ಆಪಲ್ ಐಫೋನ್ ಇದಕ್ಕೇ ಮತ್ತೆ ಹಿಟ್ ಆಗಿರೋದು

Posted By: Varun
ಆಪಲ್ ಐಫೋನ್ ಇದಕ್ಕೇ ಮತ್ತೆ ಹಿಟ್ ಆಗಿರೋದು

ಕಣ್ಣು ಇದ್ದೇ ನಾವು ಸರಿಯಾಗಿ ಕೆಲಸ ಮಾಡುವುದಿಲ್ಲ. ಇನ್ನು ಕಣ್ಣು ಕಾಣದಿದ್ದರೆ ಮುಗಿದೇ ಹೋಯಿತು. ಜಗತ್ತೇ ಸ್ವಿಚ್ ಆಫ್ ಆದಂತೆ ಅನಿಸುತ್ತದೆ.

ಇಂಥದ್ದರಲ್ಲಿ ಮೊದಲಬಾರಿಗೆ ಸ್ಮಾರ್ಟ್ ಫೋನ್ ನಿಮ್ಮ ಕೈ ಅಲ್ಲಿ ಇದ್ದರೆ ಅಷ್ಟೇ.ಟಚ್ ಸ್ಕ್ರೀನ್ ಮುಟ್ಟುವಾಗ, ತುಂಬಾ ಸಂಕೋಚ ಪಟ್ಟುಕೊಂಡು ಮುಟ್ಟುತ್ತೇವೆ. ಕೆಲವೊಮ್ಮೆ ತಪ್ಪು ಮಾಡುತ್ತೇವೆ. ಕೆಲವು ದಿನಗಳ ನಂತರ ಆರಾಮಾಗಿ ಬಳಸಲು ಕಲಿತುಕೊಳ್ಳುತ್ತೇವೆ.

ಆದರೆ ಇಲ್ಲೊಬ್ಬ ಇದ್ದಾನೆ, ಟಾಮಿ ಎಡಿಸನ್ ಅಂತ. ಹುಟ್ಟು ಕುರುಡನಾಗಿದ್ದರೂ ಯಾವುದೇ ತೊಂದರೆ ಇಲ್ಲದೆ, ಕಣ್ಣಿದ್ದವರೇ ನಾಚಬೇಕು ಆ ರೀತಿ ಆಪಲ್ ನ ಐಫೋನ್ 4S ಫೋನ್ ಅನ್ನು ಬಳಸುತ್ತಾನೆ.

ಕಳೆದ ವಾರ ಈತ, ಕುರುಡರು ಹೇಗೆ ಆಪಲ್ ನ "ಸಿರಿ", ವಾಯ್ಸ್ ರೆಕಗ್ನಿಶನ್ ತಂತ್ರಾಂಶದೊಂದಿಗೆ ಸುಲಭವಾಗಿ ಐಫೋನ್ 4S ಅನ್ನು ಬಳಸಬಹುದು ಎಂಬುದನ್ನು ತೋರಿಸುವ ಎರಡು ವೀಡಿಯೋಗಳನ್ನು ಬಿಡುಗಡೆ ಮಾಡಿದ್ದಾನೆ.

ತಂತ್ರಜ್ಞಾನದಿಂದ ಎಷ್ಟೆಲ್ಲಾ ಉಪಯೋಗವಾಗುತ್ತದೆ ಎಂಬುದಕ್ಕೆ ಇದೇಉತ್ತಮ ಉದಾಹರಣೆ. ಹಾಗಾದರೆ ನೋಡಿ ಈ ವೀಡಿಯೋವನ್ನು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot