು N1 ಚಿಪ್ (Wi-Fi 7, Bluetooth 6) ಬಳಸಿ ವೇಗದ ಸಂಪರ್ಕದ ಅನುಭವ ನೀಡುತ್ತದೆ. ಕಂಪನಿ ಹೇಳಿರುವಂತೆ, ದಿನಪೂರ್ತಿ ಬ್ಯಾಟರಿ ಬಾಳಿಕೆ ಈ ಫೋನ್‌ನಲ್ಲಿ ಉತ್ತಮವಾಗಿದೆ.

iPhone 17 ನಲ್ಲಿ A19 Bionic ಚಿಪ್‌ಸೆಟ್ ಇದೆ, ಇದು ದೈನಂದಿನ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಡಿಸೈನ್ ಮಾಡಲಾಗಿದೆ ಮತ್ತು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ. Apple Intelligence ಅನ್ನು ಇದು ಸಹ ಬೆಂಬಲಿಸುತ್ತದೆ. iPhone 17 ನ ಬ್ಯಾಟರಿ ಹಿಂದಿನ ಮಾದರಿಯೊಂದಿಗೆ ಹೋಲಿಸಿದರೆ, ಸುಮಾರು 8 ಗಂಟೆಗಳ ಹೆಚ್ಚುವರಿ ವೀಡಿಯೋ ಪ್ಲೇಬ್ಯಾಕ್ ನೀಡುತ್ತದೆ. ಸಾಮಾನ್ಯವಾಗಿ, iPhone Air ಹೆಚ್ಚು ಶಕ್ತಿಶಾಲಿ ಸಂಪರ್ಕ ಮತ್ತು AI ಸಾಮರ್ಥ್ಯದಲ್ಲಿ ಮುಂಚೂಣಿಯಲ್ಲಿದ್ದು, iPhone 17 ದೈನಂದಿನ ಕಾರ್ಯಕ್ಷಮತೆಯಲ್ಲಿ ವಿಶ್ವಾಸಾರ್ಹ ಆಯ್ಕೆಯಾಗಿದೆ.

ಬೇಸಿಕ್ iPhone 17 vs ಐತಿಹಾಸಿಕ ಸ್ಲಿಮ್ iPhone Air: ಯಾವ ಫೋನ್ ಬೆಸ್ಟ್?

ಕ್ಯಾಮೆರಾ ವ್ಯವಸ್ಥೆ
ಕ್ಯಾಮೆರಾ ವಿಭಾಗದಲ್ಲಿಯೂ ಎರಡೂ ಫೋನ್‌ಗಳು ಪ್ರಭಾವಶಾಲಿ ವೈಶಿಷ್ಟ್ಯಗಳನ್ನು ಹೊಂದಿವೆ. iPhone Air ಹಿಂಭಾಗದಲ್ಲಿ 48 MP ಮುಖ್ಯ ಕ್ಯಾಮೆರಾ ಮತ್ತು AI-ಆಧಾರಿತ 2x ಆಪ್ಟಿಕಲ್ ಗುಣಮಟ್ಟದ ಜೂಮ್‌ನೊಂದಿಗೆ 12 MP ಟೆಲಿಫೋಟೋ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ, ಸೆಂಟರ್ ಸ್ಟೇಜ್ ವೈಶಿಷ್ಟ್ಯದೊಂದಿಗೆ 18 MP ಸೆಲ್ಫಿ ಕ್ಯಾಮೆರಾ ಇದೆ.

iPhone 17 ದೊಡ್ಡ ಸುಧಾರಣೆ ಕಂಡಿದ್ದು, 48 MP Fusion ಮುಖ್ಯ ಕ್ಯಾಮೆರಾ ಮತ್ತು 48 MP Fusion ಅಲ್ಟ್ರಾ-ವೈಡ್ ಕ್ಯಾಮೆರಾ ಹೊಂದಿದೆ. ಅಲ್ಟ್ರಾ-ವೈಡ್ ಕ್ಯಾಮೆರಾವು ಮ್ಯಾಕ್ರೋ ಶೂಟಿಂಗ್ ಸಾಮರ್ಥ್ಯ ಹೊಂದಿದೆ. ಮುಂಭಾಗದಲ್ಲಿ, ಹೊಸ ಮತ್ತು ದೊಡ್ಡ ಸೆನ್ಸರ್ ಹೊಂದಿರುವ Centre Stage ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ, iPhone Air ನ ಮೂಲ ಆವೃತ್ತಿಯ ಬೆಲೆ ₹1,19,900 ರಿಂದ ಪ್ರಾರಂಭವಾಗುತ್ತದೆ, ಇದು ಪ್ರೀಮಿಯಂ ವರ್ಗಕ್ಕೆ ಸೇರುತ್ತದೆ. ಇದರ ಪ್ರೀ-ಆರ್ಡರ್‌ಗಳು ಸೆಪ್ಟೆಂಬರ್ 12, 2025 ರಿಂದ ಪ್ರಾರಂಭವಾಗಲಿವೆ. iPhone 17 ನ ಬೆಲೆ ₹82,900 ಆಗಿದ್ದು, ಇದು ಮಧ್ಯಮ ಮತ್ತು ಉನ್ನತ ವರ್ಗದ ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆ ಇದೆ. ಇದರ ಪ್ರೀ-ಆರ್ಡರ್‌ಗಳು ಕೂಡ ಸೆಪ್ಟೆಂಬರ್ 12 ರಿಂದ ಆರಂಭವಾಗಲಿವೆ.

ತೀರ್ಮಾನ: ನಿಮ್ಮ ಆಯ್ಕೆ!
ನೀವು ಹೊಸತನ, ಅತ್ಯಂತ ತೆಳುವಾದ ವಿನ್ಯಾಸ, ಮತ್ತು ಅತ್ಯುನ್ನತ ತಂತ್ರಜ್ಞಾನವನ್ನು ಬಯಸುವ ಗ್ರಾಹಕರಾಗಿದ್ದರೆ, ಬೆಲೆ ಒಂದು ಸಮಸ್ಯೆಯಲ್ಲವಾದರೆ, iPhone Air ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಆದರೆ, ಕೈಗೆಟುಕುವ ಬೆಲೆಯಲ್ಲಿ ಪ್ರೀಮಿಯಂ ವೈಶಿಷ್ಟ್ಯಗಳು, ಉತ್ತಮ ಕ್ಯಾಮೆರಾ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆ ಬಯಸುವ ಬಹುತೇಕ ಗ್ರಾಹಕರಿಗೆ iPhone 17 ಅತ್ಯುತ್ತಮ ಆಯ್ಕೆಯಾಗಿದೆ. ಇದು ನಿಮ್ಮ ಹಣಕ್ಕೆ ಹೆಚ್ಚಿನ ಮೌಲ್ಯವನ್ನು ನೀಡುತ್ತದೆ.

Best Mobiles in India

English summary
Head-to-head comparison of iPhone 17 and iPhone Air to help you pick the right one.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+